ನಾಮಕರಣಕ್ಕೆ ಕರೆಯದೆ ಇದ್ದರೂ ಕೂಡ ನಿಖಿಲ್ ರೇವತಿ ರವರ ಪುತ್ರನಿಗೆ ರಾಧಿಕಾ ರವರ ಕಳುಹಿಸಿಕೊಟ್ಟ ಉಡುಗೊರೆ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ದೊಡ್ಡ ಗೌಡರ ಮನೆಯಲ್ಲಿ ಸಂತೋಷದ ಕ್ಷಣಗಳು ತುಂಬಿತುಳುಕುತ್ತಿವೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೆ ನಿಖಿಲ್ ಕುಮಾರ್ ರವರು 2020 ರಲ್ಲಿ ರೇವತಿ ಅವರನ್ನು ಮದುವೆಯಾಗಿದ್ದರು. ಅರೆಂಜ್ ಮ್ಯಾರೇಜ್ ಆಗಿದ್ದರು ಕೂಡ ಯಾವುದೇ ಪ್ರೀತಿಸಿದ ಜೋಡಿಗಳಿಗೆ ಕಡಿಮೆ ಇಲ್ಲದಂತೆ ಪ್ರತಿಯೊಬ್ಬರ ಮನವನ್ನು ಗೆದ್ದಿದ್ದರು. ಇನ್ನು ಕಳೆದ ವರ್ಷವಷ್ಟೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಿಖಿಲ್ ಕುಮಾರ್ ಹಾಗೂ ರೇವತಿ ದಂಪತಿಗಳಿಬ್ಬರು ಕೂಡ ಮಗುವಿನ ಆಗಮನದ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ತಿಳಿಸಿದರು.

ಇದಾದ ನಂತರ ರೇವತಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ವಂಶೋದ್ಧಾರಕ ಬಂದ ಎನ್ನುವುದಾಗಿ ದಂಪತಿಗಳಿಬ್ಬರು ಸೇರಿದಂತೆ ಇಡೀ ಕುಟುಂಬದವರು ಸಂತೋಷದಿಂದ ಮಗುವನ್ನು ಭರಮಾಡಿಕೊಂಡಿದ್ದರು. ಇನ್ನು ಈಗ ಮಗು ಹುಟ್ಟಿ 9 ತಿಂಗಳು ಕಳೆದ ನಂತರ ಮಗುವಿಗೆ ನಾಮಕರಣ ಕಾರ್ಯಕ್ರಮವನ್ನು ಪ್ರತಿಷ್ಠಿತ ಖಾಸಗಿ ಹೋಟೆಲ್ ನಲ್ಲಿ ಕುಟುಂಬಸ್ಥರು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ಮಾಡಲಾಗಿದೆ. ನಿಖಿಲ್ ಕುಮಾರ್ ಹಾಗೂ ರೇವತಿ ದಂಪತಿಗಳ ಮಗನಿಗೆ ಅವ್ಯಾನ್ ದೇವ್ ಎಂದು ನಾಮಕರಣ ಮಾಡಲಾಗಿದ್ದು,

ಈ ನಾಮಕರಣದಲ್ಲಿ ಬಂದಿರುವ ಸಾವಿರಕ್ಕೂ ಅಧಿಕ ಜನರಿಗೆ ಅದ್ದೂರಿಯಾಗಿ ಊಟೋಪಚಾರವನ್ನು ಮಾಡಲಾಗಿದೆ. ಇನ್ನು ಈ ಸಂದರ್ಭದಲ್ಲಿ ನಿಖಿಲ್ ಕುಮಾರ್ ಹಾಗೂ ರೇವತಿ ರವರ ಜೊತೆಗೆ ಉತ್ತಮ ಸಂಬಂಧವನ್ನು ಹೊಂದಿರುವ ರಾಧಿಕಾ ಕುಮಾರಸ್ವಾಮಿ ಅವರು ಈ ಕಾರ್ಯಕ್ರಮಕ್ಕೆ ಬರದೇ ಇದ್ದರೂ ಕೂಡ ಉಡುಗೊರೆಯೊಂದನ್ನು ಮಗುವಿಗಾಗಿ ಕಳುಹಿಸಿಕೊಟ್ಟಿದ್ದಾರೆ. ಹೌದು ಗೆಳೆಯರೆ ಸಕಲ ಶಾಸ್ತ್ರಗಳ ಅನ್ವಯ ನಡೆದ ಈ ನಾಮಕರಣ ಶಾಸ್ತ್ರ ಕಾರ್ಯಕ್ರಮದಲ್ಲಿ ಮಗುವಿಗಾಗಿ ರಾಧಿಕಾ ಕುಮಾರಸ್ವಾಮಿಯವರು ಬಹುಮೂಲ್ಯ ಚಿನ್ನದ ಸರವನ್ನು ಕಳುಹಿಸಿಕೊಟ್ಟಿದ್ದಾರೆ. ಈಗಾಗಲೇ ಮೊದಲ ಬಾರಿಗೆ ನಿಖಿಲ್ ಕುಮಾರ್ ಹಾಗೂ ರೇವತಿ ದಂಪತಿಗಳ ಮಗುವಿನ ಫೋಟೋ ರಿವಿಲ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

Comments are closed.