Kannada News: ಮದುವೆಯಾಗಿ 100 ದಿನ ಪೂರೈಸಿದ ಬಳಿಕ ರವೀಂದ್ರನ್ ತನ್ನ ಮುದ್ದಾದ ಹೆಂಡತಿ ಬಗ್ಗೆ ಹೇಳಿದ್ದೇನು ಗೊತ್ತೇ? ತಿಳಿದರೆ ಮೈಯೆಲ್ಲಾ ಜುಮ್ ಅನ್ನುತ್ತದೆ.

Kannada News: ಕಾಲಿವುಡ್ ನಲ್ಲಿ ಮದುವೆಯ ಮೂಲಕ ಸಾಕಷ್ಟು ಸದ್ದು ಮಾಡಿದ್ದ ಮಹಾಲಕ್ಷ್ಮಿ (Mahalakshmi) ಮತ್ತು ರವೀಂದ್ರ ಚಂದ್ರಶೇಖರ್ (Ravindran Chandrashekhar) ಜೋಡಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿರಿಸಿ ನೂರು ದಿನಗಳನ್ನು ಪೂರೈಸಿದ್ದಾರೆ. ಮದುವೆಯ ನಂತರ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಟ್ರೋಲ್ ಆಗುವ ಮೂಲಕ ಈ ಜೋಡಿ ಎಲ್ಲರಿಗೂ ಪರಿಚಿತವಾಗಿತ್ತು. ಇದೀಗ ಈ ಜೋಡಿ ಮದುವೆಯಾಗಿ ಅತ್ಯಂತ ಸಂತೋಷದಿಂದ ನೂರು ದಿನಗಳನ್ನು ಕಳೆದಿದ್ದಾರೆ. 100 ದಿನಗಳನ್ನು ಕಳೆದ ಖುಷಿಯಲ್ಲಿ ಮಹಾಲಕ್ಷ್ಮಿ ಪತಿ ರವೀಂದ್ರ ಚಂದ್ರಶೇಖರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಪತ್ನಿ ಮಹಾಲಕ್ಷ್ಮಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ನೆನ್ನೆಗೆ ಸರಿಯಾಗಿ ನೂರು ದಿನಗಳ ಹಿಂದೆ ಈ ಜೋಡಿ ಹಸೆಮಣೆ ಏರಿತ್ತು. ಮಹಾಲಕ್ಷ್ಮಿ ಮತ್ತು ರವೀಂದ್ರ ಚಂದ್ರಶೇಖರ್ ಅವರ ಜೋಡಿಯ ಕುರಿತಾಗಿ ಸಾಕಷ್ಟು ಟ್ರೋಲ್ ಗಳು ಕಂಡುಬಂದವು.

ದುಡ್ಡಿಗಾಗಿ ಈ ಜನ ಏನೆಲ್ಲ ಮಾಡಿಬಿಡುತ್ತಾರೆ ಎಂದೆಲ್ಲ ಮಹಾಲಕ್ಷ್ಮಿ ಅವರನ್ನು ಟೀಕಿಸಲಾಗಿತ್ತು. ಅಲ್ಲದೆ ಈ ಜೋಡಿಯ ಕುರಿತಾಗಿ ಅನೇಕ ಸುಳ್ಳು ಸುದ್ದಿಗಳನ್ನು ಕೂಡ ಹಬ್ಬಿಸಲಾಗಿತ್ತು. ಆದರೆ ಅದೆಲ್ಲವನ್ನು ಮೀರಿಸಿ ಈ ಜೋಡಿ ಸಂತೋಷದಿಂದ ನೂರು ದಿನಗಳನ್ನು ಕಳೆದಿದ್ದಾರೆ. ಕಿರುತೆರೆಯ ಅತ್ಯಂತ ಜನಪ್ರಿಯ ನಟಿಯಾಗಿದ್ದ ಮಹಾಲಕ್ಷ್ಮಿಯವರು ಟಾಲಿವುಡ್ ನ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ರವೀಂದ್ರ ಚಂದ್ರಶೇಖರ್ ಅವರನ್ನು ವಿವಾಹವಾಗಿದ್ದರು. ಇದೀಗ ಈ ಜೋಡಿ ಮದುವೆಯಾಗಿ ನೂರು ದಿನಗಳನ್ನು ಒಟ್ಟಿಗೆ ಕಳೆದಿದ್ದಾರೆ. ಸಾಮಾನ್ಯವಾಗಿ ರವೀಂದ್ರ ಚಂದ್ರಶೇಖರ್ ಅವರು ತಮ್ಮ ಪತ್ನಿಯೊಂದಿಗೆ ಕಳೆದ ಕ್ಷಣಗಳನ್ನು ಫೋಟೋ ಅಥವಾ ವಿಡಿಯೋ ಮುಖಾಂತರ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಮದುವೆಯ ನಂತರ ನೂರು ದಿನ ಪೂರೈಸಿದ ಖುಷಿಯಲ್ಲಿ ರವೀಂದ್ರ ಚಂದ್ರಶೇಖರ್ ಅವರು ತಮ್ಮ instagram ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ತಮ್ಮ ಖುಷಿಯನ್ನು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಇದನ್ನು ಓದಿ..Kannada News: ಮದುವೆಯಾಗಿ ಹತ್ತು ವರ್ಷ ಆದಮೇಲೆ ತಾಯಿಯಾದರೂ, ಚಿರು ಕುಟುಂಬದಲ್ಲಿ ಇಲ್ಲ ಸಂತೋಷ. ರಾಮ್ ಚರಣ್ ತಾಯಿ ಮಾಡಿದ್ದೇನು ಗೊತ್ತೇ?

kannada news ravichandran about mahalakshmi | Kannada News: ಮದುವೆಯಾಗಿ 100 ದಿನ ಪೂರೈಸಿದ ಬಳಿಕ ರವೀಂದ್ರನ್ ತನ್ನ ಮುದ್ದಾದ ಹೆಂಡತಿ ಬಗ್ಗೆ ಹೇಳಿದ್ದೇನು ಗೊತ್ತೇ? ತಿಳಿದರೆ ಮೈಯೆಲ್ಲಾ ಜುಮ್ ಅನ್ನುತ್ತದೆ.
Kannada News: ಮದುವೆಯಾಗಿ 100 ದಿನ ಪೂರೈಸಿದ ಬಳಿಕ ರವೀಂದ್ರನ್ ತನ್ನ ಮುದ್ದಾದ ಹೆಂಡತಿ ಬಗ್ಗೆ ಹೇಳಿದ್ದೇನು ಗೊತ್ತೇ? ತಿಳಿದರೆ ಮೈಯೆಲ್ಲಾ ಜುಮ್ ಅನ್ನುತ್ತದೆ. 2

ತಮ್ಮ ಪತ್ನಿಯ ಜೊತೆಗಿರುವ ವಿಶೇಷ ಕ್ಷಣಗಳನ್ನು ನೆನಪಿಸಿಕೊಂಡಿರುವ ಅವರು ನೂರು ದಿನಗಳನ್ನು ಮತ್ತೊಮ್ಮೆ ಖುಷಿಯಿಂದ ಸ್ಮರಿಸಿದ್ದಾರೆ. “ನನ್ನ ಮನಸ್ಸಿನಲ್ಲಿ ಹಲವಾರು ವಿಚಾರಗಳಿವೆ. ಆದರೆ ಅದನ್ನು ಹೇಗೆ ಹೇಳಬೇಕು ತಿಳಿಯುತ್ತಿಲ್ಲ. ಬಹುಶಃ ಅದು ನಾಟಕ ಅನಿಸಬಹುದು. ಹಾಗಾಗಿ ನನ್ನ ಮನಸ್ಸಿಗೆ ಹೇಗನಿಸುತ್ತದೆ ಹಾಗೆಯೇ ಹೇಳುತ್ತಿದ್ದೇನೆ” ಎಂದು ಬರೆದು ಕೊಂಡಿರುವ ಅವರು “ನನ್ನ ಜೀವನದ 37 ವರ್ಷಗಳಲ್ಲಿ ಇದೆ ಮೊದಲ ಬಾರಿ ನಿರಂತರವಾಗಿ 100 ದಿನ ಅತ್ಯಂತ ಖುಷಿ ಮತ್ತು ಸಂತೋಷದಿಂದ ಇದ್ದೇನೆ. ಅದಕ್ಕೆ ನೀನು ಕಾರಣ, ನಾನು ಯಾವಾಗಲೂ ನಿನಗೆ ಋಣಿಯಾಗಿರುತ್ತೇನೆ. ಇದೇ ರೀತಿ ಜೀವನಪೂರ್ತಿ ಅದೇ ಪ್ರೀತಿ, ಕಚ್ಚಾಟ, ತರಲೆ, ಆತ್ಮೀಯತೆಯಿಂದ ಒಟ್ಟಿಗೆ ಬದುಕೋಣ” ಎಂದು ಅವರು ಬರೆದುಕೊಂಡಿದ್ದಾರೆ. ಈ ಜೋಡಿಗೆ ಅಭಿಮಾನಿಗಳು ನೂರು ದಿನ ಪೂರೈಸಿದ್ದಕ್ಕಾಗಿ ಶುಭಾಶಯ ಕೋರುತ್ತಿದ್ದಾರೆ. ಇದನ್ನು ಓದಿ.. Kannada News: ನಟನೆ ಅದ್ಭುತ, ಸೌಂದರ್ಯವಂತೂ ದೇವಲೋಕದ ಅಪ್ಸರೆಯಂತೆ, ಯಶಸ್ವಿ ನಟಿಯಾದರು ಭಾವನಾ ಮದುವೆಯಾಗಿಲ್ಲ ಯಾಕೆ ಗೊತ್ತೇ??

Comments are closed.