Kannada News: ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ನಿಜಕ್ಕೂ ಕೀರ್ತಿ ನೇರವಾಗಿ ವೈಷ್ಣವ್ ಬೇಡ ಎನ್ನಲು ಕಾರಣವೇನು ಗೊತ್ತೇ? ಕೊನೆಗೂ ಬಯಲಾಯ್ತು ಸತ್ಯ.

Kannada News: ಕಲರ್ಸ್ ಕನ್ನಡದಲ್ಲಿ (Colors Kannada) ಸಂಜೆ 7 ಗಂಟೆಗೆ ಪ್ರಸಾರವಾಗುವ ಭಾಗ್ಯಲಕ್ಷ್ಮಿ (Bhagyalakshmi) ಧಾರವಾಹಿ ದಿನೇ ದಿನೇ ತಿರುವುಗಳಿಂದ ರೋಚಕತೆಯಿಂದ ಕೂಡಿದೆ. ಶುರುವಾಗಿ ಕೆಲವೇ ದಿನಗಳು ಕಳೆದಿದ್ದರು ಆಗಲೇ ಈ ಧಾರಾವಾಹಿ ಕಲರ್ಸ್ ಕನ್ನಡದ ನಂಬರ್ ಒನ್ ಧಾರವಾಹಿಯಾಗಿ ಮಿಂಚುತ್ತಿದೆ. ಇದಲ್ಲದೆ ಅಪಾರ ಜನಪ್ರಿಯತೆ ಪಡೆದುಕೊಳ್ಳುತ್ತಿರುವ ಭಾಗ್ಯಲಕ್ಷ್ಮಿ ಧಾರವಾಹಿ ಟಿ ಆರ್ ಪಿ ಅಲ್ಲೂ ಟಾಪ್ ಸ್ಥಾನದಲ್ಲಿದೆ. ಪ್ರತಿ ವಾರವು ಧಾರವಾಹಿಯಲ್ಲಿ ಒಂದಿಲ್ಲೊಂದು ಟ್ವಿಸ್ಟ್ ನೀಡಲಾಗುತ್ತಿದೆ. ಇಷ್ಟು ದಿನ ಪ್ರೀತಿ ಮಾಡುತ್ತಿದ್ದ ಕೀರ್ತಿ ವೈಷ್ಣವ್ ನಡುವಿನ ಪ್ರೀತಿ ಮುರಿದು ಬಿದ್ದಿದೆ. ನಾವಿಬ್ಬರೂ ಸರಿಯಾದ ಜೋಡಿ ಅಲ್ಲ ಎಂದು ಕೀರ್ತಿ ವೈಷ್ಣವಿ ಜೊತೆ ಬ್ರೇಕಪ್ ಮಾಡಿಕೊಂಡಿದ್ದಾಳೆ. ಆದರೆ ಇದೆಲ್ಲದಕ್ಕೂ ಕಾರಣ ಏನು ಎನ್ನುವುದು ಇದೀಗ ತಿಳಿದು ಬಂದಿದೆ.

ಕೀರ್ತಿ ವೈಷ್ಣವ್ ಪರಸ್ಪರ ಪ್ರೀತಿಸುತ್ತಿದ್ದರು. ಎರಡು ಕುಟುಂಬದವರಿಗೂ ತಮ್ಮ ಪ್ರೀತಿಯ ಬಗ್ಗೆ ಹೇಳಿ ಮನೆಯವರ ಒಪ್ಪಿಗೆ ಮೇರೆಗೆ ಮದುವೆಯ ಮಾತುಕತೆಯವರೆಗೂ ಸಂಬಂಧ ಬೆಳೆದಿತ್ತು. ಆದರೆ ಕೀರ್ತಿಯನ್ನು ವೈಷ್ಣವ್ ಮದುವೆಯಾಗುವುದು ಆತನ ತಾಯಿ ಕಾವೇರಿಗೆ ಇಷ್ಟವಿರಲಿಲ್ಲ. ಆದರೂ ಕೂಡ ಮಗನ ಒತ್ತಾಯಕ್ಕೆ ಅವಳು ಏನು ಹೇಳದೆ ಸುಮ್ಮನಿದ್ದಳು. ಇತ್ತ ಈ ಜೋಡಿಗೆ ನಿಶ್ಚಿತಾರ್ಥ ಕೂಡ ನಿಗದಿಯಾಗಿತ್ತು. ನಿಶ್ಚಿತಾರ್ಥದ ಶಾಪಿಂಗ್ ಗೆ ತೆರಳಿದ್ದ ಕೀರ್ತಿ ವೈಷ್ಣವ ನಡುವೆ ಕೆಲವು ಕಾರಣಗಳಿಗೆ ಭಿನ್ನಾಭಿಪ್ರಾಯ ಏರ್ಪಟ್ಟಿತ್ತು. ಶಾಪಿಂಗ್ ವೇಳೆ ನಿಶ್ಚಿತಾರ್ಥದಲ್ಲಿ ನೀನು ಸೀರೆ ಉಡಬೇಕೆಂದು ವೈಷ್ಣವ್ ಒಂದು ಸೀರೆಯನ್ನು ಸೆಲೆಕ್ಟ್ ಮಾಡುತ್ತಾನೆ. ಆದರೆ ಕೀರ್ತಿ ತಾನು ಲೆಹಂಗ ತೊಡುವುದಾಗಿ ಹೇಳಿರುತ್ತಾಳೆ. ಇತ್ತ ಮತ್ತೊಮ್ಮೆ ವೈಷ್ಣವ್ ತನ್ನ ಮನೆಯವರ ಜೊತೆಗೆ ಶಾಪಿಂಗ್ ಬಂದಾಗ ಆತನ ತಾಯಿ ಕಾವೇರಿ ತನ್ನ ಮಗ ಇದೆ ಸೀರೆಯನ್ನು ಸೆಲೆಕ್ಟ್ ಮಾಡಿರಬಹುದು ಎಂದು ಸರಿಯಾಗಿ ಗೆಸ್ ಮಾಡುತ್ತಾಳೆ. ಆನಂತರ ಇದೆ ಸೀರೆ ಕೀರ್ತಿ ನಿಶ್ಚಿತಾರ್ಥಕ್ಕೆ ಉಟ್ಟಿಕೊಳ್ಳಲಿ ಎಂದು ಇಬ್ಬರು ನಿರ್ಧರಿಸಿ ಕೊಂಡುಕೊಳ್ಳುತ್ತಾರೆ. ಇದನ್ನು ಓದಿ.. Kannada News: ದೇಶವನ್ನೇ ನಡುಗಿಸಿದ ನಿರ್ದೇಶಕನ ಚಿತ್ರದಲ್ಲಿ ಅವಕಾಶ ಪಡೆದ ಸಪ್ತಮಿ ಗೌಡ: ಪಾನ್ ಇಂಡಿಯಾ ಸಿನೆಮಾಗೆ ಆಯ್ಕೆ. ಯಾವ ಸಿನಿಮಾ ಗೊತ್ತೇ? ಕೇಳಿದರೆ ಕೈ ಮುಗಿತಿರ.

kannada news bhagyalakshmi serial news | Kannada News: ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ನಿಜಕ್ಕೂ ಕೀರ್ತಿ ನೇರವಾಗಿ ವೈಷ್ಣವ್ ಬೇಡ ಎನ್ನಲು ಕಾರಣವೇನು ಗೊತ್ತೇ? ಕೊನೆಗೂ ಬಯಲಾಯ್ತು ಸತ್ಯ.

ಆನಂತರ ನಿಶ್ಚಿತಾರ್ಥದ ವೇಳೆ ವೈಷ್ಣವ್ ಆ ಸೀರೆ ಜೊತೆಗೆ ಒಂದು ಚೀಟಿಯಲ್ಲಿ ಇದೇ ಸೀರೆಯನ್ನು ಉಟ್ಟುಕೋ ಎಂದು ಬರೆದು ಕಳಿಸುತ್ತಾನೆ. ಆದರೆ ಅದಾಗಲೇ ಕೀರ್ತಿ ತನ್ನಿಷ್ಟದ ಲೆಹಂಗ ತೊಟ್ಟು ಸಿದ್ಧವಾಗಿರುತ್ತಾಳೆ. ಇತ್ತ ವೈಷ್ಣವ್ ತಾನು ಬೇಡವೆಂದರು ಅದೇ ಸೀರೆಯನ್ನು ಕಳಿಸಿ ಕೊಟ್ಟಿರುವುದರಿಂದಾಗಿ ಅವಳಿಗೆ ಬೇಸರವಾಗುತ್ತದೆ. ಏಕಾಏಕಿ ಅವಳು ತಮ್ಮ ನಿಶ್ಚಿತಾರ್ಥವನ್ನು ಮುರಿಯುತ್ತಾಳೆ. ಈ ರೀತಿಯ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳೇ ಮುಂದೆ ದೊಡ್ಡದಾಗುತ್ತವೆ. ನಾವಿಬ್ಬರು ಒಟ್ಟಾಗಿ ಬದುಕುವುದು ಸರಿ ಹೋಗುವುದಿಲ್ಲ. ನಮ್ಮಿಬ್ಬರ ನಡುವೆ ಸಾಕಷ್ಟು ಭಿನ್ನತೆಗಳಿವೆ ಎಂದು ಹೇಳಿ ಒಂದು ಸೀರೆಯ ಕಾರಣಕ್ಕೆ ಕೀರ್ತಿ ತಮ್ಮ ಸಂಬಂಧವನ್ನು ಮುರಿದುಕೊಂಡಿದ್ದಾಳೆ. ನಿಜಕ್ಕೂ ಕೀರ್ತಿ ಸೀರೆ ಕಾರಣಕ್ಕೆ ತಮ್ಮ ಸಂಬಂಧವನ್ನು ಮುರಿದುಕೊಂಡಳೇ? ಈ ಧಾರಾವಾಹಿಯಲ್ಲಿ ಇನ್ನು ಮುಂದೆ ಎಂತಹ ತಿರುವುಗಳು ತೆಗೆದುಕೊಳ್ಳುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ. ಇದನ್ನು ಓದಿ..Kannada News: ಮೊದಲ ಬಾರಿಗೆ ಬಹಿರಂಗವಾಗಿ ಚಪ್ಪಲಿ ಪ್ರಕರಣ ಕುರಿತು ಮಾತನಾಡಿದ ಡಿ ಬಾಸ್: ತಾಕತ್ತಿದ್ದರೆ ಈ ಪ್ರಶ್ನೆಗೆ ಉತ್ತರ ನೀಡಿ. ಖಡಕ್ ಪ್ರಶ್ನೆ ಏನು ಗೊತ್ತೇ??

Comments are closed.