ಕಡಿಮೆ ವಯಸ್ಸಿನಲ್ಲಿ ಮದುವೆಯಾದರೆ ಸಿಗುವಂತಹ ಲಾಭಗಳು ಏನು ಗೊತ್ತಾ; ಕೇಳಿದ್ರೆ ನೀವು ಕೂಡ, ಇವತ್ತೇ ಮದುವೆಯಾಗುತ್ತೀರಿ. ಎಷ್ಟೆಲ್ಲಾ ಲಾಭ ಗೊತ್ತೇ??

ನಮಸ್ಕಾರ ಸ್ನೇಹಿತರೇ ಮದುವೆಯನ್ನು ವುದು ಇಂದಲ್ಲ ನಾಳೆ ಮಾಡಿಕೊಳ್ಳಲೇಬೇಕಾದ ಅಂತಹ ಒಂದು ಜೀವನದ ಅತ್ಯಂತ ಪ್ರಮುಖವಾದಂತಹ ನಿರ್ಧಾರ ಅಥವಾ ಕಾರ್ಯಕ್ರಮವಾಗಿದೆ. ಆದರೆ ಇಂದಿನ ದಿನಗಳಲ್ಲಿ ಬಹುತೇಕರು ಆದಷ್ಟು ತಡವಾಗಿ ಮದುವೆಯಾಗಲು ನಿರ್ಧಾರ ಮಾಡಿಕೊಳ್ಳುತ್ತಾರೆ. ಕೇಳಿದರೆ ಲೈಫಲ್ಲಿ ಸೆಟಲ್ ಆಗಬೇಕು ಎನ್ನುವುದಾಗಿ ದೊಡ್ಡದೊಡ್ಡ ಪುರಾಣ ಕಥೆಗಳನ್ನು ಮಾತನಾಡಲು ಆರಂಭಿಸುತ್ತಾರೆ. ನಿಜವಾಗಿ ಹೇಳಬೇಕೆಂದರೆ ಕಡಿಮೆ ವಯಸ್ಸಿನಲ್ಲಿಯೇ ಮದುವೆಯಾದರೆ ಸಾಕಷ್ಟು ಲಾಭಗಳು ಇರುತ್ತದೆ. ಅದರಲ್ಲೂ ಪ್ರಮುಖವಾಗಿ 21 ರಿಂದ 25 ವರ್ಷದ ವಯಸ್ಸಿನ ಒಳಗಡೆ ಮದುವೆಯಾದರೆ ಯಾವೆಲ್ಲ ಲಾಭಗಳು ಸಿಗುತ್ತವೆ ಎನ್ನುವುದರ ಕುರಿತಂತೆ ನಿಮಗೆ ವಿವರಿಸಲು ಹೊರಟಿದ್ದೇವೆ. ತಪ್ಪದೆ ಲೇಖನಿಯನ್ನು ಕೊನೆಯವರೆಗೂ ಓದಿ.

marriage coup wom 1 | ಕಡಿಮೆ ವಯಸ್ಸಿನಲ್ಲಿ ಮದುವೆಯಾದರೆ ಸಿಗುವಂತಹ ಲಾಭಗಳು ಏನು ಗೊತ್ತಾ; ಕೇಳಿದ್ರೆ ನೀವು ಕೂಡ, ಇವತ್ತೇ ಮದುವೆಯಾಗುತ್ತೀರಿ. ಎಷ್ಟೆಲ್ಲಾ ಲಾಭ ಗೊತ್ತೇ??
ಕಡಿಮೆ ವಯಸ್ಸಿನಲ್ಲಿ ಮದುವೆಯಾದರೆ ಸಿಗುವಂತಹ ಲಾಭಗಳು ಏನು ಗೊತ್ತಾ; ಕೇಳಿದ್ರೆ ನೀವು ಕೂಡ, ಇವತ್ತೇ ಮದುವೆಯಾಗುತ್ತೀರಿ. ಎಷ್ಟೆಲ್ಲಾ ಲಾಭ ಗೊತ್ತೇ?? 3

ಮೊದಲನೇದಾಗಿ; ಒಂದು ವೇಳೆ ನಿಮ್ಮ ಜೀವನದಲ್ಲಿ ನಿಮ್ಮ ಕನಸಿನ ಸಂಗಾತಿ ಮೊದಲೇ ಸಿಕ್ಕಿದರೆ ಮದುವೆ ಆಗುವುದಕ್ಕೆ ಇನ್ನಷ್ಟು ಸಮಯಗಳನ್ನು ವ್ಯರ್ಥ ಮಾಡುವುದು ನಿಜಕ್ಕೂ ಕೂಡ ಅರ್ಥಹೀನ. ಯಾಕೆಂದರೆ ನಾಳೆ ಏನಾಗುತ್ತದೆ ಎನ್ನುವುದನ್ನು ಬಲ್ಲವರು ಯಾರು ಇಲ್ಲ. ಹೀಗಾಗಿ ನಿಮ್ಮ ನೆಚ್ಚಿನ ಸಂಗಾತಿಯನ್ನು ಆದಷ್ಟು ಬೇಗ ಮದುವೆ ಮಾಡಿಕೊಂಡು ಜೀವನದಲ್ಲಿ ಸೆಟಲ್ ಆಗಿ ಅವರ ಜೊತೆಗೆ ಇನ್ನಷ್ಟು ಹೆಚ್ಚು ಸಮಯಗಳನ್ನು ಜೀವನದಲ್ಲಿ ಕಳೆಯ ಬಹುದಾದಂತಹ ಅವಕಾಶ ನಿಮಗೆ ಸಿಗುತ್ತದೆ.

ಎರಡನೆಯದಾಗಿ; ಪ್ರೇಮಿಗಳಾಗಿ ಇರುವುದಕ್ಕೂ ದಂಪತಿಗಳಾಗಿ ಇರುವುದಕ್ಕೂ ಆಕಾಶ ಹಾಗೂ ಭೂಮಿಯ ವ್ಯತ್ಯಾಸವಿದೆ. ಪ್ರೇಮಿಗಳಾಗಿ ಸುತ್ತಾಡುತ್ತಾ ರೋಮ್ಯಾಂಟಿಕ್ ಆಗಿ ಇರುವುದಕ್ಕಿಂತ ಮದುವೆಯಾದ ನಂತರ ಆ ಸಂಬಂಧದಲ್ಲಿ ಇರುವಂತಹ ಆಳವನ್ನು ನೀವು ನೋಡಬಹುದಾಗಿದೆ. ಹೀಗಾಗಿ ನಿಮ್ಮ ನೆಚ್ಚಿನ ಸಂಗಾತಿಯನ್ನು ಮದುವೆಯಾಗುವ ಮೂಲಕ ನೀವು ಯಾವುದೇ ಅಡ್ಡಿ ಇಲ್ಲದೆ ನಿಮ್ಮ ಸಂಗಾತಿಯೊಂದಿಗೆ ಎಲ್ಲಿ ಬೇಕಾದರೂ ಹೋಗಿ ಬರಬಹುದಾಗಿದೆ.

ಮೂರನೇದಾಗಿ; 25 ವರ್ಷದ ಆಸುಪಾಸಿನ ವರೆಗೂ ಕೂಡ ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಅಡ್ಜಸ್ಟ್ಮೆಂಟ್ ಮಾಡಿಕೊಳ್ಳಲು ತಯಾರಾಗಿರುತ್ತಾರೆ. ಯಾವುದೇ ಸಮಸ್ಯೆಗಳು ಕೂಡ ಈ ಕುರಿತಂತೆ ಇರುವುದಿಲ್ಲ. ಆದರೆ ಇದರ ನಂತರ ಯಾವುದೇ ರಾಜಿ ಮಾಡಿಕೊಳ್ಳಲು ಕೂಡ ಆ ವ್ಯಕ್ತಿ ಜೀವನದಲ್ಲಿ ಸಿದ್ಧರಾಗಿರುವುದಿಲ್ಲ. ಹೀಗಾಗಿ ಈ ವಯಸ್ಸಿನಲ್ಲಿ ಮದುವೆಯಾದರೆ ತನ್ನ ಸಂಗಾತಿ ಹಾಗೂ ಅವರ ಮನೆಯವರ ಪ್ರಕಾರದ ಮೇರೆಗೆ ಮನುಷ್ಯ ಬದಲಾವಣೆಗಳಿಗೆ ಹೊಂದಿಕೊಳ್ಳುತ್ತಾನೆ. ಹೀಗಾಗಿ ಈ ಸಮಯದಲ್ಲಿ ಮದುವೆಯಾದರೆ ಯಾವುದೇ ಕಲಹ ಅಥವಾ ಗೊಂದಲಗಳು ಇರುವುದಿಲ್ಲ.

ನಾಲ್ಕನೇದಾಗಿ; ಪ್ರಮುಖವಾಗಿ ಈ ವಯಸ್ಸಿನಲ್ಲಿ ಮದುವೆ ಆಗುವುದರಿಂದಾಗಿ ಇಬ್ಬರ ನಡುವೆ ದಾಂಪತ್ಯ ಜೀವನದ ಸುಖ ಎನ್ನುವುದು ಹೆಚ್ಚಾಗಿ ಅನುಭವಿಸಬಹುದಾಗಿದೆ. ಶಾರೀರಿಕ ಸುಖವನ್ನು ಕೂಡ ಈ ವಯಸ್ಸಿನಲ್ಲಿ ಇಬ್ಬರೂ ಕೂಡ ಹೆಚ್ಚಾಗಿ ಆನಂದಿಸಬಹುದಾಗಿದೆ. ಹೀಗಾಗಿ ಈ ವಯಸ್ಸಿನಲ್ಲಿ ಮದುವೆಯಾದರೆ ದಾಂಪತ್ಯ ಜೀವನ ಎನ್ನುವುದು ಗಟ್ಟಿಮುಟ್ಟಾಗಿದ್ದು ದೀರ್ಘಕಾಲದವರೆಗೆ ನಡೆಯುತ್ತದೆ.

marriage coup wom | ಕಡಿಮೆ ವಯಸ್ಸಿನಲ್ಲಿ ಮದುವೆಯಾದರೆ ಸಿಗುವಂತಹ ಲಾಭಗಳು ಏನು ಗೊತ್ತಾ; ಕೇಳಿದ್ರೆ ನೀವು ಕೂಡ, ಇವತ್ತೇ ಮದುವೆಯಾಗುತ್ತೀರಿ. ಎಷ್ಟೆಲ್ಲಾ ಲಾಭ ಗೊತ್ತೇ??
ಕಡಿಮೆ ವಯಸ್ಸಿನಲ್ಲಿ ಮದುವೆಯಾದರೆ ಸಿಗುವಂತಹ ಲಾಭಗಳು ಏನು ಗೊತ್ತಾ; ಕೇಳಿದ್ರೆ ನೀವು ಕೂಡ, ಇವತ್ತೇ ಮದುವೆಯಾಗುತ್ತೀರಿ. ಎಷ್ಟೆಲ್ಲಾ ಲಾಭ ಗೊತ್ತೇ?? 4

5ನೇ ದಾಗಿ; ಆದಷ್ಟು ಬೇಗ ಮದುವೆ ಆಗುವುದರಿಂದ ಆಗಿ ದಂಪತಿಗಳ ನಡುವೆ ಫ್ಯೂಚರ್ ಪ್ಲಾನಿಂಗ್ ಕುರಿತಂತೆ ಸರಿಯಾದ ನಿರ್ಧಾರ ಕಂಡುಬರುತ್ತದೆ ಎಂಬುದು ಈಗಾಗಲೇ ಸಾಬೀತಾಗಿರುವ ಅಂಶವಾಗಿದೆ. ಇಬ್ಬರು ಕೂಡ ತಮ್ಮ ಭವಿಷ್ಯದ ಕುರಿತಂತೆ ಸರಿಯಾದ ನಿರ್ಧಾರವನ್ನು ಈ ವಯಸ್ಸಿನಲ್ಲಿ ಪಡೆದುಕೊಳ್ಳಲು ಸಾಧ್ಯವಿದೆ.

6ನೇ ದಾಗಿ; ಆದಷ್ಟು ಬೇಗ ಮದುವೆ ಆಗುವುದರಿಂದ ಆಗಿ ಸಿಗುವಂತಹ ಇನ್ನೊಂದು ಲಾಭವೆಂದರೆ ನಿಮಗೆ ಮಕ್ಕಳು ಕೂಡ ಬೇಗ ಆಗುತ್ತದೆ. ಹೀಗಾಗಿ ನಿಮಗೆ ನಿಮ್ಮ ಮೊಮ್ಮಕ್ಕಳ ಮದುವೆಯನ್ನು ನೋಡುವ ಭಾಗ್ಯವೂ ಕೂಡ ಸಿಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಅತಿವೇಗವಾಗಿ ನಿಮ್ಮನ್ನು ನೋಡಿಕೊಳ್ಳಲು ನಿಮ್ಮ ಮಕ್ಕಳು ಕೂಡ ಸಿದ್ಧರಾಗುತ್ತಾರೆ. ಮಾತ್ರವಲ್ಲದೆ ಮಕ್ಕಳು ಕೂಡ ದುಡಿಯಲು ಪ್ರಾರಂಭಿಸುವುದರಿಂದ ಆಗಿ ಮನೆಯ ಆದಾಯವೂ ಕೂಡ ಹೆಚ್ಚಾಗುತ್ತದೆ. ಇಳಿವಯಸ್ಸಿನಲ್ಲಿ ಇಂತಹ ಸಮಸ್ಯೆಗಳ ಕುರಿತಂತೆ ಯಾವುದೇ ಯೋಚನೆ ಮಾಡುವ ಅಗತ್ಯ ಇರುವುದಿಲ್ಲ.

7ನೇ ದಾಗಿ; ಈ ವಿಚಾರವನ್ನು ನಾವು ಆಗಲಿ ಎಂದು ಹೇಳುವುದಿಲ್ಲ ಆದರೆ ಒಂದು ವೇಳೆ ನಡೆದರೆ ಕೂಡ ಈ ವಯಸ್ಸು ನಿಮಗೆ ಖಂಡಿತವಾಗಿ ಸರಿಯಾಗಿರುತ್ತದೆ. ಹೌದು ನೀವು ಈ ವಯಸ್ಸಿನಲ್ಲಿ ಮದುವೆಯಾದರೆ ಒಂದು ವೇಳೆ ನಿಮ್ಮ ಮದುವೆ ಮುರಿದು ಹೋದರೆ ಅಥವಾ ನಿಮ್ಮ ಸಂಗಾತಿ ನಿಮ್ಮನ್ನು ಆಗಲಿ ಹೋದರೆ ಮತ್ತೊಂದು ಮದುವೆ ಆಗುವುದಕ್ಕೆ ಕೂಡ ನಿಮ್ಮ ವಯಸ್ಸು ಸರಿಯಾಗಿರುತ್ತದೆ. ಇವುಗಳೇ 21 ರಿಂದ 25 ವಯಸ್ಸಿನ ನಡುವೆ ಮದುವೆಯಾದರೆ ಸಿಗುವಂತಹ ಲಾಭಗಳು. ಈ ವಿಚಾರದ ಕುರಿತಂತೆ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Comments are closed.