Kannada News: ಕ್ರಾಂತಿ ಬಂದ್ ಮಾಡುವ ಗಂಡು ಇನ್ನು ಹುಟ್ಟಿಲ್ಲ ಒಂದೇ ದಿನಕ್ಕೆ ಎಲ್ಲಾ ಉಲ್ಟಾ ಪಲ್ಟಾ ಬ್ಯಾನ್ ಎಂದವರಿಗೆ ದರ್ಶನ್ ಎಚ್ಚರಿ
Kannada Mews: ನಟ ದರ್ಶನ್ (Darshan) ಮತ್ತು ಪುನೀತ್ (Puneeth Rajkumar) ಅಭಿಮಾನಿಗಳ ಸ್ಟಾರ್ ವಾರ್ ಇಷ್ಟಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ದರ್ಶನ್ ಅವರಿಗೆ ಹೊಸಪೇಟೆಯಲ್ಲಿ ಚಪ್ಪಲಿ ಎಸಿದ ಪ್ರಕರಣ ನಡೆದ ಅಂದಿನಿಂದ ಇಂದಿನವರೆಗೂ ಕೂಡ ಇಬ್ಬರು ಅಭಿಮಾನಿಗಳ ನಡುವೆ ವಾದ, ವಿವಾದ, ಕಿತ್ತಾಟ ಜೋರಾಗಿ ನಡೆಯುತ್ತಿದೆ. ಇಷ್ಟು ದಿನಗಳು ಕಳೆದರೂ ಇದಕ್ಕೆ ಒಂದು ತಾರ್ಕಿಕ ಅಂತ್ಯ ಸಿಗುವ ಲಕ್ಷಣವೇ ಕಾಣುತ್ತಿಲ್ಲ. ದರ್ಶನ್ ಅಭಿಮಾನಿಗಳು ಇದನ್ನು ಪುನೀತ್ ಅಭಿಮಾನಿಗಳೇ ಉದ್ದೇಶಪೂರ್ವಕವಾಗಿ ಮಾಡಿಸಿ ನಮ್ಮ ಬಾಸ್ ಗೆ ಅಪಮಾನ ಮಾಡಿಸಿದ್ದಾರೆ ಎಂದು ಆರೋಪ ಮಾಡುತ್ತಿರುವುದಲ್ಲದೆ, ರಾಜ್ ಕುಟುಂಬಕ್ಕೂ ಕೂಡ ಅವ ಹೇಳನಕಾರಿಯಾಗಿ ಟೀಕೆ ಮಾಡುತ್ತಾರೆ. ಇದೇ ಕಾರಣಕ್ಕೆ ನಾಲ್ಕೈದು ದಿನಗಳ ಹಿಂದೆ ಬೆಂಗಳೂರಿನ ಫಿಲಂ ಚೇಂಬರ್ ನಲ್ಲಿ ಡಾ. ರಾಜ್ ಕುಮಾರ್ (Dr Rajkumar) ಅಭಿಮಾನಿಗಳ ಬಳಗ ದೊಡ್ಡ ಪ್ರತಿಭಟನೆಯನ್ನೇ ನಡೆಸಿತ್ತು.
ಹೊಸಪೇಟೆಯಲ್ಲಿ ಕ್ರಾಂತಿ ಚಿತ್ರದ ಎರಡನೇ ಹಾಡಾದ ಬೊಂಬೆ ಬೊಂಬೆ ಹಾಡನ್ನು ಬಿಡುಗಡೆ ಮಾಡಲೆಂದೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವೇದಿಕೆ ಮೇಲೆ ನಿಂತಿದ್ದ ನಟ ದರ್ಶನ್ ಅವರಿಗೆ ಜನರ ಮಧ್ಯೆ ಇಂದ ಯಾರೋ ಚಪ್ಪಲಿ ಎಸೆದಿದ್ದರು. ಇದನ್ನು ಪುನೀತ್ ಅಭಿಮಾನಿಗಳೇ ಮಾಡಿಸಿದ್ದಾರೆ ಎಂದು ಆರೋಪಿಸಲಾಗುತ್ತಿತ್ತು. ಆದರೆ ನಾವು ಹಾಗೆ ಮಾಡಿಲ್ಲ ಎಂದು ಪುನೀತ್ ಅಭಿಮಾನಿಗಳು ಹೇಳಿಕೊಂಡರು ಸಹ ಸುಮ್ಮನಿರದ ದರ್ಶನ್ ಅಭಿಮಾನಿಗಳು ಇದನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋದರು. ಡಾ. ರಾಜಕುಮಾರ್ ಅವರ ಇಡೀ ಕುಟುಂಬ ಹಾಗೂ ರಾಜವಂಶದ ಬಗ್ಗೆ ಅನೇಕ ಟ್ರೋಲ್ ಗಳನ್ನು ಹಾಗೂ ಕೆಟ್ಟ ಕೆಟ್ಟ ಅವಹೇಳನಕಾರಿ ಮಾತುಗಳನ್ನು ಆಡಲಾಯಿತು. ಇದರ ವಿರುದ್ಧವಾಗಿ ಡಾ. ರಾಜಕುಮಾರ್ ಅಭಿಮಾನಿಗಳು ಪ್ರತಿಭಟನೆಯನ್ನು ನಡೆಸಿದ್ದಾರೆ. ಇದನ್ನು ಓದಿ..Viral News: ಆಂಟಿ ಜೊತೆಯ ಶುರುವಾಯ್ತು ಡಿಂಗ್ ಡಾಂಗ್ ಆಟ: ಪ್ರೀತಿ ಮಾಡಿದ ಬಳಿಕ ಓಯೋ ರೂಮ್ ಗೆ ಬರಲ್ಲ ಎಂದಿದ್ದಕ್ಕೆ ಆತ ಮಾಡಿದ್ದೇನು ಗೊತ್ತೇ?
ಡಾಕ್ಟರ್ ರಾಜಕುಮಾರ್ ಅಭಿಮಾನಿಗಳು, ಪುನೀತ್, ಶಿವಣ್ಣ (Shivanna), ರಾಘವೇಂದ್ರ ರಾಜಕುಮಾರ್ (Raghavendra Rajkumar) ಅವರ ಅಭಿಮಾನಿಗಳು ಎಲ್ಲರೂ ಒಟ್ಟಾಗಿ ಸೇರಿ ಬೆಂಗಳೂರಿನ ಫಿಲಂ ಚೇಂಬರ್ ಮುಂಭಾಗದಲ್ಲಿ ಮೊನ್ನೆಯಷ್ಟೇ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಕ್ರಾಂತಿ ಚಿತ್ರ ಬಿಡುಗಡೆಯಾಗಲು ಬಿಡುವುದಿಲ್ಲ. ರಾಜಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಅಪಾರ. ಅವರನ್ನು ಅಪಮಾನಿಸುವ ಕೃತ್ಯ ವನ್ನು ಮಾಡಿದರೆ ಯಾರನ್ನು ಕ್ಷಮಿಸಲಾಗುವುದಿಲ್ಲ ಎಂದು ಅವರು ದೊಡ್ಡ ಪ್ರತಿಭಟನೆಯನ್ನೇ ನಡೆಸಿದರು. ಇದಲ್ಲದೆ ಜನವರಿ 26 ಅಂದರೆ ಕ್ರಾಂತಿ ಚಿತ್ರ ಬಿಡುಗಡೆಯಾಗುವ ದಿನಾಂಕ ಕರ್ನಾಟಕವನ್ನೇ ಬಂದ್ ಮಾಡುವುದಾಗಿ, ಚಿತ್ರವನ್ನು ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಸಿದರು. ಆದರೆ ದರ್ಶನ್ ಅಭಿಮಾನಿಗಳು ಅದು ಏನು ಮಾಡುತ್ತೀರೋ ಮಾಡ್ಕೊಳ್ಳಿ, ಕ್ರಾಂತಿ ಚಿತ್ರ ಬಿಡುಗಡೆ ಆಗೇ ಆಗುತ್ತದೆ. ನಿಮ್ಮಿಂದ ಏನು ಮಾಡೋದಿಕ್ಕೆ ಆಗೋದಿಲ್ಲ. ಕ್ರಾಂತಿ ರೆಕಾರ್ಡ್ ಬ್ರೇಕ್ ಮಾಡಲಿದೆ ಎಂದು ಪ್ರತಿಕ್ರಿಯಿಸುತ್ತಿರುವ ಘಟನೆಗಳು ನಡೆಯುತ್ತಿವೆ. ಇದನ್ನು ಓದಿ.. Kannada News: ಇರುವುದೆಲ್ಲವನ್ನು ಇದ್ದ ಹಾಗೆ ಒಪ್ಪಿಕೊಂಡು, ವಿಡಿಯೋ ಬಗ್ಗೆ ನೋವು ಹೊರಹಾಕಿದ ಶಿಲ್ಪ ಗೌಡ, ನಿಜ ತಿಳಿದರೆ ನೀವೇ ಕ್ಷಮೆ ಕೇಳುತ್ತೀರಿ.
Comments are closed.