Kannada News:ನಡೆದೇ ಹೋಯ್ತು ಅಮೂಲ್ಯ ಮಕ್ಕಳ ನಾಮಕರಣ: ಅವಳಿ ಮಕ್ಕಳಿಗೆ ಸಿಂಪಲ್ ಹೆಸರು. ಏನು ಗೊತ್ತೇ??

ನಟಿ ಅಮೂಲ್ಯ ಅವರು ಅವಳಿ ಜವಳಿ ಮಕ್ಕಳಿಗೆ ಜನ್ಮ ಕೊಟ್ಟಿರುವುದು ಎಲ್ಲರಿಗೂ ಗೊತ್ತೇ ಇದೆ. ಕೆಲವು ತಿಂಗಳ ಹಿಂದೆ ಅಮೂಲ್ಯ ಅವರು ಅವಳಿ ಮಕ್ಕಳಿಗೆ ತಾಯಿಯಾಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯರಾಗಿರುವ ಅವರು ತಾವು ಗರ್ಭಿಣಿಯದಾಗಿನಿಂದ ಇಲ್ಲಿಯವರೆಗೂ ತಮ್ಮ ತಾಯ್ತನ ಹಾಗೂ ಮಕ್ಕಳ ಬಗ್ಗೆ ಸಾಕಷ್ಟು ಪೋಸ್ಟ್ ಹಾಕುತ್ತಲೇ ಇರುತ್ತಾರೆ. ಇದೀಗ ಅಮೂಲ್ಯ ಅವರು ತಮ್ಮ ಮಕ್ಕಳಿಗೆ ನಾಮಕರಣ ಮಾಡಿದ್ದಾರೆ. ಮಕ್ಕಳಿಗೆ ತುಂಬಾ ಅರ್ಥಗರ್ಭಿತ ಸುಂದರ ಹೆಸರುಗಳನ್ನು ಇರಿಸಲಾಗಿದ್ದು ನೆನ್ನೆ ಈ ಅವಳಿ ಮಕ್ಕಳಿಗೆ ನಾಮಕರಣ ಸಮಾರಂಭ ನಡೆಯಿತು. ಇಷ್ಟಕ್ಕೂ ನಟಿ ಅಮೂಲ್ಯ ಮತ್ತು ಜಗದೀಶ್ ದಂಪತಿ ತಮ್ಮ ಪ್ರೀತಿಯ ಅವಳಿ ಮಕ್ಕಳಿಗೆ ಇಟ್ಟ ಹೆಸರೇನು ಗೊತ್ತಾ? ಆ ಅವಳಿ ಮಕ್ಕಳಿಗೆ ಏನೆಂದು ಹೆಸರಿಡಲಾಗಿದೆ ಎನ್ನುವುದರ ಕುರಿತು ಇಲ್ಲಿದೆ ಮಾಹಿತಿ.

ನೆನ್ನೆ ಅಮೂಲ್ಯ ಜಗದೀಶ್ ದಂಪತಿಯ ಅವಳಿ ಮಕ್ಕಳ ನಾಮಕರಣ ಸಮಾರಂಭ ಅದ್ದೂರಿಯಾಗಿ ಜರುಗಿತು, ಈ ಕಾರ್ಯಕ್ರಮದಲ್ಲಿ ನಟಿ ಅಮೂಲ್ಯ, ಜಗದೀಶ್ ಅದ್ದೂರಿಯಾಗಿ ಕಾಣಿಸಿಕೊಂಡರು. ಕಾರ್ಯಕ್ರಮದಲ್ಲಿ ಅಮೂಲ್ಯ ಅವರ ಕುಟುಂಬ, ಜಗದೀಶ್ ಅವರ ಕುಟುಂಬ ಹಾಗೂ ಇತರೆ ಸ್ನೇಹಿತರು ಪಾಲ್ಗೊಂಡಿದ್ದರು. ಚಿತ್ರರಂಗದ ಯಾರನ್ನು ಕೂಡ ಈ ನಾಮಕರಣ ಸಮಾರಂಭಕ್ಕೆ ಆಹ್ವಾನಿಸಿದ್ದು ಕಂಡುಬಂದಿಲ್ಲ. ಅತ್ಯಂತ ಅರ್ಥಗರ್ಭಿತವಾಗಿ ಈ ಕಾರ್ಯಕ್ರಮವನ್ನು ಮಾಡಲಾಗಿತ್ತು. ನಾಮಕರಣ ಸಮಾರಂಭದಲ್ಲಿ ಎಲ್ಲರೂ ಖುಷಿಯಿಂದ ಸಂಭ್ರಮಿಸಿರುವ ವಿಡಿಯೋ ಇದೀಗ ಹರಿದಾಡುತ್ತಿದೆ. ಇನ್ನೂ ಮಕ್ಕಳಿಗೆ ಹಿರಿಯರು ಮತ್ತು ಜ್ಯೋತಿಷ್ಯವನ್ನು ಕೇಳಿ ಹೆಸರಿಸಲಾಗಿದ್ದು ತುಂಬಾ ಸೊಗಸಾಗಿದೆ.

amulya babies | Kannada News:ನಡೆದೇ ಹೋಯ್ತು ಅಮೂಲ್ಯ ಮಕ್ಕಳ ನಾಮಕರಣ: ಅವಳಿ ಮಕ್ಕಳಿಗೆ ಸಿಂಪಲ್ ಹೆಸರು. ಏನು ಗೊತ್ತೇ??
Kannada News:ನಡೆದೇ ಹೋಯ್ತು ಅಮೂಲ್ಯ ಮಕ್ಕಳ ನಾಮಕರಣ: ಅವಳಿ ಮಕ್ಕಳಿಗೆ ಸಿಂಪಲ್ ಹೆಸರು. ಏನು ಗೊತ್ತೇ?? 2

ನಾಮಕರಣಕ್ಕೂ ಮೊದಲು ಜ್ಯೋತಿಷಿಗಳನ್ನು ಭೇಟಿ ಮಾಡಿದ್ದ ಅಮೂಲ್ಯ ದಂಪತಿ ಯಾವ ಹೆಸರನ್ನು ಇರಿಸಬೇಕೆಂದು ಚರ್ಚಿಸಿತ್ತು. ಗ್ರಹಗತಿ ಮತ್ತು ಜ್ಯೋತಿಷ್ಯ ಶಾಸ್ತ್ರದ ಅನುಸಾರವೇ ತಮ್ಮ ಅವಳಿ ಮಕ್ಕಳಿಗೆ ನಾಮಕರಣ ಮಾಡಲಾಗಿದೆ. ಇದರ ಜೊತೆಜೊತೆಗೆ ಒಳ್ಳೆಯ ದಿನಾಂಕ ಸಮಯವನ್ನು ಕೂಡ ಕೇಳಲಾಗಿದ್ದು, ಅಮೂಲ್ಯ ಅವರು ತಮ್ಮ ಮನೆ ದೇವರಿಗೆ ಪೂಜೆ ಮಾಡಿ ಅಂತಿಮ ದಿನವನ್ನು ಘೋಷಿಸಿದರು. ಇನ್ನು ನಾಮಕರಣ ಸಮಾರಂಭ ನೆನ್ನೆ ಅದ್ದೂರಿಯಾಗಿ ನೆರವೇರಿದೆ. ಇಡೀ ಕುಟುಂಬ ಈ ಸಮಾರಂಭದಲ್ಲಿ ಪಾಲ್ಗೊಂಡು ಸಂಭ್ರಮಿಸಿದೆ. ಇನ್ನು ತಮ್ಮ ಮಕ್ಕಳಿಗೆ ನಟಿ ಅಮೂಲ್ಯ ಅವರು ಅಥರ್ವ ಮತ್ತು ಆಧವ್ ಎಂದು ಹೆಸರಿಸಿದ್ದಾರೆ. ಮದುವೆಯಾದ ನಂತರ ಅಮೂಲ್ಯ ಅವರು ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಇದೀಗ ಅವರು ತಾಯಿತನದ ಸಂಭ್ರಮದಲ್ಲಿದ್ದಾರೆ. ಇನ್ನು ಮುಂದೆಯಾದರೂ ಅವರು ಚಿತ್ರರಂಗಕ್ಕೆ ಮರಳುವರೇ ಕಾದು ನೋಡಬೇಕಿದೆ.

Comments are closed.