Kannada News: ಎಲ್ಲರೂ ಸಿನಿಮಾ ನೋಡಿ ಮಾಡೋದೇ ಆಯಿತು: ಮನೆ ಬಾಡಿಗೆ ಕೊಡಲು ಬಂದ ನಟಿಯನ್ನು ಮಾಲೀಕ ಏನು ಮಾಡಿದ್ದಾನೆ ಗೊತ್ತೇ?
Kannada News: ಬಾಲಿವುಡ್ ನಟಿ ತೇಜಸ್ವಿನಿ ಪಂಡಿತ್ (Tejaswini Pandit) ಇತ್ತೀಚಿನ ಸಂದರ್ಶನ ಒಂದರಲ್ಲಿ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ತಾವು ತಮ್ಮ ಸಿನಿಮಾ ಕೆರಿಯರ್ನ ಶುರುವಿನಲ್ಲಿ ಲೈಂಗಿಕ ದೌರ್ಜನ್ಯವನ್ನು ಎದುರಿಸಿರುವುದಾಗಿ ಅವರು ಹಂಚಿಕೊಂಡಿದ್ದಾರೆ. ನಟನೆ ಶುರು ಮಾಡಿದ ಆರಂಭದಲ್ಲಿ ಅವರು ಬಾಡಿಗೆ ಇದ್ದ ಅಪಾರ್ಟ್ಮೆಂಟ್ ಮಾಲೀಕ ಅವರನ್ನು ಲೈಂಗಿಕ ಬಯಕೆ ತೀರಿಸುವಂತೆ ಒತ್ತಾಯ ಮಾಡಿದ್ದರು ಎಂದು ಹೇಳಿಕೊಂಡಿದ್ದಾರೆ. ಬಲವಂತವಾಗಿ ತನ್ನನ್ನು ಪ್ರಚೋದಿಸಿದ್ದಾಗಿ ಅವರು ಬಹಿರಂಗವಾಗಿ ನೋವಿನಿಂದ ತಿಳಿಸಿದ್ದಾರೆ. ಈ ವಿಷಯ ಬಹಿರಂಗವಾಗುತ್ತಿದ್ದಂತೆ ತೇಜಸ್ವಿನಿ ಅವರ ಪರವಾಗಿ ನೆಟ್ಟಿಗರು ಮಾತನಾಡಿದ್ದು, ಅವರ ಧೈರ್ಯಕ್ಕೆ ಮೆಚ್ಚಿಕೊಂಡಿದ್ದಾರೆ.
ಸೌಮಿತ್ರ ಪೋರ್ಟ್ ನಡೆಸಿಕೊಡುವ ಮಿತ್ರಮ್ಹನೆ ಪಾಡ್ಕಾಸ್ಟ್ ನಲ್ಲಿ ನಟಿ ತೇಜಸ್ವಿನಿ ಪಂಡಿತ್ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ವೇಳೆ ಅವರು ತಮ್ಮ ವೈಯಕ್ತಿಕ ಬದುಕು, ವೃತ್ತಿ ಜೀವನ, ಸೋಲು ಗೆಲುವು, ಅಪಮಾನ ಯಶಸ್ಸು ಹೀಗೆ ಸಾಕಷ್ಟ ವಿಷಯಗಳ ಕುರಿತಾಗಿ ಮೊದಲ ಬಾರಿಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಇದೇ ವೇಳೆ ಅವರು ತಮ್ಮ ಸಿನಿಮಾ ವೃತ್ತಿ ಜೀವನದ ಆರಂಭದಲ್ಲಿ ಎದುರಿಸಿದ್ದ ಒಂದು ಲೈಂಗಿಕ ದೌರ್ಜನ್ಯದ ಕುರಿತಾಗಿ ಹೇಳಿಕೊಂಡಿದ್ದಾರೆ. ಈ ಘಟನೆ ನಡೆದಿದ್ದು ಸುಮಾರು 2009-10 ರ ಆಸುಪಾಸಿನಲ್ಲಿ. ಈ ವೇಳೆ ನಟಿ ತೇಜಸ್ವಿನಿ ಆಗಿನ್ನೂ ನಟನೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇರಿಸುತ್ತಿದ್ದರು. ಆಗ ಅವರು ಪುಣೆಯ ಅಪಾರ್ಟ್ಮೆಂಟ್ ಒಂದರಲ್ಲಿ ಬಾಡಿಗೆಗೆ ವಾಸವಾಗಿದ್ದರು. ಆ ಅಪಾರ್ಟ್ಮೆಂಟ್ನ ಮಾಲೀಕರು ಒಬ್ಬರು ಕಾರ್ಪೊರೇಟ್ ಆಗಿದ್ದರಂತೆ. ಇದನ್ನು ಓದಿ..Kannada News: ಕನ್ನಡದಿಂದ ಕಣ್ಮರೆಯಾಗಿ ತೆಲುಗಿಗೆ ಹೋಗಿ, ಅಲ್ಲೇ ಮದುವೆಯಾಗಿದ್ದ ರಚಿತಾ ಮಹಾಲಕ್ಷ್ಮಿ ಜೀವನದಲ್ಲಿ ಬಿರುಗಾಳಿ. ಏನಾಗಿದೆ ಗೊತ್ತೇ?
ಈ ವೇಳೆ ನಟಿ ತೇಜಸ್ವಿನಿಯವರು ತಮ್ಮ ರೂಮ್ ಬಾಡಿಗೆ ನೀಡಲು ಆ ಮಾಲೀಕರ ಕಚೇರಿಗೆ ತೆರಳಿದಾಗ ಅಲ್ಲಿ ತಮ್ಮ ಲೈಂಗಿಕ ಬಯಕೆಯನ್ನು ತೀರಿಸುವಂತೆ ಆ ಮಾಲೀಕ ತೇಜಸ್ವಿನಿಯವರನ್ನು ಒತ್ತಾಯ ಮಾಡಿದ್ದನಂತೆ. ಈ ವೇಳೆ ಅತ್ಯಂತ ಕೋಪಗೊಂಡ ತೇಜಸ್ವಿನಿಯವರು ಆತನ ಮುಖದ ಮೇಲೆ ಅಲ್ಲೇ ಟೇಬಲ್ ಮೇಲಿದ್ದ ನೀರನ್ನು ತೆಗೆದು ಮುಖಕ್ಕೆ ಎರಚಿ ಅಲ್ಲಿಂದ ಹೊರ ನಡೆದಿದ್ದರಂತೆ. ಒಂದು ವೇಳೆ ನಾನು ಇಂತಹ ಕೆಟ್ಟ ಕೆಲಸ ಮಾಡುವವಳಾಗಿದ್ದರೆ ಬಾಡಿಗೆ ಮನೆಯಲ್ಲಿ ಇರುತ್ತಿರಲಿಲ್ಲ. ಸ್ವಂತ ಮನೆ, ಕಾರು ಕೊಂಡುಕೊಳ್ಳುತ್ತಿದ್ದೆ ಎಂದು ಮುಖಕ್ಕೆ ಹೊಡೆದಂತೆ ಹೇಳಿ ಅಲ್ಲಿಂದ ಹೊರಬಂದಿದ್ದರಂತೆ. ಯಾರಾದರೂ ಹೆಣ್ಣುಮಕ್ಕಳು ಆರ್ಥಿಕವಾಗಿ ದುರ್ಬಲವಾಗಿದ್ದರೆ ಕೆಲವು ಪುರುಷರು ಇದೇ ದೃಷ್ಟಿಕೋನದಿಂದ ನೋಡುತ್ತಾರೆ. ಅಥವಾ ಅದರಲ್ಲೂ ಸಿನಿಮಾ ನಟಿಯಂದರೆ ಅವರು ಸುಲಭದಲ್ಲಿ ನಾವು ಕೇಳಿದ್ದೆಲ್ಲ ಮಾಡಿಬಿಡುತ್ತಾರೆ ಎಂದು ಕೆಲವರು ಅಂದುಕೊಳ್ಳುತ್ತಾರೆ, ಇದು ತಪ್ಪು ಎಂದು ನಟಿ ತೇಜಸ್ವಿನಿ ಸಂದರ್ಶನದಲ್ಲಿ ತಿಳಿಸಿದ್ದಾರೆ. ಇದನ್ನು ಓದಿ.. Kannada Astrology: ಈ ನಾಲ್ಕು ರಾಶಿಗಳು ಎಂದರೆ ಹನುಮಂತನಿಗೆ ಅಚ್ಚು ಮೆಚ್ಚು. ಕುದ್ದು ಅವನೇ ಕಾಯಲಿದ್ದಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ?
Comments are closed.