Kannada News: ಕಾಂತಾರ ದಲ್ಲಿ ಖಡಕ್ ಪೊಲೀಸ್ ಆಫೀಸರ್ ಮಾತ್ರ ಹಣ ಮಾಡಿಕೊಂಡ ಕಿಶೋರ್, ಇದೀಗ ದೈವದ ನಂಬಿಕೆ ಬಗ್ಗೆ ಹೇಳಿದ್ದೆ ಬೇರೆ.

Kannada News: ಕಾಂತಾರ (Kantara) ಚಿತ್ರ ದೊಡ್ಡ ಮಟ್ಟದ ಯಶಸ್ಸು ಗಳಿಸಿರುವುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಕನ್ನಡ ನೆಲದ ಕಥೆ ಇದೀಗ ಜಗತ್ತಿನತ್ಯಂತ ಸದ್ದು ಮಾಡುತ್ತಿದೆ. ಬಿಡುಗಡೆಗೊಂಡು ತಿಂಗಳುಗಳೇ ಕಳೆದರು ಕಾಂತಾರದ ಮೇಲಿನ ಕ್ರೇಜ್ ಅಭಿಮಾನಿಗಳಿಗೆ ಇನ್ನು ಕಡಿಮೆಯಾಗಿಲ್ಲ. ಇನ್ನು ಈ ಚಿತ್ರದಲ್ಲಿ ನಟ ಕಿಶೋರ್ (Kishore) ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಈ ಮೊದಲೇ ನಟ ಮತ್ತು ವಿಲನ್ ಪಾತ್ರಗಳಲ್ಲಿ ಅವರು ಕನ್ನಡ ಹಾಗೂ ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ಮಿಂಚಿದ್ದರು. ಇನ್ನು ಕಾಂತಾರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ ನಂತರ ಅವರ ಜನಪ್ರಿಯತೆ ದುಪ್ಪಟ್ಟಾಗಿದೆ. ಇನ್ನು ಧೈವಕ್ಕೆ ಅಪಮಾನ ಮಾಡಿದ ಯುವಕನೊಬ್ಬ ರಕ್ತಕಾರಿ ಸತ್ತಿದ್ದಾನೆ ಎನ್ನುವ ಸುದ್ದಿಯ ಕುರಿತು ಪ್ರತಿಕ್ರಿಯಿಸಿರುವ ನಟ ಕಿಶೋರ್ ಮತ್ತೆ ಸುದ್ದಿಯಲ್ಲಿದ್ದಾರೆ.

ನಟ ಕಿಶೋರ್ ಅವರಿಗೆ ಕಾಂತಾರ ಚಿತ್ರದ ಪೊಲೀಸ್ ಪಾತ್ರ ಇನ್ನಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿದೆ. ಈಗಾಗಲೇ ಅವರಿಗೆ ಕನ್ನಡ, ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ಆಫರ್ ಕೇಳಿ ಬರುತ್ತಿದೆಯಂತೆ. ಈ ಮೊದಲಿಗಿಂತಲೂ ನಟನೆಯಲ್ಲಿ ಕಿಶೋರ್ ಬ್ಯುಸಿಯಾಗಿದ್ದಾರೆ. ಇನ್ನು ಇತ್ತೀಚಿಗಷ್ಟೇ ವಾಟ್ಸಾಪ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ದೈವವನ್ನು ಅಪಮಾನಿಸಿದ ಯುವಕನೊಬ್ಬ ರಕ್ತ ಕಾರಿ ಸತ್ತಿದ್ದಾನೆ ಎನ್ನುವ ವಿಡಿಯೋ ಒಂದು ವೈರಲ್ ಆಗಿತ್ತು. ದೈವದ ಮೇಲೆ ಅಪಮಾನ ಮಾಡಿದ ಯುವಕನು ರಕ್ತಕಾರಿ ಸತ್ತಿರುವ ವಿಡಿಯೋ ಎಲ್ಲೆಡೆ ಹರಿದಾಡಿತ್ತು. ಇದೀಗ ನಟ ಕಿಶೋರ್ ಈ ಪ್ರಕರಣದ ಕುರಿತಾಗಿ ಪ್ರತಿಕ್ರಿಯಿಸಿದ್ದಾರೆ. ನಟ ಕಿಶೋರ್ ಈ ವಿಷಯದ ಮೇಲೆ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಜನರ ಇಂತಹ ಮನಸ್ಥಿತಿಯ ಕುರಿತು ಕಿವಿಮಾತು ಹೇಳಿರುವ ಅವರು ನಂಬಿಕೆ ಇರಲಿ, ಮೂಢನಂಬಿಕೆ ಬೇಡ ಎಂಬ ಸಲಹೆ ನೀಡಿದ್ದಾರೆ. ಇದನ್ನು ಓದಿ..Kannada News: ಎಲ್ಲವನ್ನು ತಾಳ್ಮೆಯಿಂದ ನೋಡುತ್ತಲೇ ರಶ್ಮಿಕಾ ಗೆ ಬಿಗ್ ಶಾಕ್ ಕೊಟ್ಟ ಅಲ್ಲೂ ಅರ್ಜುನ್: ಮೆರೆಯುತ್ತಿದ್ದ ರಶ್ಮಿಕಾ ನೇರವಾಗಿ ಪಾತಾಳಕ್ಕೆ. ಏನಾಗಿದೆ ಗೊತ್ತೆ??

kannada news kantara kishore 1 | Kannada News: ಕಾಂತಾರ ದಲ್ಲಿ ಖಡಕ್ ಪೊಲೀಸ್ ಆಫೀಸರ್ ಮಾತ್ರ ಹಣ ಮಾಡಿಕೊಂಡ ಕಿಶೋರ್, ಇದೀಗ ದೈವದ ನಂಬಿಕೆ ಬಗ್ಗೆ ಹೇಳಿದ್ದೆ ಬೇರೆ.
Kannada News: ಕಾಂತಾರ ದಲ್ಲಿ ಖಡಕ್ ಪೊಲೀಸ್ ಆಫೀಸರ್ ಮಾತ್ರ ಹಣ ಮಾಡಿಕೊಂಡ ಕಿಶೋರ್, ಇದೀಗ ದೈವದ ನಂಬಿಕೆ ಬಗ್ಗೆ ಹೇಳಿದ್ದೆ ಬೇರೆ. 2

ಕಿಶೋರ್ ಅವರು “ಕೊಲ್ಲುವ ದೈವ, ಮನಸ್ಸನ್ನು ಪರಿವರ್ತಿಸಲಾರದೇ? ಕಾಂತಾರದ ದೈವವನ್ನು ಅವಮಾನಿಸಿದ ಯುವಕ ರಕ್ತಕಾರಿ ಸಾವು ಅನ್ನೊ ವೈರಲ್ ವಿಡಿಯೋ ವಾಟ್ಸ್ ಆ್ಯಪ್ ನಲ್ಲಿ ವೈರಲ್ ಆಗಿದೆ. ಆ ಸಿನಿಮಾದ ಭಾಗವಾಗಿ ಈ ಥರದ ತಪ್ಪು ತಿಳುವಳಿಕೆಗಳನ್ನು ತಿದ್ದುವುದು ನನ್ನ ಬಾಧ್ಯತೆ ಎಂದು ನಂಬಿ ಬರೆಯುತ್ತಿದ್ದೇನೆ. ಕೊಲ್ಲುವ ಶಕ್ತಿಯಿರುವ ದೈವಕ್ಕೆ ಅದರ ಬದಲು ಮನಃಪರಿವರ್ತನೆ ಮಾಡುವ ಶಕ್ತಿ ಏಕೆ ಇರುವುದಿಲ್ಲ? ಏಕೆಂದರೆ ಕತೆಗಾರನಿಗೆ ಕಥೆ ಮುಂದೆ ಸಾಗುವುದಿಲ್ಲ. ಅವನ ಮಟ್ಟಿಗೆ ಒಂದು ಕಥೆಯನ್ನು ಪರಿಣಾಮಕಾರಿಯಾಗಿ ಹೇಳುವ ತನ್ನ ಉದ್ದೇಶ ಸಾಧನೆಗೆ ಸಿನಿಮಾವಾಗಲಿ ಪುರಾಣವಾಗಲಿ ದೈವವೋ, ದೆವ್ವವೋ ಒಂದು ಸಾಧನವಷ್ಟೆ. ದೈವವೋ ದೆವ್ವವೋ ನಮ್ಮ ನಮ್ಮ ನಂಬಿಕೆಯಷ್ಟೇ. ನಂಬಿದರೆ ಉಂಟು ನಂಬದಿದ್ದರೆ ಇಲ್ಲ. ಹಾಗೆಂದು ಕಷ್ಟಕಾಲದಲ್ಲಿ ಮನಸ್ಥೈರ್ಯ ಕೊಡುವ ನಂಬಿಕೆಗಳನ್ನು ಅವಮಾನಿಸುವ ಅವಶ್ಯಕತೆಯೂ ಇಲ್ಲ. ಕಿಡಿಗೇಡಿಗಳನ್ನು ಶಿಕ್ಷಿಸಲು ಕಾನೂನಿದೆ. ಅವರವರ ನಂಬಿಕೆ ಅವರಿಗೆ. ನಂಬಿಕೆ ಇರಲಿ ಮೂಢನಂಬಿಕೆ ಬೇಡ. ಅದರ ಹೆಸರಲ್ಲಿ ದ್ವೇಷವೂ ಬೇಡ” ಎಂದು ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿದ್ದಾರೆ. ಇದನ್ನು ಓದಿ.. Biggboss Kannada: ಶುರುವಾಯ್ತು ಗುರೂಜಿಯ ಆಟ: ದಿಡೀರ್ ಎಂದು ದಿವ್ಯ ಉರುಡುಗ ಮೇಲೆ ಗಂಭೀರ ಆರೋಪ ಮಾಡಿದ ಆರ್ಯವರ್ಧನ್. ಹೇಳಿದ್ದೇನು ಗೊತ್ತೇ??

Comments are closed.