ಜೂನಿಯರ್ ಎನ್ಟಿಆರ್ ಅವರ ಪತ್ನಿ ಮದುವೆ ದಿನ ಉಟ್ಟುಕೊಂಡಿದ್ದ ಸೀರೆ ಬೆಲೆ ಎಷ್ಟು ಗೊತ್ತಾ?? ಯಪ್ಪಾ ಎಷ್ಟು ಕೋಟಿ ಗೊತ್ತೇ??

ನಮಸ್ಕಾರ ಸ್ನೇಹಿತರೇ ಜೂನಿಯರ್ ಎನ್ಟಿಆರ್ ಅವರ ಕುರಿತಂತೆ ನಿಮಗೆಲ್ಲರಿಗೂ ಗೊತ್ತೇ ಇದೆ. ತೆಲುಗು ಚಿತ್ರರಂಗದ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಒಬ್ಬರಾಗಿದ್ದಾರೆ. ಇನ್ನು ಇವರ ತಾಯಿ ಕರ್ನಾಟಕದ ಕುಂದಾಪುರದವರಾಗಿದ್ದು ಹೀಗಾಗಿ ಇವರು ಕೂಡ ಅರ್ಧ ಕರ್ನಾಟಕದವರಾಗಿದ್ದಾರೆ. ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ತೆಲುಗು ನಟರಲ್ಲಿ ಕೂಡ ಜೂನಿಯರ್ ಎನ್ಟಿಆರ್ ಕಾಣಿಸಿಕೊಳ್ಳುತ್ತಾರೆ. ಇತ್ತೀಚಿಗೆ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರದಲ್ಲಿ ನಟಿಸುವ ಮೂಲಕ ಕೇವಲ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಾತ್ರವಲ್ಲದೆ ಇಡೀ ಚಿತ್ರ ಜಗತ್ತಿನಲ್ಲಿಯೇ ಹಲವಾರು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ ಎಂದು ಹೇಳಬಹುದಾಗಿದೆ.

ಒಂದು ಸಿನಿಮಾಗೆ ಜೂನಿಯರ್ ಎನ್ಟಿಆರ್ ಅವರು ನೀಡುವಂತಹ ಸಮಯ ಹಾಗೂ ಕಾಳಜಿ ಮತ್ತು ಡೆಡಿಕೇಶನ್ ಯಾರು ಕೂಡ ನೀಡಲಾರರು ಎಂಬ ಮಾತಿದೆ. ಇನ್ನು ಎನ್ಟಿಆರ್ ಅವರ ಸಿನಿಮಾ ಜೀವನದ ಕುರಿತಂತೆ ಎಲ್ಲರಿಗೂ ಕೂಡ ತಿಳಿದಿದೆ. ಆದರೆ ಅವರ ವೈಯಕ್ತಿಕ ಜೀವನದ ಕುರಿತಂತೆ ತಿಳಿದಿರುವುದು ಕಡಿಮೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೆ ಅವರು ಮದುವೆಯಾಗಿರುವುದು ಲಕ್ಷ್ಮಿ ಪ್ರಣಿತಿ ಎನ್ನುವವರನ್ನು. ಇವರಿಬ್ಬರ ನಡುವೆ 15ವರ್ಷದ ಅಂತರವಿದೆ. ಇನ್ನು ಇವರಿಬ್ಬರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮಕ್ಕಳ ಹೆಸರು ಅಭಯ್ ಹಾಗೂ ಭಾರ್ಗವ್ ಎಂದು. ಸಂದರ್ಶನವೊಂದರಲ್ಲಿ ಜೂನಿಯರ್ ಎನ್ಟಿಆರ್ ಅವರು ತಮ್ಮ ಪತ್ನಿಯನ್ನು ಮದುವೆಯಾದ ನಂತರ ಅವರ ಜೀವನದಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳು ನಡೆದವು ಎಂಬುದಾಗಿ ಹೇಳಿದ್ದರು.

Jr.NTR marriage | ಜೂನಿಯರ್ ಎನ್ಟಿಆರ್ ಅವರ ಪತ್ನಿ ಮದುವೆ ದಿನ ಉಟ್ಟುಕೊಂಡಿದ್ದ ಸೀರೆ ಬೆಲೆ ಎಷ್ಟು ಗೊತ್ತಾ?? ಯಪ್ಪಾ ಎಷ್ಟು ಕೋಟಿ ಗೊತ್ತೇ??
ಜೂನಿಯರ್ ಎನ್ಟಿಆರ್ ಅವರ ಪತ್ನಿ ಮದುವೆ ದಿನ ಉಟ್ಟುಕೊಂಡಿದ್ದ ಸೀರೆ ಬೆಲೆ ಎಷ್ಟು ಗೊತ್ತಾ?? ಯಪ್ಪಾ ಎಷ್ಟು ಕೋಟಿ ಗೊತ್ತೇ?? 2

ಹಾಗಿದ್ದರೆ ಇಂದಿನ ಲೇಖನಿಯ ಪ್ರಮುಖ ಆಕರ್ಷಣೆಯ ಕೇಂದ್ರಬಿಂದು ಆಗಿರುವ ವಿಚಾರ ಕುರಿತಂತೆ ತಿಳಿಯೋಣ ಬನ್ನಿ. ಹೌದು ಗೆಳೆಯರೆ ಜೂನಿಯರ್ ಎನ್ಟಿಆರ್ ಅವರ ಪತ್ನಿ ಮದುವೆ ದಿನದಂದು ಉಟ್ಟುಕೊಂಡಿರುವ ಸೀರೆಯ ಬೆಲೆ ಎಷ್ಟು ಎಂಬುದನ್ನು ತಿಳಿದುಕೊಳ್ಳೋಣ. ಹೌದು ಗೆಳೆಯರೇ ಜೂನಿಯರ್ ಎನ್ಟಿಆರ್ ಹಾಗೂ ಲಕ್ಷ್ಮಿ ರವರ ಮದುವೆ ಆ ಕಾಲದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಇವರಿಬ್ಬರ ಮದುವೆ ಬರೋಬ್ಬರಿ 20 ಕೋಟಿ ರೂಪಾಯಿ ಖರ್ಚಿನಲ್ಲಿ ಅದ್ದೂರಿಯಾಗಿ ನಡೆದಿತ್ತು. ಈ ಸಂದರ್ಭದಲ್ಲಿ ಜೂನಿಯರ್ ಎನ್ಟಿಆರ್ ಅವರ ಪತ್ನಿ ಲಕ್ಷ್ಮಿ ರವರು ಬರೋಬ್ಬರಿ ಒಂದು ಕೋಟಿ ರೂಪಾಯಿ ಮೌಲ್ಯದ ಸೀರೆಯನ್ನು ಉಟ್ಟುಕೊಂಡಿದ್ದರು. ಇದು ಆ ಸಮಯದಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ.

Comments are closed.