Kannada News: ಅಂದು ಪುನೀತ್ ಗಾಗಿ ಓಡೋಡಿ ಬಂದಿದ್ದ ದರ್ಶನ್, ಡಿ ಬಾಸ್ ಗುಣ ಕಂಡು ದೊಡ್ಮನೆ ಏನು ಮಾಡಿತ್ತು ಗೊತ್ತೇ??
Kannada News: ಇತ್ತೀಚೆಗೆ ನಟ ದರ್ಶನ್ ಅವರು ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಹಗುರವಾಗಿ ಮಾತನಾಡಿದರು ಎನ್ನುವ ಕಾರಣಕ್ಕೆ ಬಹಳ ನೆಗಟಿವ್ ವಿಚಾರಗಳು ಕೇಳಿಬಂದಿದ್ದವು.ಕೆಲವರು ಈ ರೀತಿ ಏನೇ ಮಾತನಾಡಿದರು, ದರ್ಶನ್ ಅವರಿಗೆ ದೊಡ್ಮನೆ ಕುಟುಂಬದ ಮೇಲೆ ಇರುಗ ಗೌರವ ಮತ್ತು ಪ್ರೀತಿ ಮಾತ್ರ ಕಡಿಮೆ ಆಗಿಲ್ಲ. ಅಂದು ಪುನೀತ್ ಅವರ ಸಿನಿಮಾದಲ್ಲಿ ನಟಿಸಬೇಕು ಎಂದಾಗ ದರ್ಶನ್ ಅವರು ಬಹಳ ಸಂತೋಷದಿಂದ ಒಪ್ಪಿಕೊಂಡಿದ್ದರು. ನಮಗೆಲ್ಲ ಗೊತ್ತಿರುವ ಹಾಗೆ ಪುನೀತ್ ರಾಜ್ ಕುಮಾರ್ ಅವರು ಸ್ನೇಹಜೀವಿ ಎಲ್ಲರ ಜೊತೆಗೂ ಸರಳತೆಯಿಂದ ಇರುತ್ತಿದ್ದರು. ಪುನೀತ್ ಅವರ ಅರಸು ಸಿನಿಮಾ ಯಾರಿಗೆ ತಾನೇ ಗೊತ್ತಿಲ್ಲ.
ಈ ಸಿನಿಮಾದಲ್ಲಿ ಬರುವ ಅತಿಥಿ ಪಾತ್ರಕ್ಕೆ ದರ್ಶನ್ ಅವರು ಮತ್ತು ಆದಿತ್ಯ ಅವರು ನಟಿಸಿದರೆ ಚೆನ್ನಾಗಿರುತ್ತದೆ ಎಂದುಕೊಂಡಾಗ, ಖುದ್ದು ಅಪ್ಪು ಅವರು ಮತ್ತು ರಾಘಣ್ಣ ಅವರು ಇಬ್ಬರು ಹೋಗಿ ನಾಯಕರ ಜೊತೆಗೆ ಮಾತನಾಡಿದ್ದರು. ಆದಿತ್ಯ ಅವರು ಒಪ್ಪಿಕೊಂಡರು, ಇನ್ನು ದರ್ಶನ್ ಅವರು ಕೂಡ ಬಹಳ ಸಂತೋಷದಿಂದ ಒಪ್ಪಿಕೊಂಡರು, ಆದರೆ ದರ್ಶನ್ ಅವರು ಒಂದು ಶರತ್ತು ಹಾಕಿದರು. ತಮ್ಮ ತಂದೆಯವರು ದೊಡ್ಮನೆಯ ಜೊತೆಗೆ ಒಳ್ಳೆಯ ನಂಟು ಇಟ್ಟುಕೊಂಡಿದ್ದಾರೆ, ರಾಜ್ ಕುಮಾರ್ ಅವರು ತಮ್ಮ ತಂದೆಗಾಗಿ ಸಿನಿಮಾಗಳಲ್ಲಿ ವಿಶೇಷ ಪಾತ್ರ ಸೃಷ್ಟಿ ಮಾಡುತ್ತಿದ್ದರು, ದೊಡ್ಮನೆ ಮೇಲೆ ಅಪಾರವಾದ ಗೌರವ ಪ್ರೀತಿ ಇರುವುದರಿಂದ ಸಂಭಾವನೆ ಬಗ್ಗೆ ಯಾವುದೇ ಮಾತನ್ನಾಡಬಾರದು ಎಂದು ಷರತ್ತು ಹಾಕಿದ್ದರು. ಅದಕ್ಕೆ ರಾಘಣ್ಣ ಮತ್ತು ಅಪ್ಪು ಅವರು ಕೂಡ ಒಪ್ಪಿಕೊಂಡರು. ಇದನ್ನು ಓದಿ..Kannada News: ಎಲ್ಲ ಬಗ್ಗೆನೂ ವಿಶೇಷವಾಗಿ ಹೇಳಿದ್ದ ದಿಯಾ ಹೆಗ್ಡೆ: APPU (ಅಪ್ಪು) ಎಂಬ ಪದಕ್ಕೆ ವಿವರಣೆ ಕೊಟ್ಟಿದ್ದು ನೋಡಿದರೇ…
ಸಿನಿಮಾ ಚಿತ್ರೀಕರಣ ನಡೆದು, ರಿಲೀಸ್ ಆಗಿ ಅರಸು ಸಿನಿಮಾ ಸೂಪರ್ ಹಿಟ್ ಆಯಿತು, ಈ ಸಕ್ಸಸ್ ಗೆ ದರ್ಶನ್ ಅವರು ಕೂಡ ಮುಖ್ಯ ಕಾರಣ ಎಂದು, ರಾಘಣ್ಣ ಮತ್ತು ಅಪ್ಪು ಅವರನ್ನು ಭೇಟಿ ಮಾಡಿ, ಸಂಭಾವನೆ ತೆಗೆದುಕೊಳ್ಳಲೇಬೇಕು ಎಂದು ಕೊಡುವ ಪ್ರಯತ್ನ ಮಾಡಿದಾಗ, ದರ್ಶನ್ ಅವರು ಒಂದು ರೂಪಾಯಿಯನ್ನು ಕೂಡ ಮುಟ್ಟಲಿಲ್ಲ. ನಂತರ ಅಪ್ಪು ಅವರು ಒಂದು ಐಡಿಯಾ ಮಾಡಿದರು, ಹಾಗೆ ಕೆಲಸ ಮಾಡಿರುವುದು ಸರಿ ಎನ್ನಿಸುವುದಿಲ್ಲ ಎಂದು ಹೇಳಿ, ದರ್ಶನ್ ಅವರಿಗೆ ಒಂದು ದುಬಾರಿ ವಾಚ್ ಅನ್ನು ಗಿಫ್ಟ್ ಆಗಿ ನೀಡಿದರು. ದರ್ಶನ್ ಅವರಿಗೆ ಅದನ್ನು ಸ್ವೀಕರಿಸದೆ ಇರಲು ಸಾಧ್ಯವಾಗಲಿಲ್ಲ. ಏಕೆಂದರೆ ಆ ವಾಚ್ ಹಣದ ರೂಪದಲ್ಲಿ ಬಂದಿದ್ದರು ಕೂಡ ಅದೊಂದು ನೆನಪಿನ ಕಾಣಿಕೆ ಆಗಿತ್ತು. ಒಟ್ಟಿನಲ್ಲಿ ಈ ಎರಡು ಮನೆಯ ಕಲಾವಿದರ ನಡುವೆ ಒಳ್ಳೆಯ ಬಾಂಧವ್ಯ ಇದೆ ಎನ್ನುವುದನ್ನು ಇಲ್ಲಿ ನಾವು ಅರ್ಥಮಾಡಿಕೊಳ್ಳಬೇಕಿದೆ. ಇದನ್ನು ಓದಿ.. Kannada News: ತಮಿಳಿಗರನ್ನು ಮದುವೆಯಾಗುವ ಆಸೆ, ವಿಜಯ್ ಎಂದರೆ ಬೆಸ್ಟ್ ನಟ ಎಂದೆಲ್ಲ ತಮಿಳಿಗೆ ಹೋಗಿದ್ದ ರಶ್ಮಿಕಾಗೆ ಮೊದಲ ಸಿನೆಮಾದಲ್ಲಿಯೇ ಶಾಕ್. ಏನು ಮಾಡಿದರೆ ಗೊತ್ತೆ?
Comments are closed.