Kannada News: ಕೊನೆಗೂ 500 ರೂಪಾಯಿ ನೋಟಿನ ಬಗ್ಗೆ ಮೌನ ಮುರಿತದ RBI – ದೇಶದ ಜನತೆಗೆ ಗಟ್ಟಿಯಾಗಿ ಹೇಳಿದ್ದೇನು ಗೊತ್ತೇ?

RBI gives clarity about 500 rupees rumor's- Explained in Kannada news

Kannada News; ನಮಸ್ಕಾರ ಸ್ನೇಹಿತರೇ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಮ್ಮ ಭಾರತ ದೇಶದ ಹಣಕಾಸು ವ್ಯವಸ್ಥೆಯನ್ನು ನಿಯಂತ್ರಣ ಮಾಡುವಂತಹ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ರೂ.2000ಗಳ ಪಿಂಕ್ ನೋಟ್ ಅನ್ನು ಸೆಪ್ಟೆಂಬರ್ 30ರ ಒಳಗೆ ಪ್ರತಿಯೊಬ್ಬರೂ ಕೂಡ ಹತ್ತಿರದ ಬ್ಯಾಂಕುಗಳಿಗೆ ವಾಪಸು ನೀಡಬೇಕು ಎನ್ನುವಂತಹ ನಿಯಮವನ್ನು ಜಾರಿಗೆ ತಂದು 2000 ನೋಟುಗಳ ಚಲಾವಣೆಗೆ ಭಾರತದ ಮಾರುಕಟ್ಟೆಯಲ್ಲಿ ಶುಭಾಂತ್ಯವನ್ನು ಹಾಡಿತ್ತು. ಆದರೆ ಈಗ ಅದಾದ ನಂತರ ಅತ್ಯಂತ ದೊಡ್ಡ ಮುಖಬೆಲೆಯನ್ನು ಹೊಂದಿರುವಂತಹ 500 ರೂಪಾಯಿ ನೋಟುಗಳ ಬಗ್ಗೆ ಕೂಡ ಮಾರುಕಟ್ಟೆಯಲ್ಲಿ ಅದರದ್ದೇ ಆದಂತಹ ಸುದ್ದಿಗಳು ಓಡಾಡುತ್ತಿವೆ.

RBI gives clarity about 500 rupees rumor’s- Explained in Kannada news

500 ರೂಪಾಯಿ ನೋಟುಗಳ ಬಗ್ಗೆ ಮಾತನಾಡುತ್ತಿದ್ದೇವೆ ಎಂದ ಮಾತ್ರಕ್ಕೆ ಅವುಗಳನ್ನು ಕೂಡ ಬ್ಯಾನ್ ಮಾಡುತ್ತಿದ್ದಾರೆ ಎಂದಲ್ಲ ಬದಲಾಗಿ ಅವುಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ನೋಟುಗಳ(Fake Currency Notes) ಬಗ್ಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿ ಕೇಳಿ ಬರುತ್ತಿವೆ. ತರಹೆವಾರಿ ಸುದ್ದಿಗಳು ನಕಲಿ ನೋಟುಗಳ ಬಗ್ಗೆ ಕೇಳಿ ಬರುತ್ತಿದ್ದು 500 ರೂಪಾಯಿ ನೋಟುಗಳನ್ನು ಅಸಲಿಯೋ ನಕಲಿಯೋ ಎನ್ನುವುದನ್ನು ಹೇಗೆ ಕಂಡುಹಿಡಿಬಹುದು ಎನ್ನುವುದರ ಬಗ್ಗೆ ಕೂಡ ತಿಳಿದುಕೊಳ್ಳಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ. ಬನ್ನಿ ಅದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

ಒಂದು ಹೊತ್ತಿನ ಊಟದ ಖರ್ಚಿನಲ್ಲಿ 10 ಲಕ್ಷ ರೂಪಾಯಿ ವಿಮೆ. ನಿಮ್ಮ ಕುಟುಂಬಕ್ಕೆ ಶ್ರೀ ರಕ್ಷೆ. ಪಡೆಯುವ ಸಂಪೂರ್ಣ ವಿವರ. Insurance Policy
ಸುತ್ತಾಡಿ ಸುತ್ತಾಡಿ ನೀವೇ ಸಾಕು ಅಂತೀರಾ, ಆದರೆ ಪೆಟ್ರೋಲ್ ಮುಗಿಯಲ್ಲ. ಬೈಕ್ ನಂತೆ ಮೈಲೇಜ್ ಇರುವ ಕಾರು ಬಿಡುಗಡೆ. Maruti Suzuki Alto K10
ಕರ್ನಾಟಕದ ಜನತೆಗೆ ಬಿಗ್ ಶಾಕ್- ದಿಡೀರ್ ಎಂದು ರೇಷನ್ ಕಾರ್ಡ್ ನಲ್ಲಿ ಹೆಸರು ಡಿಲೀಟ್. ಕಾರಣ ಏನಂತೆ ಗೊತ್ತೇ? Ration card latest Updates

ಹಾಗಿದ್ರೆ ಬನ್ನಿ ಅಸಲಿ 500 ರೂಪಾಯಿ ನೋಟುಗಳನ್ನು ಕಂಡುಹಿಡಿಯುವುದನ್ನ ತಿಳಿಯೋಣ. ಮೊದಲಿಗೆ ಮುಖಬೆಲೆಯಲ್ಲಿ 500 ಎಂಬುದಾಗಿ ಬರೆದಿರಲಾಗುತ್ತದೆ. ದೇವ ನಾಗರಿ ಲಿಪಿಯಲ್ಲಿ 500 ಎಂಬುದಾಗಿ ಬರೆದಿರುವುದನ್ನು ಕೂಡ ನೀವು ಈ ನೋಟುಗಳಲ್ಲಿ ಕಾಣಬಹುದಾಗಿದೆ. ಮಧ್ಯಭಾಗದಲ್ಲಿ ಮಹಾತ್ಮ ಗಾಂಧಿಯವರ(Mahathma Gandhi) ಫೋಟೋ ಕೂಡ ನೀವು ಕಾಣಬಹುದಾಗಿದೆ. ಇಂಡಿಯಾ ಹಾಗೂ ಭಾರತ್ ಎನ್ನುವುದಾಗಿ ಚಿಕ್ಕ ಅಕ್ಷರದಲ್ಲಿ ಬರೆದಿರುವುದನ್ನು ಕೂಡ ನೀವು ಇಲ್ಲಿ ಕಾಣಬಹುದಾಗಿದೆ. ಇನ್ನು ಇದರಲ್ಲಿ ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ ತಿರುಗುವಂತಹ RBI ನ ಅಧಿಕೃತ ದಾರದ ಪಟ್ಟಿಯನ್ನು ಕೂಡ ನೀವಿಲ್ಲಿ ಕಾಣಬಹುದಾಗಿದೆ.

RBI Governor ರವರ ಸಹಿ ಹಾಗೂ ಲಾಂಛನವನ್ನು ಕೂಡ ನೀವು ಕಾಣಬಹುದಾಗಿದೆ. ಎಲೆಕ್ಟ್ರೋ ಟೈಪ್ 500 ಎನ್ನುವಂತಹ ಬರವಣಿಗೆಯನ್ನು ಕೂಡ ನೀವು ಕಾಣಬಹುದಾಗಿದೆ. ಬಲ ಭಾಗದಲ್ಲಿ ಅಶೋಕ ಸ್ತಂಭದ ಚಿನ್ಹೆ ಕೂಡ ಇರುತ್ತದೆ. ಮೇಲ್ಭಾಗದಲ್ಲಿ ಎಡದಲ್ಲಿ ಹಾಗೂ ಕೆಳಭಾಗದಲ್ಲಿ ಬಲಗಡೆ ಕೆಲವೊಂದು ಪ್ಯಾನಲ್ ನಂಬರ್ ಗಳನ್ನು ಕೂಡ ಅಳವಡಿಸಲಾಗಿರುತ್ತದೆ. ಈ ಮೇಲೆ ಹೇಳಿರುವಂತಹ ಪ್ರತಿಯೊಂದು ಗುಣಲಕ್ಷಣಗಳನ್ನು ಕೂಡ ನೀವು ಕೇವಲ ಅಸಲಿ ಐನೂರು ರೂಪಾಯಿ ನೋಟುಗಳಲ್ಲಿ ಮಾತ್ರ ಕಾಣಬಹುದಾಗಿದೆ. ಈ ಗುಣ ಲಕ್ಷಣಗಳನ್ನು ಬಳಸಿಕೊಂಡು ನೀವು ಅಸಲಿ 500 ರೂಪಾಯಿ ನೋಟುಗಳನ್ನು ಗುರುತಿಸಬಹುದಾಗಿದೆ.

ದೃಷ್ಟಿ ಹೀನರು(Bilnd People) ಯಾವ ರೀತಿಯಲ್ಲಿ ಗುರುತಿಸಬಹುದು ಎಂಬುದನ್ನು ಕೂಡ ತಿಳಿಯೋಣ ಬನ್ನಿ. ಮಹಾತ್ಮ ಗಾಂಧಿ ಚಿತ್ರ ಹಾಗೂ ಅಶೋಕ ಸ್ತಂಭದ ಲಾಂಛನ. ದೇವನಾಗರಿಯಲ್ಲಿ ಬರೆದಿರುವಂತಹ 500 ರೂಪಾಯಿ ಸಂಕೇತ. ಎಡ ಭಾಗದಲ್ಲಿ 500 ರೂಪಾಯಿ ನೋಟನ್ನು ಯಾವ ವರ್ಷ ಮುದ್ರಿಸಲಾಗಿದೆ ಎನ್ನುವಂತಹ ಸುಳಿವು. ಬಲ ಹಾಗೂ ಎಡ ಎರಡು ಕಡೆಗಳಲ್ಲಿ ಕೂಡ ಕೊನಿಯ ಬೀಡ್ ರೇಖೆಗಳನ್ನು ನೀವು ಕಾಣಬಹುದಾಗಿದೆ. ಈ ಕೆಲವೊಂದು ವಿಶೇಷ ಮಾಹಿತಿಗಳ ಆಧಾರದ ಮೇಲೆ ದೃಷ್ಟಿ ಹೀನರು ಕೂಡ ಅಸಲಿ ಐನೂರು ರೂಪಾಯಿ ನೋಟುಗಳನ್ನು ಗುರುತಿಸಬಹುದಾಗಿದೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಹಬ್ಬುತ್ತಿರುವ ಮಾಹಿತಿಗಳನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿಲ್ಲ ಎಂಬುದಾಗಿ ಭಾವಿಸಬಹುದಾಗಿದೆ.

Comments are closed.