ನಿಜವಾಗಲೂ ಜೇಮ್ಸ್ ಅಪ್ಪು ರವರ ಕೊನೆಯ ಚಿತ್ರವೇ?? ಅಪ್ಪು ಬಾಡಿಗಾರ್ಡ್ ಬಿಚ್ಚಿಟ್ಟ ರಹಸ್ಯವೇನು ಗೊತ್ತಾ?? ಅಲ್ಲವೇ ಅಲ್ಲ ಎಂದದ್ದು ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ರವರ ಜನ್ಮ ದಿನದ ವಿಶೇಷವಾಗಿ ಅವರ ಅಭಿಮಾನಿಗಳಿಗಾಗಿ ಜೇಮ್ಸ್ ಚಿತ್ರತಂಡ ಚಿತ್ರವನ್ನು ಅದ್ದೂರಿಯಾಗಿ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದೆ. ಜೇಮ್ಸ್ ಇದೊಂದು ಚಿತ್ರ ಎನ್ನುವುದಕ್ಕಿಂತ ಹೆಚ್ಚಾಗಿ ಪುನೀತ್ ರಾಜಕುಮಾರ್ ಅವರನ್ನು ಕೊನೆಯ ಬಾರಿಗೆ ದೊಡ್ಡ ಪರದೆ ಮೇಲೆ ನೋಡುವಂತಹ ಅವಕಾಶ ಎಂಬುದಾಗಿ ಅಭಿಮಾನಿಗಳು ಹಾಗೂ ಸಿನಿಮಾ ರಸಿಕರು ಭಾವುಕರಾಗಿ ಚಿತ್ರವನ್ನು ನೋಡುತ್ತಿದ್ದಾರೆ. ಚಿತ್ರ ಕೂಡ ಈಗಾಗಲೇ ದೇಶ ವಿದೇಶಗಳಲ್ಲಿ ಕೋಟಿಕೋಟಿ ಬಾಕ್ಸಾಫೀಸ್ ಕಲೆಕ್ಷನ್ ಮಾಡುವುದರಲ್ಲಿ ಮುಂದಿದೆ.

ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ರೆಕಾರ್ಡ್ಗಳು ಕೂಡ ಜೇಮ್ಸ್ ಚಿತ್ರದ ಕಾಲಡಿಯಲ್ಲಿ ಬಿದ್ದಿವೆ. ಜೇಮ್ಸ್ ಚಿತ್ರವೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ಎಂದು ಅಂದುಕೊಂಡಿದ್ದ ಎಲ್ಲಾ ಅಭಿಮಾನಿಗಳು ಹಾಗೂ ಸಿನಿಮಾ ಪ್ರೇಕ್ಷಕರಿಗೆ ಅವರ ಖಾಸಗಿ ಬಾಡಿಗಾರ್ಡ್ ಆಗಿದ್ದ ಚಲಪತಿ ಅವರು ಆಶ್ಚರ್ಯಕರ ಹೇಳಿಕೆ ನೀಡುವುದರ ಮೂಲಕ ಅಚ್ಚರಿ ನೀಡಿದ್ದಾರೆ. ಹಾಗಿದ್ದರೆ ಅದೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

puneeth raj kumar bodyguard | ನಿಜವಾಗಲೂ ಜೇಮ್ಸ್ ಅಪ್ಪು ರವರ ಕೊನೆಯ ಚಿತ್ರವೇ?? ಅಪ್ಪು ಬಾಡಿಗಾರ್ಡ್ ಬಿಚ್ಚಿಟ್ಟ ರಹಸ್ಯವೇನು ಗೊತ್ತಾ?? ಅಲ್ಲವೇ ಅಲ್ಲ ಎಂದದ್ದು ಯಾಕೆ ಗೊತ್ತೇ??
ನಿಜವಾಗಲೂ ಜೇಮ್ಸ್ ಅಪ್ಪು ರವರ ಕೊನೆಯ ಚಿತ್ರವೇ?? ಅಪ್ಪು ಬಾಡಿಗಾರ್ಡ್ ಬಿಚ್ಚಿಟ್ಟ ರಹಸ್ಯವೇನು ಗೊತ್ತಾ?? ಅಲ್ಲವೇ ಅಲ್ಲ ಎಂದದ್ದು ಯಾಕೆ ಗೊತ್ತೇ?? 2

ಹೌದು ಜೇಮ್ಸ್ ಚಿತ್ರದ ಬಿಡುಗಡೆ ಆದ ದಿನದಂದೇ ಅಪ್ಪು ಅವರ ಖಾಸಗಿ ಬಾಡಿಗಾರ್ಡ್ ಆಗಿರುವ ಚಲಪತಿ ಅವರು ಇದು ಅವರ ಕೊನೆಯ ಸಿನಿಮಾವಲ್ಲ ಇನ್ನು ಗಂಧದಗುಡಿ ಬಿಡುಗಡೆಯಾಗುವುದಕ್ಕೆ ಬಾಕಿ ಇದೆ ಎಂಬುದಾಗಿ ಹೇಳಿದ್ದಾರೆ. ಹೌದು ಕರ್ನಾಟಕದ ಪ್ರಕೃತಿ ಸೌಂದರ್ಯವನ್ನು ತಾವೇ ನಿರ್ದೇಶಕ ಅಮೋಘವರ್ಷ ರವರೊಂದಿಗೆ ತಿರುಗಿ ಚಿತ್ರೀಕರಿಸಿದ ಡಾಕ್ಯುಮೆಂಟರಿ ಚಿತ್ರವಾಗಿರುವ ಗಂಧದಗುಡಿ ಅತಿಶೀಘ್ರದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಅದರಲ್ಲಿ ಅಪ್ಪು ಅವರ ಧ್ವನಿಯೇ ಇರಲಿದೆ ಎಂಬುದಾಗಿ ಚಲಪತಿ ಅವರು ಹೇಳಿದ್ದಾರೆ. ಇದು ಖಂಡಿತವಾಗಿ ಅಪ್ಪು ಅವರ ಅಭಿಮಾನಿಗಳಿಗೆ ಸಿಹಿಸುದ್ದಿ ಆಗಿರಲಿದೆ. ಯಾಕೆಂದರೆ ಜೇಮ್ಸ್ ಚಿತ್ರದ ಅಪ್ಪು ರವರ ಧ್ವನಿಯನ್ನು ಕೊನೆಯ ಬಾರಿಗೆ ಕೇಳುವಂತಹ ಆಸೆಯನ್ನು ಹೊಂದಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಆದರೆ ಗಂಧದಗುಡಿಯ ವಿಚಾರವನ್ನು ಅವರ ಬಾಡಿಗಾರ್ಡ್ ಚಲಪತಿ ಅವರು ಹೇಳಿದ ನಂತರ ಎಲ್ಲರೂ ಕೂಡ ಮತ್ತೊಮ್ಮೆ ನಮ್ಮ ಆರಾಧ್ಯ ದೈವ ನನ್ನು ಅವರ ಧ್ವನಿಯಲ್ಲಿ ನೋಡುವಂತಹ ಭಾಗ್ಯ ಒದಗಿಬಂದಿದೆ ಎಂಬುದಾಗಿ ನಿಟ್ಟುಸಿರು ಬಿಟ್ಟಿದ್ದಾರೆ.

Comments are closed.