Kannada Astrology: ಸಂಕ್ರಾಂತಿ ದಿನದ ವರೆಗೂ ಕಾಯಿರಿ, ಸೂರ್ಯ ನಂತೆ ಪ್ರಜ್ವಲಿಸುವ ಸಮಯ ಬಂದೆ ಬಿಡ್ತು, ಈ ರಾಶಿಗಳಿಗೆ ಅದೆಷ್ಟೋ ವರ್ಷ ಆದ ನಂತರ ಅದೃಷ್ಟ.
Kannada Astrology: ಸೂರ್ಯನು ತನ್ನ ರಾಶಿಯನ್ನು ಬದಲಾಯಿಸಿ ಮಕರ ರಾಶಿಗೆ ಕ್ರಮಿಸುವುದನ್ನು ಧಾರ್ಮಿಕ ನಂಬಿಕೆಗಳ ಪ್ರಕಾರ ಸೂರ್ಯ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಶನಿದೇವನು ಮಕರ ರಾಶಿಯ ಕರೆಯಲಾಗುತ್ತದ್ದು, ಸೂರ್ಯದೇವ ಶನಿದೇವನ ತಂದೆಯಾಗಿದ್ದಾರೆ. ಇದೇ ಜನವರಿ 14 2023 ರಂದು ಸೂರ್ಯದೇವ ತನ್ನ ಮಗನಾದ ಶನಿದೇವನ ಅಧಿಪತ್ಯವಿರುವ ಮಕರ ರಾಶಿಗೆ ಸಂಚರಿಸಲಿದ್ದಾರೆ. ಶನಿದೇವನು ಈಗಾಗಲೇ ಮಕರ ರಾಶಿಯಲ್ಲಿ ವಿರಾಜಮಾನನಾಗಿ ಸ್ಥಾನ ಪಡೆದಿದ್ದು, ಈ ರೀತಿ ಸೂರ್ಯನು ಮಕರ ರಾಶಿಗೆ ಸ್ಥಾನ ಬದಲಿಸುವುದನ್ನು ಮಕರ ಸಂಕ್ರಾಂತಿಯ ರೂಪದಲ್ಲಿ ಅದ್ದೂರಿಯಾಗಿ ಮತ್ತು ಭಯ, ಭಕ್ತಿಯಿಂದ ಆಚರಿಸಲಾಗುತ್ತದೆ. ಇದೀಗ ಸೂರ್ಯದೇವನು ಕೂಡ ಮಕರ ರಾಶಿಗೆ ಪ್ರವೇಶಿಸುತ್ತಿರುವುದು ಈ ರಾಶಿಯ ಜನರಿಗೆ ಅದೃಷ್ಟಗಳನ್ನು ಹೊತ್ತು ತರಲಿದೆ. ಹಲವಾರು ವರ್ಷಗಳ ನಂತರ ಈ ನಾಲ್ಕು ರಾಶಿಯ ಜನರಿಗೆ ಅನೇಕ ಶುಭಫಲಗಳು, ಅದೃಷ್ಟಗಳು ಸಿದ್ಧಿಸಲಿವೆ. ಹಾಗಿದ್ದರೆ ಆ ನಾಲ್ಕು ರಾಶಿಗಳು ಯಾವ್ಯಾವು ಎನ್ನುವುದನ್ನು ಇಲ್ಲಿ ತಿಳಿಯಿರಿ.

ವೃಷಭ ರಾಶಿ: ಇದೇ ಮಕರ ಮಕರ ಸಂಕ್ರಾಂತಿಯಿಂದ ಮುಂದಿನ ಎಲ್ಲ ದಿನಗಳಲ್ಲಿ ಈ ರಾಶಿಯವರಿಗೆ ಅನೇಕ ಶುಭಫಲಗಳು ಸಿಗಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ತಮ ಫಲಿತಾಂಶಗಳನ್ನು ಕಾಣಬಹುದು. ಸೂರ್ಯನ ಕೃಪೆ ಇರುವುದರಿಂದಾಗಿ ಯಾವುದೇ ಕೆಲಸ ಕೈಗೆತ್ತಿಕೊಂಡರು ಸಹ ಅದರಲ್ಲಿ ಯಶಸ್ವಿಯಾಗುವುದು ನೂರಕ್ಕೆ ನೂರರಷ್ಟು ಶತಸಿದ್ಧ . ಆದಾಯದಲ್ಲಿ ವಿಪರೀತ ಹೆಚ್ಚಳ ಆಗಲಿದೆ. ಇದರ ಜೊತೆಗೆ ನಿಮ್ಮ ಪ್ರಭಾವ ಕೂಡ ವೃದ್ಧಿಸಲಿದ್ದು, ಆತ್ಮವಿಶ್ವಾಸ ಹೆಚ್ಚಾಗಲಿದೆ. ಇದನ್ನು ಓದಿ..Kannada Astrology: ಮನೆಯ ಮಹಿಳೆಯರು ಅಪ್ಪಿ ತಪ್ಪಿಯೂ ಕೂಡ ಸ್ನಾನಕ್ಕೂ ಮುನ್ನ ಈ ತಪ್ಪುಗಳನ್ನು ಮಾಡಬೇಡಿ, ಅದೃಷ್ಟ ಲಕ್ಷ್ಮಿ ಹೊರಟು ಹೋಗ್ತಾಳೆ.
ಮಿಥುನ ರಾಶಿ: ಸಂಕ್ರಾಂತಿಯಿಂದ ಸೂರ್ಯನ ರಾಶಿ ಸಂಚಾರದಿಂದಾಗಿ ಈ ರಾಶಿಯವರಿಗೆ ಒಳ್ಳೆಯ ಅದೃಷ್ಟಗಳು ಒಲಿದು ಬರಲಿವೆ. ಕೆಲಸದ ಜಾಗದಲ್ಲಿ ನಿಮಗೆ ಹೆಚ್ಚಿನ ಮರ್ಯಾದೆ ಸಿಗುವುದಲ್ಲದೆ ನಿಮ್ಮ ಮಾತುಗಳು ನಡೆಯುತ್ತವೆ. ಇನ್ನು ಮುಂದೆ ಎಲ್ಲಾ ಕ್ಷಣಗಳು, ವಿಷಯಗಳು ನಿಮ್ಮ ಪರವಾಗಿಯೇ ಇರುತ್ತವೆ. ಜೊತೆಗೆ ನೀವು ಏನೇ ಮಾಡಿದರು ಅದರಲ್ಲಿ ಗೆಲುವು ಕಾಣಲಿದ್ದೀರಿ. ವ್ಯವಹಾರ ಮತ್ತು ಉದ್ಯಮದಲ್ಲಿ ದೊಡ್ಡಮಟ್ಟದ ಯಶಸ್ಸು ಸಿಗಲಿದೆ. ಆರ್ಥಿಕವಾಗಿ ಬಲಗೊಳ್ಳಲಿದ್ದೀರಿ.

ಕರ್ಕಾಟಕ ರಾಶಿ: ಸಂಕ್ರಾಂತಿಯಿಂದ ನಂತರ ಎಲ್ಲಾ ದಿನಗಳು ಈ ರಾಶಿಯ ಜನರ ಮೇಲೆ ಸೂರ್ಯನ ಆಶೀರ್ವಾದ ಸದಾ ಇದ್ದೇ ಇರುತ್ತದೆ. ಮಾಡುವ ಎಲ್ಲ ಕೆಲಸದ ಮೇಲು ಸೂರ್ಯದೇವನ ಕೃಪೆ ಇರುವುದರಿಂದಾಗಿ ಅಂದುಕೊಂಡಿದ್ದು ಕೈಗೂಡುತ್ತದೆ. ಇದಲ್ಲದೆ ನಿಮ್ಮ ಕೆಲಸಗಳಿಗೆ ಸಂಗಾತಿಯ ಸಹಕಾರವೂ ಇರಲಿದ್ದು, ಕುಟುಂಬದವರ ಬೆಂಬಲ ದೊರೆಯಲಿದೆ. ಮನೆಯಲ್ಲಿ ಶಾಂತಿ ಹಾಗೂ ಪ್ರೀತಿ ನೆಲೆಸಲಿದೆ. ಅವಿವಾಹಿತರಿಗೆ ಒಳ್ಳೆಯ ಮದುವೆ ಸಂಬಂಧಗಳು ಕೂಡಿ ಬರುತ್ತವೆ. ಇದನ್ನು ಓದಿ.. Kannada Astrology 2023: ಈ ವರ್ಷದ ಮೊದಲ ತಿಂಗಳು ಜನವರಿಯಲ್ಲಿ ಎಲ್ಲ ರಾಶಿಗಳ ಭವಿಷ್ಯ ಹೇಗಿರಲಿದೆ ಗೊತ್ತೇ?? 4 ರಾಶಿಗಳಿಗೆ ಕಷ್ಟ ಮುಗಿದು ಒಳ್ಳೆಯ ಕಾಲ ಆರಂಭ.
ಮಕರ ರಾಶಿ: ಈ ಬಾರಿ ಸೂರ್ಯದೇವ ಮಕರ ರಾಶಿಗೆ ತನ್ನ ರಾಶಿಯನ್ನು ಬದಲಾಯಿಸುತ್ತಿರುವುದರಿಂದಾಗಿ ಈ ರಾಶಿಯ ಜನರಿಗೆ ಎಲ್ಲದಕ್ಕಿಂತ ಹೆಚ್ಚಿನ ಪ್ರಯೋಜನಗಳು ಆಗಲಿದೆ. ಮಕರ ರಾಶಿಯ ಜನರಿಗೆ ಇನ್ನೂ ಮುಂದೆ ಸೂರ್ಯದೇವನ ಆಶೀರ್ವಾದ ಯಾವಾಗಲೂ ಇದ್ದೇ ಇರುತ್ತದೆ. ಜೀವನದಲ್ಲಿ ಸಕರಾತ್ಮಕತೆಯೇ ತುಂಬಿರಲಿದ್ದು, ಮುಟ್ಟಿದ್ದೆಲ್ಲ ಚಿನ್ನ ಎನ್ನುವಂತಹ ಒಳ್ಳೆಯ ಕಾಲ ಇನ್ನು ಮುಂದೆ ನಿಮ್ಮದಾಗಲಿದೆ. ಸೋಲು, ಅಪಮಾನದ ಕಾಲ ಕಳೆಯಲಿದ್ದು ಇನ್ನು ಮುಂದೆ ಗೆಲುವು ಮತ್ತು ಸನ್ಮಾನದಂತಹ ಒಳ್ಳೆಯ ಕಾಲ ಬರಲಿದೆ. ಜೀವನದಲ್ಲಿ ಸಂತೋಷವೇ ತುಂಬಿರಲಿದ್ದು ಅಂದುಕೊಂಡ ಕೆಲಸಗಳು ಯಶಸ್ವಿಯಾಗುತ್ತವೆ.
Comments are closed.