Kannada News: ದರ್ಶನ್ ಅಭಿಮಾನಿಗಳಿಗೆ ಮತ್ತೊಂದು ಬಿಗ್ ಶಾಕ್: ಚಪ್ಪಲಿ ಎಸೆತ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್. ಏನಾಗಿದೆ ಗೊತ್ತೇ? ಇವೆಲ್ಲ ಬೇಕಿತ್ತಾ??
Kannada News: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರಿಗೆ ಚಪ್ಪಲಿ ಎಸೆದ ಪ್ರಕರಣ ರಾಜ್ಯದ್ಯಂತ ಸಂಚಲನ ಸೃಷ್ಟಿಸುತ್ತಿದೆ. ಕಲಾವಿದರಿಗೆ ಈ ರೀತಿ ಅಪಮಾನ ಮಾಡುವುದು ಸರಿಯಲ್ಲ ಎಂದು ಎಲ್ಲೆಡೆ ಎಲ್ಲೆಡೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷಿತ ಕ್ರಾಂತಿ ಚಿತ್ರದ ಪ್ರಚಾರದ ವೇಳೆ ಇಂತಹದೊಂದು ಘಟನೆ ಜರುಗಿದೆ. ವೇದಿಕೆಯ ಮೇಲೆ ಮಾತನಾಡುವ ವೇಳೆ ಯಾರೋ ಕಿಡಿಗೇಡಿ ದರ್ಶನ್ ಮುಖದ ಮೇಲೆ ಚಪ್ಪಲಿ ಎಸೆದಿದ್ದಾನೆ. ಆದರೆ ಈ ಪ್ರಕರಣ ನಡೆದು ಮೂರು ದಿನಗಳು ಕಳೆಯುತ್ತಾ ಬಂದರು ಇನ್ನೂ ಸಹ ಆ ಕಿಡಿಗೇಡಿ ಯಾರು ಎನ್ನುವುದನ್ನು ಪತ್ತೆಹಚ್ಚಲಾಗಿಲ್ಲ. ಈ ಬಗ್ಗೆ ಎಲ್ಲೆಡೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹೊಸಪೇಟೆಯಲ್ಲಿ ನಟ ದರ್ಶನ್ ಹಾಗೂ ಇಡೀ ಕ್ರಾಂತಿ (Kranthi) ಚಿತ್ರ ತಂಡ ಭಾಗಿಯಾಗಿತ್ತು. ಚಿತ್ರದ ಪ್ರಚಾರ ಕಾರ್ಯಕ್ಕಾಗಿ ಇಡೀ ಚಿತ್ರತಂಡ ಭಾಗವಹಿಸಿತ್ತು. ಈ ವೇಳೆ ಮೊದಲಿಗೆ ದರ್ಶನವರು ಪುನೀತ್ ಅವರ ಪುತ್ತಳಿಗೆ ನಮನ ಸಲ್ಲಿಸಿ ಮಾತು ಶುರು ಮಾಡಿದ್ದರು. ನಂತರ ರಚಿತಾ ರಾಮ್ ಮಾತನಾಡುತ್ತಿರುವಾಗ ವೇದಿಕೆ ಮೇಲೆ ನಿಂತಿದ್ದ ದರ್ಶನ್ ಅವರ ಮುಖದ ಮೇಲೆ ಜನರು ನಿಂತಿದ್ದ ಕಡೆಯಿಂದ ಚಪ್ಪಲಿಗೊಂದು ತೂರಿ ಬಂದಿದೆ. ಇದು ನೇರವಾಗಿ ದರ್ಶನ್ ರವರ ಕೆನ್ನೆ ಮತ್ತು ಮುಖಕ್ಕೆ ಬಿದ್ದಿದೆ. ಆದರೆ ಈ ಚಪ್ಪಲಿಯನ್ನು ಎಸೆದಿದ್ದು ಯಾರು ಎನ್ನುವುದು ತಿಳಿದುಬಂದಿಲ್ಲ. ಇನ್ನೂ ಸಹ ಆ ದುಷ್ಕರ್ಮಿಯನ್ನು ಪತ್ತೆಹಚ್ಚಲಾಗಲಿಲ್ಲ ಎನ್ನುವುದು ನಿಜಕ್ಕೂ ವಿಪರ್ಯಾಸವೇ ಸರಿ. ಕಲೆಗೆ ಕಲಾವಿದರಿಗೆ ಗೌರವ ನೀಡುವ ನಾಡು ನಮ್ಮದು. ಹೀಗಿರುವಾಗ ನಟ ದರ್ಶನ್ ಅಂತ ಒಬ್ಬ ಅದ್ಭುತ ಕಲಾವಿದನಿಗೆ ಈ ರೀತಿ ಅಪಮಾನ ಮಾಡಿದ್ದು ನಿಜಕ್ಕೂ ಸರಿಯಿಲ್ಲ ಎಂದು ಹೇಳಬಹುದು. ಇದನ್ನು ಓದಿ..Kannada News: ಇರಲಾರದೆ ಇರುವ ಬಿಟ್ಕೊಂಡ ರಮ್ಯಾ; ಡಿ ಬಾಸ್ ಫ್ಯಾನ್ಸ್ ಫುಲ್ ರೊಚ್ಚಿಗೆದ್ದದ್ದು ಯಾಕೆ ಗೊತ್ತೇ? ಶಾಕ್ ಆದ ಡಿ ಬಾಸ್.
ಅಲ್ಲದೆ ಈ ರೀತಿ ದುಷ್ಕೃತ್ಯ ಮಾಡಿದ್ದು ಪುನೀತ್ (Puneeth Rajkumar) ಅಭಿಮಾನಿ ಎಂದು ಹೇಳಲಾಗುತ್ತಿದೆ. ಆದರೆ ಪುನೀತ್ ಅವರು ಎಂತಹ ಮಹಾನ್ ವ್ಯಕ್ತಿ ಎನ್ನುವುದು ನಮ್ಮೆಲ್ಲರಿಗೂ ಗೊತ್ತಿದೆ. ಅವರಂತಹ ಒಬ್ಬ ನಟ, ಮನುಷ್ಯ ಮತ್ತೊಬ್ಬರು ಸಿಗಲಾರರು. ಹೀಗಿರುವಾಗ ಪುನೀತ್ ಎಂದಿಗೂ ಕೂಡ ಇಂತಹ ವಿಷಯಗಳನ್ನು ಬೆಂಬಲಿಸುವುದಿಲ್ಲ. ಇವುಗಳ ಬಗ್ಗೆ ಯೋಚನೆ ಮಾಡುವುದಿಲ್ಲ. ಹೀಗಿರುವಾಗ ನಿಜಕ್ಕೂ ಈ ರೀತಿ ಮಾಡಿದ ವ್ಯಕ್ತಿ ಪುನೀತ್ ಅಭಿಮಾನಿ ಎಂದು ಹೇಳಿಕೊಳ್ಳುತ್ತಿರುವ ಮಾತುಗಳೇ ಬಹುಶಃ ಪುನೀತ್ ಅವರಿಗೆ ನೋವು ತರಬಹುದು. ಅಲ್ಲದೆ ದರ್ಶನ್ ರವರಿಗೂ ಕೂಡ ಇದು ಎಷ್ಟು ನೋವನ್ನು ತಂದಿರಬೇಡ. ಹೀಗಿದ್ದರೂ ಕೂಡ ದರ್ಶನ್ ತಮ್ಮ ದೊಡ್ಡತನ ಮೆರೆದಿದ್ದಾರೆ. ಇರಲಿ ಬಿಡಿ ನಾನು ಇಂಥದ್ದನ್ನೆಲ್ಲ ನನ್ನ ಜೀವನದಲ್ಲಿ ಸಾಕಷ್ಟು ನೋಡಿದ್ದೇನೆ ಎಂದಿದ್ದಾರೆ. ಏನೇ ಆಗಲಿ ಒಟ್ಟಿನಲ್ಲಿ ಈ ರೀತಿಯ ದುಷ್ಕೃತ್ಯ ನಡೆಸಿದವನಿಗೆ ತಕ್ಕ ಶಿಕ್ಷೆ ಆಗಲೇಬೇಕಿದೆ. ಇದನ್ನು ಓದಿ.. Business Idea: ನಿಮ್ಮ ಬಳಿ ಕೇವಲ 5000 ಸಾವಿರ ಇದ್ದರೇ, ಈ ಬಿಸಿನೆಸ್ ಹಾಕಿ. ತಿಂಗಳಿಗೆ 40 ಸಾವಿರ ಸುಲಭ ಲಾಭ ಗಳಿಸಿ. ಯಾವುದೇ ಜಾಬ್ ವೇಸ್ಟ್ ಇದರ ಮುಂದೆ.
Comments are closed.