Kannada News: ವಿಕ್ರಾಂತ್ ರೋಣ ದಾಖಲೆಗಳನ್ನು ಕುಟ್ಟಿ ಪುಡಿ ಪುಡಿ ಮಾಡಿದ ಕ್ರಾಂತಿ: ದರ್ಶನ್ ಈ ಬಾರಿ ಮಿಂಚಿದ್ದು ಹೇಗೆ ಗೊತ್ತೇ?? ಆದರೆ ಏನಾಗಿದೆ ಗೊತ್ತೇ??

Kannada News: ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರ ಅಭಿನಯದ ಬಹು ನಿರೀಕ್ಷಿತ ಚಿತ್ರ ಕ್ರಾಂತಿ (Kranthi) ಇದೇ ಜನವರಿ 26ರಂದು ತೆರೆ ಕಾಣಲಿದೆ. ಟ್ರೈಲರ್ ರಿಲೀಸ್ ಆದ ನಂತರ ಅಭಿಮಾನಿಗಳ ಲೆಕ್ಕಾಚಾರ ಮತ್ತೊಂದು ರೀತಿಯಾಗಿ ಇದೆ ಎಂದೇ ಹೇಳಬಹುದು. ಅದೇನೆಂದರೆ ಇದೀಗ ನಟ ದರ್ಶನ್ ಅವರ ಕ್ರಾಂತಿ ಚಿತ್ರದ ಟ್ರೈಲರ್ ಅತಿ ಹೆಚ್ಚು ವೀಕ್ಷಣೆಗೊಂಡ ಟ್ರೈಲರ್ ಗಳ ಪಟ್ಟಿಯಲ್ಲಿ ಎಷ್ಟನೇ ಸ್ಥಾನ ಪಡೆದಿದೆ ಗೊತ್ತಾ? ಅತಿ ಹೆಚ್ಚು ಲೈಕ್ಸ್ ಪಡೆದ ಚಿತ್ರಗಳ ಪೈಕಿ ಕ್ರಾಂತಿಗೆ ಯಾವ ಸ್ಥಾನ ಎನ್ನುವುದು ಗೊತ್ತಾ? ಜೊತೆಗೆ ಈ ಹಿಂದಿನ ವಿಕ್ರಾಂತ್ ರೋಣ (Vikranth Rona) ಸೇರಿದಂತೆ ಅದೆಷ್ಟೋ ಸೂಪರ್ ಹಿಟ್ ಚಿತ್ರಗಳ ದಾಖಲೆಗಳನ್ನು ಕ್ರಾಂತಿ ಚಿತ್ರದ ಟ್ರೈಲರ್ ಹಿಂದಿಕ್ಕಿದೆ. ಹಾಗಿದ್ದರೆ ಕ್ರಾಂತಿ ಚಿತ್ರದ ಟ್ರೈಲರ್ ಮಾಡಿರುವ ದಾಖಲೆಗಳೇನು, ಟ್ರೈಲರ್ ಗಳ ದಾಖಲೆಗಳಲ್ಲಿ ಕ್ರಾಂತಿಗೆ ಎಷ್ಟನೇ ಸ್ಥಾನ ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.

kannada news kranti vikrant rona sudeep darshan 1 | Kannada News: ವಿಕ್ರಾಂತ್ ರೋಣ ದಾಖಲೆಗಳನ್ನು ಕುಟ್ಟಿ ಪುಡಿ ಪುಡಿ ಮಾಡಿದ ಕ್ರಾಂತಿ: ದರ್ಶನ್ ಈ ಬಾರಿ ಮಿಂಚಿದ್ದು ಹೇಗೆ ಗೊತ್ತೇ?? ಆದರೆ ಏನಾಗಿದೆ ಗೊತ್ತೇ??
Kannada News: ವಿಕ್ರಾಂತ್ ರೋಣ ದಾಖಲೆಗಳನ್ನು ಕುಟ್ಟಿ ಪುಡಿ ಪುಡಿ ಮಾಡಿದ ಕ್ರಾಂತಿ: ದರ್ಶನ್ ಈ ಬಾರಿ ಮಿಂಚಿದ್ದು ಹೇಗೆ ಗೊತ್ತೇ?? ಆದರೆ ಏನಾಗಿದೆ ಗೊತ್ತೇ?? 3

ಇಲ್ಲಿಯವರೆಗೂ ಕೂಡ ಕ್ರಾಂತಿ ಚಿತ್ರದ ಕಥೆ ಏನು ಎನ್ನುವುದು ಅಭಿಮಾನಿಗಳಿಗೆ ಸ್ಪಷ್ಟವಾಗಿ ತಿಳಿದಿರಲಿಲ್ಲ. ಇದೀಗ ಕಳೆದ ಶನಿವಾರ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದೆ. ಅಭಿಮಾನಿಗಳು ಈಗ ಕತೆಯ ಒನ್ ಲೈನ್ ಸ್ಟೋರಿ ಗೆಸ್ ಮಾಡಿದ್ದಾರೆ. ಸರ್ಕಾರಿ ಶಾಲೆಯನ್ನು ಕಬಳಿಸಲು ಪ್ರಯತ್ನಿಸುವ ಕಿಡಿಗೇಡಿಗಳ ವಿರುದ್ಧ ಹೋರಾಡುವ ನಾಯಕನ ಕಥೆಯನ್ನು ಕ್ರಾಂತಿ ಚಿತ್ರ ಒಳಗೊಂಡಿದೆ ಎಂದು ಅಂದಾಜಿಸಲಾಗಿದೆ. ದರ್ಶನ್ ಅವರು ಈ ಹಿಂದಿನ ಸಂದರ್ಶನದಲ್ಲಿಯೂ ಸಹ ಕ್ರಾಂತಿ ಚಿತ್ರದಲ್ಲಿ ಸರಕಾರಿ ಶಾಲೆಯ ಬಗ್ಗೆ ಕಳಕಳಿ ಹೊಂದಿರುವ ಕಥೆಯನ್ನು ತೋರಿಸಲಾಗಿದೆ ಎಂದೇ ಹೇಳಿದ್ದರು. ಇದನ್ನು ಓದಿ..Kannada News: ದಿಡೀರ್ ಎಂದು ದುಬೈ ಹಾರಿದ ಮಾಲಾಶ್ರೀ ಮಗಳು: ಇಡೀ ಟ್ರಿಪ್ ಗೆ ಹಣ ನೀಡುತ್ತಿರುವುದು ಯಾರು ಗೊತ್ತೇ?? ಒಂದು ರೂಪಾಯಿ ಕೂಡ ಖರ್ಚಿಲ್ಲ.

ಇನ್ನೂ ಚಿತ್ರದ ಟ್ರೈಲರ್ ಕಳೆದ ಶನಿವಾರ ಬಿಡುಗಡೆಗೊಂಡಿದ್ದು, ಭರ್ಜರಿ ದಾಖಲೆಯನ್ನು ಸೃಷ್ಟಿಸಿದೆ. ಇನ್ನೂ ಸಹ ಲಕ್ಷಾಂತರ ವೀಕ್ಷಣೆ ಪಡೆದುಕೊಳ್ಳುತ್ತಿರುವ ಟ್ರೈಲರ್ ಭರ್ಜರಿಯಾಗಿ ವೀಕ್ಷಣೆ ಪಡೆಯುತ್ತಲೇ ಇದೆ. ಬಿಡುಗಡೆಗೊಂಡ ಮೊದಲ 24 ಗಂಟೆಗಳಲ್ಲಿ ಕ್ರಾಂತಿ ಚಿತ್ರದ ಟ್ರೈಲರ್ ಬರೋಬ್ಬರಿ 78 ಲಕ್ಷ ವೀಕ್ಷಣೆ ಪಡೆದುಕೊಂಡಿದೆ. ಈ ಮೊದಲು ಕಿಚ್ಚ ಸುದೀಪ್ (Kiccha Sudeep) ಅವರ ವಿಕ್ರಾಂತ್ ರೋಣ ಚಿತ್ರದ ಟ್ರೈಲರ್ 24 ಗಂಟೆಗಳ ಅವಧಿಯಲ್ಲಿ 71 ಲಕ್ಷ ವಿಕ್ಷಣೆ ಪಡೆದುಕೊಂಡಿತ್ತು. ಈ ಮೂಲಕ ಕ್ರಾಂತಿ ಚಿತ್ರವು ವಿಕ್ರಂತ್ ರೋಣ ಚಿತ್ರದ ದಾಖಲೆಯನ್ನು ಮುರಿದು ಹಾಕಿದೆ. ಇನ್ನೂ ಕ್ರಾಂತಿ ಚಿತ್ರವು ಬಿಡುಗಡೆಗೊಂಡ ಮೊದಲ 24 ಗಂಟೆಗಳಲ್ಲಿ ಬರೋಬ್ಬರಿ 3,94,000 ಲೈಕ್ಸ್ ಪಡೆದುಕೊಂಡಿದೆ. ಇನ್ನು ವಿಕ್ರಾಂತ್ ರೋಣ ಟ್ರೈಲರ್ ಬಗ್ಗೆ ಹೇಳುವುದಾದರೆ ಇದು ಮೊದಲ 24 ಗಂಟೆಗಳಲ್ಲಿ 383000 ಲೈಕ್ ಪಡೆದುಕೊಂಡಿತ್ತು. ಈ ಮೂಲಕ ಕ್ರಾಂತಿ ಚಿತ್ರವು ಲೈಕ್ಸ್ ವಿಷಯದಲ್ಲಿಯೂ ಕೂಡ ವಿಕ್ರಾಂತ್ ರೋಣ ಚಿತ್ರವನ್ನು ಹಿಂದಿಕ್ಕಿದೆ.

ಇನ್ನೂ ಬಿಡುಗಡೆಗೊಂಡ ಮೊದಲ 24 ಗಂಟೆಗಳಲ್ಲಿ ಅತಿ ಹೆಚ್ಚು ಟ್ರೈಲರ್ ವೀಕ್ಷಣೆ ಪಡೆದುಕೊಂಡ ಟಾಪ್ 5 ಚಿತ್ರಗಳ ಪಟ್ಟಿಯ ಕಡೆಗೆ ನೋಡುವುದಾದರೆ, ಇದರಲ್ಲಿ ಮೊದಲ ಸ್ಥಾನವನ್ನು ಕೆಜಿಎಫ್ ಚಾಪ್ಟರ್ 2 (KGF2) ಆಕ್ರಮಿಸಿಕೊಂಡಿದೆ. ಈ ಚಿತ್ರದ ಟ್ರೈಲರ್ ಒಂದೇ ದಿನಕ್ಕೆ 18 ಮಿಲಿಯನ್ ವೀಕ್ಷಣೆ ಪಡೆದುಕೊಂಡಿತ್ತು. ಇನ್ನು ಇದರ ನಂತರ ಎರಡನೇ ಸ್ಥಾನದಲ್ಲಿ ದರ್ಶನ್ ಅವರದ್ದೇ ಯಜಮಾನ (Yajamana) ಚಿತ್ರವಿದ್ದು, ಈ ಚಿತ್ರ ಮೊದಲ 24 ಗಂಟೆಗಳಲ್ಲಿ 10 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡು ದಾಖಲೆ ನಿರ್ಮಿಸಿತ್ತು. ಇನ್ನು ಮೂರನೇ ಸ್ಥಾನದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar) ಅವರ ಗಂಧದಗುಡಿ (Gandhadagudi) ಚಿತ್ರದ ಟ್ರೈಲರ್ ಇದ್ದು ಈ ಟ್ರೈಲರ್ ಅನ್ನು ವೀಕ್ಷಕರು ಒಂದೇ ದಿನದಲ್ಲಿ 8.1 ಮಿಲಿಯನ್ ವೀಕ್ಷಕರು ವೀಕ್ಷಿಸಿದ್ದರು. ಇನ್ನು ನಾಲ್ಕನೇ ಸ್ಥಾನದಲ್ಲಿ ಮೊನ್ನೆ ಬಿಡುಗಡೆಗೊಂಡಿರುವ ಕ್ರಾಂತಿ ಚಿತ್ರದ ಟ್ರೈಲರ್ ಇದ್ದು ಚಿತ್ರದ ಟ್ರೈಲರ್ ಒಂದೇ ದಿನದಲ್ಲಿ 7.8 ಮಿಲಿಯನ್ಗೂ ಅಧಿಕ ವೀಕ್ಷಣೆ ಪಡೆದುಕೊಂಡಿತ್ತು. ಇದನ್ನು ಓದಿ..Kannada News: ರಿಷಬ್ ಶೆಟ್ಟಿ ಗೆ ಸ್ಪೂರ್ತಿಯಾದ ತಮಿಳು ನಟ ಯಾರು ಗೊತ್ತೇ? ರಜನಿಕಾಂತ್ ಅಲ್ಲ ಸ್ವಾಮಿ. ಮತ್ಯಾರು ಅಂತೇ ಗೊತ್ತೇ??

ಇನ್ನು ಐದನೇ ಸ್ಥಾನದಲ್ಲಿ ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ ಚಿತ್ರವಿದ್ದು ಇದು ಮೊದಲ 24 ತಾಸುಗಳಲ್ಲಿ 7.1 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಸದ್ಯ ಇದುವರೆಗಿನ ಕನ್ನಡ ಚಿತ್ರಗಳ ಟ್ರೈಲರ್ ದಾಖಲೆಗಳಲ್ಲಿ ಈ ಐದು ಚಿತ್ರಗಳು ಮೊದಲ ಐದು ಸ್ಥಾನವನ್ನು ಪಡೆದುಕೊಂಡಿದೆ. ಇದರಲ್ಲಿ ನಟ ದರ್ಶನ್ ಅಭಿನಯದ ಎರಡು ಚಿತ್ರಗಳಿವೆ ಎನ್ನುವುದು ವಿಶೇಷವಾದದ್ದು. ಇನ್ನು ಬಿಡುಗಡೆಗೊಂಡ ಮೊದಲ 24 ಗಂಟೆಗಳಲ್ಲಿ ಅತಿ ಹೆಚ್ಚು ಲೈಕ್ಸ್ ಪಡೆದ ಟ್ರೈಲರ್ ಗಳ ಪಟ್ಟಿಯಲ್ಲಿ ಯಶ್ ಅವರ ಕೆಜಿಎಫ್ ಚಾಪ್ಟರ್ 2 ಚಿತ್ರವಿದ್ದರೆ ಎರಡನೇ ಸ್ಥಾನದಲ್ಲಿ ಗಂಧದಗುಡಿ ಹಾಗೂ ಕ್ರಾಂತಿ ಚಿತ್ರಗಳಿವೆ. ಈ ಎರಡು ಚಿತ್ರಗಳು ಬಿಡುಗಡೆಗೊಂಡ ಒಂದು ದಿನದಲ್ಲೇ 3,94,000 ಲೈಕ್ಸ್ ಪಡೆಯುವ ಮೂಲಕ ಎರಡನೇ ಸ್ಥಾನ ಪಡೆದುಕೊಂಡಿದೆ.

kannada news kranti darshan 1 | Kannada News: ವಿಕ್ರಾಂತ್ ರೋಣ ದಾಖಲೆಗಳನ್ನು ಕುಟ್ಟಿ ಪುಡಿ ಪುಡಿ ಮಾಡಿದ ಕ್ರಾಂತಿ: ದರ್ಶನ್ ಈ ಬಾರಿ ಮಿಂಚಿದ್ದು ಹೇಗೆ ಗೊತ್ತೇ?? ಆದರೆ ಏನಾಗಿದೆ ಗೊತ್ತೇ??
Kannada News: ವಿಕ್ರಾಂತ್ ರೋಣ ದಾಖಲೆಗಳನ್ನು ಕುಟ್ಟಿ ಪುಡಿ ಪುಡಿ ಮಾಡಿದ ಕ್ರಾಂತಿ: ದರ್ಶನ್ ಈ ಬಾರಿ ಮಿಂಚಿದ್ದು ಹೇಗೆ ಗೊತ್ತೇ?? ಆದರೆ ಏನಾಗಿದೆ ಗೊತ್ತೇ?? 4

ಹೀಗೆ ಕ್ರಾಂತಿ ಚಿತ್ರವು ಟ್ರೈಲರ್ ವಿಷಯವಾಗಿಯೂ ದಾಖಲೆ ನಿರ್ಮಿಸಿದೆ. ಇದೇ ಜನವರಿ 26ರ ಗಣರಾಜ್ಯೋತ್ಸವದ ದಿನದಂದು ಕ್ರಾಂತಿ ಚಿತ್ರ ಭರ್ಜರಿಯಾಗಿ ದೊಡ್ಡ ಪರದೆಗಳಲ್ಲಿ ಮೂಡಿಬರಲಿದೆ. ಚಿತ್ರದ ಬಗ್ಗೆ ಅಭಿಮಾನಿಗಳ ನಿರೀಕ್ಷೆ ಸಾಕಷ್ಟು ದೊಡ್ಡ ಮಟ್ಟದಲ್ಲೇ ಇದ್ದು, ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಒಟ್ಟಾರೆಯಾಗಿ ಕ್ರಾಂತಿ ಚಿತ್ರದ ಟ್ರೈಲರ್ ಬಿಡುಗಡೆಗೊಂಡ ಮೊದಲ 24 ಗಂಟೆಗಳಲ್ಲಿ ಅತಿ ಹೆಚ್ಚು ವೀಕ್ಷಣೆಯಾದ ಚಿತ್ರಗಳ ಪೈಕಿ 4 ನೇ ಸ್ಥಾನ ಪಡೆದುಕೊಂಡಿದೆ. ಇನ್ನು ಅತಿ ಹೆಚ್ಚು ಲೈಕ್ಸ್ ಪಡೆದ ಚಿತ್ರಗಳ ಪೈಕಿ ಎರಡನೇ ಸ್ಥಾನ ಪಡೆದುಕೊಂಡಿದೆ. ಇದನ್ನು ಓದಿ..Kannada News: ಇನ್ನೇನು ಎಲ್ಲವೂ ಸರಿ ಹೋಗಿದೆ ಎಂದು ಕೊಂಡಿದ್ದಾಗ, ದೇಶ ಭಕ್ತರನ್ನು ಕೆಣಕಿದ ರಚಿತಾ ರಾಮ್: ಪಾಕ್ ಗೆ ಹೋಗಿ ರಚಿತಾ ಎಂದ ನೆಟ್ಟಿಗರು. ಕ್ರಾಂತಿ ಕಥೆ ಮುಗಿಯಿತೇ??

Comments are closed.