ತಮಗಿಂತ ಕಡಿಮೆ ವಯಸ್ಸಿನವರ ಜೊತೆ ಪ್ರೀತಿ ಮಾಡಿರುವ ಟಾಪ್ ನಟಿಯರು ಯಾರ್ಯಾರು ಗೊತ್ತೇ?? ಯಾರೆಲ್ಲ ಇದ್ದಾರೆ ಗೊತ್ತೇ??

ಕಳೆದ ಕೆಲವು ದಿನಗಳಿಂದ ಡೇಟಿಂಗ್ ಮಾಡುತ್ತಿದ್ದ ಸ್ಟಾರ್ ಜೋಡಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಕೊನೆಗೂ ಮದುವೆಯಾಗಿದ್ದಾರೆ ಆದರೆ ಇಬ್ಬರ ನಡುವೆ ಒಂದು ವಿಚಾರ ಇದೆ.. ಅದೇನೆಂದರೆ, ನಯನತಾರಾ ಅವರು ತಮ್ಮ ಪತಿ ವಿಘ್ನೇಶ್ ಅವರಿಗಿಂತ 11 ತಿಂಗಳು ದೊಡ್ಡವರು. ಆದರೆ ಪ್ರೀತಿಯ ನಡುವೆ ಇವರಿಬ್ಬರ ನಡುವಿನ ವಯಸ್ಸಿನ ವ್ಯತ್ಯಾಸ ಯಾವುದೇ ಸಮಸ್ಯೆ ತಂದಿಲ್ಲ. ಇವರಿಬ್ಬರಂತೆ ವಯಸ್ಸಿನಲ್ಲಿ ತಮಗಿಂತ ಚಿಕ್ಕವರನ್ನು ಪ್ರೀತಿಸಿ ಮದುವೆಯಾದ ಸ್ಟಾರ್ ಜೋಡಿಗಳ ಬಗ್ಗೆ ಇಂದು ತಿಳಿದುಕೊಳ್ಳೋಣ..

Nayaನ್ namrata | ತಮಗಿಂತ ಕಡಿಮೆ ವಯಸ್ಸಿನವರ ಜೊತೆ ಪ್ರೀತಿ ಮಾಡಿರುವ ಟಾಪ್ ನಟಿಯರು ಯಾರ್ಯಾರು ಗೊತ್ತೇ?? ಯಾರೆಲ್ಲ ಇದ್ದಾರೆ ಗೊತ್ತೇ??
ತಮಗಿಂತ ಕಡಿಮೆ ವಯಸ್ಸಿನವರ ಜೊತೆ ಪ್ರೀತಿ ಮಾಡಿರುವ ಟಾಪ್ ನಟಿಯರು ಯಾರ್ಯಾರು ಗೊತ್ತೇ?? ಯಾರೆಲ್ಲ ಇದ್ದಾರೆ ಗೊತ್ತೇ?? 2

ಈ ವಿಚಾರದಲ್ಲಿ, ಮೊದಲು ಹೇಳುವುದು ಮಾಜಿ ವಿಶ್ವಸುಂದರಿ ಸುಂದರಿ ಐಶ್ವರ್ಯಾ ರೈ ಅವರ ಬಗ್ಗೆ, ಹಲವು ಹುಡುಗರ ಕ್ರಶ್ ಆಗಿದ್ದವರು ಐಶ್ವರ್ಯ ರೈ. ತಮಗಿಂತ ಎರಡೂವರೆ ವರ್ಷ ಚಿಕ್ಕವರಾದ ಅಭಿಷೇಕ್ ಬಚ್ಚನ್ ಅವನ್ನು ಪ್ರೀತಿಸಿ ಮದುವೆಯಾದರು. ಬಾಲಿವುಡ್ ನಲ್ಲಿ ಎಲ್ಲರೂ ಇಷ್ಟಪಡುವ ಜೋಡಿಗಳಲ್ಲಿ ಇವರ ಜೋಡಿ ಸಹ ಒಂದಾಗಿದೆ. ಟಾಲಿವುಡ್ ಸೂಪರ್ ಸ್ಟಾರ್ ಮಹೆಶ್ ಬಾಬು ಅವರು ಕೂಡ ತನಗಿಂತ ಎರಡೂವರೆ ವರ್ಷ ದೊಡ್ಡವರಾಗಿರುವ ನಟಿಯ ಜೊತೆಗೆ ಮದುವೆಯಾಗಿದ್ದಾರೆ. ನಮ್ರತಾ ಅವರು ತಮಗಿಂತ ಚಿಕ್ಕವರಾದ ಮಹೇಶ್ ಬಾಬು ಅವರನ್ನು ಬಹಳ ಸಮಯ ಪ್ರೀತಿಸಿ, ಮದುವೆಯಾದರು. ಈಗ ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಇನ್ನು ಗ್ಲೋಬಲ್ ಬ್ಯೂಟಿ ಎಂದೇ ಫೇಮಸ್ ಆಗಿರುವ ಪ್ರಿಯಾಂಕಾ ಚೋಪ್ರಾ ಅವರು ತಮಗಿಂತ 11 ವರ್ಷ ಚಿಕ್ಕವರಾದ ಖ್ಯಾತ ಹಾಲಿವುಡ್ ಸಿಂಗರ್ ನಿಕ್ ಜೋನಾಸ್ ಅವರನ್ನು ಪ್ರೀತಿಸಿ, ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ಜೋಡಿ ಇತ್ತೀಚೆಗಷ್ಟೇ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದರು. ದೇಶದಲ್ಲಿ ಬಹಳ ಸುದ್ದಿಯಾಗುವ ತಾರಾ ಜೋಡಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅನುಷ್ಕಾ ಅವರು ತಮಗಿಂತ 6 ತಿಂಗಳು ಚಿಕ್ಕವರಾದ ವಿರಾಟ್ ಕೊಹ್ಲಿ ಅವರನ್ನು ಪ್ರೀತಿಸಿ ಡೇಟಿಂಗ್ ಆರಂಭಿಸಿದ್ದರು. ಈ ಜೋಡಿ ಕೂಡ ಕೊನೆಗೆ ವಿವಾಹವಾದರು. ಅವರಿಗೆ ಈಗ ವಮಿಕಾ ಹೆಸರಿನ ಮುದ್ದಾದ ಮಗುವಿದೆ. ಈ ರೀತಿ ಕೆಲವು ತಾರೆಯರು ವಯಸ್ಸಿನಲ್ಲಿ ತಮಗಿಂತ ಚಿಕ್ಕವರ ಜೊತೆಗೆ ಮದುವೆಯಾದರು.

Comments are closed.