News from ಕನ್ನಡಿಗರು

Kannada News: ಎಲ್ಲರಿಗೂ ಶಾಕ್ ಕೊಟ್ಟ ದರ್ಶನ್: ಸಂದರ್ಶನದ ವೇಳೆ ನಾನು ಇರ್ತೇನೋ ಇಲ್ಲವೋ ಎಂದು ಭಾವುಕರಾಗಿ ಹೇಳಿದ್ದೇನು ಗೊತ್ತೇ?

3,971

Kannada News: ಇತ್ತೀಚಿನ ಸಂದರ್ಶನ ಒಂದರಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ರವರು ಭಾವುಕವಾಗಿ ಒಂದು ಸ್ಟೇಟ್ಮೆಂಟ್ ನೀಡಿದ್ದಾರೆ. ನಾಳೆ ನಾನು ಇರ್ತೀನೋ ಇಲ್ವೋ ಗೊತ್ತಿಲ್ಲ ಎಂದು ಹೇಳಿ ಅವರು ಭಾವುಕರಾಗಿದ್ದಾರೆ. ತಮ್ಮ ನಟನೆಯ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಯಾವಾಗಲೂ ಅಭಿಮಾನಿಗಳನ್ನು ಅವರು ಪ್ರೀತಿಯ ಸೆಲೆಬ್ರಿಟಿಗಳು ಎಂದೇ ಸಂಪಾದಿಸಿದ್ದಾರೆ. ಕರ್ನಾಟಕದಲ್ಲಿ ದೊಡ್ಡಮಟ್ಟದ ಕ್ರೇಜ್ ಮತ್ತು ಅಭಿಮಾನ ಪಡೆದಿರುವ ನಟರಲ್ಲಿ ದರ್ಶನ್ ಕೂಡ ಒಬ್ಬರು. ಅವರನ್ನು ಕಂಡರೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ, ಸಂಭ್ರಮಿಸುತ್ತಾರೆ. ಕೇವಲ ನಟನೆ ಮಾತ್ರವಲ್ಲದೆ ಅಭಿಮಾನಿಗಳನ್ನು ಪ್ರೀತಿಯಿಂದ ಕಾಣುವ ಗೌರವದಿಂದ ನಡೆಸಿಕೊಳ್ಳುವುದರಲ್ಲಿ ದರ್ಶನ್ ಯಾವಾಗಿದ್ದರು ಎತ್ತಿದ ಕೈ.

ದರ್ಶನ್ ರವರನ್ನು ಮಾಧ್ಯಮಗಳು ಬ್ಯಾನ್ ಮಾಡಿದ ನಂತರ ಡಿಜಿಟಲ್ ಮಾಧ್ಯಮದಲ್ಲಿ ಅವರು ಚಿತ್ರಗಳನ್ನು ಪ್ರಮೋಷನ್ ಮಾಡುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕ್ರಾಂತಿ (Kranthi) ದೊಡ್ಡ ಮಟ್ಟದ ನಿರೀಕ್ಷೆ ಉಂಟುಮಾಡಿದೆ. ದರ್ಶನ್ ರವರ ಈ ಹಿಂದಿನ ಸಿನಿಮಾಗಳಿಗಿಂತ ಈ ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಚಿತ್ರವು ಮುಂದಿನ ವರ್ಷ ಜನವರಿ 26ರಂದು ಭರ್ಜರಿಯಾಗಿ ತೆರೆ ಕಾಣುತ್ತಿದೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸ ಸಾಗುತ್ತಿದೆ. ಚಿತ್ರದ ಬಗ್ಗೆ ಅಷ್ಟೇನೂ ಮಾಹಿತಿಗಳು ಹೊರಗೆ ಬಂದಿಲ್ಲ. ಸಿನಿಮಾದ ಬಗ್ಗೆ ಅಷ್ಟೇನೂ ಮಾಹಿತಿಗಳು ಸಿಗದೇ ಇದ್ದರು ಕೂಡ ಈ ಸಿನಿಮಾದ ಮೇಲಿರುವ ಕ್ರೇಜ್ ಮಾತ್ರ ಕಡಿಮೆ ಏನು ಅಲ್ಲ. ಇತ್ತೀಚಿಗೆ ದರ್ಶನ್ ರವರು ತಮ್ಮ ಕ್ರಾಂತಿ ಸಿನಿಮಾದ ಕುರಿತ ಪ್ರಮೋಷನ್ ವೇಳೆ ಮಾಧ್ಯಮದವರ ಜೊತೆಗೆ ಮಾತನಾಡುತ್ತಾ ಕೆಲವು ವಿಷಯಗಳನ್ನು ಭಾವುಕವಾಗಿ ಹಂಚಿಕೊಂಡಿದ್ದಾರೆ. ಇದನ್ನು ಓದಿ.. Ramachari: ಪ್ರಾಜೆಕ್ಟ್ ಕದ್ದು ಅತ್ತಿಗೆ ಪ್ರಾಣ ಕಸಿದುಕೊಂಡ ಚಾರು ಅನ್ನು ಮದುವೆಯಾಗುತ್ತಾನೆ ರಾಮಾಚಾರಿ, ರಾಮಾಚಾರಿ ಮುಂದಿನ ಪ್ಲಾನ್ ಏನು ಗೊತ್ತೇ??

ಕ್ರಾಂತಿ ಚಿತ್ರ ನಮ್ಮದಲ್ಲ, ಬದಲಾಗಿ ಅದನ್ನು ಈಗಾಗಲೇ ಅಭಿಮಾನಿಗಳು ಅವರ ಕೆಲಸವಾಗಿ ತೆಗೆದುಕೊಂಡಿದ್ದಾರೆ. ಕ್ರಾಂತಿಯನ್ನು ಅವರಿಗೆ ಒಪ್ಪಿಸಿ ಆಗಿದೆ ಎಂದು ದರ್ಶನ್ ರವರು ಹೇಳಿದ್ದಾರೆ. ನಿಮ್ಮನ್ನು ಇಷ್ಟೊಂದು ಪ್ರೀತಿಸುವ ಅಭಿಮಾನಿಗಳ ಬಗ್ಗೆ ಏನು ಹೇಳುತ್ತೀರಿ, ಅವರಿಗಾಗಿ ನೀವು ಏನು ಮಾಡಲು ಬಯಸುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಅವರು, “ನಾನು ಅದನ್ನು ಮಾಡುತ್ತೇನೆ, ಇದನ್ನು ಮಾಡುತ್ತೇನೆ ಎಂದು ಹೇಳುವುದಿಲ್ಲ. ನಾಳೆ ನಾನು ಇರ್ತೀನೋ ಇಲ್ವೋ ಗೊತ್ತಿಲ್ಲ. ಆದರೆ ಇದ್ದಷ್ಟು ದಿನ ನನ್ನ ಅಭಿಮಾನಿಗಳ ಜೊತೆಗೆ ಅತ್ಯಂತ ಪ್ರೀತಿ ಮತ್ತು ಗೌರವದಿಂದ ನಡೆದುಕೊಳ್ಳುತ್ತೇನೆ. ಅವರಿಗಾಗಿ ಏನು ಬೇಕಾದರೂ ಮಾಡುತ್ತೇನೆ. ನನ್ನನ್ನು ಕೆಲವರು ಎಂದು ನೋಡೇ ಇರುವುದಿಲ್ಲ. ಕೆಲವರು ನೋಡಿದರೂ ನನ್ನ ಬಳಿ ಮಾತು ಆಡಿರುವುದಿಲ್ಲ. ಇಷ್ಟಿದ್ದು ಯಾವ ಸಂಬಂಧವೂ ಇಲ್ಲದೆ ನನ್ನನ್ನು ಇಷ್ಟೊಂದು ಪ್ರೀತಿಸುವವರನ್ನು ಕಂಡರೆ ನನಗೆ ಖುಷಿಗೆ ಕಣ್ಣೀರು ತುಂಬಿ ಬರುತ್ತದೆ” ಎಂದು ಅವರು ಭಾವಕವಾಗಿ ಹೇಳಿದ್ದಾರೆ. ಇದನ್ನು ಓದಿ..Kannada Astrology: ಶುಕ್ರ, ಬುಧ ಹಾಗೂ ಸೂರ್ಯ ದೇವರಿಂದ ಒಮ್ಮೆಲೇ ಅದೃಷ್ಟ ಪಡೆಯುತ್ತಿರುವ ನಾಲ್ಕು ರಾಶಿಗಳು ಯಾವುವು ಗೊತ್ತೇ??

Leave A Reply

Your email address will not be published.