ದಾಖಲೆಗಳನ್ನು ಕುಟ್ಟಿ ಪುಡಿಪುಡಿ ಮಾಡಲಿರುವ ಉಪೇಂದ್ರ ಕಬ್ಜ ಸಿನೆಮಾಗೆ ನಾಯಕಿಯಾಗಿ ಆಯ್ಕೆಯಾದ ದಕ್ಷಿಣ ಭಾರತದ ಒಂದು ಕಾಲದ ಟಾಪ್ ನಟಿ. ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಇಡೀ ಭಾರತೀಯ ಚಿತ್ರರಂಗಕ್ಕೆ ಹೋಲಿಸಿದರೆ ಪ್ಯಾನ್ ಇಂಡಿಯಾ ಸಿನಿಮಾಗಳ ಹಾವಳಿಯನ್ನುವುದು ಹೆಚ್ಚಾಗಿದೆ. ಒಂದು ಲೆಕ್ಕದಲ್ಲಿ ನಮ್ಮ ಕನ್ನಡ ಚಿತ್ರರಂಗ ತಮ್ಮ ಮಾರುಕಟ್ಟೆಗಿಂತ ಹೊರಗೆ ಕಾಲಿಡುತ್ತಿದೆ ಎಂಬ ಸಂತೋಷವೂ ಕೂಡ ಇದೆ. ಆದರೆ ಪಂಚಭಾಷೆ ಚಿತ್ರ ಎಂದರೆ ಕಾಲಿಟಿ ಮೇಕಿಂಗ್ ಕೂಡಾ ಪ್ರಮುಖವಾಗಿರುತ್ತದೆ. ಹೀಗಾಗಿ ಕೇವಲ ಹೆಸರಿಗೆ ಮಾತ್ರ ಪಂಚಭಾಷಾ ಚಿತ್ರವಾಗಿರದೆ ನಿಜಕ್ಕೂ ಕೂಡ ಆ ಮೌಲ್ಯವನ್ನು ಚಿತ್ರ ಹೊಂದಿರಬೇಕಾಗುತ್ತದೆ. ಇಂದಿನ ಮಾತನಾಡಲು ಹೊರಟಿರುವುದು ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಬ್ಜಾ ಚಿತ್ರದ ಕುರಿತಂತೆ.

ಕಬ್ಜಾ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿ ಈಗ ಎರಡು ವರ್ಷಗಳು ಪೂರ್ಣಗೊಂಡಿವೆ. ಚಿತ್ರ ವಿಂಟೇಜ್ ಕಾಲದಲ್ಲಿ ಮೂಡಿಬಂದಿರುವ ಕಥಾವಸ್ತುವನ್ನು ಹೊಂದಿದೆ. ಈಗಾಗಲೇ ಕಿಚ್ಚ ಸುದೀಪ್ ಹಾಗೂ ಉಪೇಂದ್ರ ಇಬ್ಬರ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದ್ದು ಅಭಿಮಾನಿಗಳಿಗೆ ಚಿತ್ರದ ಕುರಿತಂತೆ ಕುತೂಹಲ ಎನ್ನುವುದು ಇನ್ನಷ್ಟು ಹೆಚ್ಚಾಗಿದೆ. ಆರ್ ಚಂದ್ರುರವರು ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು ಚಿತ್ರದ ಮೇಕಿಂಗ್ ಶೈಲಿ ಈಗಾಗಲೇ ಜಾಗತಿಕವಾಗಿ ಸದ್ದು ಮಾಡಿದೆ ಎಂದರೆ ಖಂಡಿತವಾಗಿ ತಪ್ಪಾಗಲಾರದು.

kabza shreya saran | ದಾಖಲೆಗಳನ್ನು ಕುಟ್ಟಿ ಪುಡಿಪುಡಿ ಮಾಡಲಿರುವ ಉಪೇಂದ್ರ ಕಬ್ಜ ಸಿನೆಮಾಗೆ ನಾಯಕಿಯಾಗಿ ಆಯ್ಕೆಯಾದ ದಕ್ಷಿಣ ಭಾರತದ ಒಂದು ಕಾಲದ ಟಾಪ್ ನಟಿ. ಯಾರು ಗೊತ್ತೇ??
ದಾಖಲೆಗಳನ್ನು ಕುಟ್ಟಿ ಪುಡಿಪುಡಿ ಮಾಡಲಿರುವ ಉಪೇಂದ್ರ ಕಬ್ಜ ಸಿನೆಮಾಗೆ ನಾಯಕಿಯಾಗಿ ಆಯ್ಕೆಯಾದ ದಕ್ಷಿಣ ಭಾರತದ ಒಂದು ಕಾಲದ ಟಾಪ್ ನಟಿ. ಯಾರು ಗೊತ್ತೇ?? 2

ಏನೋ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ಯಾರು ಅದು ಎಂಬುದಾಗಿ ಪ್ರೇಕ್ಷಕರಲ್ಲಿ ಸಾಕಷ್ಟು ಗೊಂದಲಗಳು ನಿರ್ಮಾಣವಾಗಿದ್ದವು. ಈಗ ಮೊದಲ ನಾಯಕಿಯ ಘೋಷಣೆ ನಡೆದಿದೆ. ಹೌದು ಕಬ್ಜಾ ಚಿತ್ರದ ಮೊದಲ ನಾಯಕಿಯಾಗಿ ಶ್ರೀಯಾ ಶರಣ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಟಿಯಾಗಿರುವ ಶ್ರೀಯ ಶರಣ್ ಹಲವಾರು ಸಮಯಗಳಿಂದ ಚಿತ್ರರಂಗದಿಂದ ದೂರವಿದ್ದರು. ಈಗ ಮತ್ತೊಮ್ಮೆ ಚಿತ್ರರಂಗಕ್ಕೆ ವಾಪಸಾಗಿರುವುದರಿಂದ ಪ್ರೇಕ್ಷಕರಲ್ಲಿ ಅವರ ಕುರಿತಂತೆ ಸಾಕಷ್ಟು ಜನಪ್ರಿಯತೆ ಇದೆ ಎಂದು ಹೇಳಬಹುದಾಗಿದೆ. ರಾಜಮೌಳಿ ಅವರ ಆರ್ ಆರ್ ಆರ್ ಸಿನಿಮಾದಲ್ಲಿ ಕೂಡ ಅಜಯ್ ದೇವಗನ್ ಅವರ ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಪರಭಾಷೆಗಳಲ್ಲಿ ಕೂಡ ಸಾಕಷ್ಟು ಜನಪ್ರಿಯತೆ ಹೊಂದಿರುವುದರಿಂದ ಕಬ್ಜಾ ಚಿತ್ರಕ್ಕೆ ಅತ್ಯುತ್ತಮ ಆಯ್ಕೆ ಎಂದು ಹೇಳಲಾಗುತ್ತಿದೆ.

Comments are closed.