ಅಪ್ಪನ ಚಿತ್ರದಲ್ಲಿ ಮಸ್ತ್ ಸ್ಟೆಪ್ಸ್ ಮೂಲಕ ಸಿನೆಮಾಗೆ ಎಂಟ್ರಿ ಕೊಟ್ಟ, ಮಹೇಶ್ ಬಾಬು ರವರ ಮಗಳ ನಿಜವಾದ ವಯಸ್ಸು ಎಷ್ಟು ಗೊತ್ತೇ?? ಇಷ್ಟು ಚಿಕ್ಕವರಾ??

ನಮಸ್ಕಾರ ಸ್ನೇಹಿತರೇ ಸಿನಿಮಾ ತಾರೆಯರ ಮಕ್ಕಳು ಅವರ ನಂತರ ಚಿತ್ರರಂಗಕ್ಕೆ ಬರುವುದು ಮೊದಲಿನಿಂದಲೂ ಕೂಡ ನಡೆದುಕೊಂಡು ಬಂದಂತಹ ಪ್ರಕ್ರಿಯೆ. ಉತ್ತಮ ಪ್ರತಿಭೆ ಇದ್ದವರು ಚಿತ್ರರಂಗದಲ್ಲಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿ ಸ್ಟಾರ್ ಆದವರು ಕೂಡ ಇದ್ದಾರೆ. ಇನ್ನು ನಾವು ಮಾತನಾಡಲು ಹೋಗುತ್ತಿರುವುದು ತೆಲುಗು ಚಿತ್ರರಂಗದ ಪ್ರಿನ್ಸ್ ಮಹೇಶ್ ಬಾಬುರವರ ಮಗಳಾಗಿರುವ ಸಿತಾರ ಘಟ್ಟಿಮನೇನಿ ರವರ ಕುರಿತಂತೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಪ್ರಿನ್ಸ್ ಮಹೇಶ್ ಬಾಬು ರವರು ಕೂಡ ಸ್ಟಾರ್ ನಟನ ಮಗ‌. ಹೌದು ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಆಗಿರುವ ಕೃಷ್ಣರವರ ಮಗ ಮಹೇಶ್ ಬಾಬು ರವರು ತಂದೆಯ ನಂತರ ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಾರೆ.

ಈಗ ದೇಶ-ವಿದೇಶಗಳಲ್ಲಿ ಲಕ್ಷಾಂತರ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಈಗ ಅವರ ಮಗಳಾಗಿರುವ ಸಿತಾರ ರವರು ಕೂಡ ಮಹೇಶ್ ಬಾಬು ಅಂದರೆ ಅವರ ತಂದೆಯ ಮುಂದಿನ ಸಿನಿಮಾ ವಾಗಿರುವ ಸರ್ಕಾರು ವಾರಿ ಪಾಠ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಾಲನಟಿಯಾಗಿ ಪಾದಾರ್ಪಣೆ ಮಾಡಿದ್ದಾರೆ ಎಂದರೆ ತಪ್ಪಾಗಲಾರದು. ಹೌದು ಚಿತ್ರದ ಇತ್ತೀಚಿಗಷ್ಟೆ ಬಿಡುಗಡೆಯಾಗಿರುವ ಪೆನ್ನಿ ಸಾಂಗ್ ಹಾಡಿನಲ್ಲಿ ಸಕ್ಕತ್ತಾಗಿ ಸ್ಟೆಪ್ ಹಾಕುವ ಮೂಲಕ ಎಲ್ಲರ ಮನವನ್ನು ಸೆಳೆದಿದ್ದಾರೆ. ತಂದೆಯಂತೆ ಮಗಳಲ್ಲೂ ಕೂಡ ಪ್ರತಿಭೆ ಎನ್ನುವುದು ಸಾಕಷ್ಟಿದೆ ಎಂಬುದಾಗಿ ಎಲ್ಲರೂ ಹಾಡಿಹೊಗಳಿದ್ದಾರೆ.

mahesh babu sitara | ಅಪ್ಪನ ಚಿತ್ರದಲ್ಲಿ ಮಸ್ತ್ ಸ್ಟೆಪ್ಸ್ ಮೂಲಕ ಸಿನೆಮಾಗೆ ಎಂಟ್ರಿ ಕೊಟ್ಟ, ಮಹೇಶ್ ಬಾಬು ರವರ ಮಗಳ ನಿಜವಾದ ವಯಸ್ಸು ಎಷ್ಟು ಗೊತ್ತೇ?? ಇಷ್ಟು ಚಿಕ್ಕವರಾ??
ಅಪ್ಪನ ಚಿತ್ರದಲ್ಲಿ ಮಸ್ತ್ ಸ್ಟೆಪ್ಸ್ ಮೂಲಕ ಸಿನೆಮಾಗೆ ಎಂಟ್ರಿ ಕೊಟ್ಟ, ಮಹೇಶ್ ಬಾಬು ರವರ ಮಗಳ ನಿಜವಾದ ವಯಸ್ಸು ಎಷ್ಟು ಗೊತ್ತೇ?? ಇಷ್ಟು ಚಿಕ್ಕವರಾ?? 2

ಇನ್ನು ಈಗ ಎಲ್ಲರೂ ಚರ್ಚಿಸುತ್ತಿರುವುದು ಇಷ್ಟೊಂದು ಚೂಟಿಯಾಗಿ ಹಾಗೂ ಸಖತ್ ಆಗಿ ಸ್ಟೆಪ್ ಹಾಕಿರುವ ಸೀತಾರಾ ಅವರ ವಯಸ್ಸು ಎಷ್ಟು ಎನ್ನುವುದು. ಆ ಗೊಂದಲವನ್ನು ಕೂಡ ನಾವು ಬಗೆಹರಿಸುತ್ತೇವೆ ಬನ್ನಿ. ಹೌದು ಮಹೇಶ್ ಬಾಬು ಹಾಗೂ ನಮೃತ ಶಿರೊಡ್ಕರ್ ರವರ ಪುತ್ರಿ ಆಗಿರುವ ಸೀತಾರಾ ಅವರಿಗೆ ಕೇವಲ ಒಂಬತ್ತು ವರ್ಷ ವಯಸ್ಸು ಅಷ್ಟೇ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟೊಂದು ಜನಪ್ರಿಯರಾಗಿ ಜನರ ಮನಸ್ಸನ್ನು ಗೆದ್ದಿದ್ದಾರೆ ಎಂದರೆ ಮುಂದಿನ ದಿನಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು ಕೂಡ ಆಶ್ಚರ್ಯಪಡಬೇಕಾಗಿಲ್ಲ. ಈ ಕುರಿತಂತೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ವ್ಯಕ್ತಪಡಿಸಿ.

Comments are closed.