Kannada Biggboss: ಈಗಲೇ 32 ವರ್ಷ ವಯಸ್ಸಾಗಿರುವ ರೂಪೇಶ್ ಶೆಟ್ಟಿ, ಇನ್ನು 24 ವರ್ಷದ ಸನ್ಯಾ ರವರನ್ನು ಅದೆಷ್ಟು ವರ್ಷ ಆದಮೇಲೆ ಮದುವೆಯಾಗುತ್ತಾರಂತೆ ಗೊತ್ತೇ?

Kannada Biggboss: ಬಿಗ್ ಬಾಸ್ ಒಟಿಟಿ (Bigg Boss OTT) ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 9 (Bigg Boss Kannada Season 9) ರ ಎಪಿಸೋಡ್ ನಲ್ಲಿ ರೂಪೇಶ್ ಶೆಟ್ಟಿ (Roopesh Shetty) ಹಾಗೂ ಸಾನ್ಯಾ ಐಯ್ಯರ್ (Sanya Iyer) ಮಧ್ಯೆ ಒಳ್ಳೆಯ ಕೆಮಿಸ್ಟ್ರಿ ಸೃಷ್ಟಿ ಆಗಿದೆ. ಇವರಿಗೆ ಅಭಿಮಾನಿ ಬಳಗವೇ ಸೃಷ್ಟಿ ಆಗಿದೆ. ದಿನ ಕಳೆದಂತೆ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಐಯ್ಯರ್ ಮಧ್ಯೆ ಆಪ್ತತೆ ಹೆಚ್ಚುತ್ತಿದೆ. ಇದು ವೀಕ್ಷಕರಿಗೂ ಮನದಟ್ಟಾಗುತ್ತಿದೆ. ಬಿಗ್ ಬಾಸ್ ಒಟಿಟಿಯಲ್ಲಿ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಐಯ್ಯರ್ ಸಖತ್ ಕ್ಲೋಸ್ ಆದರು. ಇವರ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆಯಿತು. ಈ ಕಾರಣಕ್ಕೂ ಇಬ್ಬರೂ ಒಟಿಟಿ ಸೀಸನ್ ನಲ್ಲಿ ಮಿಂಚಿದ್ದಾರೆ. ಅವರು ಟಿವಿ ಸೀಸನ್ಗೆ ಎಂಟ್ರಿ ಕೊಟ್ಟರು. ಕಳೆದ ವಾರ ಸಾನಿಯಾ ಬಿಗ್ ಬಾಸ್ ನಿಂದ ಹೊರ ನಡೆದಿದ್ದಾರೆ. ಇದೀಗ ಪ್ರಶಾಂತ್ ಸಂಬರಗಿ ಅವರು ಸಾನಿಯಾ ಕುರಿತಾಗಿ ಕೆಲವು ಪ್ರಶ್ನೆಗಳನ್ನು ರೂಪೇಶ್ ಶೆಟ್ಟಿಗೆ ಕೇಳಿದ್ದಾರೆ. ಸಾನಿಯಾ ಅವರನ್ನು ಮದುವೆಯಾಗುತ್ತೀಯ ಎಂದಿದ್ದಾರೆ.

ನಾವಿಬ್ಬರು ಬರೀ ಫ್ರೆಂಡ್ಸ್ ಅಂತಿದ್ದಾ ಸಾನಿಯಾ ರೂಪೇಶ್ ಶೆಟ್ಟಿಗೆ ಸಖತ್ ಗಿಫ್ಟ್ ಕೊಟ್ಟಿದ್ದರು. ಹಾಡು ಹೇಳೋ ಮೂಲಕ ರೂಪೇಶ್ ಗೆ ಸರ್ಪ್ರೈಸ್ ಗಿಫ್ಟ್ ನೀಡಿದ್ದ ಸಾನ್ಯ ಗಿಫ್ಟ್ ಗೆ ರೂಪೇಶ್ ಬೋಲ್ಡ್ ಆಗಿದ್ದರು. ಕೋಸ್ಟಲ್ ವುಡ್ ನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟನಾಗಿ ಮಿಂಚಿ ನಿರೂಪಕನಾಗಿ ಕೆಲಸ ಮಾಡಿರುವ ರೂಪೇಶ್ ಶೆಟ್ಟಿ ಬಿಗ್ ಬಾಸ್ ಮನೆಯಲ್ಲೂ ಮಿಂಚುತ್ತಿದ್ದಾರೆ. ಇನ್ನು ಸಾನಿಯಾ ಪುಟ್ಟಗೌರಿ ಮದುವೆ ಧಾರಾವಾಹಿ ಮೂಲಕ ಮನೆ ಮಾತಾದರು. ಆ ಧಾರವಾಹಿಯೂ ಸಾನಿಯಾ ಅವರಿಗೆ ದೊಡ್ಡ ಮಟ್ಟದ ಹೆಸರು ನೀಡಿದ್ದು. ಶೆಟ್ಟಿ ಮತ್ತು ಸಾನಿಯಾ ಬಿಗ್ ಬಾಸ್ ಸೀಸನ್ 9 ರಲ್ಲಿ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದರು.

bigg boss kannada sanya roopesh mrg | Kannada Biggboss: ಈಗಲೇ 32 ವರ್ಷ ವಯಸ್ಸಾಗಿರುವ ರೂಪೇಶ್ ಶೆಟ್ಟಿ, ಇನ್ನು 24 ವರ್ಷದ ಸನ್ಯಾ ರವರನ್ನು ಅದೆಷ್ಟು ವರ್ಷ ಆದಮೇಲೆ ಮದುವೆಯಾಗುತ್ತಾರಂತೆ ಗೊತ್ತೇ?
Kannada Biggboss: ಈಗಲೇ 32 ವರ್ಷ ವಯಸ್ಸಾಗಿರುವ ರೂಪೇಶ್ ಶೆಟ್ಟಿ, ಇನ್ನು 24 ವರ್ಷದ ಸನ್ಯಾ ರವರನ್ನು ಅದೆಷ್ಟು ವರ್ಷ ಆದಮೇಲೆ ಮದುವೆಯಾಗುತ್ತಾರಂತೆ ಗೊತ್ತೇ? 2

ನಾವಿಬ್ಬರು ಕೇವಲ ಸ್ನೇಹಿತರು ಅಷ್ಟೇ ಎಂದು ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ಅವರು ಏನೇ ಹೇಳಿದರು ನೋಡುವವರ ಕಣ್ಣಿಗೆ ಅದು ಪ್ರೀತಿಯಾಗಿಯೇ ಕಾಣಿಸುತ್ತಿದೆ ಎಂದು ಹೇಳಬಹುದು. ಪ್ರಶಾಂತ್ ಸಾಂಬರ್ಗಿಯವರು (Prashanth Sambargi) ರೂಪೇಶ್ ಶೆಟ್ಟಿಗೆ ನಾನು ನೇರವಾಗಿ ನಿಮಗೆ ಒಂದು ಪ್ರಶ್ನೆ ಕೇಳುತ್ತೇನೆ ಎಂದು, ಇನ್ನೂ ಮೂರು ವರ್ಷದ ಒಳಗೆ ನಿಮ್ಮ ಮನೆಯವರೆಲ್ಲ ಒಪ್ಪಿದರೆ ನೀನು ಸಾನಿಯಾ ಮದುವೆಯಾಗುತ್ತೀರಾ ಎಂದು ಕೇಳಿದ್ದಾರೆ. ಅದಕ್ಕೆ ರೂಪೇಶ್ ಶೆಟ್ಟಿ ಇನ್ನು ಯೋಚಿಸಿಲ್ಲ ಎಂದಿದ್ದಾರೆ. ಅವರು ಹೌದು ಅಥವಾ ಇಲ್ಲ ಎಂದು ಸಹ ಉತ್ತರಿಸಿಲ್ಲ. ಮತ್ತೆ ಇನ್ನು ಮೂರು ವರ್ಷ ಸಮಯ ಇದೆ, ಮದುವೆ ಆಗುವೆಯ ಎಂದಾಗ ಇಲ್ಲ ನಾನು ಅದರ ಬಗ್ಗೆ ಯೋಚಿಸಿಲ್ಲ ಎಂದು ಉತ್ತರಿಸಿದ್ದಾರೆ.

Comments are closed.