ಫೇಸ್ಬುಕ್ ನಲ್ಲಿ ಪ್ರೀತಿ ಮಾಡಿ, ಮನೆಯವರನ್ನು ಒಪ್ಪಿಸಿ ಮದುವೆ ಕಾರ್ಡ್ ಮಾಡಿಸಿ ಸಿದ್ದವಾದ, ಆದರೆ ಹುಡುಗಿ ದೊಡ್ಡಮ್ಮ ಎಂದಿದ್ದವಳು ಕೊಟ್ಟ ಟ್ವಿಸ್ಟ್ ಗೆ ಶಾಕ್ ಆಗಿದ್ದು ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ದ ಬಳಕೆ ತೀವ್ರವಾಗಿ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಒಳ್ಳೆಯ ಕಾರಣಕ್ಕಾಗಿ ಬಳಸುವವರು ಕಡಿಮೆ ಕೆಟ್ಟ ಕಾರಣಕ್ಕಾಗಿಯೇ ಬಳಸುವವರು ಹೆಚ್ಚಾಗಿದ್ದಾರೆ ಎಂದರೂ ಕೂಡ ತಪ್ಪಾಗಲಾರದು. ಸೋಶಿಯಲ್ ಮೀಡಿಯಾದಲ್ಲಿ ನಡೆಯುವಂತಹ ಸಂವಹನ ಕೆಲವರ ಜೀವನಕ್ಕೆ ಕೂಡ ಹಾನಿಯನ್ನು ತಂದಿದೆ ಎಂದರೆ ತಪ್ಪಾಗಲಾರದು. ಹಾಗಿದ್ದರೆ ಈ ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ನಡೆದಿರುವಂತಹ ಕೆಲವೊಂದು ವಿಚಿತ್ರ ವಿಚಾರಗಳ ಕುರಿತಂತೆ ಸಂಪೂರ್ಣ ವಿವರವಾಗಿ ಚರ್ಚಿಸೋಣ ಬನ್ನಿ. ಹೌದು ಗೆಳೆಯರೇ ಆ ಹುಡುಗ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ತಾಗಿ ಆಕ್ಟಿವ್ ಆಗಿದ್ದ.

ಸಿಕ್ಕಸಿಕ್ಕವರೊಂದಿಗೆ ಚಾಟ್ ಮಾಡಿಕೊಳ್ಳುತ್ತಾ ಟೈಂಪಾಸ್ ಮಾಡುತ್ತಿದ್ದ. ಈ ಹುಡುಗ ಮಂಡ್ಯ ಮೂಲದವನಾಗಿದ್ದು ಮೂರು ತಿಂಗಳ ಹಿಂದೆ ಕಮಲ ಎನ್ನುವ ಹೆಸರಿನಲ್ಲಿ ಈತನಿಗೆ ಫ್ರೆಂಡ್ ರಿಕ್ವೆಸ್ಟ್ ಬರುತ್ತದೆ. ಈತನು ಕೂಡ ಚಾಟ್ ಮಾಡಲು ಆರಂಭಿಸಿ ಇವರಿಬ್ಬರ ನಡುವೆ ಸ್ನೇಹ ಮೂಡಿಬರುತ್ತದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪ್ರತಿಯೊಂದು ಸೋಶಿಯಲ್ ಮೀಡಿಯಾ ಪರಿಚಯದ ನಂತರ ಹುಡುಗ-ಹುಡುಗಿ ನಡುವೆ ಪ್ರೀತಿಯನ್ನು ಖಂಡಿತವಾಗಿ ಮೂಡಿಬರುತ್ತದೆ. ಇಲ್ಲೂ ಕೂಡ ಹಾಗೆ ಆಗುತ್ತದೆ ಆತ ಆಕೆಗೆ ಪ್ರಪೋಸ್ ಮಾಡುತ್ತಾನೆ. ಆಕೆಯೂ ಕೂಡ ಒಪ್ಪಿಕೊಳ್ಳುತ್ತಾಳೆ. ಆದರೆ ಆತ ಆಕೆಯ ಮುಖವನ್ನು ನೋಡಿರುವುದಿಲ್ಲ ಬರೀ ಕೇವಲ ಫೇಸ್ಬುಕ್ ನಲ್ಲಿಯೇ ಇದೆಲ್ಲ ನಡೆದಿರುತ್ತದೆ. ಹುಡುಗನಿಂದ ಅದಾಗಲೇ 3.5 ಲಕ್ಷ ರೂಪಾಯಿ ಹಣ ಹಾಗೂ 30 ಸಾವಿರ ರೂಪಾಯಿ ಮೌಲ್ಯದ ದಿನಸಿ ಸಾಮಾನುಗಳನ್ನು ಕೂಡ ಈಗಾಗಲೇ ಪಡೆದುಕೊಂಡಿದ್ದಾಳೆ. ಒಂದು ದಿನ ಆತ ಮದುವೆ ಪ್ರಸ್ತಾವವನ್ನು ಇಟ್ಟಾಗ ನಾನು ಆಕೆಯ ದೊಡ್ಡಮ್ಮ ನಾನೇ ಮದುವೆ ಮಾತುಕತೆಯನ್ನು ನಡೆಸುತ್ತೇನೆ ಎಂಬುದಾಗಿ ಹೇಳುತ್ತಾಳೆ.

coup wom marriage | ಫೇಸ್ಬುಕ್ ನಲ್ಲಿ ಪ್ರೀತಿ ಮಾಡಿ, ಮನೆಯವರನ್ನು ಒಪ್ಪಿಸಿ ಮದುವೆ ಕಾರ್ಡ್ ಮಾಡಿಸಿ ಸಿದ್ದವಾದ, ಆದರೆ ಹುಡುಗಿ ದೊಡ್ಡಮ್ಮ ಎಂದಿದ್ದವಳು ಕೊಟ್ಟ ಟ್ವಿಸ್ಟ್ ಗೆ ಶಾಕ್ ಆಗಿದ್ದು ಯಾಕೆ ಗೊತ್ತೇ??
ಫೇಸ್ಬುಕ್ ನಲ್ಲಿ ಪ್ರೀತಿ ಮಾಡಿ, ಮನೆಯವರನ್ನು ಒಪ್ಪಿಸಿ ಮದುವೆ ಕಾರ್ಡ್ ಮಾಡಿಸಿ ಸಿದ್ದವಾದ, ಆದರೆ ಹುಡುಗಿ ದೊಡ್ಡಮ್ಮ ಎಂದಿದ್ದವಳು ಕೊಟ್ಟ ಟ್ವಿಸ್ಟ್ ಗೆ ಶಾಕ್ ಆಗಿದ್ದು ಯಾಕೆ ಗೊತ್ತೇ?? 2

ಚಪ್ಪರ ಶಾಸ್ತ್ರ ದಿನವೇ ನಿಶ್ಚಿತಾರ್ಥ ಮಾಡಿಕೊಳ್ಳೋಣ ಎಂಬುದಾಗಿ ಆಕೆ ಹೇಳುತ್ತಾಳೆ. ಕೇವಲ ಹುಡುಗಿಯ ಫೋಟೋ ಫೇಸ್ಬುಕ್ನಲ್ಲಿ ಮಾತ್ರ ನೋಡಿದ್ದ ಈ ಮಂಡ್ಯದ ಹೈದ ಅದಾಗಲೇ ಮದುವೆ ಕಾರ್ಡ್ ಪ್ರಿಂಟ್ ಮಾಡಿಸಿ ಮದುವೆಗೂ ಮನೆಯವರನ್ನೆಲ್ಲ ಒಪ್ಪಿಸಿ ರೆಡಿಯಾಗಿದ್ದ. ಮದುವೆ ದಿನ ಇನ್ನೇನು ಬರಬೇಕು ಎನ್ನುವಷ್ಟರಲ್ಲಿ ದೊಡ್ಡಮ್ಮ ಎಂದು ಹೇಳಿಕೊಂಡಿದ್ದ ಮಹಿಳೆ ಮದುವೆ ಹುಡುಗಿಯನ್ನು ಆಕೆಯ ಮಾವ ಎಳೆದುಕೊಂಡು ಹೋಗಿದ್ದಾರೆ ಎಂಬುದಾಗಿ ಹೇಳುತ್ತಾಳೆ. ಇದರಿಂದ ಅನುಮಾನಗೊಂಡ ಹುಡುಗ ಆ ಮಹಿಳೆಯನ್ನು ಕರೆದು ಕೊಂಡು ಪೊಲೀಸ್ ಠಾಣೆಗೆ ಹೋಗಿ ದೂರನ್ನು ನೀಡಿದಾಗ ಆಕೆ ನಿಜಬಣ್ಣ ಬಯಲಾಗುತ್ತದೆ. ಹೌದು ಗೆಳೆಯರೇ ಆ ಫೇಕ್ ಫೋಟೋವನ್ನು ಹಾಕಿಕೊಂಡು ಕಮಲ ಎಂದು ಹೇಳಿಕೊಂಡಿದ್ದ ಹುಡುಗಿ ಇದೇ 50ವರ್ಷದ ಮಹಿಳೆಯಾಗಿದ್ದಳು. ನಂತರ ಆಕೆಯಿಂದ ಮುಚ್ಚಳಿಕೆ ಬರೆಸಿಕೊಂಡು ಪೊಲೀಸ್ ಠಾಣೆಯಿಂದ ಬಿಡಲಾಗಿದೆ.

Comments are closed.