ನನ್ನಂತೆ ಬ್ಯಾಟಿಂಗ್ ಮಾಡುವ ಯುವ ಕ್ರಿಕೆಟಿಗ ಸಿಕ್ಕ ಎಂದ ಯುವರಾಜ್, ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?? ಮತ್ತೊಬ್ಬ ಯುವರಾಜ್ ಸಿಕ್ಕಿಬಿಟ್ಟರೆ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವಂತೆ 2007 ರಲ್ಲಿ ಮೊದಲ ಬಾರಿ ನಡೆದಂತಹ ಟಿ ಟ್ವೆಂಟಿ ವರ್ಲ್ಡ್ ಕಪ್ ಮುಖಾಂತರ ಧೋನಿ ರವರ ನಾಯಕತ್ವದಲ್ಲಿ ಭಾರತೀಯ ತಂಡ ಮೊದಲ ವರ್ಲ್ಡ್ ಕಪ್ ನ್ನು ಗೆದ್ದು ಬೀಗಿತ್ತು. ಇನ್ನು ಈ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಕಾರಣವಾಗಿದ್ದು ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ಪಂಜಾಬ್ ಮೂಲದ ಯುವರಾಜ್ ಸಿಂಗ್ ಅವರು 2007 ರ ಟಿ20 ವಿಶ್ವಕಪ್ ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಕೂಡ ಭಾಜನರಾಗಿದ್ದಾರೆ. ಅದರಲ್ಲೂ ಯುವರಾಜ್ ಸಿಂಗ್ ಅವರು ಇಂಗ್ಲೆಂಡ್ ವಿರುದ್ಧ ಸ್ಟುವರ್ಟ್ ಬ್ರಾಡ್ ಓವರ್ನಲ್ಲಿ ಆರಕ್ಕೆ ಆರು ಎಸೆತವನ್ನು ಸಿಕ್ಸರ್ ಗೆ ಬಾರಿಸಿದ್ದರು. ಈ ಮೂಲಕ ವಿಶ್ವಕ್ರಿಕೆಟಿನಲ್ಲಿ t20 ಜನಪ್ರಿಯತೆ ಸಿಗುವಂತೆ ಮಾಡಿದ್ದಾರೆ ಎಂದರೆ ತಪ್ಪಾಗಲಾರದು.

ಟಿ-ಟ್ವೆಂಟಿ ಫಾರ್ಮ್ಯಾಟ್ ನಲ್ಲಿ ಯುವರಾಜ್ ಸಿಂಗ್ ರವರು ಬಿರುಸಿನ ಬ್ಯಾಟಿಂಗ್ ಮಾಡುವುದಕ್ಕೆ ಹೆಸರುವಾಸಿಯಾದವರು. ಇನ್ನು ಈ ಬಾರಿಯ ಐಪಿಎಲ್ ನಲ್ಲಿ ಸಾಕಷ್ಟು ಯುವ ಪ್ರತಿಭೆಗಳು ಕೂಡ ಕಾಣುವುದಕ್ಕೆ ಸಿಕ್ಕಿದ್ದಾರೆ. ಅದರಲ್ಲೂ ಕೆಲವೊಂದು ಆಟಗಾರರು ಯುವರಾಜ್ ಸಿಂಗ್ ಅವರನ್ನು ಕಾಪಿ ಮಾಡಿದ್ದಾರೆ ಎಂದು ಹೇಳುವಷ್ಟರ ಮಟ್ಟಿಗೆ ಚೆನ್ನಾಗಿ ಆಡುತ್ತಿದ್ದಾರೆ. ಅದರಲ್ಲೂ ಖುದ್ದಾಗಿ ಯುವರಾಜ್ ಸಿಂಗ್ ಅವರೇ ಒಬ್ಬ ಆಟಗಾರನ ಕುರಿತಂತೆ ಮೆಚ್ಚುಗೆಯನ್ನು ಸೂಚಿಸುತ್ತಾ ಆತನ ಆಟವನ್ನು ನೋಡಿದರೆ ನನ್ನ ಆಟವನ್ನು ನೋಡಿದಂತೆ ಅನಿಸುತ್ತದೆ ಎಂಬುದಾಗಿ ತಮ್ಮ ಹಿಂದಿನ ಕ್ರಿಕೆಟ್ ದಿನಗಳನ್ನು ಮೆಲುಕು ಹಾಕಿಕೊಂಡಿದ್ದಾರೆ.

yuvaraj | ನನ್ನಂತೆ ಬ್ಯಾಟಿಂಗ್ ಮಾಡುವ ಯುವ ಕ್ರಿಕೆಟಿಗ ಸಿಕ್ಕ ಎಂದ ಯುವರಾಜ್, ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?? ಮತ್ತೊಬ್ಬ ಯುವರಾಜ್ ಸಿಕ್ಕಿಬಿಟ್ಟರೆ??
ನನ್ನಂತೆ ಬ್ಯಾಟಿಂಗ್ ಮಾಡುವ ಯುವ ಕ್ರಿಕೆಟಿಗ ಸಿಕ್ಕ ಎಂದ ಯುವರಾಜ್, ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?? ಮತ್ತೊಬ್ಬ ಯುವರಾಜ್ ಸಿಕ್ಕಿಬಿಟ್ಟರೆ?? 2

ಹೌದು ಗೆಳೆಯರೇ ಯುವರಾಜ್ ಸಿಂಗ್ ರವರು ಮಾತನಾಡಿರುವುದು ಸನ್ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಆಡುತ್ತಿರುವ ಅಭಿಷೇಕ್ ಶರ್ಮರವರ ಕುರಿತಂತೆ. ಹೌದು ಗೆಳೆಯರೇ ಅಭಿಷೇಕ್ ಶರ್ಮ ರವರು ಸನ್ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಆಡುತ್ತಿದ್ದಾರೆ ಇವರು ಮೂಲತಃ ಪಂಜಾಬಿನವರು. ಈಗಾಗಲೇ ಸನ್ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಅಭಿಷೇಕ್ ಶರ್ಮಾರವರು 331 ರನ್ನುಗಳನ್ನು ಬಾರಿಸಿದ್ದಾರೆ. ಇವರ ಕುರಿತಂತೆ ಮಾತನಾಡುತ್ತ ಯುವರಾಜ್ ಸಿಂಗ್ ಅವರು ಅವರ ಆಟವನ್ನು ನೋಡಿದಾಗೆಲ್ಲ ನನ್ನ ಕ್ರಿಕೆಟ್ ದಿನಗಳನ್ನು ನಾನು ನೆನಪಿಸಿಕೊಳ್ಳುತ್ತೇನೆ. ಆತನ ಬ್ಯಾಟಿಂಗ್ ಶೈಲಿ ನೋಡಿದಾಗಲೆಲ್ಲ ನನ್ನ ಬ್ಯಾಟಿಂಗ್ ಶೈಲಿಯಲ್ಲಿಯೇ ಆಟ ಆಡುತ್ತಿದ್ದಾನೆ ಎನ್ನುವ ಭಾವನೆ ಮೂಡುತ್ತದೆ. ಆತನಿಗೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಮಿಂಚುವಂತಹ ಅವಕಾಶ ಸಿಗಲಿ ಎಂಬುದಾಗಿ ಹೇಳಿದ್ದಾರೆ.

Comments are closed.