Kannada News: ತಮಿಳಿಗರನ್ನು ಮದುವೆಯಾಗುವ ಆಸೆ, ವಿಜಯ್ ಎಂದರೆ ಬೆಸ್ಟ್ ನಟ ಎಂದೆಲ್ಲ ತಮಿಳಿಗೆ ಹೋಗಿದ್ದ ರಶ್ಮಿಕಾಗೆ ಮೊದಲ ಸಿನೆಮಾದಲ್ಲಿಯೇ ಶಾಕ್. ಏನು ಮಾಡಿದರೆ ಗೊತ್ತೆ?
Kannada News: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಮುಂದಿನ ಸಿನಿಮಾ ವಾರಿಸು (Varisu), ಮುಂದಿನ ಅವಾರ ಜನವರಿ 12ರಂದು ಸಿನಿಮಾ ಬಿಡುಗಡೆ ಆಗುತ್ತಿದೆ. ಸಿನಿಮಾ ಟ್ರೈಲರ್ ಬಿಡುಗಡೆ ಆಗಿದ್ದು, ಈ ಸಿನಿಮಾದಲ್ಲಿ ಮಾಸ್ ಎಲಿಮೆಂಟ್ಸ್ ಜೊತೆಗೆ, ಸೆಂಟಿಮೆಂಟ್ ಕೂಡ ಇದೆ ಎನ್ನುವುದು ಗೊತ್ತಾಗುತ್ತಿದೆ. ವಿಜಯ್ (Vijay) ಅವರಿಗೆ ಇದು ಒಳ್ಳೆಯ ಸಿನಿಮಾ, ಪೊಂಗಲ್ ಹಬ್ಬಕ್ಕೆ ಒಳ್ಳೆಯ ಓಪನಿಂಗ್ ಪಡೆದುಕೊಳ್ಳುವುದಂತೂ ಖಂಡಿತ. ಆದರೆ ಟ್ರೈಲರ್ ನೋಡಿದ ನಂತರ ರಶ್ಮಿಕಾ ಅವರ ಅಭಿಮಾನಿಗಳಿಗೆ ನಿರಾಸೆ ಆಗಿದೆ..
ಏಕೆಂದರೆ ರಶ್ಮಿಕಾ ಮಂದಣ್ಣ ಅವರು ಇಡೀ ಟ್ರೈಲರ್ ನಲ್ಲಿ ಕೆಲವೇ ಕೆಲವು ಕ್ಷಣಗಳು ಮಾತ್ರ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿದರೆ, ರಶ್ಮಿಕಾ ಮಂದಣ್ಣ ಅವರನ್ನು ಗ್ಲಾಮರ್ ಗಾಗಿ ಕೆಲವೆ ಕೆಲವು ದೃಶ್ಯಗಳಿಗೆ ಮಾತ್ರ ಸೀಮಿತಗೊಳಿಸಿರಬಹುದು ಎಂದು ಅನ್ನಿಸುತ್ತಿದೆ. ಇದನ್ನು ನೋಡಿ ರಶ್ಮಿಕಾ ಅವರ ಅಭಿಮಾನಿಗಳಿಗೆ ಬೇಸರವಾಗಿದೆ. 2022ರಲ್ಲಿ ಬಿಡುಗಡೆಯಾದ ವಿಜಯ್ ಅವರ ಬೀಸ್ಟ್ ಸಿನಿಮಾದಲ್ಲಿ ಪೂಜಾ ಹೆಗ್ಡೆ ಅವರಿಗೆ ಇದೇ ಪರಿಸ್ಥಿತಿ ಆಗಿತ್ತು. ಈಗ ರಶ್ಮಿಕಾ ಅವರನ್ನು ಇದೇ ರೀತಿ ತೋರಿಸಲಾಗಿದೆಯೇ ಎನ್ನುವ ಚರ್ಚೆ ಈಗ ಶುರುವಾಗಿದೆ. ಇದನ್ನು ಓದಿ.. Kannada News: ಎಲ್ಲ ಬಗ್ಗೆನೂ ವಿಶೇಷವಾಗಿ ಹೇಳಿದ್ದ ದಿಯಾ ಹೆಗ್ಡೆ: APPU (ಅಪ್ಪು) ಎಂಬ ಪದಕ್ಕೆ ವಿವರಣೆ ಕೊಟ್ಟಿದ್ದು ನೋಡಿದರೇ…
ಇನ್ನೊಂದು ಕಡೆ ಈ ಸಿನಿಮಾದಲ್ಲಿ ರಶ್ಮಿಕಾ ಅವರ ಪಾತ್ರ ಚಿಕ್ಕದಾಗಿದ್ದರು ಅಥವಾ ದೊಡ್ಡದಾಗಿದ್ದರು ಅವರ ಕೆರಿಯರ್ ಗೆ ಈ ಸಿನಿಮಾ ದೊಡ್ಡ ಪ್ಲಸ್ ಆಗುವುದರಲ್ಲಿ ಸಂಶಯವಿಲ್ಲ ಎಂದು ಇನ್ನು ಕೆಲವು ಅಭಿಮಾನಿಗಳು ಹೇಳುತ್ತಿದ್ದಾರೆ. ನಟ ವಿಜಯ್ ರಶ್ಮಿಕಾ ಅವರ ಚೈಲ್ಡ್ ಹುಡ್ ಕ್ರಶ್, ಹಾಗಾಗಿ ರಶ್ಮಿಕಾ ಅವರಿಗೆ ವಿಜಯ್ ಅವರ ಜೊತೆಗೆ ನಟಿಸಬೇಕು ಎನ್ನುವ ಕನಸಿತ್ತು, ಆ ಕನಸು ಈಗ ನನಸಾಗಿದೆ. ಜನವರಿ 12ರಂದು ವಾರಿಸು ಸಿನಿಮಾ ಬಿಡುಗಡೆ ಆಗುತ್ತಿದೆ. ಜನವರಿ 20ರಂದು ರಶ್ಮಿಕಾ ಮಂದಣ್ಣ ಅವರ ಮಿಷನ್ ಮಜ್ನು ಸಿನಿಮಾ ನೆಟ್ ಫ್ಲಿಕ್ಸ್ ನಲ್ಲಿ ತೆರೆಕಾಣುತ್ತಿದೆ. ಒಟ್ಟಿನಲ್ಲಿ ಈ ವರ್ಷ ರಶ್ಮಿಕಾ ಅವರಿಗೆ ಒಳ್ಳೆಯ ಹೆಸರು ತಂದುಕೊಡುವುದಂತೂ ಖಂಡಿತ ಎನ್ನಬಹುದು. ಇದನ್ನು ಓದಿ..Kannada News: ಉಪೇಂದ್ರ ರವರ UI ಸಿನೆಮಾಗ ದೇವಲೋಕದ ಅಪ್ಸರೆಯಂತೆ ಇರುವ ನಟಿಯನ್ನು ಕರೆತಂದ ಉಪ್ಪಿ: ಈ ಮೂವಿ ಇವರಿಗಾಗಿ ಆದ್ರೂ ಯಶಸ್ಸು ಖಂಡಿತಾ.
Comments are closed.