ಅಪ್ಪು ರವರ ಕೊನೆಯ ಚಿತ್ರದ ನಿರ್ಮಾಪಕರಿಗೆ ಹಣದ ಸುರಿಮಳೆ, ಆದರೆ ಕ್ಯಾರೇ ಎನ್ನದೆ ಬಿಟ್ಟದ್ದು ಎಷ್ಟು ಕೋಟಿ ಗೊತ್ತೇ??

ನಮಸ್ಕಾರ ಸ್ನೇಹಿತರೇ ಅಂತು ಇಂತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಜನ್ಮ ಜಯಂತಿಯ ದಿನದಂದು ಅಂದರೆ ಇದೇ ಮಾರ್ಚ್ 17ರಂದು ಅವರ ಜನ್ಮದಿನದ ಪ್ರಯುಕ್ತ ವಾಗಿ ಅದ್ದೂರಿಯಾಗಿ ರಾಜ್ಯಾದ್ಯಂತ ಹಾಗೂ ವಿಶ್ವಾದ್ಯಂತ ತೆರೆಕಾಣಲಿದೆ. ಕೊನೆಯ ಬಾರಿಗೆ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಜೇಮ್ಸ್ ಚಿತ್ರದ ಮೂಲಕ ತಲೆಯಲ್ಲಿ ಕಾಣಲು ಅಭಿಮಾನಿಗಳು ಹಾಗೂ ಕನ್ನಡಿಗರು ಹಾಗೂ ಚಿತ್ರರಸಿಕರು ಕಾತರದಿಂದ ಕಾಯುತ್ತಿದ್ದಾರೆ.

ಸಿಕ್ಕಿರುವ ಸುದ್ದಿಗಳ ಪ್ರಕಾರ ವಿಶ್ವಾದ್ಯಂತ 4000 ಪರದೆಗಳ ಮೇಲೆ ಜೇಮ್ಸ್ ಚಿತ್ರ ಬಿಡುಗಡೆಯಾಗಲಿದೆ ಎನ್ನುವ ಸುದ್ದಿಗಳು ಕೇಳಿ ಬರುತ್ತಿದೆ. ಇದಕ್ಕಾಗಿ ರೆಬೆಲ್ ಸ್ಟಾರ್ ಪ್ರಭಾಸ್ ರವರ ರಾಧೇಶ್ಯಾಮ್ ಚಿತ್ರ ಜೇಮ್ಸ್ ಚಿತ್ರದ ಒಂದು ವಾರ ಮೊದಲು ಬಿಡುಗಡೆಯಾಗುತ್ತಿದೆ. ಇಷ್ಟು ಮಾತ್ರವಲ್ಲದೇ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರ ಜೇಮ್ಸ್ ಚಿತ್ರದ ಒಂದು ವಾರ ನಂತರ ಬಿಡುಗಡೆ ಆಗುತ್ತಿದೆ. ಅಂದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೇಮ್ಸ್ ಚಿತ್ರ ಬಿಡುಗಡೆ ಆಗುವ ವಾರದಂದು ಯಾವುದೇ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಈ ಮೂಲಕ ವಿಶ್ವಾದ್ಯಂತ ಸೋಲೋ ರಿಲೀಸ್ ಆಗಿ ಬಿಡುಗಡೆಯಾಗಲಿದೆ.

james kannada movie | ಅಪ್ಪು ರವರ ಕೊನೆಯ ಚಿತ್ರದ ನಿರ್ಮಾಪಕರಿಗೆ ಹಣದ ಸುರಿಮಳೆ, ಆದರೆ ಕ್ಯಾರೇ ಎನ್ನದೆ ಬಿಟ್ಟದ್ದು ಎಷ್ಟು ಕೋಟಿ ಗೊತ್ತೇ??
ಅಪ್ಪು ರವರ ಕೊನೆಯ ಚಿತ್ರದ ನಿರ್ಮಾಪಕರಿಗೆ ಹಣದ ಸುರಿಮಳೆ, ಆದರೆ ಕ್ಯಾರೇ ಎನ್ನದೆ ಬಿಟ್ಟದ್ದು ಎಷ್ಟು ಕೋಟಿ ಗೊತ್ತೇ?? 2

ಈಗಾಗಲೇ ಚಿತ್ರಮಂದಿರಗಳಲ್ಲಿ ದೊಡ್ಡ ದೊಡ್ಡ ಕಟೌಟ್ ಗಳನ್ನು ನಿಲ್ಲಿಸಲಾಗಿದೆ. ಈಗಾಗಲೇ ಜೇಮ್ಸ್ ಚಿತ್ರದ ನಿರ್ಮಾಪಕರಿಗೆ ದೊಡ್ಡ ಮೊತ್ತದ ಆಫರ್ ಬಂದಿದ್ದರೂ ಕೂಡ ತಿರಸ್ಕರಿಸಿದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಹೌದು ಕೇವಲ ಬಿಕೆಟಿ ಪ್ರಾಂತ್ಯಕ್ಕೆ 12 ಕೋಟಿ ರೂಪಾಯಿ ಆಫರ್ ಚಿತ್ರದ ನಿರ್ಮಾಪಕರಾಗಿರುವ ಕಿಶೋರ್ ಪತ್ತಿಕೊಂಡ ರವರಿಗೆ ಬಂದಿದೆ ಎಂದು ಹೇಳಲಾಗುತ್ತಿದೆ. ಬಿಕೆಟಿ ಅಂದರೆ ಕೇವಲ ಬೆಂಗಳೂರು ಕೋಲಾರ ಹಾಗೂ ತುಮಕೂರು ಪ್ರಾಂತ್ಯಗಳು ಮಾತ್ರ. ಇದು ಕನ್ನಡದಲ್ಲಿಯೇ ದಾಖಲೆಯ ಮೊತ್ತ ಎಂದು ಹೇಳಲಾಗುತ್ತಿದ್ದರೂ ಕೂಡ ನಿರ್ಮಾಪಕರು ಇದನ್ನು ತಿರಸ್ಕರಿಸಿದ್ದಾರೆ ಎಂದು ಕೇಳಿಬರುತ್ತಿದೆ. ಒಟ್ಟಾರೆಯಾಗಿ ಹಿಂದೆಂದೂ ಕಂಡಿರದಂತಹ ದೊಡ್ಡಮಟ್ಟದ ಓಪನಿಂಗ್ ಜೇಮ್ಸ್ ಚಿತ್ರಕ್ಕೆ ಸಿಗುವುದು ಖಂಡಿತ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸಲ್ಲಿ ಹಂಚಿಕೊಳ್ಳಿ.

Comments are closed.