ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲನ್ನು ಕಂಡ ಕರ್ನಾಟಕ ತಂಡ: ಸೋಲಿಸಿದ ಮಹಾನುಭಾವರು ನೀವೇ ಎಂದು ಟೀಕೆ ಮಾಡಿದ ಅಭಿಮಾನಿಗಳು. ಯಾರಂತೆ ಗೊತ್ತೇ??

ದೇಶೀಯ ಕ್ರಿಕೆಟ್ ಪಂದ್ಯಗಳಲ್ಲಿ ಎಲ್ಲರನ್ನು ಹೆಚ್ಚು ಸೆಳೆಯುವುದು ರಣಜಿ ಪಂದ್ಯಗಳು, ಈ ಬಾರಿ ರಣಜಿ ಟ್ರೋಫಿಯಲ್ಲಿ ನಮ್ಮ ಕರ್ನಾಟಕ ತಜ್ದ ಗೆಲ್ಲುತ್ತದೆ ಎಂದು ಬಹಳ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು, ಆದರೆ ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡ ಗೆದ್ದಿಲ್ಲ, ಕ್ವಾಟರ್ ಫೈನಲ್ಸ್ ಪಂದ್ಯದಲ್ಲಿ ಕರ್ನಾಟಕ ತಂಡ ಸೋಲನ್ನು ಕಂಡಿದೆ. ಈ ಸೋಲಿಗೆ ಕಾರಣ ಆಗಿರುವುದು ನಮ್ಮ ಕರ್ನಾಟಕದ ಇಬ್ಬರು ಆಟಗಾರರು ಎನ್ನುವುದು ಬೇಸರದ ವಿಚಾರ ಆಗಿದೆ.

ಕರ್ನಾಟಕದ ಕೂಸುಗಳಾಗಿ, ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ಮನೀಶ್ ಪಾಂಡೆ ಮತ್ತು ಮಯಾಂಕ್ ಅಗರ್ವಾಲ್ ಇಬ್ಬರು ಸಹ ಈಗ ಟೀಮ್ ಇಂಡಿಯಾ ಇಂದ ಹೊರಬಿದ್ದಿರುವ ಕಾರಣ, ಇವರಿಬ್ಬರಿಗೂ ರಣಜಿ ಟ್ರೋಫಿಯಲ್ಲಿ ಉತ್ತಮವಾದ ಪ್ರದರ್ಶನ ನೀಡಿ, ಟೀಮ್ ಇಂಡಿಯಾ ಆಯ್ಕೆಗಾರರ ಗಮನ ಸೆಳೆಯುವ ಅವಕಾಶ ಇತ್ತು, ಆದರೆ ರಣಜಿ ಟ್ರೋಫಿ ಕ್ವಾಟರ್ ಫೈನಲ್ಸ್ ನಲ್ಲಿ, ಈ ಇಬ್ಬರು ಆಟಗಾರರು ಸಹ ಕಳಪೆ ಪ್ರದರ್ಶನ ನೀಡಿದ್ದು, ಇದರಿಂದಾಗಿ ಕರ್ನಾಟಕ ತಂಡ, ಕ್ವಾಟರ್ ಫೈನಲ್ಸ್ ಪಂದ್ಯದಲ್ಲಿ ಸೋಲು ಕಂಡಿದೆ. ಬೆಂಗಳೂರು ಹೊರವಲಯದಲ್ಲಿರುವ ಕೆ.ಪಿ.ಎಸ್.ಸಿ ಗ್ರೌಂಡ್ಸ್ ನಲ್ಲಿ ರಣಜಿ ಟ್ರೋಫಿ ಕ್ವಾಟರ್ ಫೈನಲ್ಸ್ ಪಂದ್ಯ ನಡೆಯಿತು.

ranji | ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲನ್ನು ಕಂಡ ಕರ್ನಾಟಕ ತಂಡ: ಸೋಲಿಸಿದ ಮಹಾನುಭಾವರು ನೀವೇ ಎಂದು ಟೀಕೆ ಮಾಡಿದ ಅಭಿಮಾನಿಗಳು. ಯಾರಂತೆ ಗೊತ್ತೇ??
ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲನ್ನು ಕಂಡ ಕರ್ನಾಟಕ ತಂಡ: ಸೋಲಿಸಿದ ಮಹಾನುಭಾವರು ನೀವೇ ಎಂದು ಟೀಕೆ ಮಾಡಿದ ಅಭಿಮಾನಿಗಳು. ಯಾರಂತೆ ಗೊತ್ತೇ?? 2

ಎರಡು ಇನ್ನಿಂಗ್ಸ್ ಗಳಲ್ಲಿ ಮನೀಶ್ ಪಾಂಡೆ ಕೇವಲ 31 ರನ್ ಗಳಿಸಿ ಔಟ್ ಆಗಿದ್ದು, ಮಯಾಂಕ್ ಅಗರ್ವಾಲ್ 32 ರನ್ ಗಳಿಸಿ ಔಟ್ ಆಗಿದ್ದಾರೆ. ಮನೀಶ್ ಪಾಂಡೆ ಕ್ರೀಸ್ ಗೆ ಬಂದಾಗ, ಕರ್ನಾಟಕ ತಂಡ 3 ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿತ್ತು, ತಂಡದ ನಾಯಕ ಆಗಿರು ಮನೀಶ್ ಪಾಂಡೆ, ಜವಾಬ್ದಾರಿಯಿಂದ ಆಟವಾಡದೆ, ರನ್ ಗಳಿಸಲು ಹೋಗಿ ರನ್ ಔಟ್ ಆದರು, ಇನ್ನು ಮಯಾಂಕ್ ಅಗರ್ವಾಲ್ ಅವರು ಸಹ, ಟೀಮ್ ಇಂಡಿಯಾದಲ್ಲಿ ಆಡಿದ ಅನುಭವ ಇದ್ದರೂ ಸಹ, ಬೇಜವಾಬ್ದಾರಿತನದಿಂದ ಆಟವಾಡಿ, ತಂಡದ ಸೋಲಿಗೆ ಪ್ರಮುಖ ಕಾರಣವಾದರು. ಈ ಪಂದ್ಯ ಗೆದ್ದಿದ್ದರೆ, ಬೆಂಗಳೂರಿನಲ್ಲೇ ಸೆಮಿಫೈನಲ್ಸ್ ಪಂದ್ಯ ನಡೆಯುತ್ತಿತ್ತು, ಫೈನಲ್ಸ್ ಸಹ ಇಲ್ಲೇ ನಡೆಸುವ ಪ್ಲಾನ್ ಇತ್ತು, ಹೋಮ್ ಗ್ರೌಂಡ್ ನಲ್ಲೇ ಟ್ರೋಫಿ ಗೆಲ್ಲುವ ಅವಕಾಶವನ್ನು ಕರ್ನಾಟಕ ತಂಡ ಮಿಸ್ ಮಾಡಿಕೊಂಡಿದೆ. ಇದರಿಂದಾಗಿ ಕನ್ನಡಿಗರಿಗೆ ಬೇಸರವಾಗಿದೆ.

Comments are closed.