Kannada News: ನಟನೆ ಅದ್ಭುತ, ಸೌಂದರ್ಯವಂತೂ ದೇವಲೋಕದ ಅಪ್ಸರೆಯಂತೆ, ಯಶಸ್ವಿ ನಟಿಯಾದರು ಭಾವನಾ ಮದುವೆಯಾಗಿಲ್ಲ ಯಾಕೆ ಗೊತ್ತೇ??

Kannada News: ನಟಿ ಭಾವನ (Bhavana) ಒಂದು ಕಾಲದ ಕನ್ನಡದ ಹೆಸರಾಂತ ನಾಯಕಿಯಾಗಿ ಗುರುತಿಸಿಕೊಂಡವರು. ಅನೇಕ ಜನಪ್ರಿಯ ಚಿತ್ರಗಳನ್ನು ನೀಡಿರುವ ಅವರು ಇಂದಿಗೂ ಕೂಡ ಅದೇ ಸೌಂದರ್ಯವನ್ನು ಉಳಿಸಿಕೊಂಡಿದ್ದಾರೆ. ತಮ್ಮ ಅದ್ಭುತ ನಟನ ಕೌಶಲ್ಯ, ಸೌಂದರ್ಯ, ಮಂದಹಾಸವಿರುವ ಮುಖ, ಆಕರ್ಷಿಸುವ ಕಣ್ಣುಗಳು ಭಾವನಾ ಅವರನ್ನು ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಳ್ಳಲು ಸಹಕರಿಸಿತು ಎಂದೇ ಹೇಳಬಹುದು. ಒಂದು ಕಾಲದಲ್ಲಿ ಟಾಪ್ ನಟಿ ಎಂದೇ ಗುರುತಿಸಿಕೊಂಡಿದ್ದ ಭಾವನಾ ಇತ್ತೀಚಿನ ಕೆಲವು ವರ್ಷಗಳಲ್ಲಿ ಯಾವುದೇ ಚಿತ್ರಗಳಲ್ಲಿಯೂ ನಟಿಸುತ್ತಿಲ್ಲ. ಆದರೆ ಇತ್ತೀಚಿಗೆ ಅವರು ಕಲರ್ಸ್ ಕನ್ನಡದಲ್ಲಿ(Colors Kannada) ಪ್ರಸಾರವಾಗುವ ಕನ್ನಡತಿ ಧಾರವಾಹಿಯಲ್ಲಿ ಕೆಲವು ಸಂಚಿಕೆಗಳಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚಿಗೆ ನೀಡಿದ ಸಂದರ್ಶನ ಒಂದರಲ್ಲಿ ಇಷ್ಟು ವರ್ಷಗಳಾದರೂ ತಾವು ಏಕೆ ಇನ್ನೂ ಮದುವೆಯಾಗಿಲ್ಲ ಎನ್ನುವುದರ ಕುರಿತು ಅವರು ಸತ್ಯ ಬಿಚ್ಚಿಟ್ಟಿದ್ದಾರೆ.

ನಟಿ ಭಾವನ ಕಳೆದ ಆರು ವರ್ಷಗಳಿಂದಲೂ ಚಿತ್ರರಂಗದಿಂದ ದೂರವಿದ್ದಾರೆ. ಇತ್ತೀಚಿಗೆ ಅವರು ಯಾವುದೇ ಚಿತ್ರಗಳಲ್ಲಿ ನಟಿಸುತ್ತಿಲ್ಲ. ಜೊತೆಗೆ ಅವರು ರಾಜಕೀಯ ರಂಗಕ್ಕೂ ಪ್ರವೇಶಿಸಿದ್ದಾರೆ. ಕಾಂಗ್ರೆಸ್ನ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇದೀಗ ಭಾವನ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಒನ್ಸಪಾನ್ ಅ ಟೈಮ್ ಇನ್ ಜಮಾಲಿಗುಡ್ಡಿ (Once Upon a Time in Jamaligudda) ಎನ್ನುವ ಚಿತ್ರದ ಮೂಲಕ ಅವರು ಮತ್ತೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಇತ್ತೀಚಿಗೆ ಅವರು ಸಂದರ್ಶನ ಒಂದರಲ್ಲಿ ತಮ್ಮ ಸಿನಿಮಾ ಜೀವನ ಮತ್ತು ವೈಯಕ್ತಿಕ ಜೀವನದ ಕುರಿತಾಗಿ ಮಾತನಾಡಿದ್ದಾರೆ. ಈ ವೇಳೆ ಅವರು ತಾವು ಎಷ್ಟು ವರ್ಷವಾದರೂ ಯಾಕೆ ಇನ್ನೂ ಮದುವೆಯಾಗಿಲ್ಲ ಎನ್ನುವುದರ ಕುರಿತು ಹಂಚಿಕೊಂಡಿದ್ದಾರೆ. ನಟಿ ಭಾವನಾ “ನಾನು ಪರದೆಯ ಮೇಲೆ ನಟಿಯಾಗಿ ಎಷ್ಟೇ ಒಳ್ಳೆಯವಳಾಗಿರಬಹುದು. ಆದರೆ ವೈಯಕ್ತಿಕ ಜೀವನದಲ್ಲಿಯೂ ನಾನು ಹಾಗೆಯೇ ಇರಬೇಕೆಂದಿಲ್ಲ. ನನಗೂ ಕೆಲವು ಕೊರತೆಗಳಿವೆ. ನಾನು ಕೆಲವೊಮ್ಮೆ ಕೋಪಿಸಿಕೊಳ್ಳುತ್ತೇನೆ, ನನಗೆ ಬೇಗನೇ ಕೋಪ ಬರುತ್ತದೆ. ಬೇಸರವಾಗುತ್ತದೆ, ರೇಗಾಡುತ್ತೇನೆ. ಇದೇ ಕಾರಣದಿಂದ ಬಹುಶಃ ನಾನು ಯಾರಿಗೂ ಹತ್ತಿರವಾಗಲಿಲ್ಲವೇನೋ” ಎಂದು ಹೇಳಿದ್ದಾರೆ. ಇದನ್ನು ಓದಿ..Kannada News: ದೈವ ಅನುಮತಿ ನೀಡಿದರು ಕೂಡ ಕಾಂತಾರ 2 ಸಿನೆಮಾ ಮಾಡುವುದಕ್ಕೆ ಮೀನಾ ಮೇಷ ಎಣಿಸುತ್ತಿರುವ ರಿಷಬ್, ಯಾಕೆ ಅಂತೇ ಗೊತ್ತೇ??

kannada news actress bhavana | Kannada News: ನಟನೆ ಅದ್ಭುತ, ಸೌಂದರ್ಯವಂತೂ ದೇವಲೋಕದ ಅಪ್ಸರೆಯಂತೆ, ಯಶಸ್ವಿ ನಟಿಯಾದರು ಭಾವನಾ ಮದುವೆಯಾಗಿಲ್ಲ ಯಾಕೆ ಗೊತ್ತೇ??
Kannada News: ನಟನೆ ಅದ್ಭುತ, ಸೌಂದರ್ಯವಂತೂ ದೇವಲೋಕದ ಅಪ್ಸರೆಯಂತೆ, ಯಶಸ್ವಿ ನಟಿಯಾದರು ಭಾವನಾ ಮದುವೆಯಾಗಿಲ್ಲ ಯಾಕೆ ಗೊತ್ತೇ?? 2

ಅವರು “ನಾನು ಎಲ್ಲದರಲ್ಲೂ ಪರ್ಫೆಕ್ಟ್ ಆಗಿರುವುದಕ್ಕೆ ನೋಡುತ್ತೇನೆ. ಅಂತಹ ವ್ಯಕ್ತಿಯನ್ನು ನಿರೀಕ್ಷಿಸುತ್ತೇನೆ. ಆದರೆ ಅಂತವರು ಸಿಗುವುದಿಲ್ಲವೇ? ಸಂಬಂಧಗಳೆಲ್ಲ ಕಷ್ಟ ಎನಿಸುತ್ತದೆ. ನಾನು ಹೀಗೆ ಇರುವಂತೆ ಖುಷಿಯಿಂದ ಸ್ವಾತಂತ್ರ್ಯವಾಗಿ ಇರುವುದೇ ಯಾಕೋ ಆರಾಮ ಎನಿಸುತ್ತದೆ” ಎಂದಿದ್ದಾರೆ. “ನನಗೆ ಹೆಚ್ಚು ಶಿಸ್ತಿನಿಂದ ಇರುವುದು, ನಿಯಮ ಪಾಲಿಸುವುದು ಇಷ್ಟವಾಗುತ್ತದೆ. ಸೋಮಾರಿಗಳನ್ನು ಕಂಡರೆ ಆಗುವುದಿಲ್ಲ. ಅಲ್ಲದೆ ಮಹಿಳೆ ಪುರುಷನಷ್ಟೇ ಸಮಾನರು ಎನ್ನುವುದನ್ನು ನಾನು ನಂಬುತ್ತೇನೆ. ಆದರೆ ಮೊದಲು ಹೀಗಿರಲಿಲ್ಲ. ಇದೇ ಕಾರಣಕ್ಕು ನನಗೆ ಮದುವೆ ಆಗದೆ ಇರಬಹುದು. ಆದರೆ ಮದುವೆಯಾಗದೆ ಇರಲು ಯಾವುದೇ ನಿರ್ದಿಷ್ಟ ಕಾರಣಗಳು ಇಲ್ಲ” ಎಂದು ಅವರು ಉತ್ತರಿಸಿದ್ದಾರೆ. ಅಂದಹಾಗೆ ನಟಿ ಭಾವನ ಇದೀಗ ಮತ್ತೆ ಚಿತ್ರರಂಗಕ್ಕೆ ಒನ್ಸಪಾನ್ ಅ ಟೈಮ್ ಇನ್ ಜಮಾಲಿಗುಡ್ಡಿ ಚಿತ್ರದ ಮೂಲಕ ಬರುತ್ತಿದ್ದಾರೆ. ಇದನ್ನು ಓದಿ.. Kannada Astrology: ಮನೆಯಲ್ಲಿ ಅಪ್ಪಿ ತಪ್ಪಿಯೂ ಕೂಡ ಕನ್ನಡಿಯನ್ನು ಈ ದಿಕ್ಕಿನಲ್ಲಿ ಇಡಬೇಡಿ, ಹಣ ನಿಲ್ಲುವುದಿಲ್ಲ, ಕಷ್ಟ ಅನುಭವಿಸ್ತೀರಾ. ಯಾವ ದಿಕ್ಕು ಗೊತ್ತೇ?

Comments are closed.