ಅತಿಲೋಕ ಸುಂದರಿ ಜೂಹಿ ಚಾವ್ಲಾ ರವರ ಮಗಳು ಕೂಡ ಅಪ್ರತಿಮ ಸುಂದರಿ, ಹೇಗಿದ್ದಾರೆ ಗೊತ್ತಾ?? ಸಿನೆಮಾಗೆ ಬಂದಿಲ್ಲ ಆದರೂ ಫೇಮಸ್.

ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ಚಿತ್ರರಂಗದಲ್ಲಿ ಇಂದಿನ ಕಾಲದಲ್ಲಿ ಎಂತಹ ಸುರಸುಂದರಿಯರು ಇದ್ದರೂ ಕೂಡ 80 ಹಾಗೂ 90ರ ದಶಕದಲ್ಲಿ ಇದ್ದಂತಹ ನಟಿಯರನ್ನು ಮೀರಿಸಲು ಸಾಧ್ಯವೇ ಇಲ್ಲ. ಇನ್ನು ನಾವು ಹೇಳ ಹೊರಟಿರೋ ನಟಿ ಕೂಡ ಬಾಲಿವುಡ್ ಚಿತ್ರರಂಗ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಎಲ್ಲಾ ಭಾಷೆಗಳಲ್ಲಿ ಎಂಬತ್ತರ ದಶಕದಲ್ಲಿ ಮಿಂಚಿ ಮೆರದಂತಹ ನಟಿ. ನಾವು ಮಾತನಾಡುತ್ತಿರುವುದು ನಟಿ ಜೂಹಿ ಚಾವ್ಲಾ ಅವರ ಕುರಿತಂತೆ.

ಜೂಹಿ ಚಾವ್ಲಾ ರವರಿಗೆ ವಯಸ್ಸು 53 ಆದರೂ ಕೂಡ ನೋಡಲು 25ರ ಹರೆಯದ ಯುವತಿಯಂತೆ ಕಾಣುತ್ತಾರೆ. ಇಂದಿಗೂ ತಮ್ಮ ಸೌಂದರ್ಯವನ್ನು ಸಂಭಾಳಿಸಿಕೊಂಡು ಬಂದಿದ್ದಾರೆ. 1986 ರಲ್ಲಿ ಬಿಡುಗಡೆ ಆದಂತಹ ಸುಲ್ತಾನ ಎನ್ನುವ ಹಿಂದಿ ಚಿತ್ರದ ಮೂಲಕ ನಟನೆಗೆ ಕಾಲಿಟ್ಟ ಜೂಹಿಚಾವ್ಲಾ ರವರು ಒಂದಾದಮೇಲೊಂದರಂತೆ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸುತ್ತಾರೆ. ಕನ್ನಡದಲ್ಲಿ ಭಾಗಶಃ ಕ್ರೇಜಿಸ್ಟಾರ್ ರವಿಚಂದ್ರನ್ ರವರ ಸಿನಿಮಾಗಳಲ್ಲಿ ಅವರು ನಟಿಸಿರುವುದು. ಆದರೂ ನಟಿಸಿರುವ ಎಲ್ಲಾ ಕನ್ನಡ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು ಎನ್ನುವುದನ್ನು ನಾವು ಸ್ಮರಿಸಿಕೊಳ್ಳಬೇಕು.

juhi chawla 1 | ಅತಿಲೋಕ ಸುಂದರಿ ಜೂಹಿ ಚಾವ್ಲಾ ರವರ ಮಗಳು ಕೂಡ ಅಪ್ರತಿಮ ಸುಂದರಿ, ಹೇಗಿದ್ದಾರೆ ಗೊತ್ತಾ?? ಸಿನೆಮಾಗೆ ಬಂದಿಲ್ಲ ಆದರೂ ಫೇಮಸ್.
ಅತಿಲೋಕ ಸುಂದರಿ ಜೂಹಿ ಚಾವ್ಲಾ ರವರ ಮಗಳು ಕೂಡ ಅಪ್ರತಿಮ ಸುಂದರಿ, ಹೇಗಿದ್ದಾರೆ ಗೊತ್ತಾ?? ಸಿನೆಮಾಗೆ ಬಂದಿಲ್ಲ ಆದರೂ ಫೇಮಸ್. 3

ಕನ್ನಡ ಚಿತ್ರರಂಗದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಜೂಹಿ ಚಾವ್ಲಾ ರವರ ಜೋಡಿ 80 ಹಾಗೂ 90ರ ದಶಕದಲ್ಲಿ ದೊಡ್ಡಮಟ್ಟದಲ್ಲಿ ಸಂಚಲನವನ್ನು ಸೃಷ್ಟಿಸಿದ್ದವು. ಅವುಗಳಲ್ಲಿ ಪ್ರಮುಖವಾದವು ಪ್ರೇಮಲೋಕ ರಣಧೀರ ಶಾಂತಿಕ್ರಾಂತಿ ಇತ್ಯಾದಿ. ಇತ್ತೀಚಿಗಷ್ಟೇ ನಟ ಹಾಗೂ ನಿರ್ದೇಶಕ ರಮೇಶ್ ಅರವಿಂದ್ ರವರ ಪುಷ್ಪಕ ವಿಮಾನ ಚಿತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದರು. ಇನ್ನು ಇವರ ವೈವಾಹಿಕ ಜೀವನದ ಕುರಿತಂತೆ ಹೇಳುವುದಾದರೆ 1995 ರಲ್ಲಿ ಜೆ ಮೆಹತಾ ಎನ್ನುವ ಉದ್ಯಮಿಯನ್ನು ಮದುವೆಯಾಗಿ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವಿನ ತಾಯಿ ಕೂಡ ಆಗಿದ್ದಾರೆ.

ಈಗಾಗಲೇ ನಟಿ ಜೂಹಿ ಚಾವ್ಲಾ ರವರು ಭಾರತೀಯ ಚಿತ್ರರಂಗದಲ್ಲಿ ಸಂಪಾದಿಸಿರುವ ಖ್ಯಾತಿ ಹಾಗೂ ಜನಪ್ರಿಯತೆ ನಿಮಗೆಲ್ಲರಿಗೂ ಗೊತ್ತೇ ಇದೆ. ಅವರ ಕುಟುಂಬದಿಂದ ಇನ್ನೊಂದು ಪ್ರತಿಭೆಗೆ ಚಿತ್ರರಂಗಕ್ಕೆ ಕಾಲಿಡಲು ಸಿದ್ಧತೆಯನ್ನು ನಡೆಸುತ್ತಿದೆ. ಹೌದು ನಾವು ಮಾತನಾಡುತ್ತಿರುವುದು ಜೂಹಿಚಾವ್ಲಾ ರವರ ಮಗಳಾಗಿರುವ ಜಾಹ್ನವಿ ಮೆಹ್ತಾ ರವರ ಕುರಿತಂತೆ. ಈಗಾಗಲೇ ತಾಯಿ ನಟಿಯಾಗಿರುವುದರಿಂದ ಚಿತ್ರರಂಗಕ್ಕೆ ಕಾಲಿಡಲು ಹೆಚ್ಚಿನ ಸಿದ್ಧತೆಗಳನ್ನು ಮಾಡಬೇಕಾಗುವ ಅವಶ್ಯಕತೆಯಿಲ್ಲ. ಇತ್ತೀಚಿಗೆ ಐಪಿಎಲ್ನಲ್ಲಿ ಅತ್ಯಂತ ಕಿರಿಯ ಬಿಡ್ಡರ್ ಆಗಿ ಕೂಡ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಕಾಣಿಸಿಕೊಂಡಿದ್ದಾರೆ.

ಎಲ್ಲ ಅಂದುಕೊಂಡಂತೆ ಆದರೆ ಇನ್ನೂ ಒಂದೆರಡು ವರ್ಷಗಳಲ್ಲಿ ನಟಿ ಜೂಹಿ ಚಾವ್ಲಾ ಅವರ ಮಗಳು ಬಾಲಿವುಡ್ ಗೆ ಪಾದಾರ್ಪಣೆ ಮಾಡಲಿದ್ದಾರೆ. ತಾಯಿಯನ್ನು ಈಗಾಗಲೇ ಭಾರತೀಯ ಜನರು ಮೆಚ್ಚಿಕೊಂಡಿದ್ದಾರೆ. ಆದರೆ ಮಗಳನ್ನು ಕೂಡ ಮೆಚ್ಚುತ್ತಾರೆ ಎನ್ನುವ ಖಚಿತತೆಯಿಲ್ಲ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ನೇಪೋಟಿಸಂ ಹೆಚ್ಚಾಗಿದೆ ಎನ್ನುವ ಕುರಿತಂತೆ ವಿರೋಧ ಹೆಚ್ಚಾಗಿದೆ. ಅದನ್ನು ಕೂಡ ನಾವು ಇಲ್ಲಿ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

juhi chawla 3 | ಅತಿಲೋಕ ಸುಂದರಿ ಜೂಹಿ ಚಾವ್ಲಾ ರವರ ಮಗಳು ಕೂಡ ಅಪ್ರತಿಮ ಸುಂದರಿ, ಹೇಗಿದ್ದಾರೆ ಗೊತ್ತಾ?? ಸಿನೆಮಾಗೆ ಬಂದಿಲ್ಲ ಆದರೂ ಫೇಮಸ್.
ಅತಿಲೋಕ ಸುಂದರಿ ಜೂಹಿ ಚಾವ್ಲಾ ರವರ ಮಗಳು ಕೂಡ ಅಪ್ರತಿಮ ಸುಂದರಿ, ಹೇಗಿದ್ದಾರೆ ಗೊತ್ತಾ?? ಸಿನೆಮಾಗೆ ಬಂದಿಲ್ಲ ಆದರೂ ಫೇಮಸ್. 4

ಪ್ರತಿಭೆ ಇದ್ದರೆ ಯಾರ ಮಗಳಾಗಿದ್ದರೂ ಕೂಡ ಸಿನಿಮಾ ರಸಿಕರು ಪ್ರೋತ್ಸಾಹ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಈಗಾಗಲೇ ಹಲವಾರು ಸ್ಟಾರ್ ನಟರ ಹಾಗೂ ನಿರ್ದೇಶಕ ನಿರ್ಮಾಪಕರ ಮಕ್ಕಳು ಬಾಲಿವುಡ್ ಚಿತ್ರರಂಗದಲ್ಲಿ ಯಶಸ್ವಿ ಸಿನಿಮಾ ಜೀವನವನ್ನು ಜೀವಿಸುತ್ತಿರುವುದು ನೀವು ನೋಡಬಹುದಾಗಿದೆ. ಮುಂದಿನ ದಿನಗಳಲ್ಲಿ ಜೂಹಿಚಾವ್ಲಾ ರವರ ಮಗಳಾಗಿರುವ ಜಾಹ್ನವಿ ಮೆಹ್ತಾ ರವರು ಚಿತ್ರರಂಗದಲ್ಲಿ ಜನರಿಂದ ಮೆಚ್ಚುಗೆಯನ್ನು ಪಡೆಯುತ್ತಾರೋ ಇಲ್ಲವೋ ಎಂಬುದನ್ನು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.