Kannada News: ದರ್ಶನ್ ಗೆ ಚಪ್ಪಲಿ ಎಸೆತಕ್ಕೂ ಅರ್ಧ ಗಂಟೆ ಗೆ ಮುನ್ನ ನಡೆದ ಘಟನೆ ವಿಡಿಯೋ ವೈರಲ್. ಏನಾಗಿದೆ ಗೊತ್ತೆ ವಿಡಿಯೋ ನಲ್ಲಿ?
Kannada News: ನಟ ದರ್ಶನ್ (Darshan) ಮೊನ್ನೆ ಕ್ರಾಂತಿ ಸಿನಿಮಾದ ಪ್ರಚಾರಕ್ಕಾಗಿ ಹೊಸಪೇಟೆ (Hospet) ತಾಲೂಕಿಗೆ ಭೇಟಿ ನೀಡಿದ್ದರು. ಈ ವೇಳೆ ದುಷ್ಕರ್ಮಿ ಒಬ್ಬ ನಟ ದರ್ಶನ್ ಮುಖದ ಮೇಲೆ ಚಪ್ಪಲಿ ಎಸೆದ ಘಟನೆ ನಡೆದಿತ್ತು. ಈ ಕುರಿತಂತೆ ಎಲ್ಲೆಡೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಒಬ್ಬ ಕಲಾವಿದನ ಜೊತೆಗೆ ಹೀಗೆ ನಡೆದುಕೊಳ್ಳುವುದು ಅಪರಾಧ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಅಂದ ಹಾಗೆ ಈ ಘಟನೆ ನಡೆಯುವುದಕ್ಕೂ ಅರ್ಧ ಗಂಟೆ ಮೊದಲು ಅಲ್ಲಿನ ವಾತಾವರಣ ಚೂರು ಸರಿ ಇರಲಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿ ವಿಡಿಯೋ ಒಂದು ವೈರಲ್ ಆಗಿದೆ. ಇಂತಹದೊಂದು ಕೃತ್ಯ ನಡೆಯುವ ಅರ್ಧ ಗಂಟೆ ಮೊದಲು ಏನಾಗಿತ್ತು ಎನ್ನುವುದರ ವಿವರವಿರುವ ಆ ವಿಡಿಯೋ ಈಗ ವೈರಲ್ ಆಗಿದೆ.
ಇದೇ ಜನವರಿ 26ರಂದು ನಟ ದರ್ಶನ್ ರವರ ಬಹುನಿರೀಕ್ಷಿತ ಚಿತ್ರ ಕ್ರಾಂತಿ (Kranthi) ಬಿಡುಗಡೆ ಆಗಲಿದೆ. ಚಿತ್ರದಂಡ ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಪ್ರಚಾರಕ್ಕಾಗಿ ಚಿತ್ರತಂಡವು ಮೊನ್ನೆ ಹೊಸಪೇಟೆಗೆ ಭೇಟಿ ನೀಡಿತ್ತು ಚಿತ್ರ ತಂಡ. ಕಾರ್ಯಕ್ರಮದಲ್ಲಿ ಮೊದಲಿಗೆ ನಟ ದರ್ಶನ್ ಪುನೀತ್ ಅವರ ಪುತ್ತಳಿಗೆ ನಮನ ಸಲ್ಲಿಸಿ ನಂತರ ಕಾರ್ಯಕ್ರಮದಲ್ಲಿ ಮಾತು ಶುರು ಮಾಡಿದರು. ಎಲ್ಲವೂ ಯಥಾಸ್ಥಿತಿಯಲ್ಲಿ ನಡೆಯುತ್ತಿತ್ತು, ಯಾವುದೇ ತೊಂದರೆ ಇರಲಿಲ್ಲ. ಈ ವೇಳೆ ವೇದಿಕೆಯ ಮೇಲೆ ನಿಂತಿದ್ದ ನಟ ದರ್ಶನ್ ಅವರ ಮೇಲೆ ಚಪ್ಪಲಿ ತೂರಿ ಬಂದಿದೆ. ಯಾರೋ ದುಷ್ಕರ್ಮಿಯೊಬ್ಬ ನಟ ದರ್ಶನ್ ಅವರ ಮುಖದ ಮೇಲೆ ಚಪ್ಪಲಿ ಎಸಿಯುತ್ತಾನೆ. ಆದರೆ ಇದಕ್ಕೂ ಮೊದಲು ಅರ್ಧ ಗಂಟೆ ನಡೆದ ಅದೊಂದು ಘಟನೆ ಆ ವ್ಯಕ್ತಿಯೇ ಹೀಗೆ ಮಾಡಿರಬಹುದು ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. ಇದನ್ನು ಓದಿ..Kannada News: ಬಟ್ಟೆ ಕಡಿಮೆ ಹಾಕಿ ಶಾರುಖ್ ಜೊತೆ ಮೈ ಜುಮ್ ಎನ್ನುವಂತೆ ಕುಣಿಯಲು ದೀಪಿಕಾ ಪಡೆದ ಸಂಭಾವನೆ ಕೇಳಿದರೆ, ದಂಗಾಗಿ ಬಿಡ್ತೀರಾ.
ನಟ ದರ್ಶನ್ ಅವರ ಮೇಲೆ ದುಷ್ಕರ್ಮಿ ಚಪ್ಪಲಿ ಎಸಿಯುವುದಕ್ಕೂ ಅರ್ಧ ಗಂಟೆ ಮೊದಲು ನಟ ದರ್ಶನ್ ಮಾತನಾಡುತ್ತಿದ್ದರು. ಈ ವೇಳೆ ಕಿಡಿಗೇಡಿಯೊಬ್ಬ ಪುನೀತ್ ಅವರ ಹೆಸರು ಹೇಳಿಕೊಂಡು ಏನೇನೋ ಮಾತನಾಡಿದ್ದಾನೆ. ಬಹುಶಹ ಆತ ಕುಡಿದಿರುವವನಂತೆ ಕಾಣುತ್ತಾನೆ. ಪುನೀತ್ ಬಗ್ಗೆ ಪರವಾಗಿ ಮಾತನಾಡುವ ಬರದಲ್ಲಿ ಆತ ದರ್ಶನ್ ಬಗ್ಗೆ ಕೇವಲವಾಗಿ ಮಾತನಾಡಿದ್ದಾನೆ. ರಚಿತಾರಾಮ್ (Rachita Ram) ಮಾತು ಶುರು ಮಾಡುವ ವೇಳೆ ಪಕ್ಕದಲ್ಲಿಯೇ ನಿಂತಿದ್ದ ದರ್ಶನ್ ಅವರ ಮುಖದ ಮೇಲೆ ಚಪ್ಪಲಿ ತೂರಿ ಬಂದಿದೆ. ನೇರವಾಗಿ ಅದು ಅವರ ಕೆನ್ನೆ ಮುಖಕ್ಕೆ ತಾಕಿ ಕೆಳಗೆ ಬಿದ್ದಿದೆ. ಹೀಗಿದ್ದರೂ ಕೂಡ ನಟ ದರ್ಶನ್ ಕೋಪ ಮಾಡಿಕೊಳ್ಳದೆ, ಪರವಾಗಿಲ್ಲ ಬಿಡಿ. ನಾನು ಇಂಥದ್ದನ್ನೆಲ್ಲ ಸಾಕಷ್ಟು ನೋಡಿ ಬಿಟ್ಟಿದ್ದೇನೆ ಎನ್ನುವ ಮೂಲಕ ದೊಡ್ಡತನ ಮೆರೆದಿದ್ದಾರೆ. ಆದರೂ ಕೂಡ ಕಲೆಗೆ ಕಲಾವಿದನಿಗೆ ಬೆಲೆ ಕೊಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಯಾವುದೇ ಕಲಾವಿದನಿಗೂ ಹೀಗೆ ಅಪಮಾನ ಮಾಡುವುದು ಉಚಿತವಲ್ಲ. ಈ ಕುರಿತಾಗಿ ಯಾವುದೇ ಭೇದವಿಲ್ಲದೆ ಎಲ್ಲ ಸ್ಟಾರ್ ನಟರ ಅಭಿಮಾನಿಗಳು ಮತ್ತು ನಟ ನಟಿಯರು ದರ್ಶನ್ ಪರವಾಗಿ ಮಾತನಾಡುತ್ತಿದ್ದಾರೆ. ಅಲ್ಲದೆ ದುಷ್ಕೃತ್ಯ ಮಾಡಿದ ಕಿಡಿಗೇಡಿಯನ್ನು ಕಂಡುಹಿಡಿವ ಪ್ರಯತ್ನ ನಡೆಯುತ್ತಿದೆ. ಇದನ್ನು ಓದಿ.. Useful Tips: ಮನೆಯಲ್ಲಿ ಕರೆಕ್ಟ್ ಬಿಲ್ ಬರಲೇ ಬಾರದು, ಸೊನ್ನೆ ಬರಬೇಕು ಎಂದರೆ, ಜಸ್ಟ್ ಈ ಚಿಕ್ಕ ಕೆಲಸ ಮಾಡಿ ಸಾಕು. ಫುಲ್ ಹಣ ಉಳಿಸಿ.
Comments are closed.