ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಕೊನೆಯ ಕ್ಷಣದಲ್ಲಿ ಮತ್ತೊಂದು ಶಾಕ್. ಕೈಕೊಟ್ಟ ಸ್ಟಾರ್ ಆಟಗಾರರು. ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇನ್ನೇನು ನಮ್ಮೆಲ್ಲರ ನೆಚ್ಚಿನ ಇಡೀ ಭಾರತ ಆಚರಿಸುವಂತಹ ಕ್ರಿಕೆಟ್ ಹಬ್ಬವಾಗಿರುವ ಐಪಿಎಲ್ ಇದೇ ಮಾರ್ಚ್ 26ರಿಂದ ಅದ್ದೂರಿಯಾಗಿ ಪ್ರಾರಂಭವಾಗಲಿದೆ. ಕ್ರಿಕೆಟ್ ಅಭಿಮಾನಿಗಳು ಕೂಡ ನೆಚ್ಚಿನ ಕ್ರಿಕೆಟಿಗರನ್ನು ಹಾಗೂ ನೆಚ್ಚಿನ ತಂಡ ಗೆಲ್ಲುವುದನ್ನು ನೋಡಲು ಕಾತರರಾಗಿದ್ದಾರೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈ ಬಾರಿ ಮೆಗಾ ಹರಾಜು ನಡೆದಿರುವುದರಿಂದಾಗಿ ಎಲ್ಲಾ ತಂಡಗಳಲ್ಲಿ ಕೂಡ ಹೊಸಮುಖಗಳು ಎದ್ದುಕಾಣುತ್ತಿವೆ. ಇನ್ನು ಹಲವಾರು ತಂಡಗಳಲ್ಲಿ ನಾಯಕರ ಬದಲಾವಣೆಯು ಕೂಡ ನಡೆದಿದೆ.

ಹೀಗಾಗಿ ಈ ಬಾರಿ ಯಾರು ಗೆಲ್ಲುತ್ತಾರೆ ಎಂದು ಹೇಳಲು ಕಷ್ಟಸಾಧ್ಯವಾಗಿದೆ. ಇನ್ನು ಈಗ ನಾವು ಮಾತನಾಡಲು ಹೊರಟಿರುವುದು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಕುರಿತಂತೆ. ಶಾರುಖ್ ಖಾನ್ ಒಡೆತನದಲ್ಲಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಈ ಬಾರಿ ಶ್ರೇಯಸ್ ಅಯ್ಯರ್ ರವರ ನಾಯಕತ್ವದಲ್ಲಿ ಐಪಿಎಲ್ 2022 ಅನ್ನು ಎದುರಿಸಲಿದೆ. ಆದರೆ ತಂಡದ ಮೆಂಟರ್ ಆಗಿರುವ ಡೇವಿಡ್ ಹಸ್ಸಿ ಹೇಳಿರುವ ಪ್ರಕಾರ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಪ್ರಾರಂಭದಲ್ಲಿ ಕೆಲವೊಂದು ಕಷ್ಟಗಳನ್ನು ಎದುರಿಸುವ ಸಾಧ್ಯತೆ ಇದೆ. ಹೌದು ಪ್ರಾರಂಭದ ಐದು ಪಂದ್ಯಗಳಿಗೆ ಇಬ್ಬರು ಸ್ಟಾರ್ ಆಟಗಾರರು ಅಲಭ್ಯರಾಗಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಹಾಗಿದ್ದರೆ ಅವರು ಯಾರು ಎಂಬುದರ ತಿಳಿಯೋಣ ಬನ್ನಿ.

kkr 2022 | ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಕೊನೆಯ ಕ್ಷಣದಲ್ಲಿ ಮತ್ತೊಂದು ಶಾಕ್. ಕೈಕೊಟ್ಟ ಸ್ಟಾರ್ ಆಟಗಾರರು. ಯಾರ್ಯಾರು ಗೊತ್ತೇ??
ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಕೊನೆಯ ಕ್ಷಣದಲ್ಲಿ ಮತ್ತೊಂದು ಶಾಕ್. ಕೈಕೊಟ್ಟ ಸ್ಟಾರ್ ಆಟಗಾರರು. ಯಾರ್ಯಾರು ಗೊತ್ತೇ?? 2

ಹೌದು ಗೆಳೆಯರೇ ಅವರು ಇನ್ಯಾರು ಅಲ್ಲ ಬದಲಾಗಿ ಆಸ್ಟ್ರೇಲಿಯ ತಂಡದ ಪ್ಯಾಟ್ ಕಮಿನ್ಸ್ ಹಾಗೂ ಆರೋನ್ ಫಿಂಚ್. ಇಬ್ಬರೂ ಕೂಡ ಆಸ್ಟ್ರೇಲಿಯಾದ ಪಾಕಿಸ್ತಾನ ಪ್ರವಾಸದ ಸರಣಿಯಲ್ಲಿ ಆಟವಾಡುತ್ತಿದ್ದಾರೆ. ಈ ಸರಣಿ ಮುಗಿಯುವುದು ಏಪ್ರಿಲ್ 5ರಂದು ಹಾಗೂ ಮೂರು ದಿನಗಳ ಕ್ವಾರಂಟೈನ್ ನಲ್ಲಿ ಕೂಡ ಇರಬೇಕಾಗುತ್ತದೆ. ಹೀಗಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮೊದಲ ಐದು ಪಂದ್ಯಗಳಲ್ಲಿ ಇಬ್ಬರು ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿ ಮಾಡಬೇಕಾಗಿರುವುದು ತಂಡಕ್ಕೆ ದೊಡ್ಡ ಚಿಂತೆಯಾಗಿದೆ ಎಂಬುದಾಗಿ ಡೇವಿಡ್ ಹಸ್ಸಿ ಮಾಧ್ಯಮದವರಲ್ಲಿ ಹೇಳಿಕೊಂಡಿದ್ದಾರೆ. ಇನ್ನು ಕೆಲವು ತಂಡಗಳಲ್ಲಿ ಕೂಡ ವಿದೇಶಿ ಆಟಗಾರರ ಅಲಭ್ಯತೆ ಎದ್ದುಕಾಣುತ್ತಿರುವುದು ಕೂಡ ಈ ಸಂದರ್ಭದಲ್ಲಿ ನಮಗೆ ಮುಖ್ಯವಾಗಿ ಕಾಣಿಸುತ್ತಿರುವ ಅಂಶವಾಗಿದೆ ಎಂದು ಹೇಳಬಹುದಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಶೇರ್ ಮಾಡಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Comments are closed.