Kannada News: ಈ ಕ್ರಿಕೆಟ್ ಆಟಗಾರನ ಮೇಲೆ ಪ್ರೀತಿ ಆಗಿಬಿಟ್ಟಿದೆ: ಅನುಷ್ಕಾ ಶೆಟ್ಟಿ ರವರ ಮನ ಕದ್ದ ಆ ಆಟಗಾರ ಯಾರು ಗೊತ್ತೇ?? ಫುಲ್ ಲವ್ ಅಂತೇ.
Kannada News: ಕರಾವಳಿ ಬ್ಯೂಟಿ ಅನುಷ್ಕಾ ಶೆಟ್ಟಿ (Anushka Shetty) ಸದ್ಯ ತಮಿಳು, ತೆಲುಗಿನ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಬಾಹುಬಲಿ ಚಿತ್ರದ ಅವರ ದೇವಸೇನ ಪಾತ್ರ ಅವರ ವೃತ್ತಿ ಜೀವನದ ಒಂದು ಮೈಲುಗಲ್ಲು ಎಂದೆ ಹೇಳಬಹುದು. ರಾಜಮೌಳಿ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರ ಅದೆಷ್ಟು ಸಿನಿಮಾ ದಾಖಲೆಗಳನ್ನು ಮುರಿದು ಹಾಕಿತ್ತು. ಅಲ್ಲದೆ ಈ ಚಿತ್ರದ ಅನುಷ್ಕಾ ಶೆಟ್ಟಿ ಅವರ ಪಾತ್ರಕ್ಕೂ ಅಪಾರ ಜನಪ್ರಿಯತೆ ಸಿಕ್ಕಿತ್ತು. ಇನ್ನು ಅನುಷ್ಕಾ ಶೆಟ್ಟಿ ಪ್ರಭಾಸ್ ಅವರ ಜೊತೆಗೆ ಮದುವೆಯಾಗಲಿದ್ದಾರೆ ಎನ್ನುವ ರೂಮರ್ಸ್ಗಳು ಹರಡುತ್ತಲೆ ಇರುತ್ತವೆ. ಈ ನಡುವೆ ಅನುಷ್ಕಾ ತಮ್ಮ ಕ್ರಶ್ ಕುರಿತಾಗಿ ಮಾತನಾಡಿದ್ದಾರೆ. ತಮಗೆ ಈ ಸ್ಟಾರ್ ಕ್ರಿಕೆಟರ್ ಮೇಲೆ ಪ್ರೀತಿಯಾಗಿದೆ ಎಂದು ಬಹಿರಂಗಪಡಿಸಿದ್ದಾರೆ.
ನಟಿ ಅನುಷ್ಕಾ ಅವರಿಗೆ ಸಂದರ್ಶನ ಒಂದರಲ್ಲಿ ಅಭಿಮಾನಿ ಒಬ್ಬರು ನಿಮ್ಮ ಕ್ರಶ್ ಬಗ್ಗೆ ಹೇಳಿ ಎಂದು ಕೇಳಿದ್ದಾರೆ. ಈ ಹಳೆಯ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅಭಿಮಾನಿ ಕೇಳಿದ ಪ್ರಶ್ನೆಗೆ ಅನುಷ್ಕಾ ಬಹಳ ಪ್ರೀತಿಯಿಂದಲೇ ಉತ್ತರಿಸಿದ್ದಾರೆ. ನಾನು ಇಷ್ಟಪಡುತ್ತಿದ್ದ ವ್ಯಕ್ತಿ ಒಂದು ಕಾಲದಲ್ಲಿ ಭಾರತೀಯ ಕ್ರಿಕೆಟ್ ನಲ್ಲಿ ಸ್ಟಾರ್ ಕ್ರಿಕೆಟರ್ ಆಗಿದ್ದರು. ಈಗಲೂ ಅವರು ಸ್ಟಾರ್ ಆಗಿ ಉಳಿದುಕೊಂಡಿದ್ದಾರೆ ಎಂದು ಅವರು ಉತ್ತರಿಸಿದ್ದಾರೆ. ಅಂದ ಹಾಗೆ ತಮ್ಮ ಕ್ರಷ್ ಎಂದು ಅನುಷ್ಕಾ ಹೇಳಿಕೊಂಡಿರುವುದು ಬೇರಾರು ಅಲ್ಲ, ಸದ್ಯ ಭಾರತೀಯ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ (Rahul Dravid). ರಾಹುಲ್ ನನ್ನ ಅಚ್ಚುಮೆಚ್ಚಿನ ಕ್ರಿಕೆಟರ್ ಆಗಿದ್ದರು. ನಾನು ಅವರ ಅಭಿಮಾನಿಯಾಗಿದ್ದೆ. ಅವರ ಮೇಲೆ ಒಂದು ರೀತಿ ನನಗೆ ಪ್ರೀತಿ ಇತ್ತು ಎಂದು ಅವರು ಹೇಳಿದ್ದಾರೆ. ಇದನ್ನು ಓದಿ..Kannada News: ಕಾಂತಾರ ಯಶಸ್ಸು ಪಡೆದ ಬೆನ್ನಲ್ಲೇ, ಪ್ರೀತಿಯನ್ನು ತೆರೆದಿಟ್ಟ ನಟಿ ಸಪ್ತಮಿ ಗೌಡ: ಮೊದಲ ಬಾರಿಗೆ ಬಹಿರಂಗವಾಗಿ ಹೇಳಿದ್ದೇನು ಗೊತ್ತೇ? ಪ್ರೊಪೋಸ್ ಮಾಡಿದ್ದು ಯಾರಿಗೆ ಗೊತ್ತೆ?
ನಾನು ಅವರ ಕ್ರಿಕೆಟ್ಗೆ ಮಾರು ಹೋಗಿದ್ದೆ, ಅವರ ಅದ್ಭುತ ಬ್ಯಾಟಿಂಗ್ ವಿಕೆಟ್ ಕೀಪಿಂಗ್ ಮಾಡುವ ರೀತಿ ಎಲ್ಲದಕ್ಕೂ ನಾನು ಮರಳಾಗಿದ್ದೆ. ಅವರು ನನಗೆ ಕ್ರಶ್ ಮಾತ್ರವಲ್ಲ ಒಂದು ಹಂತದವರೆಗೆ ನನಗೆ ಅವರು ಲವರ್ ಆಗಿಬಿಟ್ಟಿದ್ದರು. ನನಗೆ ಅವರ ಮೇಲೆ ಅಷ್ಟು ಪ್ರೀತಿ ಇತ್ತು ಎಂದು ಅಭಿಮಾನಿ ಒಬ್ಬರು ಕೇಳಿದ ಪ್ರಶ್ನೆಗೆ ಅನುಷ್ಕಾ ಉತ್ತರಿಸಿದ್ದಾರೆ. ಸದ್ಯ ಈ ವಿಡಿಯೋ ಸಾಕಷ್ಟು ಸದ್ದು ಮಾಡುತ್ತಿದೆ. ಇದರ ನಡುವೆ ಅನುಷ್ಕಾ ಪ್ರಭಾಸ್ ಜೊತೆಗೆ ಮದುವೆಯಾಗಲಿದ್ದಾರೆ ಎನ್ನುವ ವದಂತಿಗಳು ಕೂಡ ಕೇಳಿ ಬರುತ್ತಿದ್ದವು. ಇದರ ಕುರಿತು ಮಾತನಾಡಿರುವ ಅವರು ಇದೆಲ್ಲವೂ ಸುಳ್ಳು ಸುದ್ದಿ, ನಾವಿಬ್ಬರು ಒಳ್ಳೆಯ ಸ್ನೇಹಿತರು ಅಷ್ಟೇ. ವದಂತಿಗಳಿಗೆ ಕಿವಿ ಕೊಡಬೇಡಿ ಎಂದು ಹೇಳಿದ್ದಾರೆ. ಇದನ್ನು ಓದಿ..Kannada News: ಬಿಕಿನಿ ವಿವಾದವನ್ನು ಮತ್ತೊಂದು ರೀತಿಯಲ್ಲಿ ಬಳಸಿಕೊಳ್ಳಲು ಮುಂದಾದ ದೀಪಿಕಾ ಪಡುಕೋಣೆ; ತೆಗೆದುಕೊಂಡ ಗಟ್ಟಿ ನಿರ್ಧಾರ ಏನು ಗೊತ್ತೇ?
Comments are closed.