ಜೂ. ಎನ್ಟಿಆರ್ – ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಹಿಂದಿದೆ ರೋಚಕ ಕಹಾನಿ?? ಹೀಗೆ ಮಾಡಿದ್ದು ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಜೂನಿಯರ್ ಎನ್ಟಿಆರ್ ಅವರ ಜನ್ಮದಿನದ ವಿಶೇಷವಾಗಿ ಅವರ 31ನೇ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಈಗ ಬಿಡುಗಡೆಯಾಗಿದೆ. ಅಂದಹಾಗೆ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವುದು ನಮ್ಮೆಲ್ಲರ ನೆಚ್ಚಿನ ನಿರ್ದೇಶಕ ಆಗಿರುವ ಪ್ರಶಾಂತ್ ನೀಲ್ ರವರು. ಹೌದು ಗೆಳೆಯರೇ ಉಗ್ರಂ ಹಾಗೂ ಕೆಜಿಎಫ್ ಸರಣಿ ಚಿತ್ರಗಳ ನಂತರ ನಿರ್ದೇಶಕ ಪ್ರಶಾಂತ್ ನೀಲ್ ಅವರ ಜನಪ್ರಿಯತೆಯನ್ನುವುದು ಭಾಷೆಗಳನ್ನು ಮೀರಿ ಬೇರೆ ಚಿತ್ರರಂಗಗಳಿಗೂ ಕೂಡ ಹರಡಿದೆ. ಪ್ರಶಾಂತ್ ನೀಲ್ ರವರು ಈಗಾಗಲೇ ನಿಮಗೆ ತಿಳಿದಿರುವಂತೆ ರೆಬೆಲ್ ಸ್ಟಾರ್ ಪ್ರಭಾಸ್ ರವರಿಗೆ ಸಲಾರ್ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಇನ್ನು ಜೂನಿಯರ್ ಎನ್ಟಿಆರ್ ರವರ 30ನೇ ಸಿನಿಮಾದ ಚಿತ್ರೀಕರಣ ಕೊರಟಾಲ ಸಿವ ರವರ ನಿರ್ದೇಶನದಲ್ಲಿ ಅತಿಶೀಘ್ರದಲ್ಲೇ ಪ್ರಾರಂಭವಾಗಲಿದೆ. ಹೀಗಾಗಿ ಜೂನಿಯರ್ ಎನ್ಟಿಆರ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಮೂಡಿ ಬರಲಿರುವ ಜೂನಿಯರ್ ಎನ್ಟಿಆರ್ ಅವರ 31ನೇ ಸಿನಿಮಾ ತನ್ನ ಚಿತ್ರೀಕರಣವನ್ನು ಮುಂದಿನ ವರ್ಷ ಏಪ್ರಿಲ್ನಲ್ಲಿ ಪ್ರಾರಂಭಿಸಲಿದೆ ಎಂಬುದಾಗಿ ಮೂಲಗಳು ತಿಳಿಸಿವೆ. ಸದ್ಯಕ್ಕೆ ಜೂನಿಯರ್ ಎನ್ಟಿಆರ್ ಅವರ ಜನ್ಮದಿನದ ವಿಶೇಷವಾಗಿ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು ಅಭಿಮಾನಿಗಳಲ್ಲಿ ಸಾಕಷ್ಟು ಖುಷಿಯನ್ನು ಉಂಟುಮಾಡಿದೆ.

NTR prashanth neel | ಜೂ. ಎನ್ಟಿಆರ್ - ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಹಿಂದಿದೆ ರೋಚಕ ಕಹಾನಿ?? ಹೀಗೆ ಮಾಡಿದ್ದು ಯಾಕೆ ಗೊತ್ತೇ??
ಜೂ. ಎನ್ಟಿಆರ್ - ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಹಿಂದಿದೆ ರೋಚಕ ಕಹಾನಿ?? ಹೀಗೆ ಮಾಡಿದ್ದು ಯಾಕೆ ಗೊತ್ತೇ?? 2

ಆದರೆ ಈ ಫಸ್ಟ್ ಲುಕ್ ಪೋಸ್ಟರ್ ನ ಫೋಟೋಶೂಟ್ ಹಿಂದಿನ ರಹಸ್ಯವನ್ನು ಕೇಳಿ ಅಭಿಮಾನಿಗಳು ಕೂಡ ಈಗಾಗಲೇ ಆಶ್ಚರ್ಯವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಹೌದು ಗೆಳೆಯರೇ ನಿರ್ದೇಶಕ ಪ್ರಶಾಂತ್ ನೀಲ್ ರವರು ಫೋಟೋಶೂಟ್ ಗಾಗಿ ಬರೋಬ್ಬರಿ 31 ಕ್ಯಾಮೆರಾಗಳನ್ನು ಉಪಯೋಗಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಫೋಟೋ ಕ್ಲಾರಿಟಿ ಕೂಡ ಚೆನ್ನಾಗಿದ್ದು ಸಖತ್ ಡಾರ್ಕ್ ಶೇಡ್ ನಲ್ಲಿ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಫಸ್ಟ್ ಲುಕ್ ಪೋಸ್ಟರ್ ಈಗಾಗಲೇ ದೊಡ್ಡಮಟ್ಟದಲ್ಲಿ ಸಂಚಲನವನ್ನು ಸೃಷ್ಟಿಮಾಡಿದ್ದು ಚಿತ್ರದ ಕುರಿತಂತೆ ಅಭಿಮಾನಿಗಳು ಹಾಗೂ ಸಿನಿಮಾ ರಸಿಕ ರಲ್ಲಿ ಕುತೂಹಲ ಇನ್ನಷ್ಟು ಹೆಚ್ಚಾಗಿದೆ. ಮೊದಲಿನಿಂದಲೂ ಕೂಡ ಇವರಿಬ್ಬರ ಕಾಂಬಿನೇಷನ್ ನಲ್ಲಿ ಸಿನಿಮಾ ಮೂಡಿಬರುತ್ತದೆ ಎನ್ನುವುದಾಗಿ ಸುದ್ದಿ ಇತ್ತು ಈಗ ಅದು ನಿಜವಾಗಿದ್ದು ಚಿತ್ರ ಯಾವಾಗ ಬಿಡುಗಡೆಯಾಗುತ್ತದೆಯೋ ಎಂಬುದಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

Comments are closed.