Kannada News: ಬಿರಿಯಾನಿ ತಿಂದು ಉಸಿರು ನಿಲ್ಲಿಸಿದ್ದ ಯುವತಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮೊಬೈಲ್ ನಲ್ಲಿ ಸಿಕ್ಕ ಷಾಕಿಂಗ್ ಮಾಹಿತಿ ಏನು ಗೊತ್ತೇ??

Kannada News: ಚಿಕನ್ ಬಿರಿಯಾನಿ ತಿಂದು ಫುಡ್ ಪಾಯ್ಸನ್ ಇಂದ ಯುವತಿ ಒಬ್ಬಳು ಮೃತಪಟ್ಟಿದ್ದ ಘಟನೆ ಇತ್ತೀಚಿಗೆ ಸುದ್ದಿಯಾಗಿತ್ತು. ಇದೀಗ ಈ ಘಟನೆ ಮತ್ತೊಂದು ತಿರುವು ಪಡೆದುಕೊಂಡಿದೆ. ಇಲ್ಲಿಯವರೆಗೆ ಬಿರಿಯಾನಿ ತಿಂದ ನಂತರ ಫುಡ್ ಪಾಯಿಸನಿಂಗ್ ಕಾರಣದಿಂದ ಚಿಕಿತ್ಸೆ ಫಲಕಾರಿಯಾಗದೆ ಅಂಜುಶ್ರೀ ಎಂಬ ಯುವತಿ ಮೃತಪಟ್ಟಿದ್ದಾಳೆ ಎಂದೇ ವರದಿಯಾಗಿತ್ತು. ಇದೇ ಸತ್ಯವೆಂದು ಎಲ್ಲರೂ ನಂಬಿಕೊಂಡಿದ್ದರು. ಆದರೆ ಮರಣೋತ್ತರ ಪರೀಕ್ಷೆಯ ನಂತರ ಬೇರೆಯದೇ ಸತ್ಯ ಬೆಳಕಿಗೆ ಬಂದಿದೆ. ಆಕೆಯ ಸಾವಿಗೆ ಕಾರಣ ಏನು ಎನ್ನುವುದು ಯುವತಿಯ ಮೊಬೈಲ್ ನಿಂದಲೇ ಸತ್ಯ ಬಹಿರಂಗಗೊಂಡಿದೆ. ಅಂದಹಾಗೆ ಆ ಯುವತಿಯ ಸಾವಿನ ಅಸಲಿ ಕಾರಣಗಳೇನು ಎಂದು ವೈದ್ಯರು ತಿಳಿಸಿದ್ದಾರೆ.

ಅಂಜುಶ್ರೀ ಪಾರ್ವತಿ ಎಂಬ 19 ವರ್ಷದ ಯುವತಿಯೊಬ್ಬಳು ಕಳೆದ ಡಿಸೆಂಬರ್ 31 ರಂದು ಮನೆಗೆ ಊಟವನ್ನು ಆನ್ಲೈನ್ ಆರ್ಡರ್ ಮಾಡಿದ್ದಳು. ಚಿಕನ್ ಬಿರಿಯಾನಿ ಸೇರಿದಂತೆ ವಿವಿಧ ನಾನ್ವೆಜ್ ರೆಸಿಪಿಗಳನ್ನು ಅವರು ನೇರವಾಗಿ ಮನೆಗೆ ತರಿಸಿಕೊಂಡಿದ್ದರು. ಮನೆಗೆ ಬಂದ ಚಿಕನ್ ಬಿರಿಯಾನಿಯನ್ನು ಯುವತಿ ಮತ್ತು ಆಕೆಯ ಕುಟುಂಬದವರು ಸೇವಿಸಿದರು. ಆನಂತರ ಯುವತಿಗೆ ಹೊಟ್ಟೆ ನೋವು ಶುರು ಆಗಿದ್ದು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ನಂತರ ಯುವತಿಯ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ವೈದ್ಯರು ದೃಢಪಡಿಸಿ ಆಕೆಯನ್ನು ಡಿಸ್ಚಾರ್ಜ್ ಮಾಡಿ ಕಳುಹಿಸಿದರು. ಚೆನ್ನಾಗಿಯೇ ಇದ್ದ ಅಂಜುಶ್ರೀ ನಂತರ ಮನೆಗೆ ಬಂದ ಮೇಲೆ ಪ್ರಜ್ಞೆ ಕಳೆದುಕೊಂಡು ಮೂರ್ಚೆ ಹೋಗುತ್ತಾರೆ. ಇದನ್ನು ಓದಿ..Kannada News: ವಿಕ್ರಾಂತ್ ರೋಣ ದಾಖಲೆಗಳನ್ನು ಕುಟ್ಟಿ ಪುಡಿ ಪುಡಿ ಮಾಡಿದ ಕ್ರಾಂತಿ: ದರ್ಶನ್ ಈ ಬಾರಿ ಮಿಂಚಿದ್ದು ಹೇಗೆ ಗೊತ್ತೇ?? ಆದರೆ ಏನಾಗಿದೆ ಗೊತ್ತೇ??

kannada news anjushree biriyani case | Kannada News: ಬಿರಿಯಾನಿ ತಿಂದು ಉಸಿರು ನಿಲ್ಲಿಸಿದ್ದ ಯುವತಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮೊಬೈಲ್ ನಲ್ಲಿ ಸಿಕ್ಕ ಷಾಕಿಂಗ್ ಮಾಹಿತಿ ಏನು ಗೊತ್ತೇ??
Kannada News: ಬಿರಿಯಾನಿ ತಿಂದು ಉಸಿರು ನಿಲ್ಲಿಸಿದ್ದ ಯುವತಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮೊಬೈಲ್ ನಲ್ಲಿ ಸಿಕ್ಕ ಷಾಕಿಂಗ್ ಮಾಹಿತಿ ಏನು ಗೊತ್ತೇ?? 2

ಆತಂಕಕ್ಕೆ ಒಳಗಾದ ಪೋಷಕರು ಆಕೆಯನ್ನು ಮತ್ತೆ ಆಸ್ಪತ್ರೆಗೆ ದಾಖಲಿಸುತ್ತಾರೆ. ಆದರೆ ಆನಂತರ ಚಿಕಿತ್ಸೆ ಫಲಕಾರಿಯಾಗಿದೆ ಆಕೆ ಸಾವನಪುತ್ತಾಳೆ. ಯುವತಿಯ ಸಾವಿನ ನಂತರ ಈ ಪ್ರಕರಣ ಇನ್ನಷ್ಟು ಗಂಭೀರವಾಗುತ್ತದೆ. ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು ಹುಡುಗಿ ಆರ್ಡರ್ ಮಾಡಿದ್ದ ಚಿಕನ್ ಬಿರಿಯಾನಿ ಬಂದಿದ್ದ ರೆಸ್ಟೋರೆಂಟ್ನ ಎಲ್ಲಾ ರೀತಿಯಲ್ಲಿಯೂ ತನಿಖೆ ನಡೆಸಲಾಗುತ್ತದೆ. ಅಲ್ಲದೆ ಯುವತಿಯನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದು ಸಾವಿನ ಸತ್ಯ ಬೇರೆಯೇ ಆಗಿದೆ ಎಂದು ಅನುಮಾನಿಸಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಯುವತಿಯ ದೇಹದಲ್ಲಿ ಇಲಿ ಪಾಷಾಣ ಪೇಸ್ಟ್ ರೂಪದಲ್ಲಿ ಕಂಡು ಬಂದಿದೆ.

ಅಲ್ಲದೆ ಯುವತಿಯು ತನ್ನ ಮೊಬೈಲ್ ನಲ್ಲಿ ಇಲಿ ವಿಷದ ಕುರಿತಾಗಿ ಸರ್ಚ್ ಕೂಡ ಮಾಡಿದ್ದಾಳೆ. ಇದಲ್ಲದೆ ಫೋನ್ನಲ್ಲಿ ಕೂಡ ಡೆತ್ ನೋಟ್ ರೀತಿಯ ಬರಹ ಕಂಡು ಬಂದಿದೆ. ಆದರೆ ವೈದ್ಯರು ಇದು ಆತ್ಮಹತ್ಯೆಯೋ ಅಥವಾ ಫುಡ್ ಪಾಯ್ಸನಿಂಗ್ ನಿಂದ ಉಂಟಾದ ಸಾವೇ ಎನ್ನುವುದನ್ನು ಇನ್ನೂ ಅಂತಿಮವಾಗಿ ದೃಢಪಡಿಸಿಲ್ಲ. ಅಂತಿಮ ವಿಧಿ ವಿಜ್ಞಾನದ ವರದಿಗಳು ದೃಢಪಟ್ಟ ನಂತರವೇ ಈ ಪ್ರಕರಣದ ಸತ್ಯತೆ ಏನು ಎನ್ನುವುದು ತಿಳಿಯುತ್ತದೆ. ಈ ಸಾವು ಇದೀಗ ಮತ್ತೊಂದು ತಿರುವು ಪಡೆದುಕೊಂಡಿರುವುದರಿಂದಾಗಿ ಯುವತಿಯ ಕುಟುಂಬದವರು ಹೆಚ್ಚಿನ ತನಿಖೆಗಾಗಿ ಪೊಲೀಸರಿಗೆ ಒತ್ತಾಯಿಪಡಿಸಿದ್ದಾರೆ. ಇದನ್ನು ಓದಿ..Kannada News: ದಿಡೀರ್ ಎಂದು ದುಬೈ ಹಾರಿದ ಮಾಲಾಶ್ರೀ ಮಗಳು: ಇಡೀ ಟ್ರಿಪ್ ಗೆ ಹಣ ನೀಡುತ್ತಿರುವುದು ಯಾರು ಗೊತ್ತೇ?? ಒಂದು ರೂಪಾಯಿ ಕೂಡ ಖರ್ಚಿಲ್ಲ.

Comments are closed.