ತಮ್ಮ ಮಗಳು ಸಾನ್ವಿಗೆ 18ನೇ ವರ್ಷದ ಜನ್ಮದಿನದ ಪ್ರಯುಕ್ತ ಪ್ರಿಯಾ ಸುದೀಪ್ ಸರ್ಪ್ರೈಸ್ ನೀಡಿದ್ದು ಹೇಗೆ ಗೊತ್ತಾ?? ಅಭಿಮಾನಿಗಳಿಂದ ಶುಭ ಹಾರೈಕೆ.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಅಭಿನಯ ಚಕ್ರವರ್ತಿ ಸುದೀಪ್ ಹಾಗೂ ಪ್ರಿಯಾ ಸುದೀಪ್ ದಂಪತಿಗಳು ಕಾಲೇಜ್ ವಯಸ್ಸಿನಲ್ಲಿರುವಾಗಲೇ ಪ್ರೀತಿಸಿ ಮನೆಯವರನ್ನು ಒಪ್ಪಿಸಿ ಮದುವೆಯಾದವರು. ಕೆಲವು ವರ್ಷಗಳ ಹಿಂದೆ ಇವರ ದಾಂಪತ್ಯ ಜೀವನದಲ್ಲಿ ಬಿರುಕು ಬಂದಿದ್ದರೂ ಕೂಡ ಮಗಳಿಗಾಗಿ ಮತ್ತೆ ಒಂದಾಗುತ್ತಾರೆ. ಇಂದು ಇಡೀ ಕನ್ನಡ ಚಿತ್ರರಂಗವೇ ಮೆಚ್ಚುವಂತಹ ಜೋಡಿಯಾಗಿ ಇಬ್ಬರು ಕಾಣಿಸಿಕೊಳ್ಳುತ್ತಿದ್ದಾರೆ ಅಷ್ಟರಮಟ್ಟಿಗೆ ಇವರಿಬ್ಬರ ನಡುವೆ ಪ್ರೀತಿ ಹಾಗೂ ಗೌರವಗಳಿವೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಕೇವಲ ಚಿತ್ರಗಳಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿ ಕೂಡ ಜಂಟಲ್ಮನ್.

ಚಿತ್ರೀಕರಣದಿಂದ ಬಿಡುವು ಸಿಕ್ಕಾಗಲೆಲ್ಲಾ ತಮ್ಮ ಫ್ಯಾಮಿಲಿ ಜೊತೆಗೆ ಸಮಯ ಕಳೆಯಲು ಇಷ್ಟಪಡುತ್ತಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿನಿಮಾಗಳಲ್ಲಿ ನಟನೆಯ ಮೂಲಕ ನಿರ್ದೇಶನದ ಮೂಲಕ ಹಾಗೂ ನಿರ್ಮಾಣದ ಮೂಲಕ ತಮ್ಮ ಛಾಪನ್ನು ಮೂಡಿಸಿರುವ ಪ್ರತಿಭಾನ್ವಿತ ವ್ಯಕ್ತಿತ್ವ ಆಗಿದ್ದಾರೆ. ಆದರೆ ಅವರ ಮಗಳಾಗಿರುವ ಸಾನ್ವಿ ಸುದೀಪ್ ರವರು ಕೂಡ ತಂದೆಯಂತೆಯೇ ಪ್ರತಿಭಾನ್ವಿತೆ. ಆದರೆ ಬೇರೆ ವಿಷಯದಲ್ಲಿ ಹೌದು ಸಾನ್ವಿ ಸುದೀಪ್ ರವರು ಹಾಡುವುದರಲ್ಲಿ ಪ್ರಾವೀಣ್ಯತೆಯನ್ನು ಪಡೆದುಕೊಂಡಿದ್ದಾರೆ. ಸುದೀಪ್ ರವರು ಕೂಡ ಗಾಯಕರಾಗಿ ಹಲವಾರು ಸಿನಿಮಾಗಳಲ್ಲಿ ಹಾಡಿದವರು. ಆದರೆ ಸಾನ್ವಿ ಸುದೀಪ್ ರವರು ಪಕ್ಕ ಸೂಪರ್ ಸಿಂಗರ್ ಎಂದರೆ ತಪ್ಪಾಗಲಾರದು. ಆಗಾಗ ತಾವು ಹಾಡಿರುವ ತುಣುಕುಗಳನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇದಕ್ಕಾಗಿ ಅವರಿಗೆ ಇನ್ಸ್ಟಾಗ್ರಾಂ ಖಾತೆಯಲ್ಲಿ ಸಾವಿರಾರು ಅಭಿಮಾನಿಗಳಿದ್ದಾರೆ.

sudeep sanvi 1 | ತಮ್ಮ ಮಗಳು ಸಾನ್ವಿಗೆ 18ನೇ ವರ್ಷದ ಜನ್ಮದಿನದ ಪ್ರಯುಕ್ತ ಪ್ರಿಯಾ ಸುದೀಪ್ ಸರ್ಪ್ರೈಸ್ ನೀಡಿದ್ದು ಹೇಗೆ ಗೊತ್ತಾ?? ಅಭಿಮಾನಿಗಳಿಂದ ಶುಭ ಹಾರೈಕೆ.
ತಮ್ಮ ಮಗಳು ಸಾನ್ವಿಗೆ 18ನೇ ವರ್ಷದ ಜನ್ಮದಿನದ ಪ್ರಯುಕ್ತ ಪ್ರಿಯಾ ಸುದೀಪ್ ಸರ್ಪ್ರೈಸ್ ನೀಡಿದ್ದು ಹೇಗೆ ಗೊತ್ತಾ?? ಅಭಿಮಾನಿಗಳಿಂದ ಶುಭ ಹಾರೈಕೆ. 2

ಇನ್ನು ಇಂದು ಸಾನ್ವಿ ಸುದೀಪ್ ರವರು ಇಂದು 18ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಪ್ರಿಯಾ ಸುದೀಪ್ ರವರು ಮಗಳಿಗೆ ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಶುಭಕೋರುವವರು ಮೂಲಕ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ ಎನ್ನಬಹುದಾಗಿದೆ. ಹೌದು ಗೆಳೆಯರೇ ಸೋಶಿಯಲ್ ಮೀಡಿಯಾ ದಲ್ಲಿ ಪ್ರಿಯಾ ಸುದೀಪ್ ಅವರು ತಮ್ಮ ಮಗಳಿಗೆ 18 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಪ್ರೌಢಾವಸ್ಥೆಗೆ ಸ್ವಾಗತ ಯಾವಾಗಲೂ ನಿನ್ನ ಆತ್ಮಸಾಕ್ಷಿಯ ಮಾತನ್ನು ಕೇಳು ಮಾತಿನಲ್ಲಿ ಮಧುರತೆ ಇರಲಿ ಮನೋಭಾವ ಪ್ರಗತಿಯ ಕಡೆಗೆ ಇರಲಿ ನಿನಗೆ ಗೊತ್ತು ದೊಡ್ಡ ಸಾಧನೆಯನ್ನು ಮಾಡುವುದಕ್ಕಾಗಿ ನೀನು ಇದ್ದೀಯ ಎಂದು. 18 ರ ಜನ್ಮ ದಿನಾಚರಣೆಯ ಶುಭಾಶಯಗಳು ಎಂಬುದಾಗಿ ವಿಶೇಷವಾಗಿ ಪ್ರಿಯಸುದೀಪ್ ರವರು ತಮ್ಮ ಮಗಳಿಗೆ ಜನುಮ ದಿನದ ಶುಭಾಶಯಗಳನ್ನು ಕೋರಿದ್ದಾರೆ.

Comments are closed.