ಮೊದಲ ರಾಜರಾಣಿಯಲ್ಲಿ ಎಲ್ಲರ ಮನಗೆಲ್ಲುವಂತೆ ನಿರೂಪಣೆ ಮಾಡಿದ್ದ ಅನುಪಮಾ ಬದಲು, ಬೇರೆ ನಿರೂಪಕಿ ಬರಲು ಕಾರಣವೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಕಾರ್ಯಕ್ರಮಗಳು ಈಗ ಒಂದಾದಮೇಲೊಂದರಂತೆ ಪ್ರೇಕ್ಷಕರಿಗೆ ಮನರಂಜನೆ ನೀಡಲು ಸ್ಪರ್ಧೆಗೆ ಬಿದ್ದವರಂತೆ ಪ್ರಸಾರವನ್ನು ಆರಂಭಿಸಿದ್ದಾರೆ. ಹೀಗಾಗಿ ಆ ಕಾರ್ಯಕ್ರಮಗಳನ್ನು ನಡೆಸಿಕೊಡುವ ವ್ಯಕ್ತಿಗಳನ್ನು ಕೂಡ ವಾಹಿನಿಯವರು ಪ್ರೇಕ್ಷಕರು ಆಕರ್ಷಿತರಾಗುವಂತೆ ಆಯ್ಕೆ ಮಾಡುತ್ತಾರೆ.

ಇಂದು ನಾವು ಮಾತನಾಡಲು ಹೊರಟಿರುವುದು ರಾಜ-ರಾಣಿ ಕಾರ್ಯಕ್ರಮದ ಕುರಿತಂತೆ. ಹೌದು ಗೆಳೆಯರೆ ಮೊದಲ ಆವೃತ್ತಿ ಈಗಾಗಲೇ ಯಶಸ್ವಿ ಯಿಂದ ಮುಗಿದಿದ್ದು ದೊಡ್ಡಮಟ್ಟದಲ್ಲಿ ಕಲರ್ಸ್ ಕನ್ನಡ ವಾಹಿನಿಗೆ ಯಶಸ್ಸನ್ನು ಈ ಕಾರ್ಯಕ್ರಮ ತಂದುಕೊಟ್ಟಿತ್ತು. ಈ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ನಟಿ ಅನುಪಮ ಗೌಡರವರು ಕಾಣಿಸಿಕೊಂಡಿದ್ದರು. ಇವರ ಜೊತೆಗೆ ಕಾರ್ಯಕ್ರಮದ ತೀರ್ಪುಗಾರರಾಗಿ ಸೃಜನ್ ಲೋಕೇಶ್ ಹಾಗೂ ತಾರಾ ರವರು ಕಾಣಿಸಿಕೊಂಡಿದ್ದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದಂತಹ ರಾಜ-ರಾಣಿ ರಿಯಾಲಿಟಿ ಶೋ ಕಾರ್ಯಕ್ರಮದ ಮೊದಲ ಆವೃತ್ತಿಯನ್ನು ನೇಹಾಗೌಡ ಹಾಗೂ ಚಂದನ್ ಇಬ್ಬರೂ ಗೆದ್ದುಕೊಂಡಿದ್ದರು. ದಂಪತಿಗಳ ನಡುವಿನ ಸಂಬಂಧವನ್ನು ಪ್ರೇಕ್ಷಕರಿಗೆ ತೋರ್ಪಡಿಸುವ ಕಾರ್ಯಕ್ರಮ ಇದಾಗಿತ್ತು.

rajarani 2 | ಮೊದಲ ರಾಜರಾಣಿಯಲ್ಲಿ ಎಲ್ಲರ ಮನಗೆಲ್ಲುವಂತೆ ನಿರೂಪಣೆ ಮಾಡಿದ್ದ ಅನುಪಮಾ ಬದಲು, ಬೇರೆ ನಿರೂಪಕಿ ಬರಲು ಕಾರಣವೇನು ಗೊತ್ತೇ??
ಮೊದಲ ರಾಜರಾಣಿಯಲ್ಲಿ ಎಲ್ಲರ ಮನಗೆಲ್ಲುವಂತೆ ನಿರೂಪಣೆ ಮಾಡಿದ್ದ ಅನುಪಮಾ ಬದಲು, ಬೇರೆ ನಿರೂಪಕಿ ಬರಲು ಕಾರಣವೇನು ಗೊತ್ತೇ?? 2

ರಾಜ-ರಾಣಿ ಕಾರ್ಯಕ್ರಮದ ಎರಡನೇ ಸೀಸನ್ ಕೂಡ ಇದೇ ಜೂನ್ 11 ರಿಂದ ಪ್ರಾರಂಭವಾಗಲಿದೆ ಎಂಬುದಾಗಿ ತಿಳಿದುಬಂದಿದ್ದು ಈ ಕಾರ್ಯಕ್ರಮ ಪ್ರಾರಂಭವಾಗುವ ಮುನ್ನವೇ ಅಭಿಮಾನಿಗಳಿಗೆ ಒಂದು ಬೇಸರದ ವಿಚಾರ ಹೊರಬಂದಿದೆ. ಹೌದು ಗೆಳೆಯರೆ ಮೊದಲ ಆವೃತ್ತಿಯ ಕಾರ್ಯಕ್ರಮವನ್ನು ಚೆನ್ನಾಗಿ ನಿರೂಪಣೆ ಮಾಡಿಕೊಟ್ಟಿದ್ದ ಅನುಪಮ ಗೌಡರವರು ಈ ಬಾರಿಯ ರಾಜ ರಾಣಿ ಸೀಸನ್-2 ಕಾರ್ಯಕ್ರಮದ ನಿರೂಪಣೆಯಿಂದ ಹೊರಬಂದಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಸದ್ಯದ ಮಟ್ಟಿಗೆ ಅನುಪಮಾ ಗೌಡರವರು ವೈಯಕ್ತಿಕ ಕಾರಣದಿಂದಾಗಿ ಈ ಕಾರ್ಯಕ್ರಮದಿಂದ ಹೊರ ಬಂದಿದ್ದಾರೆ ಎಂಬುದಾಗಿ ತಿಳಿದುಬಂದಿದ್ದು ಹೊಸ ನಿರೂಪಕರು ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ ಎಂಬುದಾಗಿ ತಿಳಿದುಬಂದಿದೆ. ಇದರಿಂದ ಅನುಪಮಾ ಗೌಡ ರವರ ಅಭಿಮಾನಿಗಳಿಗೆ ಬೇಸರವಾಗಿರುವುದು ಸುಳ್ಳಲ್ಲ.

Comments are closed.