ರಾಜರಾಣಿ 2 ದಲ್ಲಿ ತೀರ್ಪುದಾರರಾಗಲು ಸೃಜನ್ ರವರು ತೆಗೆದುಕೊಳ್ಳುತ್ತಿರುವ ದಾಖಲೆ ಸಂಭಾವನೆ ಎಷ್ಟು ಗೊತ್ತೇ?? ಒಂದು ಎಪಿಸೋಡಿಗೆ ಎಷ್ಟು ಗೊತ್ತೇ?

ಕನ್ನಡ ಕಿರುತೆರೆಯಲ್ಲಿ ನಿರೂಪಣೆ ಮತ್ತು ನಟನೆ, ಯಾಗು ಜಡ್ಜ್ ಮೂರು ಆಗಿ ಬಹಳ ಫೇಮಸ್ ಆಗಿರುವವರು ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅವರು. ಸೃಜನ್ ಅವರು ಮಜಾ ಟಾಕೀಸ್ ಮೂಲಕ ಬಹಳ ಇನ್ನಷ್ಟು ಜನರಿಗೆ ಹತ್ತಿರವಾದರು. ಹಿರಿಯನಟ ಲೋಕೇಶ್ ಅವರ ಮಗ ಆಗಿರುವ ಸೃಜನ್ ಲೋಕೇಶ್ ಅವರು ನಟನಾಗಿ ಸಹ ಗುರುತಿಸಿಕೊಂಡಿದ್ದಾರೆ. ನಾಯಕನಾಗಿ ಹಾಗೂ ಪೋಷಕ ಪಾತ್ರಗಳಲ್ಲಿ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಸೃಜನ್ ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದ್ದು ಕಿರುತೆರೆ, ಹಲವು ಶೋ ಗಳನ್ನು ನಿರೂಪಣೆ ಮಾಡುವ ಮೂಲಕ ಸೃಜನ್ ಲೋಕೇಶ್ ಅವರು ಜನಪ್ರಿಯತೆ ಗಳಿಸಿಕೊಂಡರು.

ಇವರು ನಿರೂಪಣೆ ಮಾಡುವ ಶೈಲಿಗೆ ಎಂಜಾಯ್ ಮಾಡದೆ ಇರುವ ಜನರೇ ಇಲ್ಲ. ಸಾಕಷ್ಟು ಜನರು ಸೃಜನ್ ಅವರು ನಿರೂಪಣೆ ಮಾಡುವ ಶೈಲಿ ನೋಡಿ ನಗು ನಿಲ್ಲಿಸಲು ಸಾಧ್ಯವಿಲ್ಲ. ಸೃಜನ್ ಅವರು ಮಜಾ ಟಾಕೀಸ್ ಶೋ ನಿರೂಪಣೆಯ ಜೊತೆಗೆ, ತಮ್ಮ ಸಂಸ್ಥೆಯ ಮೂಲಕ ಅನೇಕ ಧಾರವಾಹಿಗಳನ್ನು ಸಹ ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ಡ್ಯಾನ್ಸಿಂಗ್ ಚಾಂಪಿಯನ್ಸ್ ಶೋ ಸಹ ಸೃಜನ್ ಅವರ ಲೋಕೇಶ್ ಪ್ರೊಡಕ್ಷನ್ಸ್ ಸಂಸ್ಥೆಯ ಮೂಲಕ ನಿರ್ಮಾಣ ಮಾಡಿ, ಮೇಘನಾ ರಾಜ್ ಅವರನ್ನು ಶೋ ಗೆ ಕರೆಸಿದರು. ಇತ್ತೀಚಿನ ದಿನಗಳಲ್ಲಿ ಸೃಜನ್ ಅವರು ರಿಯಾಲಿಟಿ ಶೋಗಳಿಗೆ ಜಡ್ಜ್ ಆಗಿ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲಿಗೆ ಕೆಲವು ದಿನಗಳ ಕಾಲ ಮಜಾಭಾರತ ಶೋನಲ್ಲೂ ಜಡ್ಜ್ ಆಗಿ ಬಂದಿದ್ದರು ಸೃಜನ್.

Srujan | ರಾಜರಾಣಿ 2 ದಲ್ಲಿ ತೀರ್ಪುದಾರರಾಗಲು ಸೃಜನ್ ರವರು ತೆಗೆದುಕೊಳ್ಳುತ್ತಿರುವ ದಾಖಲೆ ಸಂಭಾವನೆ ಎಷ್ಟು ಗೊತ್ತೇ?? ಒಂದು ಎಪಿಸೋಡಿಗೆ ಎಷ್ಟು ಗೊತ್ತೇ?
ರಾಜರಾಣಿ 2 ದಲ್ಲಿ ತೀರ್ಪುದಾರರಾಗಲು ಸೃಜನ್ ರವರು ತೆಗೆದುಕೊಳ್ಳುತ್ತಿರುವ ದಾಖಲೆ ಸಂಭಾವನೆ ಎಷ್ಟು ಗೊತ್ತೇ?? ಒಂದು ಎಪಿಸೋಡಿಗೆ ಎಷ್ಟು ಗೊತ್ತೇ? 2

ಬಳಿಕ ಕಲರ್ಸ್ ಕನ್ನಡ ವಾಹಿನಿಯ ರಾಜರಾಣಿ ಶೋಗೆ ಜಡ್ಜ್ ಆಗಿ ಎಂಟ್ರಿ ಕೊಟ್ಟರು ಸೃಜನ್. ಜಡ್ಜ್ ಗಳಾಗಿ ಸೃಜನ್ ಮತ್ತು ತಾರಾ ಅವರ ಮಾತುಕತೆ ಮತ್ತು ಜಡ್ಜ್ಮೆಂಟ್ ಅನ್ನು ಸ್ಪರ್ಧಿಗಳು ಮತ್ತು ವೀಕ್ಷಕರು ಎಲ್ಲರೂ ಸಹ ಇಷ್ಟಪಟ್ಟಿದ್ದರು. ರಾಜ ರಾಣಿ ಶೋ ಬಳಿಕ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನಲ್ಲೂ ಸೃಜನ್ ಲೋಕೇಶ್ ಅವರು ಜಡ್ಜ್ ಆಗಿ ಬಂದಿದ್ದರು, ಎರಡು ಶೋಗಳು ಸೂಪರ್ ಹಿಟ್ ಆಗಿದ್ದವು. ಇದೀಗ ಸೃಜನ್ ಅವರು ಮತ್ತೊಮ್ಮೆ ಜಡ್ಜ್ ಆಗಿ ಬಂದಿದ್ದು, ರಾಜರಾಣಿ 2 ಶೋ ನಲ್ಲಿ ಜಡ್ಜ್ ಅಗಲಿದ್ದಾರೆ. ಜೂನ್ 11ರಿಂದ ಶುರುವಾಗಲಿದೆ. ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ, ಸೃಜನ್ ಲೋಕೇಶ್ ಅವರು ಒಂದು ಎಪಿಸೋಡ್ ಗೆ 2.2 ಲಕ್ಷ ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಾರೆ ಎನ್ನುವ ಮಾಹಿತಿ ಸಿಕ್ಕಿದೆ.

Comments are closed.