ಸಾವಿರಾರು ರನ್ ಗಳಿಸಿದ್ದರೂ ಕೂಡ ನನ್ನ ಕ್ರಿಕೆಟ್ ಜೀವನದಲ್ಲಿ ಆ 35 ರನ್ ಅತ್ಯಮೂಲ್ಯ ಎಂದ ವಿರಾಟ್ ಕೊಹ್ಲಿ, ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಏಪ್ರಿಲ್ 2 ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬದ ದಿನ. ಕಾರಣ ಬರೋಬ್ಬರಿ 29 ವರ್ಷಗಳ ನಂತರ ಭಾರತ ತಂಡ ವಿಶ್ವಕಪ್ ಎತ್ತಿ ಹಿಡಿದಿತ್ತು. ಹಲವಾರು ವರ್ಷಗಳ ಕಾಲ ಕ್ರಿಕೆಟ್ ಅಭಿಮಾನಿಗಳು ಕಂಡ ಕನಸನ್ನು ಅಂದು ಟೀಮ್ ಇಂಡಿಯಾ ನನಸು ಮಾಡಿತ್ತು.ಮೊನ್ನೆ ಆ ಗೆಲುವಿನ 12 ನೇ ವರ್ಷದ ಸಂಭ್ರಮಾಚರಣೆ ನಡೆಯಿತು. ಈ ಸಂದರ್ಭದಲ್ಲಿ ಅಂದಿನ ಇನ್ನಿಂಗ್ಸ್ ನ್ನು ಹಲವಾರು ಆಟಗಾರರು ಮೆಲುಕು ಹಾಕಿದರು.

ಅದರಲ್ಲೂ ಟೀಮ್ ಇಂಡಿಯಾದ ಮಾಜಿ ನಾಯಕ, ಕಿಂಗ್ ಕೊಹ್ಲಿ ಖ್ಯಾತಿಯ ವಿರಾಟ್ ಕೊಹ್ಲಿ ತಮ್ಮ ಅಂದಿನ ಇನ್ನಿಂಗ್ಸ್ ಬಗ್ಗೆ ಮಾತನಾಡಿದ್ದಾರೆ. ಬನ್ನಿ ಏನೆಂಬುದನ್ನು ತಿಳಿಯೋಣ. ಅಂದು ಶ್ರೀಲಂಕಾ ತಂಡ ಸೆಟ್ ಮಾಡಿದ್ದ ಬೃಹತ್ ಟಾರ್ಗೆಟ್ 278 ರನ್ ಬೆನ್ನತ್ತಿದ್ದ ಭಾರತ ತಂಡ ಆರಂಭದಲ್ಲೇ ಡ್ಯಾಶಿಂಗ್ ಓಪನರ್ ವಿರೇಂದ್ರ ಸೆಹ್ವಾಗ್ ಔಟಾದರು. ಕೆಲವೇ ಓವರ್ ಗಳ ನಂತರ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸಹ ಔಟಾದರು. ಆಗ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದು ವಿರಾಟ್ ಕೊಹ್ಲಿ. ಮೈದಾನದಿಂದ ಆಚೆ ಹೋಗುವಾಗ ಸಚಿನ್ ಕೊಹ್ಲಿಯನ್ನು ನಿಲ್ಲಿಸಿ, ನೀನು ಗೌತಮ್ ಗಂಭೀರ್ ಜೊತೆ ಒಳ್ಳೆಯ ಪಾರ್ಟ್ನರ್ ಶಿಪ್ ಗಳಿಸಬೇಕು ಎಂದು ಹೇಳಿದರಂತೆ.

virat kohli | ಸಾವಿರಾರು ರನ್ ಗಳಿಸಿದ್ದರೂ ಕೂಡ ನನ್ನ ಕ್ರಿಕೆಟ್ ಜೀವನದಲ್ಲಿ ಆ 35 ರನ್ ಅತ್ಯಮೂಲ್ಯ ಎಂದ ವಿರಾಟ್ ಕೊಹ್ಲಿ, ಯಾಕೆ ಗೊತ್ತೇ??
ಸಾವಿರಾರು ರನ್ ಗಳಿಸಿದ್ದರೂ ಕೂಡ ನನ್ನ ಕ್ರಿಕೆಟ್ ಜೀವನದಲ್ಲಿ ಆ 35 ರನ್ ಅತ್ಯಮೂಲ್ಯ ಎಂದ ವಿರಾಟ್ ಕೊಹ್ಲಿ, ಯಾಕೆ ಗೊತ್ತೇ?? 2

ಆಗ ಅವರ ಮಾತನ್ನು ಸೀರಿಯಸ್ ಆಗಿ ತೆಗೆದುಕೊಂಡ ಕೊಹ್ಲಿ ಗಂಭೀರ್ ಜೊತೆ ಮೂರನೇ ವಿಕೇಟ್ ಗೆ 83 ರನ್ ಗಳ ಜೊತೆಯಾಟ ನಡೆಸಿದರು. ವೇಗವಾಗಿ ರನ್ ಗಳಿಸಿದ ಕೊಹ್ಲಿ ಭಾರತದ ಚೇಸಿಂಗ್ ಆಸೆಯನ್ನು ಜೀವಂತವಾಗಿರಿಸಲು ಕಾರಣವಾದರು. ಹಾಗಾಗಿ ಈ ಇನ್ನಿಂಗ್ಸ್ ಬಗ್ಗೆ ಮಾತನಾಡಿರುವ ವಿರಾಟ್ ಕೊಹ್ಲಿ , ನನಗೆ ಆ ಇನ್ನಿಂಗ್ಸ್ ಅವಿಸ್ಮರಣೀಯವಾದುದು. ನನ್ನ ಕ್ರಿಕೆಟ್ ವೃತ್ತಿ ಜೀವನದಲ್ಲಿ ಎಂದಿಗೂ ಮರೆಯಲಾರದಂತಹ ಇನ್ನಿಂಗ್ಸ್ ಎಂದು ಹೇಳಿದ್ದಾರೆ. ಈ ಪಂದ್ಯದ ನಂತರ ವಿರಾಟ್ ಕೊಹ್ಲಿಯವರ ಕ್ರಿಕೆಟ್ ವೃತ್ತಿ ಜೀವನ ಉತ್ತುಂಗದತ್ತ ಸಾಗಲು ಶುರುವಾಯಿತು. ಅಂದು ಶುರುವಾದ ಕಿಂಗ್ ಕೊಹ್ಲಿ ಆರ್ಭಟ ಇಂದಿಗೂ ತಣ್ಣಗಾಗಿಲ್ಲ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

Comments are closed.