Kannada News: ಹೊಸಪೇಟೆ ಚಪ್ಪಲಿ ಪ್ರಕರಣದ ಕುರಿತು ಲೀಲಾವತಿ ಅಮ್ಮ ಹೇಳಿದ್ದೇನು ಗೊತ್ತೆ?? ಈ ವಯಸ್ಸಿನಲ್ಲಿಯೂ ಏನು ಹೇಳಿದ್ದಾರೆ ಗೊತ್ತೇ??
Kannada News: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರಿಗೆ ಚಪ್ಪಲಿ ಎಸೆದ ಪ್ರಕರಣ ರಾಜ್ಯದ್ಯಂತ ಸಂಚಲನ ಸೃಷ್ಟಿಸುತ್ತಿದೆ. ಕಲಾವಿದರಿಗೆ ಈ ರೀತಿ ಅಪಮಾನ ಮಾಡುವುದು ಸರಿಯಲ್ಲ ಎಂದು ಎಲ್ಲೆಡೆ ಎಲ್ಲೆಡೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷಿತ ಕ್ರಾಂತಿ (Kranthi) ಚಿತ್ರದ ಪ್ರಚಾರದ ವೇಳೆ ಇಂತಹದೊಂದು ಘಟನೆ ಜರುಗಿದೆ. ವೇದಿಕೆಯ ಮೇಲೆ ಮಾತನಾಡುವ ವೇಳೆ ಯಾರೋ ಕಿಡಿಗೇಡಿ ದರ್ಶನ್ ಮುಖದ ಮೇಲೆ ಚಪ್ಪಲಿ ಎಸೆದಿದ್ದಾನೆ. ಈ ಪ್ರಕರಣದ ಕುರಿತಾಗಿ ಸ್ಯಾಂಡಲ್ವುಡ್ ನ ಕಲಾವಿದರೆಲ್ಲ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಇತ್ತೀಚಿಗೆ ಹಿರಿಯ ನಟ ವಿನೋದ್ ರಾಜ್ ಮತ್ತು ಅವರ ತಾಯಿ ಲೀಲಾವತಿ (Leelavathi) ಸಹ ಈ ಘಟನೆಯ ಕುರಿತು ಮಾತನಾಡಿದ್ದಾರೆ. ತಮ್ಮ ಬೇಸರ ಹಾಗೂ ನೋವನ್ನು ವ್ಯಕ್ತಪಡಿಸಿದ್ದಾರೆ.
ಹೊಸಪೇಟೆಯಲ್ಲಿ ನಟ ದರ್ಶನ್ ಹಾಗೂ ಇಡೀ ಕ್ರಾಂತಿ ಚಿತ್ರ ತಂಡ ಭಾಗಿಯಾಗಿತ್ತು. ಚಿತ್ರದ ಪ್ರಚಾರ ಕಾರ್ಯಕ್ಕಾಗಿ ಇಡೀ ಚಿತ್ರತಂಡ ಭಾಗವಹಿಸಿತ್ತು. ಈ ವೇಳೆ ಮೊದಲಿಗೆ ದರ್ಶನವರು ಪುನೀತ್ ಅವರ ಪುತ್ತಳಿಗೆ ನಮನ ಸಲ್ಲಿಸಿ ಮಾತು ಶುರು ಮಾಡಿದ್ದರು. ನಂತರ ರಚಿತಾ ರಾಮ್ ಮಾತನಾಡುತ್ತಿರುವಾಗ ವೇದಿಕೆ ಮೇಲೆ ನಿಂತಿದ್ದ ದರ್ಶನ್ ಅವರ ಮುಖದ ಮೇಲೆ ಜನರು ನಿಂತಿದ್ದ ಕಡೆಯಿಂದ ಚಪ್ಪಲಿಗೊಂದು ತೂರಿ ಬಂದಿದೆ. ಇದು ನೇರವಾಗಿ ದರ್ಶನ್ ರವರ ಕೆನ್ನೆ ಮತ್ತು ಮುಖಕ್ಕೆ ಬಿದ್ದಿದೆ. ಆದರೆ ಈ ಚಪ್ಪಲಿಯನ್ನು ಎಸೆದಿದ್ದು ಯಾರು ಎನ್ನುವುದು ತಿಳಿದುಬಂದಿಲ್ಲ. ಇನ್ನೂ ಸಹ ಆ ದುಷ್ಕರ್ಮಿಯನ್ನು ಪತ್ತೆಹಚ್ಚಲಾಗಲಿಲ್ಲ ಎನ್ನುವುದು ನಿಜಕ್ಕೂ ವಿಪರ್ಯಾಸವೇ ಸರಿ. ಕಲೆಗೆ ಕಲಾವಿದರಿಗೆ ಗೌರವ ನೀಡುವ ನಾಡು ನಮ್ಮದು. ಹೀಗಿರುವಾಗ ನಟ ದರ್ಶನ್ ಅಂತ ಒಬ್ಬ ಅದ್ಭುತ ಕಲಾವಿದನಿಗೆ ಈ ರೀತಿ ಅಪಮಾನ ಮಾಡಿದ್ದು ನಿಜಕ್ಕೂ ಸರಿಯಿಲ್ಲ ಎಂದು ಹೇಳಬಹುದು. ಇದನ್ನು ಓದಿ..Kannada News: ಒಂದು ಕಡೆ ದರ್ಶನ್ ಹಾಗೂ ಅಪ್ಪು ಫ್ಯಾನ್ಸ್ ನಡುವೆ ಬೆಂಕಿ ಬಿದ್ದಿರುವಾಗ ದುನಿಯಾ ವಿಜಿ ಹೇಳಿದ್ದೆ ಬೇರೆ. ಏನು ಹೇಳಿದ್ದಾರೆ ಗೊತ್ತೇ??
ಮಾಧ್ಯಮದವರ ಜೊತೆಗೆ ಮಾತನಾಡಿರುವ ನಟ ವಿನೋದ್ ರಾಜ್ (Vinod Raj) ದರ್ಶನ್ ರವರ ಜೊತೆಗೆ ಆದ ಈ ಘಟನೆಯ ಕುರಿತಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ನಾವೆಲ್ಲರೂ ಕಲಾವಿದರು, ಒಂದು ರೀತಿ ಒಂದೇ ತಾಯಿಯ ಮಕ್ಕಳಿದ್ದಂತೆ. ಈ ರೀತಿಯಾಗಿ ಒಬ್ಬ ಕಲಾವಿದನಿಗೆ ಅಪಮಾನ ಮಾಡುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ಇದೇ ವೇಳೆ ಈ ಕುರಿತಾಗಿ ತಮ್ಮ ತಾಯಿ ಲೀಲಾವತಿ ಏನು ಹೇಳಿದ್ದಾರೆ ಎನ್ನುವುದನ್ನು ಸಹ ವಿವರಿಸಿದ್ದರು. ಈ ಪ್ರಕರಣದ ಕುರಿತಾಗಿ ಲೀಲಾವತಿ ಅಮ್ಮನಿಗೆ ತಿಳಿದಾಗ ಅವರು ಬಹಳ ನೋವು ಪಟ್ಟುಕೊಂಡರಂತೆ. ಹಾಗೂ ವಿನೋದ್ ರಾಜ್ ಅವರಿಗೆ ನನಗೆ ಇಷ್ಟು ನೋವಾಗುತ್ತಿದೆ ಇನ್ನು ಪಾಪ ಅವನಿಗೆ ಎಷ್ಟು ನೋವಾಗಿರಬೇಡ. ಹೀಗೆಲ್ಲ ಮಾಡಬಾರದು ಎಂದು ದುಃಖ ತೋಡಿಕೊಂಡರಂತೆ. ಅಲ್ಲದೆ ಚಪ್ಪಲಿ ಲಕ್ಷ್ಮಿ ಇದ್ದಂತೆ, ಅವನ ಮುಖಕ್ಕೆ ಬಿದ್ದಿರುವುದು ಲಕ್ಷ್ಮಿ. ಅವನಿಗೆ ಇನ್ನ ಮೇಲೆ ಲಕ್ಷ್ಮಿ ಒಲಿಯುತ್ತಾಳೆ. ಆತ ಇನ್ನು ಮುಂದೆ ಲಕ್ಷ್ಮಿ ಪುತ್ರನಾಗುತ್ತಾನೆ. ಅವನ ಮುಂದಿನ ಸಿನಿಮಾಗಳು ಸೂಪರ್ ಹಿಟ್ ಆಗುತ್ತದೆ, ಒಳ್ಳೆಯ ಸಕ್ಸಸ್ ಕಾಣುತ್ತವೆ. ಅವನಿಗೆ ಇನ್ನು ಮುಂದೆ ಒಳ್ಳೆಯದೇ ಆಗುತ್ತದೆ ಎಂದು ಲೀಲಾವತಿ ಅಮ್ಮನವರು ಹೇಳಿದ್ದಾರೆ. ಇದನ್ನು ಓದಿ.. Kannada Astrology: ಈ ನಾಲ್ಕು ರಾಶಿಗಳು ಎಂದರೆ ಹನುಮಂತನಿಗೆ ಅಚ್ಚು ಮೆಚ್ಚು. ಕುದ್ದು ಅವನೇ ಕಾಯಲಿದ್ದಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ?
Comments are closed.