RCB IPL 2023: ಹೆಚ್ಚು ಸದ್ದು ಮಾಡದೆ ಇದ್ದರೂ ಚಾಣಕ್ಯತನ ಮೆರೆದ ಆರ್ಸಿಬಿ: ಮೊದಲನೇ ದಿನ ಹರಾಜಿನಲ್ಲಿ ಬೆಸ್ಟ್ ಆಗಿ ಕೊಂಡದ್ದು ಯಾರನ್ನು ಗೊತ್ತೇ??
RCB IPL 2023: ಭರ್ಜರಿಯಾಗಿ ಐಪಿಎಲ್ (IPL) ಆವೃತ್ತಿ ಹದಿನಾರರ (IPL Season 16) ಆಟಗಾರರ ಮಿನಿ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ನಿನ್ನೆ ಶುರುವಾಗಿರುವ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಎಲ್ಲ ತಂಡಗಳು ತಮಗೆ ಬೇಕಾಗಿರುವ ಬಲಿಷ್ಠ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ನಿರತವಾಗಿದೆ. ಇನ್ನು ಆರ್‌ಸಿಬಿ (RCB) ಸಹ ತನ್ನ ತಂಡಕ್ಕೆ ಆಟಗಾರರನ್ನು ಸೇರಿಸಿಕೊಳ್ಳುವ ಲೆಕ್ಕಾಚಾರದಲ್ಲಿ ಇಂದು ಮಿನಿ ಹರಾಜಿನಲ್ಲಿ ಪಾಲ್ಗೊಂಡಿತ್ತು. ಸ್ಪರ್ಧೆಯಲ್ಲಿದ್ದ ಎಲ್ಲಾ ತಂಡಗಳಿಗಿಂತಲೂ ಅತ್ಯಂತ ಕಡಿಮೆ ಹರಾಜು ಮೊತ್ತ ಹೊಂದಿದ್ದ ಆರ್ಸಿಬಿ ತಂಡ ಇದೀಗ ಬಲಿಷ್ಠ ಸ್ಟಾರ್ ಆಟಗಾರರನ್ನು ಕೊಂಡುಕೊಳ್ಳುವ ಮೂಲಕ ಎಲ್ಲರಿಗೂ ಅಚ್ಚರಿ ಉಂಟು ಮಾಡಿದೆ. ಅಂದಹಾಗೆ ಇಂದು ನಡೆದ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಆರ್‌ಸಿಬಿ ತಂಡ ಚಾಣಕ್ಯತನ ಮೆರೆದಿದೆ. ಹರಾಜು ಪ್ರಕ್ರಿಯೆಯಲ್ಲಿ ಉಳಿದ ತಂಡಗಳಿಗಿಂತ ಹೆಚ್ಚು ಮೌನ ವಹಿಸಿದ್ದ ಆರ್ಸಿಬಿ ತಂಡ ಸ್ಟಾರ್ ಆಟಗಾರರನ್ನು ಕೊಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ತಂಡದ ಬಳಿ ಅತಿ ಕಡಿಮೆ ಅಂದರೆ 8.75 ಕೋಟಿ ಹರಾಜು ಮೊತ್ತ ಉಳಿದಿತ್ತು. ಇಷ್ಟು ಕಡಿಮೆ ಹರಾಜು ಮೊತ್ತದಲ್ಲಿ ಒಳ್ಳೆಯ ಆಟಗಾರರನ್ನು ಕೊಳ್ಳುವುದು ಅಸಾಧ್ಯದ ಮಾತೇ ಎಂದು ಹೇಳಲಾಗಿತ್ತು. ಸಾಕಷ್ಟು ಜನರು ಹಾಗೆಯೇ ಕ್ರಿಕೆಟ್ ತಜ್ಞರು ಇದೆ ಅಭಿಪ್ರಾಯವನ್ನು ಹೊಂದಿದ್ದರು. ಈ ಕಾರಣದಿಂದಾಗಿ ಆರ್‌ಸಿಬಿ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಪ್ರತಿ ಬಾರಿಯೂ ಈ ಸಲ ಕಪ್ ನಮ್ದೇ ಎಂಬ ಟ್ರೆಂಡ್ ಸೃಷ್ಟಿಸುವ ಅಭಿಮಾನಿಗಳಿಗೆ ಈ ವಿಷಯ ಬೇಸರ ಮೂಡಿಸಿತ್ತು. ಆದರೆ ಎಲ್ಲಾ ಅನುಮಾನಗಳನ್ನು ಮೀರಿ ಆರ್‌ಸಿಬಿ ಫ್ರಾಂಚೈಸಿ ಇದೀಗ ಮಿನಿ ಹರಾಜಿನಲ್ಲಿ ಭರ್ಜರಿ ಭೇಟಿಯನ್ನೇ ಮಾಡಿದೆ. ಅತ್ಯುತ್ತಮ ಆಟಗಾರರನ್ನು ಸದ್ದಿಲ್ಲದೆ ಕೊಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆರ್‌ಸಿಬಿಯ ಈ ನಡೆ ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ. ಈ ಬಾರಿ ಆರ್‌ಸಿಬಿ 18 ಆಟಗಾರರನ್ನು ತನ್ನ ಬಳಿಯೇ ಉಳಿಸಿಕೊಂಡಿತ್ತು. ಇನ್ನು ಸಹ ತಂಡಕ್ಕೆ ಏಳು ಹೊಸ ಆಟಗಾರರ ಅಗತ್ಯವಿತ್ತು. ಇದನ್ನು ಓದಿ..IPL 2023: ಆರ್ಸಿಬಿ ಅಭಿಮಾನಿಗಳಿಗೆ ಹರಾಜಿಗೂ ಮುನ್ನವೇ ಕಹಿ ಸುದ್ದಿ: ಈ ಬಾರಿ ಯಾರು ಸ್ಟಾರ್ ಪ್ಲೇಯರ್ ತಂಡಕ್ಕೆ ಬರಲ್ಲ. ಯಾಕೆ ಗೊತ್ತೇ? ಕಣ್ಣೀರು ಹಾಕಿದ ಫ್ಯಾನ್ಸ್.
ಇದರಲ್ಲಿ ಐವರು ಭಾರತೀಯ ಆಟಗಾರರನ್ನು ಮತ್ತು ಇಬ್ಬರು ವಿದೇಶ ಆಟಗಾರರನ್ನು ತಂಡವು ಕೊಳ್ಳುತ್ತದೆ ಎನ್ನುವ ಅಭಿಪ್ರಾಯ ಮೂಡಿತ್ತು. ಅಂದ ಹಾಗೆ ನೆನ್ನೆ ನಡೆದ ಮೊದಲ ದಿನದ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಭರ್ಜರಿಯಾಗಿ ತಂಡ ಇಬ್ಬರೂ ವಿದೇಶಿ ಆಟಗಾರರನ್ನು ಮತ್ತು ಮೂವರು ದೇಶಿ ಆಟಗಾರರನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಯುವ ಪ್ರತಿಭೆಗಳಾದ ರಜನ್ ಕುಮಾರ್ (Rajan Kumar) 70 ಲಕ್ಷ, ಅವಿನಾಶ್ ಸಿಂಗ್ (Avinash Singh) 60 ಲಕ್ಷ, ಮನೋಜ್ ಭಂಡ (Manoj Bande) ಮತ್ತು ಹಿಮನ್ಷು ಶರ್ಮ (Himanshu Sharma) ತಲಾ 20 ಲಕ್ಷ, ಹಾಗೂ ಸೋನು ಯಾದವ್ (Sonu Yadav) ಗೆ 20 ಲಕ್ಷ ರೂ ಮೂಲ ಬೆಲೆಗೆ ಆರ್‌ಸಿಬಿ ಕೊಂಡುಕೊಂಡಿದೆ. ಇನ್ನು 1.90 ಕೋಟಿಗೆ ಆರ್‌ಸಿಬಿ ಇಂಗ್ಲೆಂಡ್ ನ ಎಡಗೈ ವೇಗಿ ರೀಸ್ ಟಾಪ್ಲೆ ಅವರನ್ನು ಕೊಂಡುಕೊಂಡಿದೆ. ಇದಲ್ಲದೆ ಆರು ಬಾಲ್ಗೆ ಆರು ಸಿಕ್ಸ್ ಸಿಡಿಸಿದ್ದ ಇಂಗ್ಲೆಂಡ್ ದಾಂಡಿಗ ವಿಲ್ ಜಾಕ್ಸ್ ಗೆ 3.20 ಕೋಟಿ ಕೊಟ್ಟು ಕೊಂಡುಕೊಂಡಿದೆ. ಈ ಮೂಲಕ ಈಗಾಗಲೇ ಆರ್‌ಸಿಬಿ ತನ್ನ ಆಟಗಾರರ ಪಟ್ಟಿಗೆ ಹೊಸ ಐವರು ಬಲಿಷ್ಠ ಆಟಗಾರರನ್ನು ಸೇರಿಸಿಕೊಂಡಿದೆ. ಇದನ್ನು ಓದಿ.. Kannada Astrology: ಈ ನಾಲ್ಕು ರಾಶಿಗಳು ಎಂದರೆ ಹನುಮಂತನಿಗೆ ಅಚ್ಚು ಮೆಚ್ಚು. ಕುದ್ದು ಅವನೇ ಕಾಯಲಿದ್ದಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ?
Comments are closed.