ಕೊನೆ ಕ್ಷಣದಲ್ಲಿ ಮತ್ತೊಂದು ಟ್ವಿಸ್ಟ್, ಪ್ರೇಕ್ಷಕರಿಗೆ ಹಬ್ಬ. ಪಂಚಾಯಿತಿ ಕಟ್ಟೆಯಲ್ಲಿ ಬಿಸಿ ಜೋರಾದ ನಂತರ ಬಂಗಾರಮ್ಮ ಮುಂದೆ ಮಾಡುವುದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯನ್ನು ನೀವು ನೋಡುತ್ತಿರುವುದು. ಒಂದು ಧಾರಾವಾಹಿ ಸುಮ್ಸುಮ್ಮನೆ ಟಿ ಆರ್ ಪಿ ರೇಟ್ ನಲ್ಲಿ ಮೊದಲ ಸ್ಥಾನಕ್ಕೆ ಏರುವುದಿಲ್ಲ. ಅದರ ಕಥೆ, ಚಿತ್ರಕಥೆ, ನಿರೂಪಣೆ, ಪಾತ್ರಗಳೆಲ್ಲವೂ ಅಷ್ಟು ಅದ್ಭುತವಾಗಿರಬೇಕು, ಜನರು ಅದನ್ನು ಒಪ್ಪಬೇಕು. ಸದ್ಯ ಜನ ಒಪ್ಪಿ ಅಪ್ಪಿಕೊಂಡಿರುವುದು ಪುಟ್ಟಕ್ಕನ ಮಕ್ಕಳು ಸೀರಿಯಲ್ ಅನ್ನು. ಪ್ರತಿದಿನವೂ ಎಲ್ಲೆಲ್ಲಿಯೂ ಬೋರಾಗದಂತೆ ಕಥೆಯನ್ನು ಹಿಡಿದುಕೊಂಡು ಬಂದಿರುವ ನಿರ್ದೇಶಕರು ಚಾಕಚಕ್ಯತೆಯನ್ನು ಮೆಚ್ಚಲೇಬೇಕು.

ಹೌದು ಪುಟ್ಟಕ್ಕನ ಸ್ವಾಭಿಮಾನವೇ ಇಂದು ಅವಳನ್ನು ಪಂಚಾಯತ ಕಟ್ಟೆಗೆ ತಂದು ನಿಲ್ಲಿಸಿದೆ. ರಾಜೇಶ್ವರಿಯ ಅಸೂಯೆ ಹಾಗೂ ಸೇಡು ಕೂಡ ಪುಟ್ಟಕ್ಕನ ಈ ಸ್ಥಿತಿಗೆ ಕಾರಣವಾಗಿದೆ. ಆದರೆ ಪುಟ್ಟಕ್ಕ ಸ್ನೇಹವನ್ನು ತನ್ನ ಜೊತೆಯೇ ಇಟ್ಟುಕೊಂಡಿದ್ದರೆ, ಮೈಸೂರಿಗೆ ಕಳಿಸದೆ ಇದ್ದಿದ್ದರೆ ಈ ಸ್ಥಿತಿ ಬಾರದೆ ಇತ್ತೇನೋ ಎಂದು ವೀಕ್ಷಕರು ಕೂಡ ಅಲವತ್ತುಕೊಳ್ಳುತ್ತಿದ್ದಾರೆ. ಅತ್ತ ಪರಿಸ್ಥಿತಿಯನ್ನು ತೆಳುವಾಗಿಸಲು ಸ್ನೇಹಳು ಇಲ್ಲ, ಇತ್ತ ಪುಟ್ಟಕ್ಕನ ಪರವಾಗಿ ಒಂದೇ ಒಂದು ಸಾಕ್ಷಿ ಇಲ್ಲ. ಅಂದಮೇಲೆ ಬಂಗಾರಮ್ಮನ ತೀರ್ಮಾನ ಪುಟ್ಟಕ್ಕನ ವಿರುದ್ಧವಾಗಿ ಇರುತ್ತೆ ಅಂತ ಅಭಿಮಾನಿಗಳು ಬೇಸರಿಸಿಕೊಂಡಿದ್ದಾರೆ. ಅದೇನೇ ಇದ್ರೂ ಒಳ್ಳೆಯವರಿಗೆ ಒಂದು ಕಾಲ ಇದೆ ಅನ್ನೋದು ಮುಂದಿನ ಎಪಿಸೋಡುಗಳಲ್ಲಿ ಪ್ರೂವ್ ಆಗಲಿದೆ.

puttakkana makkalu 1 | ಕೊನೆ ಕ್ಷಣದಲ್ಲಿ ಮತ್ತೊಂದು ಟ್ವಿಸ್ಟ್, ಪ್ರೇಕ್ಷಕರಿಗೆ ಹಬ್ಬ. ಪಂಚಾಯಿತಿ ಕಟ್ಟೆಯಲ್ಲಿ ಬಿಸಿ ಜೋರಾದ ನಂತರ ಬಂಗಾರಮ್ಮ ಮುಂದೆ ಮಾಡುವುದೇನು ಗೊತ್ತೇ??
ಕೊನೆ ಕ್ಷಣದಲ್ಲಿ ಮತ್ತೊಂದು ಟ್ವಿಸ್ಟ್, ಪ್ರೇಕ್ಷಕರಿಗೆ ಹಬ್ಬ. ಪಂಚಾಯಿತಿ ಕಟ್ಟೆಯಲ್ಲಿ ಬಿಸಿ ಜೋರಾದ ನಂತರ ಬಂಗಾರಮ್ಮ ಮುಂದೆ ಮಾಡುವುದೇನು ಗೊತ್ತೇ?? 2

ಹೌದು ಪುಟ್ಟಕ್ಕ ಸದ್ಯ ಒಂದೇ ಸಮನೆ ಹಲವಾರು ಕಷ್ಟಗಳನ್ನು ಎದುರಿಸುವಂತ ಪರಿಸ್ಥಿತಿಇದೆ. ಯಾಕೆಂದರೆ ಪುಟ್ಟಕ್ಕ ತನ್ನ ಮನೆ ಹಾಗೂ ಮೆಸ್ ನ್ನುಉಳಿಸಿಕೊಳ್ಳಬೇಕು ಅಂದರೆ 10 ಲಕ್ಷ ಹಣವನ್ನು ಕದ್ದಿರುವವನನ್ನು ಪಂಚಾಯಿತಿ ಕಟ್ಟಿಗೆ ಕರೆತರಬೇಕು, ಅಥವಾ ಹತ್ತು ಲಕ್ಷ ಹಣವನ್ನು ರಾಜೇಶ್ವರಿಗೆ ನೀಡಬೇಕು. ಸದ್ಯ ಪುಟ್ಟಕ್ಕ ಒಬ್ಬಳಿಂದ ಈ ಯಾವ ಕೆಲಸ ನಡೆಯಲು ಸಾಧ್ಯವೇ ಇಲ್ಲ. ಆದರೆ ಬ್ಯಾಗ್ರೌಂಡ್ ನಲ್ಲಿ ಕಂಠಿ ಕರಾಮತ್ತು ಜೋರಾಗಿಯೇ ಇದೆ. ಕಳ್ಳನನ್ನ ಬಾಯಿಬಿಡಿಸುವುದರಲ್ಲಿ ಯಶಸ್ವಿಯಾಗಿದ್ದಾನೆ ಕಂಠಿ.

ಪುಟ್ಟಕ್ಕ ಮುಗ್ದೆಯೆಂದು ಗೊತ್ತಿದ್ದರೂ ಆಕೆಯ ವಿರುದ್ಧವಾಗಿ ಎಲ್ಲಾ ಸಾಕ್ಷಿ ಇರುವುದರಿಂದ ಬಂಗಾರಮ್ಮ ಪುಟ್ಟಕ್ಕನ ವಿರುದ್ಧ ತೀರ್ಪು ನೀಡುವ ಎಲ್ಲಾ ಸಾಧ್ಯತೆ ಇತ್ತು. ಆದರೆ ಇದೀಗ ಪುಟ್ಟಕ್ಕನ ಕಂಪ್ಲೇಂಟನ್ನು ತೆಗೆದುಕೊಳ್ಳಲು ನಿರಾಕರಿಸಿದ ಪೊಲೀಸಪ್ಪ ಪಂಚಾಯತ್ ಕಟ್ಟೆಯ ಎದುರು ಪ್ರತ್ಯಕ್ಷನಾಗಿದ್ದಾನೆ. ಜೊತೆಗೆ 10 ಲಕ್ಷ ಹಣ ಕಳುವು ಮಾಡಿದ್ದ ಕಳ್ಳ ಕೂಡ ಸಿಕ್ಕಿಬಿದ್ದಿದ್ದಾನೆ. ಆದರೂ ರಾಜೇಶ್ವರಿಯ ಕುತಂತ್ರ ಮಾತ್ರ ಇನ್ನೂ ಮುಗಿದಿಲ್ಲ. ಪುಟ್ಟಕ್ಕನಿಗೆ ಇನ್ನೇನು ನ್ಯಾಯ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ವೀಕ್ಷಕರು ಪ್ರತಿದಿನದ ಪುಟ್ಟಕ್ಕನ ಮಕ್ಕಳು ಎಪಿಸೋಡ್ ಗಾಳಿಗಾಗಿ ಕಾಯುತ್ತಿರುತ್ತಾರೆ.

Comments are closed.