Kannada News: ಸೋತು ಸೋತು ಸುಣ್ಣವಾದರೂ, ರಶ್ಮಿಕಾ ಚಾಳಿ ಬಿಟ್ಟಿಲ್ಲ: ರಿಷಬ್ ಶೆಟ್ಟಿ ಗೆ ಟಾಂಗ್ ಕೊಟ್ಟು ಹೇಳಿದ್ದೇನು ಗೊತ್ತೇ? ರಿಷಬ್ ಗೆ ಶಾಕ್.
Kannada News: ನಟಿ ರಶ್ಮಿಕಾ ಮಂದಣ್ಣ ಇದೀಗ ಬಹು ಭಾಷೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಸಾಕಷ್ಟು ಬೇಡಿಕೆ ಇರುವ ರಶ್ಮಿಕ ಮಂದಣ್ಣ ತೆಲುಗು, ತಮಿಳು ಹಾಗೂ ಹಿಂದಿ ಸೇರಿದಂತೆ ಪರಭಾಷೆಗಳಲ್ಲಿ ಮಿಂಚುತ್ತಿರುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ಆದರೆ ಕನ್ನಡದ ಮೂಲಕ ಗುರುತಿಸಿಕೊಂಡ ರಶ್ಮಿಕ ಅವರಿಗೆ ಕನ್ನಡದಲ್ಲಿ ಅತಿ ಹೆಚ್ಚು ಟ್ರೋಲ್ ಮಾಡಲಾಗುತ್ತದೆ. ಅವರ ನಡೆ ನುಡಿ ವ್ಯಕ್ತಿತ್ವದ ಕುರಿತಾಗೆ ಬಹುತೇಕ ಕನ್ನಡಿಗರು ಆಗಾಗ ಕೆಂಡ ಕಾರುತ್ತಿರುತ್ತಾರೆ. ರಶ್ಮಿಕ ಅವರ ವರ್ತನೆಯೂ ಸಹ ಹಾಗೆ ಇರುತ್ತದೆ ಎನ್ನುವುದು ಅಷ್ಟಕಷ್ಟೇ ಸತ್ಯ. ಇದೀಗ ರಶ್ಮಿಕ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ತಾವು ಈ ಹಿಂದೆ ಸಂದರ್ಶನದಲ್ಲಿ ಕೈ ಬೆರಳು ತೋರಿಸಿ ಮಾತನಾಡಿದ್ದ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಇದೀಗ ರಿಷಬ್ ಶೆಟ್ಟಿಗೆ ಟಾಂಗ್ ಕೊಟ್ಟಿದ್ದಾರ ಎನ್ನುವ ಅನುಮಾನಗಳು ವ್ಯಕ್ತವಾಗುತ್ತಿದೆ.
ಈ ಹಿಂದೆ ಸಂದರ್ಶನ ಒಂದರಲ್ಲಿ ಪಾಲ್ಗೊಂಡಿದ್ದ ನಟಿ ರಶ್ಮಿಕ ಮಂದಣ್ಣ ಅವರಿಗೆ ನಿಮ್ಮ ಚಿತ್ರರಂಗದ ಜರ್ನಿ ಹೇಗೆ ಶುರುವಾಯಿತು ಎಂದು ಪ್ರಶ್ನಿಸಲಾಗಿತ್ತು. ಈ ವೇಳೆ ನಟಿ ರಶ್ಮಿಕ ಮಂದಣ್ಣ ತಮಗೆ ಸಿನಿಮಾ ಅವಕಾಶ ನೀಡಿದ ನಟರ ಬಗ್ಗೆಯಾಗಲಿ, ಸಿನಿಮಾ ಸಂಸ್ಥೆಯ ಬಗ್ಗೆ ಆಗಲಿ ಏನನ್ನು ಹೇಳಲಿಲ್ಲ. ಅದರ ಹೆಸರನ್ನು ಕೂಡ ಹೇಳಲಿಲ್ಲ. ಇದರ ಬದಲಾಗಿ ಕೇವಲ ಕೈ ಬೆರಳುಗಳನ್ನು ತೋರಿಸಿ ಅದೊಂದು ಸಿನಿಮಾ ಸಂಸ್ಥೆಯಿಂದ ನನಗೆ ಅವಕಾಶ ಬಂತು ಎಂದು ಹೇಳಿದರು. ಈ ವಿಡಿಯೋ ನೋಡಿದ್ದ ಕನ್ನಡಿಗರು ರಶ್ಮಿಕ ವಿರುದ್ಧ ಕೆಂಡಕಾರಿದ್ದರು. ನಡೆದು ಬಂದ ಹಾದಿಯನ್ನು ಮರೆತ ನಿನಗೆ ಬದುಕುವ ಅರ್ಹತೆ ಇಲ್ಲ, ನಿನ್ನ ಯೋಗ್ಯತೆ ಇಷ್ಟೇ. ಕನ್ನಡಿಗರು ನಿನ್ನನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಕಿಡಿ ಕಾರಿದ್ದರು. ಇದೀಗ ಈ ಕುರಿತಾಗಿ ನಟಿ ರಶ್ಮಿಕಾ ಮಂದಣ್ಣ ಪ್ರತಿಕ್ರಿಯಿಸಿದ್ದಾರೆ. ಇದನ್ನು ಓದಿ..Kannada News: ತಮಿಳಿಗರನ್ನು ಮದುವೆಯಾಗುವ ಆಸೆ, ವಿಜಯ್ ಎಂದರೆ ಬೆಸ್ಟ್ ನಟ ಎಂದೆಲ್ಲ ತಮಿಳಿಗೆ ಹೋಗಿದ್ದ ರಶ್ಮಿಕಾಗೆ ಮೊದಲ ಸಿನೆಮಾದಲ್ಲಿಯೇ ಶಾಕ್. ಏನು ಮಾಡಿದರೆ ಗೊತ್ತೆ?
ನಾನು ಸಾಕಷ್ಟು ಎಕ್ಸ್ಪ್ರೆಸಿವ್. ನನ್ನ ಮಾತು, ಕೈ ಬೆರಳುಗಳ ಸನ್ನೆ ಕೆಲವರಿಗೆ ಇಷ್ಟವಾಗದೇ ಇರಬಹುದು. ಆದರೆ ನಾನು ಇರುವುದೇ ಹಾಗೆ. ನನ್ನ ಈ ನಡವಳಿಕೆ ಕೆಲವರಿಗೆ ಬೇಸರ ತರಿಸಬಹುದು. ಆದರೆ ನನ್ನ ಉದ್ದೇಶ ಕೆಟ್ಟದಾಗಿರುವುದಿಲ್ಲ ಎಂದು ಅವರು ಹೇಳಿದ್ದಾರೆ. ಇದೀಗ ರಶ್ಮಿಕ ಮಂದಣ್ಣ ಅವರು ರಿಷಬ್ ಶೆಟ್ಟಿಗೆ ಟಾಂಗ್ ಕೊಟ್ಟಿದಾರೆ ಎನ್ನುವ ಅನುಮಾನಗಳು ಕೇಳಿ ಬರುತ್ತಿವೆ. ಏಕೆಂದರೆ ರಶ್ಮಿಕ ಮಂದಣ್ಣ ಹೀಗೆ ಕೈ ಬೆರಳು ತೋರಿಸಿ ಮಾತನಾಡಿದ ನಂತರ ರಿಶಬ್ ಅವರು ಸಹ ಪ್ರಶ್ನೆ ಒಂದಕ್ಕೆ ಈ ರೀತಿ ಕೈ ಬೆರಳನ್ನು ಅಲ್ಲಾಡಿಸುವ ಮೂಲಕ ಇಂತಹ ನಟಿಯ ಜೊತೆಗೆ ನಾನು ನಟಿಸುವುದಿಲ್ಲ ಎಂದು ಅವರು ರಶ್ಮಿಕಾಗೆ ಸರಿಯಾಗಿ ಕೌಂಟರ್ ನೀಡಿದ್ದರು. ಹೀಗಾಗಿ ರಶ್ಮಿಕ ರಿಷಭ್ ಅವರಿಗೆ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಸಹ ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಇದನ್ನು ಓದಿ.. Kannada News: ಅಂದು ಪುನೀತ್ ಗಾಗಿ ಓಡೋಡಿ ಬಂದಿದ್ದ ದರ್ಶನ್, ಡಿ ಬಾಸ್ ಗುಣ ಕಂಡು ದೊಡ್ಮನೆ ಏನು ಮಾಡಿತ್ತು ಗೊತ್ತೇ??
Comments are closed.