Kannada News: ದಿಯಾ ಹೆಗ್ಡೆ ನಂತರ ಅಸಲಿ ಪ್ರತಿಭೆ ಪ್ರಗತಿ ರವರಿಗೆ ಕರೆ ಮಾಡಿದ ದರ್ಶನ್, ದಿಡೀರ್ ಎಂದು ಕರೆಮಾಡಿ ಹೇಳಿದ್ದೇನು ಗೊತ್ತೇ??
Kannada News: ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರತಿ ವಾರಾಂತ್ಯ ಪ್ರಸಾರವಾಗುವ ಸರಿಗಮಪ ಸೀಸನ್ 19 (Saregamapa Season 19) ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಆಗಿದೆ. ಈಗಾಗಲೇ ಯಶಸ್ವಿಯಾಗಿ 18 ಸೀಜನ್ ಗಳನ್ನು ಮುಗಿಸಿದ್ದು, ಇದೀಗ ಮಕ್ಕಳಿಗಾಗಿ 19ನೇ ಸೀಸನ್ ಅನ್ನು ನಡೆಸುತ್ತಿದೆ. ಕೆಲವು ವಾರಗಳ ಹಿಂದೆ ಶುರುವಾಗಿರುವ ಈ ಕಾರ್ಯಕ್ರಮದಲ್ಲಿ ಮಕ್ಕಳ ಗಾಯನ ಪ್ರತಿಭೆಗೆ ಕನ್ನಡಿಗರು ಬೆರಗಾಗಿದ್ದಾರೆ. ಅದರಲ್ಲೂ ಈ ಶೋ ನಲ್ಲಿ ಪ್ರಗತಿ ಬಡಿಗೇರ್ (Pragati Badiger) ಎಲ್ಲರ ಅಚ್ಚುಮೆಚ್ಚಿನ ಸ್ಪರ್ಧಿಯಾಗಿದ್ದಾರೆ. ಒಂದು ರೀತಿ ಇವರ ಇಡೀ ಕುಟುಂಬವೇ ಗಾಯಕರ ಕುಟುಂಬವಾಗಿದ್ದು, ಅತ್ಯಂತ ಬಡತನದಲ್ಲಿ ಬೆಳೆದ ಪ್ರತಿಭೆ ಪ್ರಗತಿ. ಪ್ರಗತಿ ಅವರ ಪ್ರತಿಭೆ ಮತ್ತು ಹಾಡುಗಾರಿಕೆಯನ್ನು ಮೆಚ್ಚಿಕೊಂಡಿರುವ ನಟ ದರ್ಶನ್ ಅವರು ಇದೀಗ ಪ್ರಗತಿಯವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಇಷ್ಟಕ್ಕೂ ದರ್ಶನ್ ಕರೆಯಲ್ಲಿ ಪ್ರಗತಿಗೆ ಹೇಳಿರುವ ಮಾತುಗಳು ಏನೆಂದು ಗೊತ್ತಾ?
ಸರಿಗಮಪ ಶುರುವಾದಾಗ ಮೆಗಾ ಆಡಿಶನ್ ನಲ್ಲಿ ಪ್ರಗತಿ ಬಡಿಗೇರ್ ಹಾಡಿದ ಹಾಡಿಗೆ ಕಾರ್ಯಕ್ರಮದ ತೀರ್ಪುಗಾರರು ಹಾಗೂ ಇತರ ಜಡ್ಜ್ ಪ್ಯಾನೆಲ್ ತಲೆದೂಗಿತ್ತು. ಮೊದಲ ಹಾಡಿನಲ್ಲೇ ಪ್ರಗತಿ ಅವರ ಮೇಲೆ ಎಲ್ಲರಿಗೂ ಹೆಚ್ಚಿನ ನಿರೀಕ್ಷೆ ಉಂಟಾಗಿತ್ತು. ಆನಂತರ ಪ್ರಗತಿ ಅವರ ಇಡೀ ಕುಟುಂಬವು ಕೂಡ ಹಾಡುಗಾರಿಕೆಯ ಹಿನ್ನೆಲೆ ಹೊಂದಿದೆ ಎಂದು ತಿಳಿದುಬಂದಿತ್ತು. ತಂದೆ ಹಲವಾರು ವೇದಿಕೆ ಕಾರ್ಯಕ್ರಮಗಳಲ್ಲಿ ಹಾಡುತ್ತಾರೆ. ಈ ರೀತಿಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡೇ ಅವರು ಇಡೀ ಕುಟುಂಬದ ನಿರ್ವಹಣೆ ಮಾಡಬೇಕು. ಮೆಗಾ ಆಡಿಶನ್ ನ ಈ ಕುಟುಂಬದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿಯೂ ಸಹ ಸದ್ದು ಮಾಡಿತ್ತು. ಸಾಕಷ್ಟು ವೈರಲ್ ಆಗಿದ್ದ ಈ ವಿಡಿಯೋ ನೋಡಿದ ಜನರು ಪ್ರಗತಿ ಕುಟುಂಬದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರಗತಿಗೆ ಪ್ರೋತ್ಸಾಹ ನೀಡಿದ್ದರು. ಇದನ್ನು ಓದಿ..Kannada News: ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ನಿಜಕ್ಕೂ ಕೀರ್ತಿ ನೇರವಾಗಿ ವೈಷ್ಣವ್ ಬೇಡ ಎನ್ನಲು ಕಾರಣವೇನು ಗೊತ್ತೇ? ಕೊನೆಗೂ ಬಯಲಾಯ್ತು ಸತ್ಯ.
ಇನ್ನು ಪ್ರಗತಿ ವಾರದಿಂದ ವಾರಕ್ಕೆ ಇಂಪ್ರೂ ಆಗುತ್ತಿದ್ದು, ಅತ್ಯುತ್ತಮವಾಗಿ ಪ್ರತಿವಾರವೂ ಹಾಡುತ್ತಿದ್ದಾರೆ. ಅವರು ಆಡುವ ಒಂದೊಂದು ಹಾಡನ್ನು ಕೂಡ ತೀರ್ಪುಗಾರರು ಮೆಚ್ಚಿಕೊಂಡು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಪಾಲ್ಗೊಂಡಿದ್ದರು. ಈ ವೇಳೆ ಪ್ರಗತಿ ಹಾಡಿದ್ದ ಹಾಡು ಕೇಳಿ ಶಿವಣ್ಣ ಮೆಚ್ಚಿಕೊಂಡಿದ್ದರು. ಇದೀಗ ಪ್ರಗತಿಯ ಪ್ರತಿಭೆ ಮತ್ತು ಹಾಡುಗಾರಿಕೆಯನ್ನು ಮೆಚ್ಚಿಕೊಂಡಿರುವ ನಟ ದರ್ಶನ್ (Darshan) ಪ್ರಗತಿಗೆ ಕರೆ ಮಾಡಿದ್ದಾರೆ. ಪ್ರಗತಿಯ ಸಿಂಗಿಂಗ್ ಟ್ಯಾಲೆಂಟ್ ನೋಡಿ ಮನಸಾರೆ ಹಾಡಿ ಹೊಗಳಿರುವ ನಟ ದರ್ಶನ್ ಪ್ರಗತಿಗೆ ಯಾವುದೇ ರೀತಿಯ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ಎಂತಹ ಸಂದರ್ಭದಲ್ಲಿ ಕೂಡ ಹಾಡುವ ನಿನ್ನ ಪ್ರತಿಭೆಯನ್ನು ಬಿಟ್ಟು ಕೊಡಬೇಡ ಎಂದು ದರ್ಶನ್ ಹೇಳಿದ್ದಾರೆ. ಇದರ ಜೊತೆಗೆ ತಮ್ಮ ಮುಂದಿನ ಚಿತ್ರದಲ್ಲಿ ಪ್ರಗತಿಗೆ ಹಾಡುವ ಅವಕಾಶ ಕೊಡಿಸುವುದಾಗಿ ದರ್ಶನ್ ಆಶ್ವಾಸನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇದನ್ನು ಓದಿ.. Kannada News: ಕೋಟಿ ಕೋಟಿ ಇದ್ದರೂ ಚೌಕಾಸಿ ಮಾಡಲು ಹೋದ ಇಲಿಯಾನ: ಕೇಳಿದ ಬೆಲೆ ಕೇಳಿ ವ್ಯಾಪಾರೀ ಕೊಟ್ಟ ಉತ್ತರ ನೋಡಿ, ತಲೆ ಚಚ್ಚಿಕೊಂಡ ನಟಿ. ಏನಾಗಿದೆ ಗೊತ್ತೇ?
Comments are closed.