ಮ್ಯಾಕ್ಸ್ವೆಲ್ ಬಂದರೂ ಕೂಡ ಆರ್ಸಿಬಿ ತಂಡಕ್ಕೆ ಮತ್ತೊಬ್ಬ ಆಟಗಾರನಿಂದ ಕಹಿ ಸುದ್ದಿ, ಎಲ್ಲವೂ ಸರಿ ಇದ್ದಾಗ ಆರ್ಸಿಬಿ ಗೆ ಕಹಿ ಸುದ್ದಿ. ಏನು ಗೊತ್ತೇ?

ನಮಸ್ಕಾರ ಸ್ನೇಹಿತರೇ ನಮಗೆಲ್ಲರಿಗೂ ಗೊತ್ತಿರುವ ಹಾಗೆ ಈ ಬಾರಿ ಟಾಟಾ ಐಪಿಎಲ್ 2022 ಅದ್ದೂರಿಯಾಗಿ ಪ್ರಾರಂಭಗೊಂಡಿದ್ದು ಪ್ರತಿಯೊಂದು ಪಂದ್ಯಗಳು ಕೂಡ ರೋಚಕವಾಗಿ ಸಾಗಿ ಬರುತ್ತಿವೆ. ಈ ಬಾರಿ ಪ್ರತಿಯೊಂದು ತಂಡಗಳು ಕೂಡ ಹೊಸ ಬದಲಾವಣೆಗಳಿಂದ ಕಣಕ್ಕಿಳಿಯುತ್ತಿರುವುದು ರಿಂದಾಗಿ ಪ್ರತಿಯೊಂದು ಪಂದ್ಯಗಳು ಕೂಡ ಕ್ರಿಕೆಟ್ ಅಭಿಮಾನಿಗಳಿಗೆ ರೋಮಾಂಚನವನ್ನು ನೀಡುತ್ತದೆ.

ಈಗಾಗಲೇ ನಿಮಗೆ ತಿಳಿದಿರುವಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡುಪ್ಲೆಸಿಸ್ ರವರ ನಾಯಕತ್ವದಲ್ಲಿ ಮೊದಲ ಪಂದ್ಯವನ್ನು ವಿರೋಚಿತವಾಗಿ ಸೋತಿತ್ತು. ಸೋತರು ಕೂಡ ಮೊದಲ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿತು. ಎರಡನೇ ಪಂದ್ಯದಲ್ಲಿ ಕೊನೆಯ ಓವರಿನಲ್ಲಿ ರೋಮಾಂಚಕವಾಗಿ ಗೆದ್ದಿತ್ತು. ಹೀಗಾಗಿ ಕಳೆದೆಲ್ಲ ಸೀಸನ್ ಗಳಿಗಿಂತ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶಕ್ತಿಯುತವಾಗಿ ಕಾಣುತ್ತಿದೆ. ಇನ್ನು ಇಂದು ರಾಜಸ್ಥಾನ ರಾಯಲ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎದುರಿಸಲಿದ್ದು ಗೆಲ್ಲುವ ಫೇವರಿಟ್ ಆಗಿ ಕಾಣಿಸಿಕೊಳ್ಳುತ್ತಿದೆ. ಆದರೂ ಕೂಡ ಪ್ರಮುಖ ಆಟಗಾರ ಈ ಪಂದ್ಯವನ್ನು ಸೇರಿದಂತೆ ಮುಂದಿನ ಪಂದ್ಯ ವಾಗಿರುವ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಪಂದ್ಯದಲ್ಲಿ ಕೂಡ ಅಲಭ್ಯರಾಗಿದ್ದಾರೆ. ಈಗಾಗಲೇ ನಿಮಗೆ ತಿಳಿದಿರುವಂತೆ ಗ್ಲೆನ್ ಮ್ಯಾಕ್ಸ್ವೆಲ್ ರವರು ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡಿದ್ದು ತಂಡದ ಬ್ಯಾಟಿಂಗ್ ಬಲವನ್ನು ಇನ್ನಷ್ಟು ಹೆಚ್ಚಿಸಿದೆ.

rcb kohli | ಮ್ಯಾಕ್ಸ್ವೆಲ್ ಬಂದರೂ ಕೂಡ ಆರ್ಸಿಬಿ ತಂಡಕ್ಕೆ ಮತ್ತೊಬ್ಬ ಆಟಗಾರನಿಂದ ಕಹಿ ಸುದ್ದಿ, ಎಲ್ಲವೂ ಸರಿ ಇದ್ದಾಗ ಆರ್ಸಿಬಿ ಗೆ ಕಹಿ ಸುದ್ದಿ. ಏನು ಗೊತ್ತೇ?
ಮ್ಯಾಕ್ಸ್ವೆಲ್ ಬಂದರೂ ಕೂಡ ಆರ್ಸಿಬಿ ತಂಡಕ್ಕೆ ಮತ್ತೊಬ್ಬ ಆಟಗಾರನಿಂದ ಕಹಿ ಸುದ್ದಿ, ಎಲ್ಲವೂ ಸರಿ ಇದ್ದಾಗ ಆರ್ಸಿಬಿ ಗೆ ಕಹಿ ಸುದ್ದಿ. ಏನು ಗೊತ್ತೇ? 2

ಹಾಗಿದ್ದರೆ ತಂಡದ ಎರಡು ಪಂದ್ಯಗಳನ್ನು ಮಿಸ್ ಮಾಡಿಕೊಳ್ಳುತ್ತಿರುವ ತಂಡದ ಭರವಸೆಯ ಆಟಗಾರ ಯಾರು ಎಂಬುದನ್ನು ತಿಳಿಯೋಣ ಬನ್ನಿ. ಹೌದು ಪಾಕಿಸ್ತಾನ ಪ್ರವಾಸದಲ್ಲಿರುವ ಆಸ್ಟ್ರೇಲಿಯಾದ ಬೌಲರ್ ಆಗಿರುವ ಜೋಶ್ ಹೆಜಲ್ ವುಡ್ ರವರು ಎರಡು ದಿನಗಳ ನಂತರ ಭಾರತಕ್ಕೆ ಆಗಮಿಸಲಿದ್ದಾರೆ. ಭಾರತಕ್ಕೆ ಬಂದ ಮೇಲೆ ಕೂಡ ಕ್ವಾರಂಟೈನ್ ನಲ್ಲಿ ಇರಬೇಕಾಗಿರುವ ಕಾರಣದಿಂದಾಗಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಕೂಡ ಕಾಣಿಸಿಕೊಳ್ಳುವುದಿಲ್ಲ. ನೇರವಾಗಿ ಜೋಶ್ ಏಪ್ರಿಲ್ 12ರಂದು ತಂಡವನ್ನು ಸೇರಿಕೊಳ್ಳಲಿದೆ ತಮ್ಮ ಹಳೆಯ ತಂಡವಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ತಂಡದ ಪರವಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಮೂಲಗಳಿಂದ ಹೊರಬಂದಿದೆ. ಈ ಪಂದ್ಯದಲ್ಲಿ ಹೇಗೆ ಪ್ರದರ್ಶನವನ್ನು ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

Comments are closed.