Kannada Astrology: ತುಳಸಿ, ಮನಿ ಪ್ಲಾಂಟ್ ಇಡದೇ ಇದ್ದರೂ ಪರವಾಗಿಲ್ಲಾ, ಆದರೆ ಈ ದಿಕ್ಕಿನಲ್ಲಿ ಇಡಬೇಡಿ. ಇಟ್ಟರೆ ಎಲ್ಲಿ ಇಡಬೇಕು ಗೊತ್ತೇ??

Kannada Astrology: ಸಾಮಾನ್ಯವಾಗಿ ಮನೆಯ ಒಳಗೆ ಮತ್ತು ಹೊರಗೆ ಜನರು ಕೆಲವು ಸಸ್ಯ, ಹೂವಿನ ಗಿಡ ಮತ್ತು ಮರಗಳನ್ನು ನೆಡುತ್ತಾರೆ. ಇದು ಮನೆಯ ಅಂದವನ್ನು ಹೆಚ್ಚಿಸುವುದರ ಜೊತೆಗೆ ಉತ್ತಮ ಪರಿಸರ ನಿರ್ಮಿಸುತ್ತದೆ. ಅಲ್ಲದೆ ಅಲಂಕಾರಿಕ ರೀತಿಯಾಗಿಯೂ ಈ ರೀತಿಯ ಗಿಡಗಳನ್ನು ನೆಡಲಾಗುತ್ತದೆ. ವಿಶೇಷವಾಗಿ ತುಳಸಿ ಗಿಡ, ಮನಿ ಪ್ಲಾಂಟ್ ಇತ್ಯಾದಿ ಸಸ್ಯಗಳನ್ನು ಮನೆಯ ಮುಂದೆ ನೆಡೆಲಾಗುತ್ತದೆ. ಆದರೆ ಇಂತಹ ಸಸ್ಯಗಳನ್ನು ಹೇಗೆ, ಯಾವ ದಿಕ್ಕಿನಲ್ಲಿ ನೆಡಬೇಕು ಎನ್ನುವುದನ್ನು ಖಂಡಿತವಾಗಿಯೂ ತಿಳಿದುಕೊಳ್ಳಬೇಕಾಗುತ್ತದೆ. ಹೀಗಾಗಿ ಮನಿ ಪ್ಲಾಂಟ್, ತುಳಸಿ ಗಿಡಗಳು ಸೇರಿದಂತೆ ಕೆಲವು ಅಲಂಕಾರಿಕ ಸಸ್ಯಗಳನ್ನು ಯಾವ ದಿಕ್ಕಿನಲ್ಲಿ ನೆಡಬೇಕು ಮತ್ತು ಇರಿಸಬೇಕು ಎನ್ನುವುದನ್ನು ಇಲ್ಲಿ ಹೇಳಲಾಗಿದೆ.

ಸಾಮಾನ್ಯವಾಗಿ ಮನೆಯ ಮುಂದೆ ಬಾಳೆ ಗಿಡಗಳನ್ನು ನೆಡುವುದನ್ನು ನೋಡಿರಬಹುದು. ಬಾಳೆ ಗಿಡದಲ್ಲಿ ವಿಷ್ಣು ಮತ್ತು ದೇವ ಗುರು ಬೃಹಸ್ಪತಿ ನೆಲೆಸಿರುತ್ತಾರೆ ಎಂದು ಶಾಸ್ತ್ರ ಹೇಳುತ್ತದೆ. ಬಾಳೆಹಣ್ಣಿಗೆ ವಿಶೇಷವಾದ ಮಹತ್ವ ಇದೆ. ಪೂಜೆಗಳಲ್ಲಿ ಬಾಳೆಹಣ್ಣನ್ನು ಬಳಸಲಾಗುತ್ತದೆ. ಅಂದಹಾಗೆ ಬಾಳೆಹಣ್ಣಿನ ಗಿಡವನ್ನು ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನಲ್ಲಿ ನೆಡಬಾರದು. ಬದಲಿಗೆ ಈಶಾನ್ಯ ದಿಕ್ಕಿನಲ್ಲಿ ನೆಡುವುದು ಉತ್ತಮ ಎಂದು ಶಾಸ್ತ್ರ ಹೇಳುತ್ತದೆ. ಸಾಮಾನ್ಯವಾಗಿ ಮನೆ ಅಥವಾ ಕಚೇರಿಗಳಲ್ಲಿ ಮನಿ ಪ್ಲಾಂಟ್ಸ್ ನೆಡಲಾಗುತ್ತದೆ. ಈ ಸಸ್ಯವನ್ನು ನೆಡುವುದರಿಂದಾಗಿ ಮನೆ ಆರ್ಥಿಕ ದಿವಾಳಿ ನಿವಾರಣೆಯಾಗಿ, ಹಣಕಾಸಿನ ತೊಂದರೆ ಇರುವುದಿಲ್ಲ ಎಂದು ನಂಬಲಾಗುತ್ತದೆ. ಈ ಮಾತನ್ನು ಶಾಸ್ತ್ರವು ಒಪ್ಪುತ್ತದೆ. ಅಲ್ಲದೆ ಮನಿ ಪ್ಲಾಂಟ್ ಸಸ್ಯವನ್ನು ದಕ್ಷಿಣ ದಿಕ್ಕಿನಲ್ಲಿ ಇಡಬಾರದು ಬದಲಾಗಿ ಆಗ್ನೇಯ ದಿಕ್ಕಿನಲ್ಲಿ ನೆಡೆಯುವುದು ಉತ್ತಮ ಎಂದು ಶಾಸ್ತ್ರ ಹೇಳುತ್ತದೆ. ಇದನ್ನು ಓದಿ.. Kannada Astrology: ಇನ್ನು ಸ್ವಲ್ಪ ದಿನ ಅಷ್ಟೇ, ಕಷ್ಟ ನೀಡುವ ಶನಿ ದೇವನೇ ಈ ರಾಶಿಗಳಿಗೆ ಅದೃಷ್ಟ ಕೊಡಲಿದ್ದಾನೆ. ಯಾರ್ಯಾರಿಗೆ ಗೊತ್ತೇ?

kannada astrology tulsi money plant | Kannada Astrology: ತುಳಸಿ, ಮನಿ ಪ್ಲಾಂಟ್ ಇಡದೇ ಇದ್ದರೂ ಪರವಾಗಿಲ್ಲಾ, ಆದರೆ ಈ ದಿಕ್ಕಿನಲ್ಲಿ ಇಡಬೇಡಿ. ಇಟ್ಟರೆ ಎಲ್ಲಿ ಇಡಬೇಕು ಗೊತ್ತೇ??
Kannada Astrology: ತುಳಸಿ, ಮನಿ ಪ್ಲಾಂಟ್ ಇಡದೇ ಇದ್ದರೂ ಪರವಾಗಿಲ್ಲಾ, ಆದರೆ ಈ ದಿಕ್ಕಿನಲ್ಲಿ ಇಡಬೇಡಿ. ಇಟ್ಟರೆ ಎಲ್ಲಿ ಇಡಬೇಕು ಗೊತ್ತೇ?? 2

ಶಮಿ ಗಿಡವನ್ನು ಧಾರ್ಮಿಕ ಗ್ರಂಥಗಳಲ್ಲಿ ಅತ್ಯಂತ ಪೂಜನೀಯ ಎಂದು ಹೇಳಲಾಗಿದೆ. ಶಿವನಿಗೆ ಈ ಸಸ್ಯ ಪ್ರಿಯವಾದದ್ದು ಎಂದು ಶಾಸ್ತ್ರ ಹೇಳುತ್ತದೆ. ಈ ಗಿಡವನ್ನು ಯಾವುದೇ ಕಾರಣಕ್ಕೂ ದಕ್ಷಿಣ ದಿಕ್ಕಿನಲ್ಲಿ ನೆಡಬಾರದು. ಶಮಿ ಗಿಡವನ್ನು ಪೂರ್ವ ಅಥವ ಈಶಾನ್ಯ ದಿಕ್ಕಿನಲ್ಲಿ ನೆಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿರುವ ಆರ್ಥಿಕ ಮುಗ್ಗಟ್ಟು ನಿವಾರಣೆಯಾಗಿ ಹಣಕಾಸಿನ ನೆರವು ದೊರೆಯುತ್ತದೆ. ತುಳಸಿ ಗಿಡವನ್ನು ಹಿಂದೂ ಶಾಸ್ತ್ರಗಳ ಪ್ರಕಾರ ಅತ್ಯಂತ ಪೂಜನೀಯ ಮತ್ತು ಪವಿತ್ರವೆಂದು ಭಾವಿಸಲಾಗಿದೆ. ಸಾಮಾನ್ಯವಾಗಿ ಎಲ್ಲ ಮನೆಗಳ ಮುಂದೆ ಈ ಗಿಡವನ್ನು ನೆಡುವುದರ ಜೊತೆಗೆ ಪ್ರತಿನಿತ್ಯವೂ ಪೂಜಿಸಲಾಗುತ್ತದೆ. ತುಳಸಿ ಗಿಡದಲ್ಲಿ ಐಶ್ವರ್ಯ ಅಧಿದೇವತೆ ಲಕ್ಷ್ಮಿ ನೆಲೆಸಿರುತ್ತಾಳೆ ಎಂದು ನಂಬಲಾಗಿದೆ. ಅಲ್ಲದೆ ತುಳಸಿ ಗಿಡ ಪೂಜಿಸುವುದರಿಂದ ಲಕ್ಷ್ಮಿಯ ಕೃಪೆಗೆ ಪಾತ್ರರಾಗಬಹುದು ಎಂದು ಶಾಸ್ತ್ರ ಹೇಳುತ್ತದೆ. ಯಾವುದೇ ಕಾರಣಕ್ಕೂ ತುಳಸಿ ಗಿಡವನ್ನು ದಕ್ಷಿಣ ದಿಕ್ಕಿನಲ್ಲಿ ನೆಡಬಾರದು ಅಥವಾ ಇಡಬಾರದು. ಹಾಗಾಗಿ ತುಳಸಿ ಗಿಡವನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇರಿಸಬೇಕು. ಹೀಗೆ ಮಾಡುವುದರಿಂದ ಮನೆ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತದೆ. ಇದನ್ನು ಓದಿ..Kannada Astrology: ಮನೆಯಲ್ಲಿ ಅಪ್ಪಿ ತಪ್ಪಿಯೂ ಕೂಡ ಕನ್ನಡಿಯನ್ನು ಈ ದಿಕ್ಕಿನಲ್ಲಿ ಇಡಬೇಡಿ, ಹಣ ನಿಲ್ಲುವುದಿಲ್ಲ, ಕಷ್ಟ ಅನುಭವಿಸ್ತೀರಾ. ಯಾವ ದಿಕ್ಕು ಗೊತ್ತೇ?

Comments are closed.