Kannada News: ಒಂದು ಕಡೆ ದರ್ಶನ್ ಹಾಗೂ ಅಪ್ಪು ಫ್ಯಾನ್ಸ್ ನಡುವೆ ಬೆಂಕಿ ಬಿದ್ದಿರುವಾಗ ದುನಿಯಾ ವಿಜಿ ಹೇಳಿದ್ದೆ ಬೇರೆ. ಏನು ಹೇಳಿದ್ದಾರೆ ಗೊತ್ತೇ??

Kannada News: ನಟ ದರ್ಶನ್ (Darshan) ಅವರಿಗೆ ಯಾರೋ ಕಿಡಿಗೇಡಿ ಚಪ್ಪಲಿ ಎಸೆದ ಪ್ರಕರಣದ ಕುರಿತಾಗಿ ಇಡೀ ಕರ್ನಾಟಕವೇ ವಿರೋಧ ವ್ಯಕ್ತಪಡಿಸಿತ್ತು. ದರ್ಶನ್ ಅಭಿಮಾನಿಗಳು ರೊಚ್ಚಿಗೆದ್ದಿದ್ದರು. ತಮ್ಮ ನೆಚ್ಚಿನ ಡಿ ಬಾಸ್ ಗೆ ಈ ರೀತಿಯಾಗಿ ಅಪಮಾನ ಮಾಡಿದ ವ್ಯಕ್ತಿಯ ಮೇಲೆ ಕೆಂಡಮಂಡಲರಾಗಿದ್ದರು. ಅಲ್ಲದೆ ಒಬ್ಬ ಕಲಾವಿದನಿಗೆ ಈ ರೀತಿ ಅಪಮಾನ ಆಗಿದ್ದರ ಕುರಿತಾಗಿ ಕನ್ನಡದ ಎಲ್ಲ ಸ್ಯಾಂಡಲ್ವುಡ್ ಸ್ಟಾರ್ ನಟ ನಟಿಯರು ಕೂಡ ಬೇಸರ ವ್ಯಕ್ತಪಡಿಸಿದ್ದರು. ಈ ಘಟನೆ ನಡೆದ ತಕ್ಷಣವೇ ದುನಿಯಾ ವಿಜಯ್ (Duniya Vijay) ಇದರ ಬಗ್ಗೆ ವಿಷಾದ ವ್ಯಕ್ತಪಡಿಸಿ ಕಮೆಂಟ್ ಹಾಕಿದರು. ಅಲ್ಲದೆ ಈ ರೀತಿ ಕಲಾವಿದರನ್ನು ಅವಮಾನ ಮಾಡುವುದರ ಕುರಿತಾಗಿ ಅವರು ವಿರೋಧ ವ್ಯಕ್ತಪಡಿಸಿದ್ದರು. ಇದಾದ ಮೇಲೆ ನೆನ್ನೆ ಮತ್ತೆ ಈ ಪ್ರಕರಣದ ಕುರಿತಾಗಿ ಸುಧೀರ್ಘವಾದ ಪತ್ರವನ್ನು ದುನಿಯಾ ವಿಜಯ್ ಬರೆದಿದ್ದಾರೆ.

ಇದೊಂದು ಪ್ರಕರಣ ಇದೀಗ ಇನ್ನಷ್ಟು ವಿವಾದದ ಕಡೆಗೆ ತಿರುಗುತ್ತಿದೆ. ದರ್ಶನ್ ಅಭಿಮಾನಿಗಳು ಇದನ್ನು ಅಪ್ಪು (Appu) ಅಭಿಮಾನಿಗಳೇ ಮಾಡಿದ್ದಾರೆ ಎನ್ನುವ ನೆಪ ಇಟ್ಟುಕೊಂಡು ಸಾಕಷ್ಟು ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಈ ಕುರಿತಾಗಿ ದುನಿಯಾ ವಿಜಯ್ ತಮ್ಮ ಪೋಸ್ಟ್ ಒಂದರಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಪೋಸ್ಟ್ ಅಲ್ಲಿ ದುನಿಯಾ ವಿಜಯ್ ಅವರು, “ಇವತ್ತು ಕನ್ನಡವಾಗಲಿ ಕನ್ನಡ ಚಿತ್ರರಂಗವಾಗಲಿ ಉತ್ತುಂಗ ಸ್ಥಾನದಲ್ಲಿದೆ ಎಂದರೆ ಅದಕ್ಕೆ ಕಾರಣ ಹಲವಾರು ಮಹಾನುಭಾವರು. ಅಂತಹವರ ಸಾಲಿನಲ್ಲಿ ಮಂಚೂಣಿಯಲ್ಲಿ ನಿಲ್ಲುವವರು ಅಂದ್ರೆ ನಮ್ಮ ಅಣ್ಣಾವ್ರು ಮತ್ತೆ ಅಣ್ಣಾವ್ರ ಕುಟುಂಬದವರು. ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನ ವಿಧ್ಯಮಾನಗಳನ್ನು ಗಮನಿಸಿದರೆ ಒಬ್ಬನ ಅಚಾತುರ್ಯವನ್ನು ನೇರವಾಗಿ ಅಣ್ಣಾವ್ರ ಪುತ್ರ ಮತ್ತು ನಮ್ಮ ಕರುನಾಡಿನ ಹೆಮ್ಮೆಯ ಕುಡಿ ದಿವಂಗತ ಅಪ್ಪು ಅವರನ್ನು ಗುರಿಯಾಗಿಸುತ್ತಿದ್ದಾರೆ”. ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ.. Kannada News: ಕನ್ನಡದಿಂದ ಕಣ್ಮರೆಯಾಗಿ ತೆಲುಗಿಗೆ ಹೋಗಿ, ಅಲ್ಲೇ ಮದುವೆಯಾಗಿದ್ದ ರಚಿತಾ ಮಹಾಲಕ್ಷ್ಮಿ ಜೀವನದಲ್ಲಿ ಬಿರುಗಾಳಿ. ಏನಾಗಿದೆ ಗೊತ್ತೇ?

kannada news appu viji darshan | Kannada News: ಒಂದು ಕಡೆ ದರ್ಶನ್ ಹಾಗೂ ಅಪ್ಪು ಫ್ಯಾನ್ಸ್ ನಡುವೆ ಬೆಂಕಿ ಬಿದ್ದಿರುವಾಗ ದುನಿಯಾ ವಿಜಿ ಹೇಳಿದ್ದೆ ಬೇರೆ. ಏನು ಹೇಳಿದ್ದಾರೆ ಗೊತ್ತೇ??
Kannada News: ಒಂದು ಕಡೆ ದರ್ಶನ್ ಹಾಗೂ ಅಪ್ಪು ಫ್ಯಾನ್ಸ್ ನಡುವೆ ಬೆಂಕಿ ಬಿದ್ದಿರುವಾಗ ದುನಿಯಾ ವಿಜಿ ಹೇಳಿದ್ದೆ ಬೇರೆ. ಏನು ಹೇಳಿದ್ದಾರೆ ಗೊತ್ತೇ?? 2

“ಇದು ಅತ್ಯಂತ ನೋವಿನ ಸಂಗತಿ. ಇಲ್ಲಿಗೇ ನಿಲ್ಲಿಸದೇ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಕೆಟ್ಟ ಭಾಷೆಯ ಪದಪ್ರಯೋಗಿಸುತ್ತಿದ್ದಾರೆ. ಇದಂತೂ ಯಾರೂ ಕ್ಷಮಿಸಲಾರದಂತಹ ಕೆಟ್ಟ ನಡೆ”. ಒಂದಂತು ಸತ್ಯ ನಾವು ಮನುಷ್ಯರಾಗಿ ಎಷ್ಟೇ ಜನುಮವೆತ್ತಿದರೂ ಆ ದೇವತಾ ಮನುಷ್ಯನ ಬಗ್ಗೆಯಾಗಲಿ ಅವರ ಕುಟುಂಬದವರ ಬಗ್ಗೆಯಾಗಲಿ ಮಾತಾಡೋ ಯೋಗ್ಯತೇನೂ ಇಲ್ಲದವರು. ಇಂತಹ ಪರಿಸ್ಥಿತಿಯಲ್ಲಿ ಕಲಾವಿದರಾಗಿ ನಾವು ನಿಲ್ಲದೇ ಇದ್ದರೆ ಇದು ನಿಲ್ಲದೇ ಇನ್ನೊಂದು ಮಜಲನ್ನು ತಲುಪುವ ಅಪಾಯವಿದೆ. ನಾನು ದರ್ಶನ್ ಅವರಲ್ಲಿ ಕೇಳಿಕೊಳ್ಳುವುದು ಒಂದೇ ಮಾತು. ಅಂತಹ ಪರಿಸ್ಥಿತಿಯಲ್ಲೂ ‘ ಪರ್ವಾಗಿಲ್ಲ ಬಿಡು ಚಿನ್ನ ‘ ಎಂಬ ಸಹನೆಯ ಮಾತಾಡಿ ಹೃದಯವನ್ನೇ ಗೆದ್ದಿದ್ದೀರಿ. ಇನ್ನೊಂದು ಮಾತು ನಿಮ್ಮನ್ನು ಇಷ್ಟಪಡುವ ಮತ್ತು ನಿಮ್ಮ ಮಾತನ್ನು ಎಂದೂ ದಾಟದ ನಿಮ್ಮ ಅಭಿಮಾನಿಗಳಿಗೆ ಹೇಳಿದರೆ ಎಲ್ಲವೂ ಸರಿಹೋಗುತ್ತದೆ.’ ಎಂದು ಅವರು ದರ್ಶನ್ ಬಳಿ ವಿನಂತಿಸಿಕೊಂಡಿದ್ದಾರೆ. ಇದನ್ನು ಓದಿ..Kannada Astrology: ಈ ನಾಲ್ಕು ರಾಶಿಗಳು ಎಂದರೆ ಹನುಮಂತನಿಗೆ ಅಚ್ಚು ಮೆಚ್ಚು. ಕುದ್ದು ಅವನೇ ಕಾಯಲಿದ್ದಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ?

Comments are closed.