ರಾಜಾರಾಣಿ ಶೋ ಗೆ ಠಕ್ಕರ್ ನೀಡಲು ಬರುತ್ತಿರುವ ಜೋಡಿ ನಂಬರ್1 ಕಾರ್ಯಕ್ರಮಕ್ಕೆ ಬರುತ್ತಿರುವ ಎಲ್ಲಾ ಜೋಡಿಗಳು ಯಾರ್ಯಾರು ಗೊತ್ತೆ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಕಿರುತೆರೆಯಲ್ಲಿ ಧಾರವಾಹಿಗಳ ಜೊತೆಗೆ ರಿಯಾಲಿಟಿ ಶೋ ಕಾರ್ಯಕ್ರಮಗಳ ನಡುವೆ ಕೂಡ ಸಾಕಷ್ಟು ಕಾಂಪಿಟೇಶನ್ ಪ್ರಾರಂಭವಾಗಿದೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ಇದು ಹಿಂದಿ ಕಿರುತೆರೆ ಕ್ಷೇತ್ರದಲ್ಲಿ ಮೊದಲು ಇತ್ತು ಈಗ ಕನ್ನಡ ಕಿರುತೆರೆ ವಾಹಿನಿಗಳ ನಡುವೆಯೂ ಕೂಡ ರಿಯಾಲಿಟಿ ಶೋ ಕಾರ್ಯಕ್ರಮಗಳ ಕಾಂಪಿಟೇಶನ್ ಪ್ರಾರಂಭವಾಗಿದೆ ಎಂದು ಹೇಳಬಹುದಾಗಿದೆ.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ಕಲರ್ಸ್ ಕನ್ನಡ ವಾಹಿನಿಯ ರಾಜಾರಾಣಿ ಕಾರ್ಯಕ್ರಮ ಮೊದಲ ಆವೃತ್ತಿಯನ್ನು ಯಶಸ್ವಿಯಾಗಿ ಮುಗಿಸಿದ್ದು ಅತಿ ಶೀಘ್ರದಲ್ಲೇ ಎರಡನೇ ಆವೃತ್ತಿಯನ್ನು ಕೂಡ ಪ್ರಸಾರ ಮಾಡಲು ಸಿದ್ಧತೆ ನಡೆಸಿಕೊಂಡಿದೆ. ಇನ್ನು ಎರಡನೇ ಆವೃತ್ತಿಯಲ್ಲಿ ಯಾರೆಲ್ಲ ಭಾಗವಹಿಸುತ್ತಾರೆ ಎಂಬ ಕುರಿತಂತೆ ಸಾಕಷ್ಟು ಸುಳಿವುಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಕ್ಷಕರಿಗೆ ಸಿಕ್ಕಿದೆ. ಈಗಾಗಲೇ ನಿಮಗೆಲ್ಲ ಗೊತ್ತಿರುವ ಹಾಗೆ ರಾಜ-ರಾಣಿ ಕಾರ್ಯಕ್ರಮ ಎನ್ನುವುದು ದಂಪತಿಗಳ ನಡುವಿನ ಕಾರ್ಯಕ್ರಮವಾಗಿದೆ.

ಈ ಕಾರ್ಯಕ್ರಮ ಪ್ರಸಾರ ಆಗಲು ಇನ್ನೇನು ಕೆಲವು ಸಮಯಗಳು ಉಳಿದಿದ್ದು ಇದಕ್ಕೆ ಪ್ರತಿಸ್ಪರ್ಧಿ ಎನ್ನುವಂತೆ ಜೀ ಕನ್ನಡ ವಾಹಿನಿ ಹೊಸ ದಂಪತಿಗಳ ರಿಯಾಲಿಟಿ ಶೋ ಕಾರ್ಯಕ್ರಮವನ್ನು ಪ್ರಾರಂಭಿಸಲು ಈಗಾಗಲೇ ಸಿದ್ಧವಾದಂತಿದೆ. ಹೌದು ಗೆಳೆಯರೇ ಇದೇ ಜೂನ್ 11ರಂದು ಜೋಡಿ ನಂಬರ್ 1 ಕಾರ್ಯಕ್ರಮ ಪ್ರಾರಂಭವಾಗಲಿದ್ದು ಶನಿವಾರ ಹಾಗೂ ಭಾನುವಾರ ಸಂಜೆ 6.30 ಕ್ಕೆ ಪ್ರಸಾರವಾಗಲಿದೆ ಎಂಬುದಾಗಿ ಅಧಿಕೃತವಾಗಿ ವಾಹಿನಿ ಘೋಷಿಸಿದೆ. ಇದು ಖಂಡಿತವಾಗಿ ಜೀ ಕನ್ನಡ ವಾಹಿನಿ ರಾಜರಾಣಿ ಕಾರ್ಯಕ್ರಮಕ್ಕೆ ಕಾಂಪಿಟೇಶನ್ ನೀಡಲು ಪ್ರಾರಂಭಿಸಿದ ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ.

ಜೋಡಿ ನಂ 1 ಕಾರ್ಯಕ್ರಮಕ್ಕೆ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಹಾಗೂ ನಿರೂಪಣೆಯಲ್ಲಿ ತಮ್ಮದೇ ಆದಂತಹ ದೊಡ್ಡಮಟ್ಟದ ಅಭಿಮಾನಿ ಬಳಗವನ್ನು ಹೊಂದಿರುವ ಅನುಶ್ರೀ ಅವರು ಸಾರಥ್ಯವನ್ನು ವಹಿಸಲಿದ್ದಾರೆ ಎಂಬುದಾಗಿ ಪ್ರೋಮೋ ಮೂಲಕ ತಿಳಿದು ಬಂದಿದೆ. ನಟಿ ನಿರೂಪಕಿ ಸುಷ್ಮಾ ರವರು ಈ ಕಾರ್ಯಕ್ರಮದ ನಿರೂಪಕರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದಾಗಿ ಕೊಡು ತಿಳಿದುಬಂದಿದೆ. ಇನ್ನು ಈ ಕಾರ್ಯಕ್ರಮದಲ್ಲಿ 9 ಜೋಡಿಗಳು ಪಾಲ್ಗೊಳ್ಳಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ ಹಾಗಿದ್ದರೆ ಯಾರೆಲ್ಲಾ ಭಾಗವಹಿಸುತ್ತಾರೆ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ.

ಮೊದಲನೇದಾಗಿ ಸರಿಗಮಪ ಖ್ಯಾತಿಯ ಕಂಬದ ರಂಗಯ್ಯ ದಂಪತಿಗಳು ಸ್ಪರ್ಧಿಗಳಾಗಿ ಭಾಗವಹಿಸಲಿದ್ದಾರೆ. ಎರಡನೇದಾಗಿ ಇತ್ತೀಚಿಗಷ್ಟೇ ಮದುವೆಯಾಗಿರುವ ನಿನಾದ್ ಹರಿತ್ಸ ಹಾಗೂ ರಮ್ಯಾ ದಂಪತಿಗಳು ಆಗಮಿಸಲಿದ್ದಾರೆ. ಮೂರನೇದಾಗಿ ಬಿಗ್ ಬಾಸ್ ಖ್ಯಾತಿಯ ಕಿರಿಕ್ ಕೀರ್ತಿ ಹಾಗೂ ಅರ್ಪಿತಾ ದಂಪತಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.

ನಾಲ್ಕನೇದಾಗಿ ಹರಟೆ ಕಾರ್ಯಕ್ರಮದ ಮೂಲಕ ರಾಜ್ಯಾದ್ಯಂತ ಫೇಮಸ್ ಆಗಿರುವ ಪ್ರೊಫೆಸರ್ ಕೃಷ್ಣೇಗೌಡರು ಮೊದಲ ಬಾರಿಗೆ ಕಿರುತೆರೆಯ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ತಮ್ಮ ಪತ್ನಿಯೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಐದನೆಯದಾಗಿ ಕನ್ನಡ ಚಿತ್ರರಂಗದ ಖ್ಯಾತ ನಾಯಕನಟ ಅಭಿಜಿತ್ ಅವರು ತಮ್ಮ ಮುದ್ದಿನ ಮಡದಿಯೊಂದಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 6ನೇ ದಾಗಿ ಕನ್ನಡ ಚಿತ್ರರಂಗದ ಎವರ್ಗ್ರೀನ್ ಹಾಸ್ಯನಟ ಮಿತ್ರ ರವರು ತಮ್ಮ ಮಡದಿಯೊಂದಿಗೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

jodi number1 | ರಾಜಾರಾಣಿ ಶೋ ಗೆ ಠಕ್ಕರ್ ನೀಡಲು ಬರುತ್ತಿರುವ ಜೋಡಿ ನಂಬರ್1 ಕಾರ್ಯಕ್ರಮಕ್ಕೆ ಬರುತ್ತಿರುವ ಎಲ್ಲಾ ಜೋಡಿಗಳು ಯಾರ್ಯಾರು ಗೊತ್ತೆ??
ರಾಜಾರಾಣಿ ಶೋ ಗೆ ಠಕ್ಕರ್ ನೀಡಲು ಬರುತ್ತಿರುವ ಜೋಡಿ ನಂಬರ್1 ಕಾರ್ಯಕ್ರಮಕ್ಕೆ ಬರುತ್ತಿರುವ ಎಲ್ಲಾ ಜೋಡಿಗಳು ಯಾರ್ಯಾರು ಗೊತ್ತೆ?? 2

7ನೇ ದಾಗಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಹಿಟ್ಲರ್ ಕಲ್ಯಾಣ ಧಾರಾವಾಹಿ ನೇಹಾ ಪಾಟೀಲ್ ರವರು ತಮ್ಮ ಪತಿಯೊಂದಿಗೆ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಂಟನೆಯದಾಗಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡ ಹಾಗೂ ದಿವ್ಯ ಜೋಡಿಗಳು ಕೂಡ ಈ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಕೊನೆಯದಾಗಿ ಕಾಮಿಡಿ ಕಿಲಾಡಿಗಳು ಹಾಗೂ ಪುಸ್ತಕದ ಮಕ್ಕಳ ಧಾರವಾಹಿಯಲ್ಲಿ ಕಾಣಿಸಿಕೊಂಡಿರುವ ಸಂತೋಷ್ ದಂಪತಿಗಳು ಈ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ.

ಈ ಹೊಸ ಕಾರ್ಯಕ್ರಮ ಹೇಗೆ ಮೂಡಿಬರಲಿದೆ ಹಾಗೂ ಪ್ರೇಕ್ಷಕರನ್ನು ಯಾವ ರೀತಿಯಲ್ಲಿ ರಂಜಿಸಲಿದೆ ಎಂಬುದಾಗಿ ಕಿರುತೆರೆಯ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಕಾರ್ಯಕ್ರಮದ ಪ್ರಸಾರ ಆರಂಭವಾಗಲು ಇನ್ನೂ ಕೆಲವೇ ದಿನಗಳು ಉಳಿದಿದ್ದು ಕಾರ್ಯಕ್ರಮದ ಕುರಿತಂತೆ ನಿರೀಕ್ಷೆಗಳು ಗರಿಗೆದರಿವೆ.

Comments are closed.