ನಿಖಿಲ್, ದರ್ಶನ್ ನಡುವೆ ಏನೆಲ್ಲಾ ನಡೆದಿದ್ದರೂ ಕೂಡ ನಿಖಿಲ್ ಮಗನ ನಾಮಕರಣಕ್ಕೆ ಬಂದ ದರ್ಶನ್ ಕೊಟ್ಟ ಉಡುಗೊರೆ ಏನು ಗೊತ್ತೇ??

ಡಿಬಾಸ್ ದರ್ಶನ್ ಅವರು ಸ್ನೇಹಜೀವಿ.. ಸ್ಯಾಂಡಲ್ ವುಡ್ ನಲ್ಲಿ ಬಹುತೇಕ ಎಲ್ಲರ ಜೊತೆ ಅವರು ಚೆನ್ನಾಗಿ ಇದ್ದಾರೆ. ಸ್ಯಾಂಡಲ್ ವುಡ್ ಗೆ ಹೊಸ ಕಲಾವಿದರು ಎಂಟ್ರಿ ಕೊಟ್ಟರೆ, ಅವರನ್ನು ಪ್ರೋತ್ಸಾಹಿಸುತ್ತಾರೆ. ಡಿಬಾಸ್ ಅವರು ಸ್ನೇಹಕ್ಕೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೆ ಎಂದು ನಮಗೆಲ್ಲ ಗೊತ್ತಿದೆ. ಇದೀಗ ಡಿಬಾಸ್ ಅವರು ತಮ್ಮ ಸ್ನೇಹ ಮನೋಭಾವದಿಂದ ನಿಖಿಲ್ ಕುಮಾರಸ್ವಾಮಿ ಅವರ ಮುದ್ದು ಮಗ ಅವ್ಯಾನ್ ದೇವ್ ಅವರಿಗೆ ಒಂದು ಸುಂದರವಾದ ಗಿಫ್ಟ್ ಕೊಟ್ಟಿದ್ದಾರೆ. ನಾಮಕರಣಕ್ಕೆ ಬಂದು ಡಿಬಾಸ್ ಅವರು ಕೊಟ್ಟಿರುವ ಗಿಫ್ಟ್ ಏನು ಗೊತ್ತಾ?

ನಿಖಿಲ್ ಕುಮಾರಸ್ವಾಮಿ ಅವರು ಹಾಗೂ ಪತ್ನಿ ರೇವತಿ ಮತ್ತು ಗೌಡರ ಇಡೀ ಕುಟುಂಬಕ್ಕೆ ಇದು ಬಹಳ ಸಂತೋಷದ ಸಮಯ ಆಗಿದೆ. ನಿಖಿಲ್ ರೇವತಿ ದಂಪತಿಯ ಮುದ್ದು ಮಗನಿಗೆ 9 ತಿಂಗಳು ತುಂಬಿದ್ದು, ಅದೇ ಸಂತೋಷದಲ್ಲಿ ಮಗುವಿಗೆ ನಾಮಕರಣ ಮಾಡಿದ್ದಾರೆ. ನಿನ್ನೆ ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ದಂಪತಿಯ ಮಗನ ನಾಮಕರಣ ಶಾಸ್ತ್ರ ನಡೆಯಿತು. ಗೌಡರ ಕುಟುಂಬ ಮತ್ತು ಅವರ ಆಪ್ತಬಳಗ ಮಾತ್ರ ನಿನ್ನೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಿಖಿಲ್ ಅವರ ಮಗನ ಹೆಸರಿಗೆ ಒಳ್ಳೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ ವಿಶಿಷ್ಟವಾದ ಹೆಸರು ಇಟ್ಟಿದ್ದಾರೆ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಡಿಬಾಸ್ ದರ್ಶನ್ ಅವರು ನಿಖಿಲ್ ಮಗನಿಗೆ ಒಂದು ಉಡುಗೊರೆ ನೀಡಿದ್ದಾರೆ.

Nikhil dboss | ನಿಖಿಲ್, ದರ್ಶನ್ ನಡುವೆ ಏನೆಲ್ಲಾ ನಡೆದಿದ್ದರೂ ಕೂಡ ನಿಖಿಲ್ ಮಗನ ನಾಮಕರಣಕ್ಕೆ ಬಂದ ದರ್ಶನ್ ಕೊಟ್ಟ ಉಡುಗೊರೆ ಏನು ಗೊತ್ತೇ??
ನಿಖಿಲ್, ದರ್ಶನ್ ನಡುವೆ ಏನೆಲ್ಲಾ ನಡೆದಿದ್ದರೂ ಕೂಡ ನಿಖಿಲ್ ಮಗನ ನಾಮಕರಣಕ್ಕೆ ಬಂದ ದರ್ಶನ್ ಕೊಟ್ಟ ಉಡುಗೊರೆ ಏನು ಗೊತ್ತೇ?? 2

ಡಿಬಾಸ್ ದರ್ಶನ್ ಅವರು ನಿನ್ನೆಯ ನಾಮಕರಣ ಶಾಸ್ತ್ರಕ್ಕೆ ಬಂದಿದ್ದರೋ, ಬಂದಿಲ್ಲವೋ ಎನ್ನುವ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ. ಆದರೆ ಡಿಬಾಸ್ ಅವರು ನಿಖಿಲ್ ರೇವತಿ ದಂಪತಿಯ ಮಗನಿಗೆ ಒಂದು ಸುಂದರವಾದ ಉಡುಗೊರೆ ನೀಡಿದ್ದು, ಚಿನ್ನದ ಸರವನ್ನು ಗಿಫ್ಟ್ ನೀಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಹಾಗೆಯೇ ಡಿಬಾಸ್ ಅವರು ಕೆಲ ಸಮಯಕ್ಕೆ ಅಂದ್ರೆ ಸುಮಾರು ಅರ್ಧ ಗಂಟೆ ಸಮಯಕ್ಕೆ ಬಂದು ಹೋಗಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಡಿಬಾಸ್ ಬಂದಿದ್ದಾರೆ ಅಂದ್ರೆ, ಅಭಿಮಾನಿಗಳು ಅವರ ಸುತ್ತ ಮುತ್ತಿಕೊಳ್ಳುವುದು ನಡೆದೇ ನಡೆಯುತ್ತದೆ. ಹಾಗಾಗಿ ದರ್ಶನ್ ಅವರು ಬೇಗ ಬಂದು ಮಗುವಿಗೆ ವಿಶ್ ಮಾಡಿ ಹೋಗಿದ್ದಾರೆ ಎನ್ನಲಾಗುತ್ತಿದೆ. ಡಿಬಾಸ್ ಅವರು ಮತ್ತು ನಿಖಿಲ್ ಅವರು ಜೊತೆಯಾಗಿ ಕುರುಕ್ಷೇತ್ರ ಸಿನಿಮಾದಲ್ಲಿ ನಟಿಸಿದ್ದರು.

Comments are closed.