Kannada News: ದರ್ಶನ್ ಹುಟ್ಟುಹಬ್ಬ ಬಂದವರಿಗೆ ಊಟ ನೀಡಲು ಖರ್ಚು ಮಾಡಿದ್ದು ಎಷ್ಟು ಕೋಟಿ ಗೊತ್ತೇ?? ಆ ದುಡ್ಡು ನಿಜಕ್ಕೂ ಕೊಟ್ಟವರು ಯಾರು ಗೊತ್ತೇ?
Kannada News: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇಂದು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ನಟ ದರ್ಶನ್ ಅವರ ಹುಟ್ಟುಹಬ್ಬವೆಂದರೆ ಅವರ ಅಭಿಮಾನಿಗಳಿಗೆ ನಿಜಕ್ಕೂ ಒಂದು ರೀತಿಯ ಸಂಭ್ರಮವೇ ಸರಿ. ಅವರ ಬರ್ತಡೆಯನ್ನು ಒಂದು ದೊಡ್ಡ ಹಬ್ಬದ ರೀತಿಯಲ್ಲಿ ಅಭಿಮಾನಿಗಳು ಆಚರಿಸುತ್ತಾರೆ. ಕಳೆದ ಮೂರು ವರ್ಷಗಳಿಂದ ನಟ ದರ್ಶನ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಕೋವಿಡ್ ಕಾರಣ ಹಾಗೂ ನಟ ಪುನೀತ್ ಅವರ ಅಕಾಲಿಕ ಮರಣದಿಂದಾಗಿ ದರ್ಶನ್ ತಾವು ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಘೋಷಿಸಿದರು. ಮೂರು ವರ್ಷಗಳ ನಂತರ ಇದೀಗ ಅಭಿಮಾನಿಗಳು ಅವರ ಹುಟ್ಟುಹಬ್ಬವನ್ನು ಈ ದಿನ ಬಹಳ ಅದ್ದೂರಿಯಾಗಿ ಆಚರಿಸುತ್ತಿದ್ದಾರೆ.
ನಟ ದರ್ಶನ್ ವರು ಈ ಮೊದಲಿನಂತೆ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದರು. ತಮ್ಮ ಹುಟ್ಟುಹಬ್ಬಕ್ಕೆ ಯಾರು ದುಬಾರಿ ಉಡುಗೊರೆ ತರುವುದು, ಸುಮ್ಮನೆ ನನಗಾಗಿ ಹಣ ಖರ್ಚು ಮಾಡುವುದು ಮಾಡಬೇಡಿ. ಹಾರ ತುರಾಯಿ ತರಬೇಡಿ, ಕಟೌಟ್ ನಿಲ್ಲಿಸಿ ಹಾಲಿನ ಅಭಿಷೇಕ ಮಾಡಿ ಹಣ ಪೋಲು ಮಾಡಬೇಡಿ ಎಂದು ಅವರು ಕೇಳಿಕೊಂಡಿದ್ದರು. ಅದೇ ದುಡ್ಡಿನಲ್ಲಿ ಊಟಕ್ಕಾಗಿ ಪರದಾಡುವವರಿಗೆ ಸಹಾಯ ಮಾಡಿ ಎಂದಿದ್ದರು. ಅದರಂತೆ ಅಭಿಮಾನಿಗಳು ಕೂಡ ನಡೆದುಕೊಂಡಿದ್ದಾರೆ. ದರ್ಶನ ಅವರ ಮನೆಗೆ ಮೂಟೆ ಮೂಟೆ ಗಟ್ಟಲೆ ದಿನಸಿ ಬಂದಿದೆ. ಅದು ಅಗತ್ಯ ಇರುವವರಿಗೆ ಸೇರುತಿದೆ ಎಂದೇ ಹೇಳಬಹುದು. ಇದನ್ನು ಓದಿ..Kannada News: ಆಹ್ವಾನ ಕೊಟ್ಟರು ನೇರವಾಗಿ ಪ್ರಧಾನ ಮಂತ್ರಿ ಮೋದಿ ರವರನ್ನು ಭೇಟಿ ಮಾಡಿಲ್ಲ ಕಿಚ್ಚ: ಇದಕ್ಕೆ ಕಾರಣ ಏನಂತೆ ಗೊತ್ತೇ?? ಕಿಚ್ಚನ ಕಾರಣ ಕೇಳಿ ಶಾಕ್ ಆದ ಫ್ಯಾನ್ಸ್.
ಇನ್ನು ನೆನ್ನೆ ಮಧ್ಯಾಹ್ನದಿಂದಲೂ ದರ್ಶನವರ ಮನೆಯ ಮುಂದೆ ಅಭಿಮಾನಿಗಳ ನೂಕು ನುಗ್ಗಲು ಉಂಟಾಗುತ್ತಿದೆ. ದರ್ಶನ್ ಅವರಿಗೆ ಶುಭಾಶಯ ಕೋರಲು ಅವರ ಮನೆಯ ಮುಂದೆ ಸಾವಿರಾರು ಮಂದಿ ಅಭಿಮಾನಿಗಳು ಸೇರುತ್ತಿದ್ದಾರೆ. ತಮ್ಮನ್ನು ಭೇಟಿ ಮಾಡಿ ಶುಭಾಶಯ ತಿಳಿಸಲು ಬಂದ ಪ್ರತಿಯೊಬ್ಬ ಅಭಿಮಾನಿಗಳನ್ನು ಅವರು ಅತ್ಯಂತ ಪ್ರೀತಿಯಿಂದ ಸ್ವಾಗತಿಸಿಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬರನ್ನು ನೋಡಿ ಶೇಕ್ ಹ್ಯಾಂಡ್ ಕೊಟ್ಟು ಅವರ ಶುಭಾಶಯಗಳನ್ನು ಆದರದಿಂದ ಸ್ವೀಕರಿಸುತ್ತಿದ್ದಾರೆ. ಅಲ್ಲದೆ ದರ್ಶನ್ ಭೇಟಿಗಾಗಿ ಬಂದ ಸಾವಿರಾರು ಜನರಿಗೆ ಅವರ ಮನೆಯ ಪಕ್ಕದಲ್ಲಿ ಭರ್ಜರಿ ಊಟದ ವ್ಯವಸ್ಥೆಯನ್ನು ಸಹ ಮಾಡಿಸಲಾಗಿದೆ.
ಬರುವ ಪ್ರತಿಯೊಬ್ಬ ಅಭಿಮಾನಿಗೂ ಸಹ ಅನ್ನ ಸಾಂಬಾರ್, ಸಿಹಿಯ ವ್ಯವಸ್ಥೆ ಕಲ್ಪಿಸಲಾಗಿದ್ದು ಯಾರೂ ಕೂಡ ಹಸಿದಿರಬಾರದು ಎಂದು ಇಷ್ಟೆಲ್ಲ ಮಾಡಲಾಗಿದೆ. ಅಂದಹಾಗೆ ನೆನ್ನೆ ರಾತ್ರಿಯಿಂದಲೇ ಊಟದ ವ್ಯವಸ್ಥೆ ಮಾಡಲಾಗಿದ್ದು, ಸಾವಿರ ಸಾವಿರ ಅಭಿಮಾನಿಗಳು ಅವರಿಗೆ ಶುಭಾಶಯ ಕೋರಲು ಮನೆಯ ಬಳಿ ಧಾವಿಸುತ್ತಿದ್ದಾರೆ. ಅವರೆಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದ್ದು ಇದಕ್ಕಾಗಿ ಬರೋಬರಿ ನಾಲ್ಕು ಕೋಟಿ ರೂಪಾಯಿ ಖರ್ಚಾಗಿದೆ. ಈ ಖರ್ಚನ್ನು ದರ್ಶನ್ ಅವರು ಸ್ವತಃ ತಾವೇ ಕೊಡುತ್ತೇನೆ ಎಂದರು ಸಹ ಅಭಿಮಾನಿಗಳು ಕೇಳದೆ ತಮ್ಮ ನೆಚ್ಚಿನ ಡಿ ಬಾಸ್ ಹುಟ್ಟು ಹಬ್ಬಕ್ಕೆ ತಾವೇ ಖರ್ಚು ಮಾಡುತ್ತೇವೆ ಎಂದು ಎಲ್ಲಾ ಹಣವನ್ನು ಅಭಿಮಾನಿಗಳೇ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನು ಓದಿ..Kannada News: ಈ ಕ್ರಿಕೆಟ್ ಆಟಗಾರನ ಮೇಲೆ ಪ್ರೀತಿ ಆಗಿಬಿಟ್ಟಿದೆ: ಅನುಷ್ಕಾ ಶೆಟ್ಟಿ ರವರ ಮನ ಕದ್ದ ಆ ಆಟಗಾರ ಯಾರು ಗೊತ್ತೇ?? ಫುಲ್ ಲವ್ ಅಂತೇ.
Comments are closed.