ಕೆಜಿಎಫ್ ಮೊದಲ ಭಾಗದ ದಾಖಲೆಯನ್ನು ಬ್ರೇಕ್ ಮಾಡಿದ ಕೆಜಿಎಫ್-2, ಚಿತ್ರ ಬಿಡುಗಡೆಗೂ ಮುನ್ನವೇ ಮಾಡಿದ ಬಿಸಿನೆಸ್ ಎಷ್ಟು ಕೋಟಿ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ಕನ್ನಡದ ಹೆಮ್ಮೆಯ ಕೆಜಿಎಫ್ ಚಾಪ್ಟರ್ ಒಂದು ಚಿತ್ರ ನಾಲ್ಕು ವರ್ಷಗಳ ಹಿಂದೆ ಬಿಡುಗಡೆಯಾಗಿ ಬರೋಬ್ಬರಿ 250ಕೋಟಿ ಕಲೆಕ್ಷನ್ ಮಾಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಇತಿಹಾಸವನ್ನು ನಿರ್ಮಿಸಿತ್ತು. ಈಗ ನಾಲ್ಕು ವರ್ಷಗಳ ನಂತರ ಬಿಡುಗಡೆಯಾಗುತ್ತಿರುವ ಕೆಜಿಎಫ್ ಚಾಪ್ಟರ್ 2 ರ ಕುರಿತಂತೆ ಇಡೀ ಭಾರತ ದೇಶ ಸೇರಿದಂತೆ ವಿದೇಶಿಗರು ಕೂಡ ಕಾತರರಾಗಿ ಕುಳಿತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಕೆಜಿಎಫ್ ಚಾಪ್ಟರ್ 2 ಚಿತ್ರ ಹಾಡು ಹಾಗೂ ಟೀಸರ್ ಮತ್ತು ಟ್ರೈಲರ್ ಗಳಿಂದ ಈಗಾಗಲೆ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಇನ್ನು ಈಗಾಗಲೇ ಟ್ರೈಲರ್ ಇಡೀ ವಿಶ್ವ ದಲ್ಲಿ ಅತ್ಯಂತ ಹೆಚ್ಚು ವೀಕ್ಷಣೆಗೆ ಒಳಗಾಗಿರುವಂತಹ ಟ್ರೈಲರ್ ಗಳಲ್ಲಿ ಒಂದಾಗಿ ಶಾಮೀಲಾಗಿದೆ. ಇದೇ ಏಪ್ರಿಲ್ 14ರಂದು ಕೆಜಿಎಫ್ ಚಾಪ್ಟರ್2 8 ಸಾವಿರಕ್ಕೂ ಅಧಿಕ ಪರದೆಗಳ ಮೇಲೆ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಶ್ರೀನಿಧಿ ಶೆಟ್ಟಿ ರವೀನ ತಂಡನ್ ಸಂಜಯ್ ದತ್ ಪ್ರಕಾಶ್ ರಾಜ್ ಮಾಳವಿಕ ಅವಿನಾಶ್ ಹೇಗೆ ಹತ್ತು ಹಲವಾರು ಖ್ಯಾತನಾಮರು ನಟಿಸಿದ್ದಾರೆ. ಹೀಗಾಗಿ ಚಿತ್ರದ ಕುರಿತಂತೆ ಹಾಗೂ ಅದರ ಬಾಕ್ಸಾಫೀಸ್ ಕಲೆಕ್ಷನ್ ಕುರಿತಂತೆ ಸಿನಿಮಾ ಪಂಡಿತರಲ್ಲಿ ಸಾಕಷ್ಟು ನಿರೀಕ್ಷೆಗಳಿವೆ. ಹಾಗಿದ್ದರೆ ಇಂದಿನ ವಿಚಾರದಲ್ಲಿ ಕೆಜಿಎಫ್ ಚಾಪ್ಟರ್ 2 ಎಷ್ಟು ಪ್ರಿ ರಿಲೀಸ್ ಬಿಜಿನೆಸ್ ಮಾಡಿದೆ ಹಾಗೂ ಸೂಪರ್ ಹಿಟ್ ಪಟ್ಟವನ್ನು ಗಿಟ್ಟಿಸಿಕೊಳ್ಳಲು ಎಷ್ಟು ಕಲೆಕ್ಷನ್ ಮಾಡಬೇಕು ಎನ್ನುವುದನ್ನು ತಿಳಿಸುತ್ತೇವೆ ಬನ್ನಿ.

kgf2 5 | ಕೆಜಿಎಫ್ ಮೊದಲ ಭಾಗದ ದಾಖಲೆಯನ್ನು ಬ್ರೇಕ್ ಮಾಡಿದ ಕೆಜಿಎಫ್-2, ಚಿತ್ರ ಬಿಡುಗಡೆಗೂ ಮುನ್ನವೇ ಮಾಡಿದ ಬಿಸಿನೆಸ್ ಎಷ್ಟು ಕೋಟಿ ಗೊತ್ತೇ??
ಕೆಜಿಎಫ್ ಮೊದಲ ಭಾಗದ ದಾಖಲೆಯನ್ನು ಬ್ರೇಕ್ ಮಾಡಿದ ಕೆಜಿಎಫ್-2, ಚಿತ್ರ ಬಿಡುಗಡೆಗೂ ಮುನ್ನವೇ ಮಾಡಿದ ಬಿಸಿನೆಸ್ ಎಷ್ಟು ಕೋಟಿ ಗೊತ್ತೇ?? 2

ಹೌದು ಗೆಳೆಯರೇ ಈಗಾಗಲೇ ಕೆಜಿಎಫ್ ಚಾಪ್ಟರ್ 2 ಚಿತ್ರ ರಾಜಮೌಳಿಯವರ ಆರ್ ಆರ್ ಆರ್ ಸಿನಿಮಾದ 470 ಕೋಟಿಯ ಪ್ರಿ ರಿಲೀಸ್ ಬ್ಯುಸಿನೆಸ್ ದಾಖಲೆಯನ್ನು ಮುರಿದು ಬರೋಬ್ಬರಿ 500 ಕೋಟಿ ವ್ಯವಹಾರವನ್ನು ಈಗಾಗಲೇ ಬಿಡುಗಡೆಗೆ ಮುನ್ನವೇ ಮಾಡಿದೆ. ಇನ್ನು ಕನ್ನಡ ತಮಿಳುನಾಡು ತೆಲುಗು ರಾಜ್ಯಗಳು ಹಾಗೂ ಹಿಂದಿ ಭಾಷೆಯಲ್ಲಿ ಮತ್ತು ವಿದೇಶಗಳಲ್ಲಿ ಸೇರಿದಂತೆ ಚಿತ್ರ 650 ರಿಂದ 750 ಕೋಟಿ ರೂಪಾಯಿಗಳನ್ನು ಗಳಿಸಿದರೆ ಸೇಫ್ ಜೋನ್ ಗೆ ತಲುಪಬಹುದಾಗಿದೆ. ಇನ್ನು ಚಿತ್ರ ಸೂಪರ್ ಹಿಟ್ ಪಟ್ಟವನ್ನು ತಲುಪಲು 800 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಬಾಕ್ಸಾಫೀಸ್ ಕಲೆಕ್ಷನ್ ಮಾಡಲೇಬೇಕಾಗಿದೆ. ಕೆಜಿಎಫ್ ಚಾಪ್ಟರ್ 2ಕ್ಕೆ ಇರುವಂತಹ ಜನಪ್ರಿಯತೆಯನ್ನು ನೋಡಿದರೆ ಕಂಡಿತವಾಗಿ ಇದು ಕಷ್ಟಸಾಧ್ಯವಲ್ಲ ಎನ್ನುವುದು ಎಲ್ಲರ ಲೆಕ್ಕಾಚಾರವಾಗಿದೆ.

Comments are closed.