Kannada News: ಕ್ರಾಂತಿ ಸಿನಿಮಾ ನೋಡಿ ದಿಡೀರ್ ಎಂದು ದರ್ಶನ್ ಮನೆಗೆ ಹೋದ ರಕ್ಷಿತಾ. ಹೇಳಿದ್ದೇನು ಗೊತ್ತೇ?? ಡಿ ಬಾಸ್ ಕೂಡ ಶಾಕ್ ಆಗಿದ್ದು ಯಾಕೆ ಗೊತ್ತೇ?
Kannada News: ನಟ ದರ್ಶನ್ (Darshan) ಅವರ ಕ್ರಾಂತಿ (Kranthi) ಸಿನಿಮಾದ ಟ್ರೈಲರ್ ಇತ್ತೀಚಿಗಷ್ಟೇ ಬಿಡುಗಡೆಗೊಂಡಿದೆ. ಬಿಡುಗಡೆಯಾಗಿ ನಾಲ್ಕೈದು ದಿನಗಳು ಕಳೆದರು ಇನ್ನೂ ಸಹ ಟ್ರೈಲರ್ ಬಗ್ಗೆ ಅಪಾರ ಮೆಚ್ಚುಗೆಗಳು ಕೇಳಿ ಬರುತ್ತಿವೆ. ಸುಮಾರು ಒಂದುವರೆ ಕೋಟಿಗೂ ಅಧಿಕ ವೀಕ್ಷಣೆ ಪಡೆದುಕೊಂಡಿರುವ ಟ್ರೈಲರ್ ಲಕ್ಷಾಂತರ ಲೈಕ್ಸ್ ಗಿಟ್ಟಿಸಿಕೊಂಡಿದೆ. ವರ್ಷಗಳ ನಂತರ ತಮ್ಮ ಮೆಚ್ಚಿನ ನಟನ ಸಿನಿಮಾವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದಾರೆ. ಇದೇ ವೇಳೆ ಟ್ರೈಲರ್ ವೀಕ್ಷಿಸಿರುವ ನಟಿ ರಕ್ಷಿತಾ (Rakshitha) ಅವರು ದರ್ಶನ್ ಅವರ ಟ್ರೈಲರ್ ಗೆ ಫುಲ್ ಫಿದಾ ಆಗಿದ್ದಾರೆ. ಟ್ರೈಲರ್ ಮೆಚ್ಚಿಕೊಂಡು ರಕ್ಷಿತಾ ಅವರು ಹೇಳಿರುವ ಮಾತುಗಳು ಸದ್ದು ಮಾಡುತ್ತಿವೆ. ಟ್ರೈಲರ್ ನೋಡಿದ್ದೇ ತಡ ದರ್ಶನ್ ಭೇಟಿ ಮಾಡಿ ರಕ್ಷಿತಾ ಅವರು ಏನು ಹೇಳಿದ್ದಾರೆ ಗೊತ್ತಾ?
ಟ್ರೈಲರ್ ಬಿಡುಗಡೆಗೊಂಡ ಬಳಿಕ ಇಂದಿಗೂ ಕೂಡ ಮೆಚ್ಚುಗೆಗಳನ್ನು ಪಡೆದುಕೊಳ್ಳುತ್ತಿದೆ. ಕ್ರಾಂತಿ ಚಿತ್ರ ಸಾಕಷ್ಟು ಕಾರಣಗಳಿಗೆ ಸುದ್ದಿ ಮಾಡುತ್ತಿದೆ ಎಂದೇ ಹೇಳಬಹುದು. ಬಹುಶಃ ಈ ಚಿತ್ರಕ್ಕೆ ಸಿಕ್ಕಷ್ಟು ಬೇರೆಯದೆ ರೀತಿಯ ಅಬ್ಬರದ ಪ್ರಚಾರ ಮತ್ತೊಂದು ಚಿತ್ರಕ್ಕೆ ಹಿಂದೆ ಸಿಕ್ಕಿಲ್ಲ ಎಂದರೆ ತಪ್ಪಾಗುವುದಿಲ್ಲ. ಹಾಗೂ ನಟ ದರ್ಶನ್ ಬೇರೆ ರೀತಿಯ ಕಥೆಯನ್ನು ಹೊಂದಿರುವ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸರ್ಕಾರಿ ಶಾಲೆಯ ಭೂಮಿಯನ್ನು ಕಬಳಿಸಲು ಹೊಂಚು ಹಾಕುವ ಕಿಡಿಗೇಡಿಗಳ ವಿರುದ್ಧ ಹೋರಾಡುವ ನಾಯಕನಾಗಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಚಿತ್ರದ ಹಾಡುಗಳು ಸಹ ಸದ್ದು ಮಾಡುತ್ತಿವೆ. ಇದೀಗ ಟ್ರೈಲರ್ ಕೂಡ ಜನರ ಮೆಚ್ಚುಗೆ ಪಾತ್ರವಾಗಿದೆ. ಇದನ್ನು ಓದಿ..Kannada News: ವಿಕ್ರಾಂತ್ ರೋಣ ದಾಖಲೆಗಳನ್ನು ಕುಟ್ಟಿ ಪುಡಿ ಪುಡಿ ಮಾಡಿದ ಕ್ರಾಂತಿ: ದರ್ಶನ್ ಈ ಬಾರಿ ಮಿಂಚಿದ್ದು ಹೇಗೆ ಗೊತ್ತೇ?? ಆದರೆ ಏನಾಗಿದೆ ಗೊತ್ತೇ??
ಟ್ರೈಲರ್ ಬಿಡುಗಡೆಗೊಂಡ ನಂತರ ಕ್ರಾಂತಿ ಚಿತ್ರತಂಡ ಪಾರ್ಟಿ ಒಂದನ್ನು ಆಯೋಜಿಸಿತ್ತು. ಈ ಪಾರ್ಟಿಗೆ ನಟಿ ರಕ್ಷಿತಾ ಅವರಿಗೂ ಆಹ್ವಾನ ನೀಡಲಾಗಿತ್ತು, ಅದರಂತೆ ದರ್ಶನ್ ಅವರ ಆನ್ ಸ್ಕ್ರೀನ್ ಜೋಡಿ ಹಾಗೂ ಸ್ನೇಹಿತೆಯಾಗಿರುವ ರಕ್ಷಿತಾ ಅವರು ಈ ಪಾರ್ಟಿಯಲ್ಲಿ ಪಾಲ್ಗೊಂಡಿದ್ದಾರೆ. ಸ್ವತಃ ರಕ್ಷಿತಾ ಅವರು ತಮ್ಮ instagram ಖಾತೆಯಲ್ಲಿ ಸರಣಿಯಾಗಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇಷ್ಟು ಮಾತ್ರವಲ್ಲ ಕ್ರಾಂತಿ ಚಿತ್ರವನ್ನು ನೋಡಿ ಅವರು ಫಿದಾ ಆಗಿದ್ದಾರಂತೆ. ಪಾರ್ಟಿ ವೇಳೆ ಟ್ರೈಲರ್ ಬಗ್ಗೆ ದರ್ಶನ್ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ರೈಲರ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ, ನನಗೆ ತುಂಬಾ ಇಷ್ಟವಾಯಿತು. ತುಂಬಾ ಚೆನ್ನಾಗಿ ಆಕ್ಟ್ ಮಾಡಿದ್ದೀಯ. ಈ ಸಿನಿಮಾ ಖಂಡಿತ ಕ್ರಾಂತಿ ಮಾಡಿಯೇ ಮಾಡುತ್ತದೆ. ಸರ್ಕಾರಿ ಶಾಲೆಯ ಬಗ್ಗೆ ಕಾಳಜಿ ಹೊಂದಿರುವ ಕಥೆ ಇರುವ ಚಿತ್ರ ಕ್ರಾಂತಿಯನ್ನೇ ಮಾಡಲಿ ಎಂದು ನಟಿ ರಕ್ಷಿತಾ ಹೇಳಿದ್ದಾರೆ. ಇದನ್ನು ಓದಿ.. Kannada News: ಬಿರಿಯಾನಿ ತಿಂದು ಉಸಿರು ನಿಲ್ಲಿಸಿದ್ದ ಯುವತಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮೊಬೈಲ್ ನಲ್ಲಿ ಸಿಕ್ಕ ಷಾಕಿಂಗ್ ಮಾಹಿತಿ ಏನು ಗೊತ್ತೇ??
Comments are closed.