Kannada Astrology: ಅಸ್ತಮವಾಗುತ್ತಿದ್ದಾನೆ ಶನಿ ದೇವ: ಈ ರಾಶಿಗಳ ಕಷ್ಟ ಕೊನೆಗೂ ಅಂತ್ಯವಾಗಿ ಧನಲಾಭ, ಅದೃಷ್ಟ ಹುಡುಕಿಕೊಂಡು ಬರುತ್ತದೆ. ಯಾರಿಗೆ ಗೊತ್ತೆ??
Kannada Astrology: ಜ್ಯೋತಿಷ್ಯದಲ್ಲಿ ಶನಿ ದೇವನಿಗೆ ಬಹಳ ವಿಶೇಷವಾದ ಸ್ಥಾನಮಾನವನ್ನು ನೀಡಲಾಗಿದೆ. ಅವರವರ ಕರ್ಮದ ಅನುಸಾರ ಶನಿದೇವ ಪ್ರತಿಫಲವನ್ನು ನೀಡುತ್ತಾರೆ ಎಂದು ನಂಬಲಾಗಿದೆ. ನಾವು ಮಾಡುವ ಕೆಲಸದ ಅನುಸಾರ ಅದರ ಫಲವನ್ನು ಅನುಭವಿಸಲೇಬೇಕಾಗುತ್ತದೆ. ಶನಿ ಅಸಮಾಧಾನಗೊಂಡರೆ ಅದರಿಂದ ನೆಮ್ಮದಿ ಹಾಳಾಗುತ್ತದೆ. ಶಾಂತಿ ಕದಡುತ್ತದೆ, ಜೀವನದಲ್ಲಿ ಅನೇಕ ನೋವು, ಸುಖ ದುಃಖಗಳನ್ನು ಅನುಭವಿಸಬೇಕಾಗುತ್ತದೆ. ಹೀಗಾಗಿ ಯಾವಾಗಲೂ ಶನಿದೇವನ ಕೃಪೆ ನಮ್ಮ ಮೇಲೆ ಇರಲಿ ಎಂದು ಎಲ್ಲರೂ ಬಯಸುತ್ತಾರೆ. ಇದೇ ಜನವರಿ 17ಕ್ಕೆ ಶನಿ ದೇವನು ಮಕರ ರಾಶಿಯನ್ನು ಬಿಟ್ಟು ಕುಂಭ ರಾಶಿಗೆ ಸಂಚರಿಸಲಿದ್ದಾನೆ. ಜನವರಿ 30 ರಿಂದ ಒಟ್ಟಾರೆಯಾಗಿ 28 ದಿನಗಳ ಅವಧಿಯವರೆಗೂ ಕೂಡ ಶನಿದೇವನು ಅಲ್ಲಿಯೇ ಹೊಂದಿಸಲಿದ್ದಾನೆ. ಇನ್ನು ಶನಿದೇವನ ಈ ರಾಶಿ ಸಂಕ್ರಮಣ ಕೆಳಗಿನ ಮೂರು ರಾಶಿಯ ಜನರಿಗೆ ಪ್ರಯೋಜನವಾಗಲಿದ್ದು, ಶನಿದೇವನ ಕೃಪೆಯಿಂದ ಅವರಿಗೆ ಅನೇಕ ಶುಭಫಲಗಳು ದೊರೆಯಲಿವೆ.
ವೃಷಭ ರಾಶಿ: ಶನಿದೇವನ ಈ ರಾಶಿ ಸಂಕ್ರಮಣ ವೃಷಭ ರಾಶಿಯವರಿಗೆ ಉತ್ತಮ ಪ್ರಯೋಜನಗಳನ್ನು ನೀಡಲಿದೆ. ಈ ರಾಶಿಯವರಿಗೆ ಒಳ್ಳೆಯ ಉದ್ಯೋಗದ ಅವಕಾಶಗಳು ಅರಸಿ ಬರುತ್ತವೆ. ಹೊಸ ಕೆಲಸಕ್ಕೆ ಸೇರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಲ್ಲದೆ ಉತ್ತಮ ಹುದ್ದೆ ದೊರೆಯಲಿದ್ದು ಆದಾಯದಲ್ಲಿಯೂ ಕೂಡ ಹೆಚ್ಚಳವಾಗಲಿದೆ. ಆರ್ಥಿಕವಾಗಿ ಸದೃಢರಾಗುವಿರಿ, ಜೊತೆಗೆ ಕುಟುಂಬದಲ್ಲಿ ನೆಮ್ಮದಿ ನೆಲೆಸಲಿದೆ. ವಿವಾಹ ಸಂಬಂಧ ಒಳ್ಳೆಯ ಸುದ್ದಿ ಕೇಳಿ ಬರಲಿದೆ. ಇದನ್ನು ಓದಿ..Kannada Astrology: ಸಂಕ್ರಾಂತಿ ದಿನದ ವರೆಗೂ ಕಾಯಿರಿ, ಸೂರ್ಯ ನಂತೆ ಪ್ರಜ್ವಲಿಸುವ ಸಮಯ ಬಂದೆ ಬಿಡ್ತು, ಈ ರಾಶಿಗಳಿಗೆ ಅದೆಷ್ಟೋ ವರ್ಷ ಆದ ನಂತರ ಅದೃಷ್ಟ.
ತುಲಾ ರಾಶಿ: ಶನಿಯ ರಾಶಿ ಪರಿವರ್ತನೆಯು ಈ ರಾಶಿಯವರಿಗೆ ಒಳ್ಳೆಯ ಶುಭಫಲಗಳನ್ನು ಹೊತ್ತು ತರಲಿದೆ. ಶನಿದೇವನ ಅನುಗ್ರಹದಿಂದಾಗಿ ಜೀವನದಲ್ಲಿ ಉತ್ತಮ ಪ್ರಗತಿ ಹೊಂದುವಿರಿ. ಉದ್ಯೋಗದ ವಿಚಾರದಲ್ಲಿ ಶುಭ ಸುದ್ದಿ ಕೇಳಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಸಾಕಷ್ಟು ಬಲ ಬರುತ್ತದೆ. ಆದಾಯದ ವಿಷಯದಲ್ಲಿ ಉತ್ತಮ ಮೇಲುಗೈ ಸಾಧಿಸುವಿರಿ. ನಿಮ್ಮ ಇಷ್ಟದ ವಿಷಯದ ಅಧ್ಯಯನಕ್ಕಾಗಿ ನೀವು ಉತ್ತಮ ಸಂಸ್ಥೆಯನ್ನು ಸೇರಲಿದ್ದೀರಿ.
ಮಕರ ರಾಶಿ: ಈ ರಾಶಿಯವರಿಗೆ ಕೂಡ ಶನಿ ಗ್ರಹದ ರಾಶಿ ಪರಿವರ್ತನೆಯು ಅತ್ಯುತ್ತಮ ಶುಭ ಲಾಭಗಳನ್ನು ನೀಡಲಿದೆ. ಜೀವನದಲ್ಲಿ ಉತ್ತಮ ಪ್ರಗತಿ ಸಾಧಿಸುವಿರಿ. ನಿಮಗೆ ಎಲ್ಲಿಂದಲೋ ಇದ್ದಕ್ಕಿದ್ದಂತೆ ಹಣಕಾಸಿನ ನೆರವು ದೊರೆಯಬಹುದು. ಕೆಲಸದಲ್ಲಿ ಲಾಭವಾಗುವುದರ ಜೊತೆಗೆ ವ್ಯಾಪಾರ, ಉದ್ಯೋಗಗಳಲ್ಲಿ ಉತ್ತಮ ಲಾಭ ಕಾಣುವಿರಿ. ಹೂಡಿಕೆ ಮಾಡುವವರಿಗೆ ಒಳ್ಳೆಯ ಸುದ್ದಿಗಳು ಕೇಳಿ ಬರುತ್ತವೆ. ಗ್ಲಾಮರ್, ಸಂವಹನ ಇತ್ಯಾದಿ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವವರಿಗೆ ಇನ್ನು ಮುಂದೆ ಒಳ್ಳೆಯ ಸುದ್ದಿಗಳೇ ಕೇಳಿ ಬರಲಿದ್ದು, ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವಿರಿ. ಇದನ್ನು ಓದಿ.. Kannada Astrology: ಕಷ್ಟದಲ್ಲಿ ಬಳಲುತ್ತಿದ್ದ ರಾಶಿಗಳಿಗೆ ಕೊನೆಗೂ ಅದೃಷ್ಟ: ಇನ್ನು ಈ ರಾಶಿಯವರನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಶುಕ್ರ ದೆಸೆ ಯಾರಿಗೆ ಗೊತ್ತೆ?
Comments are closed.